ರಷ್ಯಾದಿಂದ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ ಮುಖ್ಯಸ್ಥನ ಅಪಹರಣ...!

ಉಕ್ರೇನ್‌ನ ಪರಮಾಣು ವಿದ್ಯುತ್ ಪೂರೈಕೆದಾರರು ಶನಿವಾರದಂದು ಯುರೋಪ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯಸ್ಥರನ್ನು ರಷ್ಯಾ ಅಪಹರಣ ಮಾಡಿದೆ ಎಂದು ಆರೋಪಿಸಿದ್ದಾರೆ.

Written by - Zee Kannada News Desk | Last Updated : Oct 1, 2022, 04:14 PM IST
  • ಈ ಬೆಳವಣಿಗೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಯೂ ಕೂಡ ಖಂಡಿಸಲಾಗಿದೆ.
  • ಆದರೆ ಭಾರತ, ಚೀನಾ, ಮತ್ತು ಬ್ರೆಜಿಲ್ ದೇಶಗಳು ಸ್ವಾಧೀನವನ್ನು ಖಂಡಿಸುವ ಕರಡು ನಿರ್ಣಯದಿಂದ ದೂರ ಉಳಿದಿವೆ
 ರಷ್ಯಾದಿಂದ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರ ಮುಖ್ಯಸ್ಥನ ಅಪಹರಣ...! title=
ಸಾಂದರ್ಭಿಕ ಚಿತ್ರ

ನವದೆಹಲಿ: ಉಕ್ರೇನ್‌ನ ಪರಮಾಣು ವಿದ್ಯುತ್ ಪೂರೈಕೆದಾರರು ಶನಿವಾರದಂದು ಯುರೋಪ್‌ನ ಜಪೋರಿಝಿಯಾ ಪರಮಾಣು ವಿದ್ಯುತ್ ಸ್ಥಾವರದ ಮುಖ್ಯಸ್ಥರನ್ನು ರಷ್ಯಾ ಅಪಹರಣ ಮಾಡಿದೆ ಎಂದು ಆರೋಪಿಸಿದ್ದಾರೆ.

ಈಗ ಇದನ್ನು ರಷ್ಯಾದ ಪಡೆಗಳು ಆಕ್ರಮಿಸಿಕೊಂಡಿವೆ ಮತ್ತು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅಕ್ರಮವಾಗಿ ಸೇರ್ಪಡೆಗೊಳ್ಳಲು ಮುಂದಾಗಿರುವ ಉಕ್ರೇನ್ ಪ್ರದೇಶದಲ್ಲಿದೆ ಎನ್ನಲಾಗಿದೆ.ಏತನ್ಮಧ್ಯೆ, ಅಮೇರಿಕಾ 1,000 ರಷ್ಯಾದ ವ್ಯಕ್ತಿಗಳು ಮತ್ತು ಸಂಸ್ಥೆಗಳ ಮೇಲೆ ನಿರ್ಬಂಧಗಳನ್ನು ವಿಧಿಸಿದೆ.

ಇದನ್ನೂ ಓದಿ-ಫ್ಲಿಪ್‌ಕಾರ್ಟ್ ಮತ್ತು ಅಮೆಜಾನ್‌ಗಿಂತ ಅಗ್ಗದ ಬೆಲೆಯಲ್ಲಿ ಸರಕುಗಳನ್ನು ಮಾರಾಟ ಮಾಡುತ್ತಿರುವ ಶಾಪಿಂಗ್ ಸೈಟ್ ಗಳಿವು .!

ಜನಾಭಿಪ್ರಾಯ ಸಂಗ್ರಹಣೆಯ ನಂತರ ರಷ್ಯಾ ಆಕ್ರಮಿತ ಪ್ರದೇಶಗಳಾದ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಝಿಯಾವನ್ನು ರಷ್ಯಾ ಸ್ವಾಧೀನಪಡಿಸಿಕೊಂಡಿರುವುದನ್ನು ಪಶ್ಚಿಮದಲ್ಲಿ ವ್ಯಾಪಕವಾಗಿ ಖಂಡಿಸಲಾಗಿದೆ.ಈ ಬೆಳವಣಿಗೆಗಳನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿಯೂ ಕೂಡ ಖಂಡಿಸಲಾಗಿದೆ.ಆದರೆ ಭಾರತ, ಚೀನಾ, ಮತ್ತು ಬ್ರೆಜಿಲ್ ದೇಶಗಳು ಸ್ವಾಧೀನವನ್ನು ಖಂಡಿಸುವ ಕರಡು ನಿರ್ಣಯದಿಂದ ದೂರ ಉಳಿದಿದ್ದವು.ಆದಾಗ್ಯೂ, ಭಾರತವು ಉಕ್ರೇನ್‌ನಲ್ಲಿ ಹಿಂಸಾಚಾರವನ್ನು ತಕ್ಷಣವೇ ನಿಲ್ಲಿಸುವಂತೆ ಕರೆ ನೀಡಿದ್ದು, ವಿವಾದವನ್ನು ಸಂಧಾನದ ಮೂಲಕ ಪರಿಹರಿಸಿಕೊಳ್ಳಲು ಹೇಳಿದೆ.

ಇದನ್ನೂ ಓದಿ-ವೊಡಾಫೋನ್-ಐಡಿಯಾ ಬಳಕೆದಾರರಿಗೆ ಎದುರಾಗಿದೆ ಸಮಸ್ಯೆ, ಫೋನ್‌ನಿಂದ ಕಣ್ಮರೆಯಾಗುವುದು ನೆಟ್‌ವರ್ಕ್

ಇತ್ತಕಡೆ ರಷ್ಯಾ ದೇಶವು ಉಕ್ರೇನ್ ಪ್ರದೇಶಗಳನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗುತ್ತಿದ್ದಂತೆ ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರು ನ್ಯಾಟೋ ಮಿಲಿಟರಿ ಒಕ್ಕೂಟದ ತ್ವರಿತ ಸದಸ್ಯತ್ವಕ್ಕಾಗಿ ಔಪಚಾರಿಕವಾಗಿ ಅರ್ಜಿ ಸಲ್ಲಿಸುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News