ಮಕ್ಕಳು ತಪ್ಪು ಮಾಡಿದರೆ ಹೆತ್ತವರಿಗೆ ಶಿಕ್ಷೆ ಇಲ್ಲಿ ಹೊಸ ಕಾನೂನು ರೂಪಿಸಲು ನಡೆಯುತ್ತಿದೆ ತಯಾರಿ

ಪೋಷಕರ ಆರೈಕೆಯಲ್ಲಿರುವ ಮಗುವಿನ ನಡವಳಿಕೆಯು ತುಂಬಾ ಕೆಟ್ಟದ್ದಾಗಿದ್ದರೆ ಅಥವಾ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅವರನ್ನು ಕುಟುಂಬ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಕಳುಹಿಸಬಹುದು. 

Written by - Ranjitha R K | Last Updated : Oct 19, 2021, 01:58 PM IST
  • ಚೀನಾದ ಸಂಸತ್ತು ಶೀಘ್ರದಲ್ಲೇ ಮಸೂದೆಯನ್ನು ಜಾರಿ ಮಾಡಲಿದೆ
  • ಮಕ್ಕಳ ತಪ್ಪಾದ ನಡವಳಿಕೆ ಅಥವಾ ಅಪರಾಧಕ್ಕೆ ಹೆತ್ತವರಿಗೆ ಶಿಕ್ಷೆ
  • ಮಕ್ಕಳ ಶಿಕ್ಷಣಕ್ಕೆ ಸಂಬಂಧಿಸಿದಂತೆ ಅನೇಕ ಬದಲಾವಣೆ
ಮಕ್ಕಳು ತಪ್ಪು ಮಾಡಿದರೆ ಹೆತ್ತವರಿಗೆ ಶಿಕ್ಷೆ ಇಲ್ಲಿ ಹೊಸ ಕಾನೂನು ರೂಪಿಸಲು ನಡೆಯುತ್ತಿದೆ ತಯಾರಿ title=
ಮಕ್ಕಳ ತಪ್ಪಾದ ನಡವಳಿಕೆ ಅಥವಾ ಅಪರಾಧಕ್ಕೆ ಹೆತ್ತವರಿಗೆ ಶಿಕ್ಷೆ (photo reuters)

ಬೀಜಿಂಗ್ : ಚೀನಾದಲ್ಲಿ, ಮಕ್ಕಳ ಅಪರಾಧಕ್ಕಾಗಿ ಪೋಷಕರಿಗೆ ಶಿಕ್ಷೆ ನೀಡಲು ಈಗ ಸಿದ್ಧತೆಗಳು ನಡೆಯುತ್ತಿವೆ. ಅಂದರೆ, ಮಗು ಯಾವುದೇ ತಪ್ಪು ಮಾಡಿದರೆ, ಮಗು ಮಾಡಿದ ತಪ್ಪಿಗೆ ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ. ಶೀಘ್ರದಲ್ಲೇ ಚೀನಾದ ಸಂಸತ್ತು (Chinese parlianment) ಒಂದು ಮಸೂದೆಯನ್ನು ಪರಿಗಣಿಸಲಿದ್ದು, ಇದರ ಪ್ರಕಾರ,  ಚಿಕ್ಕ ಮಕ್ಕಳು ಅತ್ಯಂತ ಕೆಟ್ಟ ನಡವಳಿಕೆ ತೋರಿದರೆ ಅಥವಾ ಯಾವುದೇ ಅಪರಾಧ ಕೃತ್ಯವನ್ನು ಎಸಗಿದರೆ ಪೋಷಕರಿಗೆ ಶಿಕ್ಷೆ ನೀಡಲಾಗುವುದು. 

ಕುಟುಂಬ ಶಿಕ್ಷಣ ಪ್ರಚಾರ ಕಾಯಿದೆ ಅಡಿಯಲ್ಲಿ ಮಕ್ಕಳ ಅಪರಾಧಕ್ಕಾಗಿ ಪೋಷಕರನ್ನು ಶಿಕ್ಷಿಸಲಾಗುವುದು (Punishmet) ಎಂದು ಹೇಳಲಾಗಿದೆ. ಇದು ಮಾತ್ರವಲ್ಲ, ಪೋಷಕರ ಆರೈಕೆಯಲ್ಲಿರುವ ಮಗುವಿನ ನಡವಳಿಕೆಯು ತುಂಬಾ ಕೆಟ್ಟದ್ದಾಗಿದ್ದರೆ ಅಥವಾ ಅಪರಾಧ ಚಟುವಟಿಕೆಯಲ್ಲಿ ಭಾಗಿಯಾಗಿರುವುದು ಕಂಡುಬಂದರೆ, ಅವರನ್ನು ಕುಟುಂಬ ಶಿಕ್ಷಣ ಮಾರ್ಗದರ್ಶನ ಕಾರ್ಯಕ್ರಮಕ್ಕೆ ಕಳುಹಿಸಬಹುದು. 

