'TIK TOK'ಗೆ ಟಕ್ಕರ್ ನೀಡಲು ಬಂದ ಗೂಗಲ್ 'ತಂಗಿ'

ಪ್ರಪಂಚದ ಖ್ಯಾತ್ ಸರ್ಚಿ ಇಂಜಿನ್ ದೈತ್ಯ ಗೂಗಲ್ ನೂತನ ಶಾರ್ಟ್ ವಿಡಿಯೋ ತಯಾರಿಸುವ ಆಪ್ ಬಿಡುಗಡೆ ಮಾಡಿದೆ. ಈ ಆಪ್ ಗೆ Google Tangi ಎಂದು ಹೆಸರಿಸಲಾಗಿದೆ. ಗೂಗಲ್ ನ Area 120 ತಂಡ ಈ ಆಪ್ ಅನ್ನು ತಯಾರಿಸಿದೆ.

Last Updated : Jan 30, 2020, 09:05 PM IST
'TIK TOK'ಗೆ ಟಕ್ಕರ್ ನೀಡಲು ಬಂದ ಗೂಗಲ್ 'ತಂಗಿ' title=

ಖ್ಯಾತ ವಿಡಿಯೋ ತಯಾರಿಕೆಯ ಆಪ್ TikTok ಕಳೆದ ವರ್ಷ ವ್ಯಾಪಕ ಚರ್ಚೆ ಹುಟ್ಟುಹಾಕಿದೆ. ಭಾರತದಲ್ಲಿಯೂ ಕೂಡ ಅಪಾರ ಸಂಖ್ಯೆಯಲ್ಲಿ ಜನರು ಈ ಆಪ್ ಬಳಸುತ್ತಿದ್ದಾರೆ. ಮನೆಯಲ್ಲಿಯೇ ಕುಳಿತು ಜನರಿಗೆ ಪ್ರಸಿದ್ಧಿ ಪಡೆಯಲು ನೆರವಾಗುವ ಈ ಆಪ್ ನ ಪೈಪೋಟಿಗೆ ಇದೀಗ ಬೇರೆ ಆಪ್ ಗಳೂ ಕೂಡ ಬರಲಾರಂಭಿಸಿವೆ. ಇದೀಗ ತಂತ್ರಜ್ಞಾನ ಕ್ಷೇತ್ರದ ದಿಗ್ಗಜ ಕಂಪನಿಗಳಲ್ಲಿ ಮುಂಚೂಣಿಯಲ್ಲಿರುವ ಗೂಗಲ್ ಕೂಡ ತನ್ನ ಶಾರ್ಟ್ ವಿಡಿಯೋ ಮೇಕಿಂಗ್ ಆಪ್ ಬಿಡುಗಡೆಗೊಳಿಸಿದೆ. ಇದಕ್ಕೆ ಗೂಗಲ್ Tangi ಎಂದು ಹೆಸರಿಸಿದೆ. ಗೂಗಲ್ ನ Area 120 ತಂಡ ಈ ಆಪ್ ಆನ್ನು ಸಿದ್ಧಪಡಿಸಿದೆ. ಇದೊಂದು ಸಾಮಾಜಿಕ ವಿಡಿಯೋ ಹಂಚಿಕೊಳ್ಳುವ ಆಪ್ ಇದಾಗಿದ್ದು, ಇದನ್ನು ಬಳಸಿ ಬಳಕೆದಾರರು ಚಿಕ್ಕ ಚಿಕ್ಕ ವಿಡಿಯೋಗಳನ್ನು ಹೆಂಚಿಕೊಳ್ಳಬಹುದಾಗಿದೆ. ಇದರಿಂದ ಬಳಕೆದಾರರು ಹೊಸ ಸಂಗತಿಗಳನ್ನು ಅರಿಯಲಿದ್ದಾರೆ ಎಂದು ಕಂಪನಿ ಹೇಳಿಕೊಂಡಿದೆ.

