ಉಡಾವಣಾ ತಾಣದಲ್ಲಿ ಗೌಪ್ಯವಾಗಿ 'ಮಹತ್ವದ ಪರೀಕ್ಷೆ' ನಡೆಸಿದ ಉತ್ತರ ಕೊರಿಯಾ

ಉತ್ತರ ಕೊರಿಯಾ ತನ್ನ ಸೊಹೆ ಉಪಗ್ರಹ ಉಡಾವಣಾ ಸ್ಥಳದಲ್ಲಿ "ಬಹಳ ಮುಖ್ಯವಾದ" ಪರೀಕ್ಷೆಯನ್ನು ನಡೆಸಿದೆ ಎಂದು ರಾಜ್ಯ ಮಾಧ್ಯಮ ಕೆಸಿಎನ್ಎ ಭಾನುವಾರ ವರದಿ ಮಾಡಿದೆ.

Updated: Dec 8, 2019 , 10:08 AM IST
ಉಡಾವಣಾ ತಾಣದಲ್ಲಿ ಗೌಪ್ಯವಾಗಿ 'ಮಹತ್ವದ ಪರೀಕ್ಷೆ' ನಡೆಸಿದ ಉತ್ತರ ಕೊರಿಯಾ
Photo Courtesy: Zee

ಸಿಯೋಲ್: ಉತ್ತರ ಕೊರಿಯಾ ತನ್ನ ಸೊಹೆ ಉಪಗ್ರಹ ಉಡಾವಣಾ ಸ್ಥಳದಲ್ಲಿ ಗೌಪ್ಯವಾಗಿ  "ಮಹತ್ವದ ಪರೀಕ್ಷೆ"ಯನ್ನು ನಡೆಸಿದೆ ಎಂದು ರಾಜ್ಯ ಮಾಧ್ಯಮ ಕೆಸಿಎನ್ಎ ಭಾನುವಾರ ವರದಿ ಮಾಡಿದೆ, ಉತ್ತರ ