ಕಾಶ್ಮೀರ ಭಾರತ ಮತ್ತು ಪಾಕ್ ನಡುವಿನ ದ್ವೀಪಕ್ಷೀಯ ವಿಚಾರ-ರಷ್ಯಾ

ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಬಗೆಹರಿಸಬೇಕಿದೆ ಎಂದು ಪುನರುಚ್ಚರಿಸಿದ ರಷ್ಯಾ ದಕ್ಷಿಣ ಏಷ್ಯಾದ ಎರಡೂ ದೇಶಗಳು ಮಧ್ಯಸ್ಥಿಕೆ ಕೇಳದ ಹೊರತು ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ. 

Last Updated : Aug 28, 2019, 04:18 PM IST
ಕಾಶ್ಮೀರ ಭಾರತ ಮತ್ತು ಪಾಕ್ ನಡುವಿನ ದ್ವೀಪಕ್ಷೀಯ ವಿಚಾರ-ರಷ್ಯಾ   title=
ANI Photo

ನವದೆಹಲಿ: ಕಾಶ್ಮೀರ ಸಮಸ್ಯೆಯನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಬಗೆಹರಿಸಬೇಕಿದೆ ಎಂದು ಪುನರುಚ್ಚರಿಸಿದ ರಷ್ಯಾ ದಕ್ಷಿಣ ಏಷ್ಯಾದ ಎರಡೂ ದೇಶಗಳು ಮಧ್ಯಸ್ಥಿಕೆ ಕೇಳದ ಹೊರತು ಈ ವಿಷಯದಲ್ಲಿ ಯಾವುದೇ ಪಾತ್ರವಿಲ್ಲ ಎಂದು ಹೇಳಿದ್ದಾರೆ. 

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ನಡೆದ ಸಭೆಯಲ್ಲಿ, 370 ನೇ ವಿಧಿಯನ್ನು ಹಿಂತೆಗೆದುಕೊಳ್ಳುವುದು ಭಾರತದ ಆಂತರಿಕ ವಿಷಯ ಎಂದು ಪುನರುಚ್ಚರಿಸಿದೆ ಎಂದು ಮಾಸ್ಕೋ ಹೇಳಿದೆ. 'ಇದು ಭಾರತ ಸರ್ಕಾರದ ಸಾರ್ವಭೌಮ ನಿರ್ಧಾರ, ಇದು ಭಾರತದ ಆಂತರಿಕ ವಿಷಯವಾಗಿದೆ. ಭಾರತ ಮತ್ತು ಪಾಕಿಸ್ತಾನದ ನಡುವೆ ಇರುವ ಎಲ್ಲಾ ಸಮಸ್ಯೆಗಳನ್ನು ಶಿಮ್ಲಾ ಒಪ್ಪಂದ ಮತ್ತು ಲಾಹೋರ್ ಘೋಷಣೆಯ ಆಧಾರದ ಮೇಲೆ ಮಾತುಕತೆ ಮೂಲಕ ಪರಿಹರಿಸಬೇಕು" ಎಂದು ರಷ್ಯಾ ರಾಯಭಾರಿ ನಿಕೋಲಾಯ್ ಕುಡಾಶೇವ್ ಹೇಳಿದ್ದಾರೆ. 

ಈ ತಿಂಗಳ ಆರಂಭದಲ್ಲಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಹಿಂತೆಗೆದುಕೊಳ್ಳುವ ಮತ್ತು ಅದನ್ನು ಎರಡು ಕೇಂದ್ರಾಡಳಿತ ಪ್ರದೇಶಗಳಾಗಿ ವಿಂಗಡಿಸುವ ನಿರ್ಧಾರವನ್ನು ಭಾರತ ಘೋಷಿಸಿತ್ತು. ಇದೇ ರೀತಿಯ ಭಾವನೆಗಳನ್ನು ಪ್ರತಿಧ್ವನಿಸುತ್ತಾ, ಭಾರತದ ರಷ್ಯಾ ರಾಯಭಾರ ಕಚೇರಿಯ ಉಪ ಮುಖ್ಯಸ್ಥ ರೋಮನ್ ಬಾಬುಷ್ಕಿನ್, ಕಾಶ್ಮೀರ ಭಾರತದ ಆಂತರಿಕ ಸಮಸ್ಯೆಯೆಂದು ಅಭಿಪ್ರಾಯಪಟ್ಟರು.

'ಇಬ್ಬರೂ ಮಧ್ಯಸ್ಥಿಕೆ ಕೇಳದ ಹೊರತು ಭಾರತ-ಪಾಕಿಸ್ತಾನ ವಿವಾದದಲ್ಲಿ ರಷ್ಯಾಕ್ಕೆ ಯಾವುದೇ ಪಾತ್ರವಿಲ್ಲ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಸಭೆಯಲ್ಲಿ ಕಾಶ್ಮೀರ ಭಾರತದ ಆಂತರಿಕ ಸಮಸ್ಯೆಯೆಂದು ನಾವು ಪುನರುಚ್ಚರಿಸಿದ್ದೇವೆ" ಎಂದು ಬಾಬುಷ್ಕಿನ್ ಹೇಳಿದರು. ಭಾರತದ ನಿರ್ಧಾರವನ್ನು ಅನುಸರಿಸಿ, ಮಾಸ್ಕೋ ನವದೆಹಲಿಯನ್ನು ಅನೇಕ ವೇದಿಕೆಗಳಲ್ಲಿ ಬೆಂಬಲಿಸಿತು. ಉಭಯ ದೇಶಗಳ ನಡುವಿನ ಸಮಸ್ಯೆಯನ್ನು ಪರಿಹರಿಸಲು ಭಾರತದೊಂದಿಗೆ ತೊಡಗಿಸಿಕೊಳ್ಳಲು ಅದು ಪಾಕಿಸ್ತಾನವನ್ನು ಕೇಳಿದೆ.

Trending News