ಮಾಸ್ಕೋ: ಕರೋನಾವೈರಸ್ ಸಾಂಕ್ರಾಮಿಕ ರೋಗ ಹೆಚ್ಚುತ್ತಿರುವ ಮಧ್ಯೆ ತನ್ನ ಎರಡನೇ ಕರೋನಾ ವೈರಸ್ ಲಸಿಕೆಯನ್ನು ನೋಂದಾಯಿಸಿರುವ ರಷ್ಯಾ (Russia) ದಿಂದ ಒಳ್ಳೆಯ ಸುದ್ದಿ ಬರುತ್ತಿದೆ. ರಷ್ಯಾ ಎರಡನೇ ಲಸಿಕೆಯನ್ನು ಎಪಿವಾಕ್ ಕೊರೊನಾ (EpiVacCorona) ಎಂದು ಹೆಸರಿಸಿದೆ. ಇದಕ್ಕೂ ಮೊದಲು ರಷ್ಯಾವು ಕರೋನಾವೈರಸ್ನ ಮೊದಲ ಲಸಿಕೆಯಾದ ಸ್ಪುಟ್ನಿಕ್-ವಿ ಅನ್ನು ಅನುಮತಿಸಿದೆ, ಇದು ವಿಶ್ವದಾದ್ಯಂತ ಕೋವಿಡ್ -19 (Covid 19) ರ ಮೊದಲ ಲಸಿಕೆ.
ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಅವರು ಬುಧವಾರ ಕ್ಯಾಬಿನೆಟ್ ಸದಸ್ಯರೊಂದಿಗೆ ವಿಡಿಯೋ ಸಮಾವೇಶದಲ್ಲಿ ಈ ವಿಷಯವನ್ನು ಪ್ರಕಟಿಸಿದರು. ವ್ಲಾಡಿಮಿರ್ ಪುಟಿನ್, "ನನಗೆ ಒಳ್ಳೆಯ ಸುದ್ದಿ ಇದೆ. ನೊವೊಸಿಬಿರ್ಸ್ಕ್ ವೆಕ್ಟರ್ ಸೆಂಟರ್ ಕರೋನಾವೈರಸ್ ವಿರುದ್ಧ ರಷ್ಯಾದ ಎರಡನೇ ಲಸಿಕೆಯನ್ನು ಇಂದು ನೋಂದಾಯಿಸಿದೆ" ಎಂದು ಹೇಳಿದರು. ನಾವು ಮೊದಲ ಮತ್ತು ಎರಡನೆಯ ಲಸಿಕೆಗಳ ಉತ್ಪಾದನೆಯನ್ನು ಹೆಚ್ಚಿಸಬೇಕಾಗಿದೆ. ನಾವು ನಮ್ಮ ವಿದೇಶಿ ಪಾಲುದಾರರೊಂದಿಗೆ ಸಹಕರಿಸುವುದನ್ನು ಮುಂದುವರಿಸುತ್ತೇವೆ ಮತ್ತು ವಿದೇಶದಲ್ಲಿ ನಮ್ಮ ಲಸಿಕೆಗಳನ್ನು ಉತ್ತೇಜಿಸುತ್ತೇವೆ ಎಂದು ಅವರು ಹೇಳಿದರು.
Good News!ಭಾರತದಲ್ಲಿ COVID-19 ಲಸಿಕೆ ಲಭ್ಯತೆಯ ಬಗ್ಗೆ ಆರೋಗ್ಯ ಸಚಿವರಿಂದ ಮಹತ್ವದ ಘೋಷಣೆ
ಮೂರನೇ ಹಂತದ ಪರೀಕ್ಷೆ ಇನ್ನೂ ಬಾಕಿ:
ಸೈಬೀರಿಯಾದ ವಿಶ್ವ ದರ್ಜೆಯ ವೈರಾಲಜಿ ಸಂಸ್ಥೆಯಲ್ಲಿ (ವೆಕ್ಟರ್ ಸ್ಟೇಟ್ ರಿಸರ್ಚ್ ಸೆಂಟರ್ ಆಫ್ ವೈರಾಲಜಿ ಮತ್ತು ಬಯೋಟೆಕ್ನಾಲಜಿ) ರಷ್ಯಾ ಎಪಿವಾಕ್ ಕೊರೊನಾ ಲಸಿಕೆಯನ್ನು ತಯಾರಿಸಿದೆ. ಲಸಿಕೆ ತನ್ನ ಆರಂಭಿಕ ಹಂತದ ಮಾನವ ಪರೀಕ್ಷೆಯನ್ನು ಸೆಪ್ಟೆಂಬರ್ನಲ್ಲಿ ಪೂರ್ಣಗೊಳಿಸಿತು ಮತ್ತು ಮಾನವ ಪ್ರಯೋಗದ ಫಲಿತಾಂಶಗಳನ್ನು ಇನ್ನೂ ಪ್ರಕಟಿಸಬೇಕಾಗಿದೆ. ಅದೇ ಸಮಯದಲ್ಲಿ ಲಸಿಕೆಯ ಮೂರನೇ ಹಂತದ ಪ್ರಯೋಗ ಇನ್ನೂ ಪ್ರಾರಂಭವಾಗಿಲ್ಲ ಎಂದು ಹೇಳಲಾಗಿದೆ.
Phone, Note ಮುಖಾಂತರ ಕರೋನಾ ಹರಡುವ ಸಾಧ್ಯತೆ ಅಧಿಕ, ಇವುಗಳ ಮೇಲೆ ವೈರಸ್ ಎಷ್ಟು ದಿನ ಇರುತ್ತೆ?
ಸಂಶ್ಲೇಷಿತ ವೈರಸ್ ಪ್ರೋಟೀನ್ಗಳ ಬಳಕೆ :
"ನೊವೊಸಿಬಿರ್ಸ್ಕ್ ವೆಕ್ಟರ್ ಸೆಂಟರ್ ಎರಡನೇ ಕರೋನಾವೈರಸ್ ಲಸಿಕೆ ಎಪಿವಾಕ್ ಕೊರೊನಾವನ್ನು ನೋಂದಾಯಿಸಿದೆ. ಇದು ರಷ್ಯಾದ ಮೊದಲ ಲಸಿಕೆ ಸ್ಪುಟ್ನಿಕ್-ವಿಗಿಂತ ಭಿನ್ನವಾಗಿದೆ ಎಂದು ಹೇಳಲಾಗುತ್ತಿದ್ದು, ಈ ಲಸಿಕೆ ಸಂಶ್ಲೇಷಿತ ವೈರಸ್ ಪ್ರೋಟೀನ್ ಬಳಸಿ ತಯಾರಿಸಲಾಗಿದೆ. ಇದು ರೋಗನಿರೋಧಕ ಪ್ರತಿಕ್ರಿಯೆಯನ್ನು ಪ್ರಚೋದಿಸುತ್ತದೆ, ಆದರೆ ಸ್ಪುಟ್ನಿಕ್ ವಿ (Sputnik- V) ಅಡೆನೊವೈರಸ್ ತಳಿಗಳನ್ನು ಅಳವಡಿಸಿಕೊಂಡಿದೆ ಎಂದು ಹೇಳಲಾಗಿದೆ.