PUBG ಮೊಬೈಲ್ ಗೇಮ್ ಅಭಿಮಾನಿಗಳಿಗೆ ಬಿಗ್ ನ್ಯೂಸ್ : ಗೇಮ್ ಲಾಂಚಿಂಗ್ ಡೇಟ್ ಫಿಕ್ಸ್!

ಡೇಟಾ ಗೌಪ್ಯತೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ  PUBG ಮೊಬೈಲ್ ಗೇಮ್ ಭಾರತದ್ಲಲಿ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು. 

Last Updated : Apr 20, 2021, 11:16 AM IST
  • ಶೀಘ್ರದಲ್ಲೇ PUBG ಗೇಮ್ ಭಾರತದಲ್ಲಿ ಮತ್ತೆ ಬಿಡುಗಡೆ
  • ಡೇಟಾ ಗೌಪ್ಯತೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ PUBG ಮೊಬೈಲ್ ಗೇಮ್ ಭಾರತದ್ಲಲಿ ಬ್ಯಾನ್ ಮಾಡಿ ಸರ್ಕಾರ ಆದೇಶ ಹೊರಡಿಸಿತ್ತು.
  • ಪಬ್‌ಜಿ ಮೊಬೈಲ್ ಇಂಡಿಯಾ ಜೂನ್ ವೇಳೆಗೆ ಭಾರತದಲ್ಲಿ ಪ್ರಾರಂಭ
PUBG ಮೊಬೈಲ್ ಗೇಮ್ ಅಭಿಮಾನಿಗಳಿಗೆ ಬಿಗ್ ನ್ಯೂಸ್ : ಗೇಮ್ ಲಾಂಚಿಂಗ್ ಡೇಟ್ ಫಿಕ್ಸ್! title=

ಶೀಘ್ರದಲ್ಲೇ PUBG ಗೇಮ್ ಭಾರತದಲ್ಲಿ ಮತ್ತೆ ಬಿಡುಗಡೆ ಮಾಡುವುದಾಗಿ 2020 ರ ನವೆಂಬರ್‌ನಲ್ಲಿ ಪಬ್‌ಜಿ ಡೆವಲಪರ್‌ ಘೋಷಿಸಿದೆ. ‌ಡೇಟಾ ಗೌಪ್ಯತೆಗೆ ಸಂಬಂಧಿಸಿದ ಸಮಸ್ಯೆಯಿಂದಾಗಿ  PUBG ಮೊಬೈಲ್ ಗೇಮ್ ಅನ್ನ ಭಾರತದ್ಲಲಿ 2020 ರ ಸೆಪ್ಟೆಂಬರ್‌ನಲ್ಲಿ ಭಾರತ ಸರ್ಕಾರ ಬ್ಯಾನ್ ಮಾಡಿ ಆದೇಶ ಹೊರಡಿಸಿತ್ತು. 

ನಿಷೇಧದದ ಕೆಲವು ದಿನಗಳ ನಂತರ, ಪಿಯುಬಿಜಿ ಕಾರ್ಪೊರೇಷನ್(PUBG Corporation) ಭಾರತೀಯ ಅಂಗಸಂಸ್ಥೆಯನ್ನು ಸ್ಥಾಪಿಸುವುದಾಗಿ ಘೋಷಿಸಿತು ಮತ್ತು ಭಾರತೀಯ ಸಂಸ್ಕೃತಿಗೆ ಅನುಗುಣವಾಗಿ ನಾವು ಮತ್ತೆ ಗೇಮ್ ತಯಾರಿಸುತ್ತೇವೆ ಎಂದು ಹೇಳಿಕೊಂಡಿದ್ದೆ.

ಇದನ್ನೂ ಓದಿ: NASA Mars Mission: ಬೇರೊಂದು ಗ್ರಹದ ಮೇಲೆ ಮೊದಲ ಬಾರಿಗೆ ಹೆಲಿಕ್ಯಾಪ್ಟರ್ ಹಾರಾಟ ನಡೆಸಿ ಇತಿಹಾಸ ಬರೆದ NASA