ಇದನ್ನೂ ಓದಿ : Durga Puja Violence: ಬಾಂಗ್ಲಾದೇಶದಲ್ಲಿ 20ಕ್ಕೂ ಹೆಚ್ಚು ಹಿಂದೂಗಳ ಮನೆಗಳಿಗೆ ಬೆಂಕಿ

Inappropriate Family Education ಇದಕ್ಕೆ ಮುಖ್ಯ ಕಾರಣ :
ನ್ಯಾಷನಲ್ ಪೀಪಲ್ಸ್ ಕಾಂಗ್ರೆಸ್ (NPC) ಶಾಸಕಾಂಗ ವ್ಯವಹಾರಗಳ ಆಯೋಗದ ವಕ್ತಾರ ಜಾಂಗ್ ಟೈವೇ ಹದಿಹರೆಯದವರ ಕೆಟ್ಟ ನಡವಳಿಕೆಯ ಹಿಂದೆ ಹಲವು ಕಾರಣಗಳಿವೆ ಎಂದು ಹೇಳಿದ್ದಾರೆ. ಇದರಲ್ಲಿ, ಸರಿಯಾದ ಕುಟುಂಬ ಶಿಕ್ಷಣವನ್ನು ಪಡೆಯದಿರುವುದು ಅಥವಾ ಅದರ ಕೊರತೆಯೇ ಮುಖ್ಯ ಕಾರಣವಾಗಿದೆ. ಈ ಕಾರಣದಿಂದಾಗಿ, ಮಕ್ಕಳ ಅಪರಾಧಕ್ಕೆ ಪೋಷಕರನ್ನು ದೂಷಿಸಲಾಗುತ್ತದೆ. 

ಕರಡು ಕುಟುಂಬ ಶಿಕ್ಷಣ ಪ್ರಚಾರ ಕಾಯಿದೆಯು ಪೋಷಕರು ತಮ್ಮ ಮಕ್ಕಳಿಗೆ ವಿಶ್ರಾಂತಿ, ಆಟ ಮತ್ತು ವ್ಯಾಯಾಮ (Exercise) ಮಾಡಲು ಸಮಯವನ್ನು ಒದಗಿಸುತ್ತದೆ. ಈ ವಾರ ಎನ್‌ಪಿಸಿಯ ಸ್ಥಾಯಿ ಸಮಿತಿಯಲ್ಲಿ ಈ ಕರಡನ್ನು ಪರಿಶೀಲಿಸಲಾಗುವುದು. ಇತ್ತೀಚಿನ ದಿನಗಳಲ್ಲಿ ಚೀನಾದಲ್ಲಿ ಯುವಕರು ಆನ್‌ಲೈನ್ ಆಟಗಳತ್ತ (Online game) ಹೆಚ್ಚು ಆಕರ್ಷಿತರಾಗುತ್ತಿದ್ದು, ಇಂಟರ್ನೆಟ್ ಸೆಲೆಬ್ರಿಟಿಗಳನ್ನು ಹುಚ್ಚರಂತೆ ಬಯಸುತ್ತಿದ್ದಾರೆ ಎಂದು ಹೇಳಲಾಗಿದೆ. 

ಇದನ್ನೂ ಓದಿ : Pakistan: ಐಎಸ್‌ಐ ಮುಖ್ಯಸ್ಥರ ರಾಜೀನಾಮೆಗೆ ಹೆಚ್ಚಿದ ಬೇಡಿಕೆ

ಆನ್‌ಲೈನ್ ಗೇಮಿಂಗ್ ಸಹ ನಿಷೇಧ : 
ಇನ್ನು ಶಿಕ್ಷಣ ಸಚಿವಾಲಯವು ಅಪ್ರಾಪ್ತ ಮಕ್ಕಳಿಗಾಗಿ ವಿಡಿಯೋ ಗೇಮ್‌ಗಳನ್ನು (Video game) ಆಡುವ ಸಮಯವನ್ನು ಕೂಡಾ ನಿಗದಿ ಮಾಡಲಾಗಿದೆ. ಇದರ ಪ್ರಕಾರ ಶುಕ್ರವಾರ, ಶನಿವಾರ (Saturday) ಮತ್ತು ಭಾನುವಾರ ಮಾತ್ರ ಒಂದು ಗಂಟೆ ಆನ್‌ಲೈನ್ ಆಟಗಳನ್ನು ಆಡಲು ಅನುಮತಿಸಲಾಗಿದೆ. ಹೋಂ ವರ್ಕ್ (Home work) ಅನ್ನು  ಕಡಿಮೆ ಮಾಡಲು ಚೀನಾ (China) ಕ್ರಮಗಳನ್ನು ಕೈಗೊಂಡಿದೆ. ಇದಲ್ಲದೇ, ಶಾಲೆಯ ನಂತರ ವಾರಾಂತ್ಯದಲ್ಲಿ ಅಥವಾ ರಜಾದಿನಗಳಲ್ಲಿ ಬೋಧನೆ ಮಾಡುವುದನ್ನು ನಿಷೇಧಿಸಲಾಗಿದೆ. ಮಕ್ಕಳು ಶಿಕ್ಷಣದ ಹೊರೆಯಿಂದ ಮುಚ್ಚಿ ಹೋಗುತ್ತಿದ್ದಾರೆ ಎಂದು ಚೀನಾ ಆತಂಕ ವ್ಯಕ್ತಪಡಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News