ಏನಿದು Tangi?
TikTok ಮಾದರಿಯಲ್ಲಿ ಟ್ಯಾಂಗಿ(Tangi) ಆಪ್ ಮೇಲೆಯೂ ಕೂಡ ವಿಡಿಯೋಗಳನ್ನು ತಯಾರಿಸಬಹುದಾಗಿದೆ. ಇದರಲ್ಲಿ ವಿಡಿಯೋ ತಯಾರಿಸಲು ಬಳಕೆದಾರರಿಗೆ 60 ಸೆಕೆಂಡ್ ಗಳ  ಕಾಲಾವಕಾಶ ನಿಗದಿಪಡಿಸಲಾಗಿದೆ. ಅಂದರೆ, ನೀವು ಇದರಲ್ಲಿ ಒಂದು ನಿಮಿಷದ ವಿಡಿಯೋ ತಯಾರಿಸಿ ಸಾಮಾಜಿಕ ಮಾಧ್ಯಮಗಳ ಮೇಲೆ ಹಂಚಿಕೊಳ್ಳಬಹುದಾಗಿದೆ. ಒಟ್ಟಾರೆ ಹೇಳುವುದಾದರೆ ಇದು TikTokನ ಸುಧಾರಿತ ಆವೃತ್ತಿ ಎಂದೇ ನೀವು ಹೇಳಬಹುದು. ಆದರೆ, ಇವೆರಡರ ನಡುವೆ ವ್ಯತ್ಯಾಸ ಕೂಡ ಇದೆ. ಬಳಕೆದಾರರು TikTokನ ಹೆಚ್ಚಿನ ಬಳಕೆ ಮನರಂಜನೆ ನೀಡಲು ಮಾಡಿದ್ದಾರೆ. ಆದರೆ, ಗೂಗಲ್ ಟ್ಯಾಂಗಿ ವಿಶೇಷವಾಗಿ ಶೈಕ್ಷಣಿಕ ಚಟುವಟಿಕೆ ನಡೆಸಲು ತಯಾರಿಸಲಾಗಿದೆ. ಇದರಲ್ಲಿ ವಿಡಿಯೋ ತಯಾರಿಸಲು DIY, ಕುಕ್ಕಿಂಗ್, ಲೈಫ್ ಸ್ಟೈಲ್, ಆರ್ಟ್, ಫ್ಯಾಷನ್ ಹಾಗೂ ಬ್ಯೂಟಿಗಳಂತಹ ವಿವಿಧ ಕೆಟಗರಿಗಳನ್ನು ನೀಡಲಾಗಿದೆ.

Tangi ಡೌನ್ಲೋಡ್ ಗಾಗಿ ಎಲ್ಲಿ ಭೇಟಿ ನೀಡಬೇಕು?
ಗೂಗಲ್ Tangi ಆಪ್ ಅನ್ನು ನೀವು ಆಪಲ್ ಸ್ಟೋರ್  ಹಾಗೂ ವೆಬ್ ನಲ್ಲಿ ಉಚಿತವಾಗಿ ಡೌನ್ಲೋಡ್ ಮಾಡಬಹುದು. ಸದ್ಯ ಈ ಆಪ್ ಗೂಗಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿಲ್ಲ. ಅಂಡ್ರಾಯ್ಡ್ ಬಳಕೆದಾರರು ಈ ಆಪ್ ಅನ್ನು ಡೌನ್ಲೋಡ್ ಮಾಡಲು ಸ್ವಲ್ಮ ತಾಳ್ಮೆ ವಹಿಸಬೇಕು. ಆದರೆ, ಯಾವಾಗ ಈ ಆಪ್ ಅಂಡ್ರಾಯ್ಡ್ ಬಳಕೆದಾರರಿಗೆ ಲಭ್ಯವಿರಲಿದೆ ಎಂಬ ಕುರಿತು ಕಂಪನಿ ಯಾವುದೇ ಅಧಿಕೃತ ಮಾಹಿತಿ ನೀಡಿಲ್ಲ. ಯುರೋಪಿಯನ್ ಒಕ್ಕೂಟವನ್ನು ಹೊರತುಪಡಿಸಿ ವಿಶ್ವದ ಎಲ್ಲ ದೇಶಗಳಲ್ಲಿ ಗೂಗಲ್ ಈ ಆಪ್ ಅನ್ನು ಬಿಡುಗಡೆಗೊಳಿಸಿದೆ. ಗೂಗಲ್ ನೀಡಿರುವ ಮಾಹಿತಿ ಪ್ರಕಾರ ಸದ್ಯ ಸೀಮಿತ ಬಳಕೆದಾರರು ಮಾತ್ರ ಈ ಪ್ಲಾಟ್ಫಾರಂ ಮೇಲೆ ವಿಡಿಯೋ ತಯಾರಿಸಬಹುದಾಗಿದೆ ಎಂದು ಹೇಳಿದೆ. ಈ ಆಪ್ ಮೇಲೆ ವಿಡಿಯೋ ತಯಾರಿಸಲು ಬಳಕೆದಾರರು ಮೊದಲು ವೇಟಿಂಗ್ ಲಿಸ್ಟ್ ನಲ್ಲಿ ತಮ್ಮ ಹೆಸರು ನೋಂದಾಯಿಸಬೇಕು.

