ನವದೆಹಲಿ: ಭಾರತವು ಪಾಲೆಸ್ತಿನ್ ನೀತಿ ವಿಚಾರವಾಗಿ ಭಿನ್ನ ನಿಲುವು ತಾಳಿದೆ.ವಿಶ್ವಸಂಸ್ಥೆ ಆರ್ಥಿಕ ಮತ್ತು ಸಾಮಾಜಿಕ ಪರಿಷತ್ತು ಸಂಸ್ಥೆಯಲ್ಲಿ ಭಾರತ ಈಗ ಪಾಲೆಸ್ತಿನ್ ಮಾನವ ಹಕ್ಕು ಸಂಘಟನೆ ವಿರುದ್ದವಾಗಿ ಮತ ಚಲಾಯಿಸಿದೆ.ಈ ಹಿಂದೆ ಪ್ಯಾಲೇಸ್ಟಿನಿಯನ್ ಹಕ್ಕುಗಳ ಸಂಘಟನೆಗೆ ವಿಕ್ಷಕ ಸ್ಥಾನಮಾನವನ್ನು ನೀಡಿದ್ದಕ್ಕೆ ಇಸ್ರೇಲ್ ತೀವ್ರ ವಿರೋಧ ವ್ಯಕ್ತಪಡಿಸಿತ್ತು.
Thank you #India for standing with @IsraelinUN and rejecting the request of terrorist organization “Shahed” to obtain the status of an observer in #UN. Together we will continue to act against terrorist organizations that intend to harm. pic.twitter.com/erHTfuY1A1
— Maya Kadosh (@MayaKadosh) June 11, 2019
ಈಗ ಭಾರತದಲ್ಲಿ ಇಸ್ರೇಲ್ ನ ಡೆಪ್ಯುಟಿ ಚೀಫ್ ಮಿಶನ್ ಆಗಿರುವ ಮಾಯಾ ಕೊಡಿಶ್ ಅವರು ಭಾರತದ ನಿಲುವಿಗೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು " ವಿಶ್ವಸಂಸ್ಥೆಯಲ್ಲಿ ವಿಕ್ಷಕನ ಸ್ಥಾನಮಾನವನ್ನು ಪಡೆಯಲು ಪ್ರಯತ್ನಿಸಿದ ಶಾಹಿದ್ ಉಗ್ರ ಸಂಘಟನೆಯ ಪ್ರಸ್ತಾವನೆಯನ್ನು ತಿರಸ್ಕರಿಸಿ ನಮ್ಮ ಜೊತೆಗೆ ಬೆಂಬಲವಾಗಿ ನಿಂತ ಭಾರತಕ್ಕೆ ಧನ್ಯವಾದಗಳು.ನಾವು ಜೊತೆಯಾಗಿ ಭಯೊತ್ಪಾಧಕ ಸಂಘಟನೆಗಳ ವಿರುದ್ಧ ಕಾರ್ಯನಿರ್ವಹಿಸುತ್ತೇವೆ" ಎಂದು ಟ್ವೀಟ್ ಮಾಡಿದ್ದಾರೆ.
ಇಸ್ರೇಲ್ ನ ನಿಯೋಗವು ಪಾಲೆಸ್ತಿನ್ ಗೆ ಮಾನವ ಹಕ್ಕುಗಳ ಗುಂಪಿಗೆ ವಿಕ್ಷಕನ ಸ್ಥಾನ ಮಾನ ನೀಡುವುದಕ್ಕೆ ವಿರೋಧಿಸಿ ಪ್ರಸ್ತಾಪವನ್ನು ಮಂಡಿಸಿತ್ತು. ಇದಕ್ಕೆ ಭಾರತ ಸೇರಿದಂತೆ ಬಹುತೇಕ ದೇಶಗಳು ಇಸ್ರೇಲ್ ಪ್ರಸ್ತಾವನೆ ಪರವಾಗಿ ಮತವನ್ನು ಚಲಾಯಿಸಿದವು.ಇನ್ನೊಂದೆಡೆಗೆ ಪಾಕ್, ಅಮೇರಿಕಾ, ದೇಶಗಳು ವಿರುದ್ಧವಾಗಿ ಮತವನ್ನು ಚಲಾಯಿಸಿದವು. ಒಟ್ಟು 28 ರಾಷ್ಟ್ರಗಳು ಬೆಂಬಲಿಸಿದರೆ ಮತ್ತು 15 ದೇಶಗಳು ವಿರುದ್ಧವಾಗಿ ಮತ ಚಲಾಯಿಸಿದವು.