ಭಾರಿ ಜನಪ್ರಿಯ ಪಡೆದಿದ್ದ PUBG ಮೊಬೈಲ್ ಪ್ಲೇಯರ್ ಆದಿತ್ಯ ‘ಡೈನಮೋ’ ಸಾವಂತ್ ಅವರು PUBG ಮೊಬೈಲ್ ಇಂಡಿಯಾ(PUBG Mobile India) ಬಿಡುಗಡೆಯನ್ನು ಕೀಟಲೆ ಮಾಡಿದ್ದಾರೆ. ಯೂಟ್ಯೂಬ್‌ನಲ್ಲಿನ ತನ್ನ ಲೈವ್ ವಿಡಿಯೋ ಸ್ಟ್ರೀಮ್‌ನಲ್ಲಿ, ಆದಿತ್ಯ ಅವರು PUBG ಮೊಬೈಲ್ ಇಂಡಿಯಾದ ಟ್ರೈಲರ್ ಅನ್ನು "ಎರಡು-ಅಂಕಿಯ" ದಿನಾಂಕದಂದು ಬಿಡುಗಡೆ ಮಾಡಲಾಗುವುದು ಮತ್ತು ಆಟವನ್ನು "ಏಕ-ಅಂಕಿಯ" ದಿನಾಂಕದಂದು ಬಿಡುಗಡೆ ಮಾಡಲಾಗುವುದು ಎಂದು ಬಹಿರಂಗಪಡಿಸಿದರು. ವಿಶೇಷವೆಂದರೆ, ಆದಿತ್ಯ ನಿಖರವಾದ ದಿನಾಂಕವನ್ನು ಬಹಿರಂಗಪಡಿಸಲಿಲ್ಲ ಮತ್ತು ರಹಸ್ಯ ಮಾಹಿತಿಯೊಂದಿಗೆ ಮಾತ್ರ ತನ್ನ ಲೈವ್ ವೀಡಿಯೊ ಸ್ಟ್ರೀಮ್ ಅನ್ನು ಕೊನೆಗೊಳಿಸಿದನು.

ಇದನ್ನೂ ಓದಿ: Whatsapp: ಗುಲಾಬಿ ಬಣ್ಣದಲ್ಲಿ ಬರಲಿದೆಯೇ ವಾಟ್ಸಾಪ್, ಇದರ ಸತ್ಯಾಸತ್ಯತೆ ತಿಳಿಯಿರಿ

ಆದಿತ್ಯ ಪಬ್‌ಜಿ ಮೊಬೈಲ್ ಇಂಡಿಯಾದ ಬಿಡುಗಡೆಯ ದಿನಾಂಕವನ್ನು ಬಹಿರಂಗಪಡಿಸದಿದ್ದರೂ, ಪಬ್‌ಜಿ ಮೊಬೈಲ್ ಇಂಡಿಯಾ ಜೂನ್(June) ವೇಳೆಗೆ ಭಾರತದಲ್ಲಿ ಪ್ರಾರಂಭವಾಗಬಹುದೆಂದು ಎಂದು ಹೇಳಲಾಗುತ್ತಿದೆ. ಗೇಮ್ ಡೆವಲಪರ್‌ಗಳು ಏಪ್ರಿಲ್‌ನಲ್ಲಿ ಟ್ರೈಲರ್ ಅನ್ನು ಬಿಡುಗಡೆ ಮಾಡಲು ನಿರ್ಧರಿಸಿದರೆ, ಮೇ ತಿಂಗಳಲ್ಲಿ ಗೇಮ್ ಲಾಂಚ್ ಮಾಡಿ, ಜೂನ್‌ನಲ್ಲಿ ಪಬ್‌ಜಿ ಮೊಬೈಲ್ ಇಂಡಿಯಾ ಕಾರ್ಯಾರಂಭ ಮಾಡಬಹುದು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Cheapest Recharge Plan: ಕೇವಲ ರೂ.129ಕ್ಕೆ 24ದಿನಗಳ ಉಚಿತ ಕಾಲಿಂಗ್, ಡೇಟಾ, Prime Video ನೋಡುವ ಅವಕಾಶ

ಗೇಮ್ ನ ಅಧಿಕೃತ ಟೀಸರ್‌(official teaser)ನಲ್ಲಿ ಜೊನಾಥನ್ ಅಮರಲ್ ಮತ್ತು ಚೇತನ್ ‘ಕ್ರೊಂಟೆನ್’ ಚಾಂಡ್‌ಗುಡೆ ಅವರೊಂದಿಗೆ ಆದಿತ್ಯ ಕಾಣಿಸಿಕೊಂಡಿದ್ದನ್ನು ನೆನಪಿಸಿಕೊಳ್ಳಬಹುದು.

ಇದನ್ನೂ ಓದಿ: Flipkart Smartphone ಸೇಲ್ ನಲ್ಲಿ ಈ ಫೋನ್ ಗಳ ಮೇಲೆ ಭಾರೀ ಡಿಸ್ಕೌಂಟ್

ವಿಶೇಷವೆಂದರೆ, ಪಬ್‌ಜಿ ಕಾರ್ಪೊರೇಷನ್ ಈಗಾಗಲೇ ಭಾರತೀಯ ಅಂಗಸಂಸ್ಥೆಯನ್ನು ಸ್ಥಾಪಿಸಿದೆ ಮತ್ತು ಸ್ಥಳೀಯ ಗೇಮಿಂಗ್(Gaming), ಎಸ್‌ಪೋರ್ಟ್ಸ್, ಮನರಂಜನೆ ಮತ್ತು ಐಟಿ ಉದ್ಯಮವನ್ನು ಹೆಚ್ಚಿಸಲು ಭಾರತದಲ್ಲಿ 100 ಮಿಲಿಯನ್ ಡಾಲರ್ ಹೂಡಿಕೆ ಮಾಡಲು ಯೋಜಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News