ಪಾಕಿಸ್ತಾನಕ್ಕೆ ಧಮ್ಕಿ ಹಾಕಿದ Google-Twitter-Facebook

ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಧಮ್ಕಿ ಹಾಕಿರುವ Google-Twitter-Facebook ಸಂಸ್ಥೆಗಳು ಪಾಕ್ ನಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿವೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸಚಿವ ಸಂಪುಟ ಮಸೂದೆಯೊಂದಕ್ಕೆ ಅನುಮೋದನೆಯನ್ನು ನೀಡಿದ್ದು, ಈ ಮಸೂದೆಯಲ್ಲಿ ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಟಿಕ್ ಟಾಕ್ ಹಾಗೂ ಇತರೆ ಸಾಮಾಜಿಕ ಮಾಧ್ಯಮದ ದೈತ್ಯ ಕಂಪನಿಗಳಿಗೆ  ಡೇಟಾ ಸರ್ವರ್ ನಿರ್ಮಿಸುವುದನ್ನು ಕಡ್ಡಾಯಗೊಳಿಸಬೇಕು ಎನ್ನಲಾಗಿದ್ದು, ಈ ಕಂಪನಿಗಳಿಗೆ ರಿಜಿಸ್ಟ್ರೇಷನ್ ಅನಿವಾರ್ಯಗೊಳಿಸಲಿದೆ.

Last Updated : Mar 1, 2020, 05:37 PM IST
ಪಾಕಿಸ್ತಾನಕ್ಕೆ ಧಮ್ಕಿ ಹಾಕಿದ Google-Twitter-Facebook title=

ನೆರೆರಾಷ್ಟ್ರ ಪಾಕಿಸ್ತಾನಕ್ಕೆ ಧಮ್ಕಿ ಹಾಕಿರುವ Google-Twitter-Facebook ಸಂಸ್ಥೆಗಳು ಪಾಕ್ ನಲ್ಲಿ ತನ್ನ ವ್ಯವಹಾರವನ್ನು ಸ್ಥಗಿತಗೊಳಿಸುವುದಾಗಿ ಬೆದರಿಕೆ ಹಾಕಿವೆ. ಪಾಕಿಸ್ತಾನದಲ್ಲಿ ಇಮ್ರಾನ್ ಖಾನ್ ಸಚಿವ ಸಂಪುಟ ಮಸೂದೆಯೊಂದಕ್ಕೆ ಅನುಮೋದನೆಯನ್ನು ನೀಡಿದ್ದು, ಈ ಮಸೂದೆಯಲ್ಲಿ ಫೇಸ್ ಬುಕ್, ಟ್ವಿಟ್ಟರ್, ಯೂಟ್ಯೂಬ್, ಟಿಕ್ ಟಾಕ್ ಹಾಗೂ ಇತರೆ ಸಾಮಾಜಿಕ ಮಾಧ್ಯಮದ ದೈತ್ಯ ಕಂಪನಿಗಳಿಗೆ  ಡೇಟಾ ಸರ್ವರ್ ನಿರ್ಮಿಸುವುದನ್ನು ಕಡ್ಡಾಯಗೊಳಿಸಬೇಕು ಎನ್ನಲಾಗಿದ್ದು, ಈ ಕಂಪನಿಗಳಿಗೆ ರಿಜಿಸ್ಟ್ರೇಷನ್ ಅನಿವಾರ್ಯಗೊಳಿಸಲಿದೆ. ಅಷ್ಟೇ ಅಲ್ಲ ಪಾಕಿಸ್ತಾನ ಸರ್ಕಾರ ಸ್ಥಾಪಿಸಿದ ಪ್ರಾಧಿಕಾರದೊಂದಿಗೆ ಸಂಪರ್ಕದಲ್ಲಿರುವ ಪ್ರತಿನಿಧಿಯ ನೇಮಕ ಕುರಿತು ಕೂಡ ಈ ಮಸೂದೆಯಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಪ್ರಧಾನಿ ಇಮ್ರಾನ್ ಖಾನ್ ಅವರಿಗೆ ಪತ್ರ ರವಾನಿಸಿರುವ ಏಷ್ಯಾ ಇಂಟರ್ನೆಟ್ ಕೊಐಲೇಶನ್, ಈ ಮಸೂದೆಯಲ್ಲಿ ಬದಲಾವಣೆಯನ್ನು ತರಲು ಒತ್ತಾಯಿಸಿದೆ. ಇನ್ನೊಂದೆಡೆ ಪಾಕಿಸ್ತಾನದಲ್ಲಿ ಸಾಮಾಜಿಕ ಮಾಧ್ಯಮದ ಮೇಲಿನ ಈ ನಿಯಂತ್ರಣ ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಗೆ ತೊಡಕಾಗಲಿದೆ ಎಂದು ಅಮೆರಿಕಾದ ವಿದೇಶಾಂಗ ಇಲಾಖೆ ಆತಂಕ ವ್ಯಕ್ತಪಡಿಸಿದೆ.