Tangiಯನ್ನು ಹೇಗೆ ಬಳಸಬೇಕು?
Tangi ವೆಬ್ ಸೈಟ್ ಗೆ ಭೇಟಿ ನೀಡಿ ಬಳಕೆದಾರರು ಇದರ ಸಂಪೂರ್ಣ ಇಂಟರ್ ಫೆಸ್ ತಿಳಿದುಕೊಳ್ಳಬಹುದಾಗಿದೆ. ವೆಬ್ ಸೈಟ್ ನ ಮೇಲ್ಭಾಗದಲ್ಲಿ ನೀಡಲಾಗಿರುವ ಟ್ಯಾಬ್ ನಲ್ಲಿ ವಿವಿಧ ಕೆಟಗರಿಗಳನ್ನು ನಿರ್ಮಿಸಲಾಗಿದ್ದು, ಅವುಗಳನ್ನು ನೀವು ಆಯ್ಕೆ ಮಾಡಬಹುದು. ಇದರಲ್ಲಿ 60 ಸೆಕೆಂಡ್ ಅವಧಿಯ ಟುಟೋರಿಯಲ್ ವಿಡಿಯೋ ಕೂಡ ಇರಲಿದೆ. ನೀವೂ ಕೂಡ ಈ ವಿಡಿಯೋ ಅನ್ನು ವಿಕ್ಷೀಸಿ ನಿಮ್ಮ ವಿಡಿಯೋ ತಯಾರಿಸಿ, ಅದನ್ನು ಅಪ್ಲೋಡ್ ಮಾಡಬಹುದಾಗಿದೆ.

Tangi ಅರ್ಥವೇನು?
Tangi ಅರ್ಥದ ಕುರಿತು ವಿವರಣೆ ನೀಡಿರುವ ಗೂಗಲ್ ಈ ಹೆಸರನ್ನು Teach ಹಾಗೂ Give ಅಥವಾ Tangibleನಿಂದ ಪಡೆಯಲಾಗಿದೆ ಎಂದು ಹೇಳಿದೆ. ಈ ಆಪ್ ಕೇವಲ ಮನರಂಜನೆಯ ಉದ್ದೇಶ ಹೊಂದಿರದೆ, ಇದರಲ್ಲಿ ಟುಟೋರಿಯಲ್ ಗಳು ಇರಲಿವೆ. ಸದ್ಯ ಗೂಗಲ್ ಇದನ್ನು ಪೈಲಟ್ ಯೋಜನೆಯಾಗಿ ಬಿಡುಗಡೆಗೊಳಿಸಿದೆ. ಇನ್ನಷ್ಟು ಪರೀಕ್ಷೆಗಳನ್ನು ನಡೆಸಿ ಶೀಘ್ರದಲ್ಲಿಯೇ ಇದನ್ನು ಎಲ್ಲೆಡೆ ಬಿಡುಗಡೆಗೊಳಿಸಲಾಗುವುದು ಎಂದು ಸಂಸ್ಥೆ ಹೇಳಿದೆ. Tangiಗೂ ಮೊದಲು TikTokಗೆ ಪೈಪೋಟಿ ನೀಡಲು Byte ಹೆಸರಿನ ಆಪ್ ಬಿಡುಗಡೆಗೊಂಡಿದೆ. ಈ ಆಪ್ ಅನ್ನು ಖ್ಯಾತ Vine ಪ್ಲಾಟ್ಫಾರ್ಮ್ ನ ಸಹ ಸಂಸ್ಥಾಪಕರು ಸಿದ್ಧಪಡಿಸಿದ್ದಾರೆ. ಆದರೆ, Byte ಆಪ್ ಅನ್ನು ಇದುವರೆಗೆ ಭಾರತದಲ್ಲಿ ಬಿಡುಗಡೆಗೋಳಿಸಲಾಗಿಲ್ಲ.

Trending News