ಕುಲಭೂಷಣ್ ಜಾಧವ್ ಪ್ರಕರಣ: ಮತ್ತೆ ತನ್ನ ಕುತಂತ್ರ ಬುದ್ದಿ ತೋರಿದ ಪಾಕಿಸ್ತಾನ

ಅಂತಾರಾಷ್ಟ್ರೀಯ ಒತ್ತಡದ ಹೊರತಾಗಿಯೂ ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಪಾಕಿಸ್ತಾನ ತನ್ನ  ವರ್ತನೆಗಳಿಂದ ದೂರ ಸರಿದಿಲ್ಲ.

Last Updated : Sep 11, 2020, 06:57 AM IST
  • ಈ ಪ್ರಕರಣದ ಹೋರಾಟಕ್ಕೆ ಅವಕಾಶ ನೀಡುವಂತೆ ಕಾನೂನು ಬದಲಾಯಿಸಲು ಭಾರತದ ವಕೀಲರು ನಿರಾಕರಿಸಿದರು
  • ಇದಕ್ಕೂ ಮೊದಲು ಪಾಕಿಸ್ತಾನವು ಅಂತರರಾಷ್ಟ್ರೀಯ ಒತ್ತಡದಲ್ಲಿ ಕಾನೂನನ್ನು ಬದಲಾಯಿಸಬೇಕಾಗಿತ್ತು
  • ಇಮ್ರಾನ್ ಖಾನ್ ವಿರೋಧ ಮತ್ತು ಮೂಲಭೂತವಾದಿಗಳಿಗೆ ಹೆದರುತ್ತಿದ್ದಾರೆ.
ಕುಲಭೂಷಣ್ ಜಾಧವ್ ಪ್ರಕರಣ:  ಮತ್ತೆ ತನ್ನ ಕುತಂತ್ರ ಬುದ್ದಿ ತೋರಿದ ಪಾಕಿಸ್ತಾನ title=

ಇಸ್ಲಾಮಾಬಾದ್: ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಅಂತರರಾಷ್ಟ್ರೀಯ ಒತ್ತಡದಿಂದಾಗಿ ಪಾಕಿಸ್ತಾನ ಸ್ವಲ್ಪ ತಲೆಬಾಗಿರಬಹುದು, ಆದರೆ ಅದು ತನ್ನ ವರ್ತನೆಗಳಿಂದ ದೂರ ಸರಿದಿಲ್ಲ. ಕುಲಭೂಷಣ್ ಜಾಧವ್ ಪ್ರಕರಣಕ್ಕೆ ಸಂಬಂಧಿಸಿದಂತೆ ತನ್ನ ಕಾನೂನಿನಲ್ಲಿ ಯಾವುದೇ ಬದಲಾವಣೆಗಳನ್ನು ಮಾಡುವುದಿಲ್ಲ ಎಂದು ಇಮ್ರಾನ್ ಖಾನ್ (Imran Khan) ಸರ್ಕಾರ ಸ್ಪಷ್ಟಪಡಿಸಿದೆ.

ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ  ಭಾರತದ ವಕೀಲರಿಗೆ ಈ ಪ್ರಕರಣದಲ್ಲಿ ಸ್ಪರ್ಧಿಸಲು ಅವಕಾಶ ನೀಡುವಂತೆ ಕಾನೂನು ಬದಲಾಯಿಸಲು ಸರ್ಕಾರ ನಿರಾಕರಿಸಿದೆ. ಪಾಕಿಸ್ತಾನದ ನ್ಯಾಯಾಲಯಗಳೊಂದಿಗೆ ಭಾರತ ಸಹಕರಿಸಬೇಕಾಗುತ್ತದೆ. ಭಾರತೀಯ ಒತ್ತಡದಿಂದಾಗಿ ಕುಲಭೂಷಣ್ ಜಾಧವ್ (Kulbhushan Jadhav) ಪ್ರಕರಣದಲ್ಲಿ ನಮ್ಮ ಕಾನೂನುಗಳನ್ನು ಬದಲಾಯಿಸಲು ಸಾಧ್ಯವಿಲ್ಲ ಎಂದು ಪಾಕಿಸ್ತಾನ ಗುರುವಾರ ಹೇಳಿದೆ. 

