ಲೆಬನಾನ್: ಲೆಬನಾನ್ ಪ್ರಧಾನಿ ಹಸನ್ ದಿಯಾಬ್ ಅಲಿನ ಬೈರುತ್ ನಲ್ಲಿ ನಡೆದ ಬಾಂಬ್ ಸ್ಫೋಟದ ಬಳಿಕ ತನ್ನ ಪ್ರತಿಕ್ರಿಯೆ ನೀಡಿದ್ದು, ಸ್ಫೋಟ ನಡೆದ ವೆಯರ್ ಹೌಸ್ ಒಂದು ಅಪಾಯಕಾರಿ ವೆಯರ್ ಹೌಸ್ ಆಗಿದೆ ಎಂದು ಹೇಳಿದ್ದಾರೆ. ಜೊತೆಗೆ ಈ ಘಟನೆಗೆ ಕಾರಣರಾದವರನ್ನು ಸುಮ್ಮನೆ ಬಿಡಲಾಗುವುದಿಲ್ಲ ಎಂದೂ ಕೂಡ ಅವರು ಹೇಳಿದ್ದಾರೆ. ಬಾಂಬ್ ಸ್ಫೋಟದ ಕುರಿತು ಪ್ರತಿಕ್ರಿಯೆ ನೀಡಿರುವ ದೇಶದ ರಾಷ್ಟ್ರಪತಿ ಮಿಷೆಲ್ ಔನ್, ಇದನ್ನು ಯಾವುದೇ ಕಾರಣಕ್ಕೂ ಸ್ವೀಕರಿಸಲಾಗುವುದಿಲ್ಲ, ಒಂದೇ ಸ್ಥಳದಲ್ಲಿ 2750 ಟನ್ ಅಮೋನಿಯಂ ನೈಟ್ರೇಟ್ ಅನ್ನು ಗೋದಾಮಿನಲ್ಲಿ ಅಸುರಕ್ಷಿತ ರೀತಿಯಲ್ಲಿ ಶೇಖರಿಸಿ ಇಡಲಾದ ಸಂಗತಿಯನ್ನು ಯಾವುದೇ ಕಾರಣಕ್ಕೆ ಸ್ವೀಕರಿಸಲು ಸಾಧ್ಯವಿಲ್ಲ ಎಂದಿದ್ದಾರೆ.
Huge explosion in Lebanon's capital Beirut. More details awaited. https://t.co/JfnWyUhDuN pic.twitter.com/YRnqOibfpY
— ANI (@ANI) August 4, 2020
ಬೈರುತ್‌ನಲ್ಲಿ ನಡೆದ ಸ್ಫೋಟದ ನಂತರ ದೂರದರ್ಶನದಲ್ಲಿ ಸಂಕ್ಷಿಪ್ತ ಭಾಷಣ ಮಾಡಿರುವ ಲೆಬನಾನ್ ಪ್ರಧಾನಿ ಹಸನ್ ದಿಯಾಬ್, ಎಲ್ಲಾ ದೇಶಗಳು ಮತ್ತು ಲೆಬನಾನಿನ ಸ್ನೇಹಿತರಿಗೆ ಸಹಾಯಕ್ಕಾಗಿ ಮನವಿ ಮಾಡಿದ್ದಾರೆ. ಈ ಕುರಿತು ಹೇಳಿಕೆ ಹೇಳಿಕೆ ನೀಡಿರುವ ಅವರು, "ನಾವು ನಿಜಕ್ಕೂ ಅನಾಹುತವನ್ನು ಎದುರಿಸುತ್ತಿದ್ದೇವೆ" ಎಂದು ಹೇಳಿದ್ದಾರೆ. ಬೈರುತ್ ಬಂದರಿನಲ್ಲಿ ನಡೆದ ಭಾರಿ ಸ್ಫೋಟಕ್ಕೆ ಯಾರು ಹೊಣೆಗಾರರಾಗುತ್ತಾರೋ ಅವರು ಅದರ ಬೆಲೆ ತೆರಳಿದ್ದಾರೆ ಎಂಬ ಭರವಸೆಯನ್ನು ದಿಯಾಬ್ ಹೇಳಿದ್ದಾರೆ. ಆದರೆ, ಇದರ ಹಿಂದಿನ ಕಾರಣಗಳ ಬಗ್ಗೆ ಅವರು ಯಾವುದೇ ಪ್ರತಿಕ್ರಿಯೆಯನ್ನು ನೀಡಿಲ್ಲ.
ಬೇರುತ್ ನಲ್ಲಿ ನಡೆಧ ಭೀಕರ ವಿಸ್ಫೋಟದ ಬಳಿದ ಲೆಬನಾನ್ ಪ್ರಧಾನಿ ದಿಯಾಬ್ ಈ ಹೇಳಿಕೆ ನೀಡಿದ್ದಾರೆ. ಈ ಬಾಂಬ್ ವಿಸ್ಫೋಟದಲ್ಲಿ 80ಕ್ಕೂ ಅಧಿಕ ಜನರು ಸಾವನ್ನಪ್ಪಿದ್ದು, ಸಾವಿರಕ್ಕೂ ಅಧಿಕ ಜನರು ಗಾಯಗೊಂಡಿದ್ದಾರೆ.