Good News To Indian Students - ಕೊರೊನಾ ಮಹಾಮಾರಿಯಿಂದ ಜಗತ್ತಿನಾದ್ಯಂತ ವಿದ್ಯಾರ್ಥಿಗಳ ಅಧ್ಯಯನಕ್ಕೆ ಭಾರಿ ಅಡಚಣೆ ಎದುರಾಗಿದೆ. ಅದರಲ್ಲಿಯೂ ವಿಶೇಷವಾಗಿ ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳು ಇದರಿಂದ ಅಧಿಕ ತೊಂದರೆಗೀಡಾಗಿದ್ದಾರೆ. ಏತನ್ಮಧ್ಯೆ, ಕೋವಿಡ್ ನಿರ್ಬಂಧಗಳಿಂದಾಗಿ ಅಧ್ಯಯನಕ್ಕಾಗಿ ಚೀನಾಕ್ಕೆ ಹಿಂತಿರುಗಲು ಸಾಧ್ಯವಾಗದ ವಿದ್ಯಾರ್ಥಿಗಳಿಗೆ ವಿದೇಶಾಂಗ ಸಚಿವಾಲಯವು ಭಾರಿ ನೆಮ್ಮದಿಯ ಸುದ್ದಿಯೊಂದನ್ನು ಪ್ರಕಟಿಸಿದೆ.
ಜೈಶಂಕರ್ ಹಾಗೂ ಚೀನಾ ವಿದೇಶಾಂಗ ಸಚಿವರು ಮಾತನಾಡಿದರು
ಮಾರ್ಚ್ 25 ರಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಮತ್ತು ಚೀನಾದ ವಿದೇಶಾಂಗ ಸಚಿವ ವಾಂಗ್ ಯಿ ಅವರ ನಡುವಿನ ಭೇಟಿಯ ಬಳಿಕ, ಚೀನಾ ಇದೀಗ ಭಾರತೀಯ ವಿದ್ಯಾರ್ಥಿಗಳನ್ನು ವಾಪಸ್ ಕರೆಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದೆ ಎಂದು ರಾಯಭಾರ ಕಚೇರಿ ತಿಳಿಸಿದೆ. ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಈ ಮಾಹಿತಿಯನ್ನು ನೀಡಿದೆ. ಕೋವಿಡ್‌ನಿಂದ ಚೀನಾದಲ್ಲಿ ವಿಧಿಸಲಾದ ನಿರ್ಬಂಧಗಳಿಂದಾಗಿ ಅಲ್ಲಿಗೆ ಹೋಗಲು ಸಾಧ್ಯವಾಗದ ವಿದ್ಯಾರ್ಥಿಗಳ ಪಟ್ಟಿಯನ್ನು ಭಾರತೀಯ ವಿದೇಶಾಂಗ ಸಚಿವಾಲಯವು ಸಿದ್ಧಪಡಿಸುತ್ತದೆ. ವಿಶೇಷವಾಗಿ ವೈದ್ಯಕೀಯ ವಿದ್ಯಾರ್ಥಿಗಳು, ತಮ್ಮ ಪ್ರಾಯೋಗಿಕ ಪರೀಕ್ಷೆಗಳನ್ನು ನೀಡಲು ಇದರಿಂದ ಸಾಧ್ಯವಾಗಿರಲಿಲ್ಲ.
After the meeting of EAM Dr S Jaishankar with FM of China, Wang Yi on March 25th, Chinese side has expressed willingness to consider facilitating return of Indian students to China;request students to provide information by filling up the form by May 8th:Embassy of India in China pic.twitter.com/fDeMo661kM
— ANI (@ANI) April 29, 2022
ಚೀನಾಕ್ಕೆ ಹೋಗಲು ವಿದ್ಯಾರ್ಥಿಗಳು ಏನು ಮಾಡಬೇಕು?
ಚೀನಾಕ್ಕೆ ಅಧ್ಯಯನಕ್ಕಾಗಿ ತೆರಳ ಬಯಸುವ ಭಾರತೀಯ ವಿದ್ಯಾರ್ಥಿಗಳು ಇದಕ್ಕಾಗಿ ತಮ್ಮ ಮಾಹಿತಿಯನ್ನು ಭಾರತೀಯ ರಾಯಭಾರ ಕಚೇರಿಯೊಂದಿಗೆ ಹಂಚಿಕೊಳ್ಳಬೇಕಾಗಲಿದೆ, ನಂತರ ಈ ರಾಯಭಾರ ಕಚೇರಿ ಈ ಮಾಹಿತಿಯನ್ನು ಚೀನಾ ಸರ್ಕಾರದೊಂದಿಗೆ ಹಂಚಿಕೊಳ್ಳಲಿದೆ. ಇದರಿಂದ ಯಾವ ನಿಯಮಗಳ ಅಡಿಯಲ್ಲಿ ಈ ಭಾರತೀಯ ವಿದ್ಯಾರ್ಥಿಗಳು ಚೀನಾಕ್ಕೆ ಹಿಂತಿರುಗಬಹುದು ಮತ್ತು ಕೋವಿಡ್ ನಿರ್ಬಂಧಗಳ ನಡುವೆ ತಮ್ಮ ಅಧ್ಯಯನವನ್ನು ಅಲ್ಲಿ ಹೇಗೆ ಮುಂದುವರಿಸಬಹುದು ಎಂಬುದನ್ನು ನಿರ್ಧರಿಸಲಾಗುವುದು ಎನ್ನಲಾಗಿದೆ.
ಇದನ್ನೂ ಓದಿ-Food Crisis: ಮುಂದಿನ 27 ವರ್ಷಗಳಲ್ಲಿ ಇಡೀ ವಿಶ್ವದಲ್ಲಿನ ಆಹಾರವೇ ಮುಗಿದು ಹೋಗಲಿದೆಯಂತೆ!
20-22 ಸಾವಿರ ವಿದ್ಯಾರ್ಥಿಗಳು ಚೀನಾಕ್ಕೆ ವಾಪಸ್ಸಾಗಲು ಸಾಧ್ಯವಾಗಿರಲಿಲ್ಲ
ಕೋವಿಡ್ ನಿರ್ಬಂಧಗಳಿಂದ ಸುಮಾರು 20 ರಿಂದ 22 ಸಾವಿರ ವಿದ್ಯಾರ್ಥಿಗಳು ಚೀನಾಕ್ಕೆ ಹೋಗಲು ಸಾಧ್ಯವಾಗಿರಲಿಲ್ಲ ಎಂಬುದು ಇಲ್ಲಿ ಗಮನಿಸಬೇಕಾದ ಸಂಗತಿಯಾಗಿದೆ. ಆದರೆ, ಈ ವೈದ್ಯಕೀಯ ವಿದ್ಯಾರ್ಥಿಗಳು ಆನ್ಲೈನ್ ನಲ್ಲಿ ತಮ್ಮ ತರಗತಿಗಳನ್ನು ಮುಂದುವರೆಸಿದ್ದಾರೆ. ಕಳೆದ ತಿಂಗಳು ಈ ಕುರಿತು ಯುಜಿಸಿ ವೈದ್ಯಕೀಯ ವಿದ್ಯಾರ್ಥಿಗಳಿಗೆ ಎಚ್ಚರಿಕೆಯನ್ನು ಸಹ ನೀಡಿದೆ ಎಂಬುದು ಇಲ್ಲಿ ಉಲ್ಲೇಖನೀಯ. ಈ ಕುರಿತು ಎಚ್ಚರಿಕೆ ನೀಡಿದ್ದ ಯುಜಿಸಿ, ಒಂದು ವೇಳೆ ವಿದ್ಯಾರ್ಥಿಗಳು ವೈದ್ಯಕೀಯ ಅಧ್ಯಯನವನ್ನು ಆನ್‌ಲೈನ್‌ನಲ್ಲಿ ಮುಂದುವರಿಸಿದರೆ, ಅವರ ಪದವಿಯನ್ನು ಭಾರತದಲ್ಲಿ ಗುರುತಿಸಲಾಗುವುದಿಲ್ಲ ಎಂದು ಹೇಳಿತ್ತು.
ಇದನ್ನೂ ಓದಿ-Shocking Video: ಎರಡು ಅಪಾಯಕಾರಿ ಹೆಬ್ಬಾವುಗಳನ್ನು ಭುಜದ ಮೇಲೆ ಹೊತ್ತು ಡಾನ್ಸ್ ಮಾಡಿದ ವ್ಯಕ್ತಿ, ಮುಂದೇನಾಯ್ತು?
ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು
ಯುಜಿಸಿಯ ಈ ಹೇಳಿಕೆಯನ್ನು ವಿರೋಧಿಸಿ ದೇಶದ ವಿವಿಧ ಭಾಗಗಳಿಂದ ವೈದ್ಯಕೀಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಇಂದು ಶುಕ್ರವಾರವೂ ವಿದ್ಯಾರ್ಥಿಗಳು ದೆಹಲಿಯ ಜಂತರ್ ಮಂತರ್‌ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ಆದರೆ ಇದೀಗ ಚೀನಾ ನೀಡಿರುವ ಈ ಸಡಿಲಿಕೆಯಿಂದಾಗಿ ವಿದ್ಯಾರ್ಥಿಗಳಿಗೆ ಖಂಡಿತ ನೆಮ್ಮದಿ ಸಿಗಲಿದೆ ಎಂಬುದು ಮಾತ್ರ ನಿಜ.
ಇದನ್ನೂ ನೋಡಿ-
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.