Death Valley Moving Stones - ಜಗತ್ತು ಲಕ್ಷಾಂತರ ರಹಸ್ಯಗಳಿಂದ ತುಂಬಿದೆ. ವಿಜ್ಞಾನಿಗಳು ಕೂಡ ಆ ರಹಸ್ಯಗಳನ್ನು ಭೇದಿಸಲು ಯತ್ನಿಸುತ್ತಿದ್ದಾರೆ. ಆದರೂ ಕೂಡ ಇಂದಿಗೂ ಕೂಡ ಆ ರಹಸ್ಯಗಳು ವಿಜ್ಞಾನಿಗಳ ಪಾಲಿಗೂ ಕೂಡ ಯಕ್ಷಪ್ರಶ್ನೆಯಾಗಿಯೇ ಉಳಿದಿವೆ. ಇಂದು ನಾವು ನಿಮಗೆ ಅಂತಹ ಒಂದು ರಹಸ್ಯದ ಬಗ್ಗೆ ಹೇಳಲಿದ್ದೇವೆ, ಮತ್ತು ಅದನ್ನು ಕೇಳಿ ನೀವೂ ಕೂಡ ದಿಗ್ಭ್ರಮೆಗೊಳಗಾಗುವಿರಿ. ಈ ರಹಸ್ಯದ ಹೆಸರು ಡೆತ್ ವ್ಯಾಲಿ (Death Valley Road). ಇದು ಅಮೇರಿಕಾದ ಕ್ಯಾಲಿಫೋರ್ನಿಯಾದಲ್ಲಿದೆ. ಕಲ್ಲುಗಳಿಂದಾಗಿ ಈ ಕಣಿವೆ ವಿಶ್ವಾದ್ಯಂತ ಇದು ಭಾರಿ ಪ್ರಸಿದ್ಧಿಯನ್ನು ಪಡೆದಿದೆ.
ಈ ಕಣಿವೆಯ ಬಗ್ಗೆ ಹೇಳುವುದಾದರೆ, ಅಲ್ಲಿನ ಕಲ್ಲುಗಳು ತಾನಾಗಿಯೇ ಚಲಿಸುತ್ತವೆ ಮತ್ತು ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ತಲುಪುತ್ತವೆ. ಅದಕ್ಕೆ ಸಾಕ್ಷಿಯೂ ಅಲ್ಲಿ ಸಿಗುತ್ತದೆ. ಕಲ್ಲುಗಳು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುವಾಗ, ಅವುಗಳು ತಮ್ಮ ಗುರುತುಗಳನ್ನು ಬಿಡುತ್ತವೆ. ಈ ಗುರುತುಗಳನ್ನು ನೋಡಿದರೆ ಮರುಭೂಮಿಯ ಧೂಳಿನಲ್ಲಿ ಕಾರೊಂದು ಗುರುತು ಬಿಡುತ್ತಿದೆಯೇನೋ ಎನಿಸುತ್ತದೆ.
ಇದನ್ನೂ ಓದಿ-Viral Video: ದೈತ್ಯ ಹೆಬ್ಬಾವಿನೊಂದಿಗೆ ಪುಟ್ಟ ಬಾಲಕಿಯ ಸರಸ, ನೋಡಿದ್ರೆ ನೀವು ಬೆಚ್ಚಿಬೀಳ್ತೀರಾ..!