ಕುಲಭೂಷಣ್ ಜಾಧವ್ ಪ್ರಕರಣದಲ್ಲಿ ಭಾರತದ ಎದುರು ಮಂಡಿಯೂರಿದ ಪಾಕಿಸ್ತಾನ

ಮೂಲಭೂತವಾದಿಗಳಿಗೆ ಹೆದರುವ ಇಮ್ರಾನ್ :
ಪಾಕ್ ಸರ್ಕಾರದ ಈ ನಿಲುವಿಗೆ ಕಾರಣ ವಿರೋಧ ಮತ್ತು ಮೂಲಭೂತವಾದಿಗಳ ಭಯ. ವಾಸ್ತವವಾಗಿ ಅಂತರರಾಷ್ಟ್ರೀಯ ನ್ಯಾಯಾಲಯದ (ICJ) ನಿರ್ದೇಶನದ ಮೇರೆಗೆ ಜಾಧವ್ ಅವರ ಮರಣದಂಡನೆ ಶಿಕ್ಷೆ ಕುರಿತು ಪರಿಶೀಲನಾ ಅರ್ಜಿ ಸಲ್ಲಿಸಲು ಜಾಧವ್ ಅವರಿಗೆ ಅವಕಾಶ ನೀಡಲು ಪಾಕಿಸ್ತಾನ ಕಾನೂನು ಬದಲಾಯಿಸಬೇಕಾಗಿತ್ತು. ಇದರಿಂದಾಗಿ ಇಮ್ರಾನ್ ಖಾನ್ ಸರ್ಕಾರದ ಮೇಲೆ ಸರ್ವಾಂಗೀಣ ದಾಳಿ ನಡೆದಿತ್ತು. ಪ್ರತಿಪಕ್ಷಗಳು ಆತನನ್ನು ತೀವ್ರವಾಗಿ ಗುರಿಯಾಗಿಸಿಕೊಂಡಿದ್ದವು. ಅಂತಹ ಪರಿಸ್ಥಿತಿಯಲ್ಲಿ ಪಾಕಿಸ್ತಾನವು ಈಗ ಯಾವುದೇ ಬದಲಾವಣೆಗಳನ್ನು ಮಾಡಿದರೆ ಸರ್ಕಾರ ತೊಂದರೆಗೆ ಸಿಲುಕಬಹುದು ಎಂದು ಇಮ್ರಾನ್ ಖಾನ್ ಅವರಿಗೆ ಭಯವಿದೆ.

ಕುಲಭೂಷಣ್ ಜಾಧವ್ ಗಲ್ಲು ಶಿಕ್ಷೆ ರದ್ದು: ಭಾರತಕ್ಕೆ ಜಯ
 
ನ್ಯಾಯಾಲಯ ಏನು ಹೇಳಿದೆ?
ಜಾಧವ್ ಪರ ವಕೀಲರನ್ನು ನೇಮಕ ಮಾಡಲು ಭಾರತಕ್ಕೆ ಮತ್ತೊಂದು ಅವಕಾಶ ಸಿಗಬೇಕು ಎಂದು ಕೆಲವು ದಿನಗಳ ಹಿಂದೆ ಇಸ್ಲಾಮಾಬಾದ್ ಹೈಕೋರ್ಟ್ ತನ್ನ ಆದೇಶದಲ್ಲಿ ತಿಳಿಸಿತ್ತು. ಪ್ರಕರಣದ ವಿಚಾರಣೆಯನ್ನು ಹೈಕೋರ್ಟ್ ಕೂಡ ಒಂದು ತಿಂಗಳು ಮುಂದೂಡಿದೆ. ನಿವೃತ್ತ ನೌಕಾಧಿಕಾರಿ ಕುಲಭೂಷಣ್ ಜಾಧವ್ ಅವರನ್ನು ಬೇಹುಗಾರಿಕೆ ಆರೋಪದ ಮೇಲೆ ಪಾಕಿಸ್ತಾನ ಜೈಲಿನಲ್ಲಿ ದಾಖಲಿಸಲಾಗಿದೆ ಮತ್ತು ಅವರ ಮರಣದಂಡನೆ ಶಿಕ್ಷೆಯ ವಿರುದ್ಧ ಪರಿಶೀಲನಾ ಅರ್ಜಿ ಸಲ್ಲಿಸಲು ಭಾರತೀಯ ವಕೀಲರನ್ನು ನೇಮಕ ಮಾಡುವ ಬಗ್ಗೆ ವಿಚಾರಣೆ ನಡೆಯುತ್ತಿದೆ.

Trending News