ಈ ಮಸೂದೆಯ ಕರಡು ಪ್ರತಿಗೆ ಕೆಲ ದಿನಗಳ ಹಿಂದೆಯಷ್ಟೇ ಇಮ್ರಾನ್ ಖಾನ್ ಸಚಿವ ಸಂಪುಟ ಅನುಮೋದನೆ ನೀಡಿದ್ದು, ಈ ಮಸೂದೆಯಲ್ಲಿ ಸಾಮಾಜಿಕ ಮಾಧ್ಯಮ ಕಂಪನಿಗಳು ಪಾಕಿಸ್ತಾನದಲ್ಲಿ ತಮ್ಮ ಕಚೇರಿ ತೆರೆದು ಅವುಗಳ ರಿಜಿಸ್ಟ್ರೇಷನ್ ಮಾಡಿಸುವುದು ಕಡ್ಡಾಯಗೊಳಿಸುವ ಕುರಿತು ಪ್ರಸ್ತಾಪಿಸಲಾಗಿದೆ.

ಈ ಕುರಿತು ಟ್ವೀಟ್ ಮಾಡಿರುವ ಅಮೆರಿಕಾದ ವಿದೇಶಾಂಗ ಇಲಾಖೆ, "ಸಾಮಾಜಿಕ ಮಾಧ್ಯಮಗಳ ಮೇಲೆ ವಿಧಿಸಲಾಗುತ್ತಿರುವ ಈ ಹೊಸ ನಿಯಂತ್ರಣಗಳು ದೇಶದಲ್ಲಿ ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಡಿಜಿಟಲ್ ಆರ್ಥಿಕತೆಯ ಅಭಿವೃದ್ಧಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆ ಇದೆ. ಜೊತೆಗೆ ಇಂತಹ ಪ್ರಭಾವಶಾಲಿ ವಲಯಗಳಲ್ಲಿ ವಿದೇಶಿ ಹೂಡಿಕೆಯನ್ನು ನಿರುತ್ಸಾಹಗೊಳಿಸಿ ದೇಸೀಯ ರಂಗದಲ್ಲಿ ನಾವಿನ್ಯತೆಯನ್ನು ತಡೆಯುತ್ತದೆ" ಎಂದು ಹೇಳಿದೆ.

ಈ ಮಸೂದೆ ಸಾಮಾಜಿಕ ಮಾಧ್ಯಮದ ದೈತ್ಯ ಕಂಪನಿಗಳು ಮುಂದಿನ ಒಂದು ವರ್ಷದಲ್ಲಿ ಪಾಕಿಸ್ತಾನದಲ್ಲಿ ತಮ್ಮದೇ ಆದ ಸರ್ವರ್ ಗಳನ್ನು ಸ್ಥಾಪಿಸುವುದನ್ನು ಅನಿವಾರ್ಯಗೊಳಿಸಲಿದೆ. ಅಷ್ಟೇ ಅಲ್ಲ ದೇಶದ ಸರ್ಕಾರಿ ಸಂಸ್ಥೆಗಳ ಮೇಲೆ ವಾಗ್ದಾಳಿ ನಡೆಸುವ, ದ್ವೇಷಪೂರಿತ ಸಂದೇಶಗಳನ್ನು ಸಾರುವ ಹಾಗೂ ರಾಷ್ಟ್ರೀಯ ಭದ್ರತೆಗೆ ಮಾರಕವಾಗುವ ಸಂದೇಶ ಪಸರಿಸುವವರ ಕುರಿತು ಗುಪ್ತಚರ ಇಲಾಖೆಗೆ ಮಾಹಿತಿ ಒದಗಿಸುವುದನ್ನು ಈ ಕಂಪನಿಗಳಿಗೆ ಕಡ್ಡಾಯಗೊಳಿಸಲಿದೆ. ಈ ರೀತಿ ಕಂಪನಿಗಳು ಮಾಡದೆ ಹೋದಲ್ಲಿ ಕಂಪನಿಗಳು 500 ಮಿಲಿಯನ್ ಪಾಕಿಸ್ತಾನಿ ರೂಪಾಯಿ ದಂಡ ಪಾವತಿಸುವುದು ಅನಿವಾರ್ಯಗೊಳಿಸಲಿದೆ.

Trending News