ಹಲವು ಸಂಶೋಧನೆಗಳ ನಂತರವೂ ನಿಗೂಢತೆ ಪತ್ತೆಯಾಗಿಲ್ಲ (Viral News)
ಇಲ್ಲಿನ ಕಲ್ಲುಗಳು ಹೇಗೆ ತಾನಾಗಿಯೇ ಚಲಿಸುತ್ತವೆ ಎಂಬುದರ ಕುರಿತು ಇಲ್ಲಿ ಹಲವು ಸಂಶೋಧನೆಗಳು ನಡೆದಿವೆ. ಆದರೆ, ಅದರ ನಂತರವೂ, ಈ ಸ್ಥಳವು ಇಂದಿಗೂ ವಿಜ್ಞಾನಿಗಳಿಗೆ ನಿಗೂಢವಾಗಿಯೇ ಉಳಿದಿದೆ. ಈ ನಿಗೂಢ ಸ್ಥಳವನ್ನು ನೋಡಲು ದೇಶ ಮತ್ತು ವಿದೇಶಗಳಿಂದ ಅನೇಕ ಪ್ರವಾಸಿಗರು ವರ್ಷವಿಡಿ ಬರುತ್ತಾರೆ. ಈ ಕಣಿವೆಯು ಕ್ಯಾಲಿಫೋರ್ನಿಯಾದ ಆಗ್ನೇಯಕ್ಕೆ ನೆವಾಡಾ ರಾಜ್ಯದ ಸಮೀಪದಲ್ಲಿದೆ. ಈ ಸಂಪೂರ್ಣ ಪ್ರದೇಶವು 225 ಕಿಮೀ ತ್ರಿಜ್ಯದಲ್ಲಿ ಹರಡಿದೆ ಎಂದು ನಿಮಗೆ ಹೇಳಿದರೆ ನೀವು ಆಶ್ಚರ್ಯಪಡುವಿರಿ. ಇದುವರೆಗೆ ಈ ಕಲ್ಲುಗಳು ಚಲಿಸುವುದನ್ನು ಯಾರೂ ನೋಡಿಲ್ಲ. ಆದರೆ ಈ ಕಲ್ಲುಗಳು ಜಾರಿದ ನಂತರ ತಮ್ಮ ಹಿಂದೆ ದೀರ್ಘ ರೇಖೆಯನ್ನು ಬಿಡುತ್ತವೆ. ಈ ಕಲ್ಲುಗಳು ಒಂದು ಸ್ಥಳದಿಂದ ಇನ್ನೊಂದಕ್ಕೆ ಚಲಿಸುತ್ತವೆ ಎಂಬುದನ್ನು ಈ ಸಾಲುಗಳು ತೋರಿಸುತ್ತವೆ.
ಇದನ್ನೂ ಓದಿ-Viral Video: ಹಸೆಮಣೆ ಮೇಲೆ ವರಮಾಲೆ ಎಸೆದು ಹೋದ ವಧು, ಮುಂದೇನಾಯ್ತು, ನೀವೇ ನೋಡಿ!
1 ಕಿಲೋಮೀಟರ್ವರೆಗೆ ಕಲ್ಲು ಜಾರಿತ್ತು
1972 ರಲ್ಲಿ, ಈ ರಹಸ್ಯವನ್ನು ಪತ್ತೆಹಚ್ಚುವ ಒಂದು ಪ್ರಯತ್ನವನ್ನು ಮಾಡಲಾಗಿದೆ. ಇದಕ್ಕಾಗಿ ವಿಜ್ಞಾನಿಗಳ ತಂಡ ಕಣಿವೆಗೆ (Death Valley California) ಭೇಟಿ ನೀಡಿತ್ತು. ವಿಜ್ಞಾನಿಗಳು ಈ ಕಲ್ಲುಗಳ ಮೇಲೆ 7 ವರ್ಷಗಳ ಕಾಲ ಸಂಶೋಧನೆ ನಡೆಸಿದ್ದಾರೆ. ಆ ಸಮಯದಲ್ಲಿ, 317 ಕೆ.ಜಿ ತೂಕದ ಒಂದು ಕಲ್ಲನ್ನು ವಿಜ್ಞಾನಿಗಳು ವಿಶೇಷವಾಗಿ ಅಧ್ಯಯನ ಮಾಡಿದ್ದಾರೆ. ನಂತರ ಆ ಕಲ್ಲು ಸ್ವಲ್ಪವೂ ಚಲಿಸಲಿಲ್ಲ, ಆದರೆ ಕೆಲವು ವರ್ಷಗಳ ನಂತರ, ವಿಜ್ಞಾನಿಗಳು ಮತ್ತೆ ಆ ಕಲ್ಲಿನ ಬಗ್ಗೆ ಕಂಡುಹಿಡಿಯಲು ಪ್ರಯತ್ನಿಸಿದಾಗ, ಆ ಕಲ್ಲು 1 ಕಿಲೋಮೀಟರ್ ದೂರದಲ್ಲಿ ಪತ್ತೆಯಾಗಿದೆ. ಇದಾದ ಬಳಿಕ ವಿಜ್ಞಾನಿಗಳು ಕೂಡ ಆಶ್ಚರ್ಯಚಕಿತರಾಗಿದ್ದಾರೆ.
ಇದನ್ನೂ ಓದಿ-Viral News: ಒಂದಲ್ಲ ಎರಡಲ್ಲ ವ್ಯಕ್ತಿಯು ಬಾಯಿಯಲ್ಲಿ 11 ವಿಷಪೂರಿತ ಹಾವುಗಳು..!
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.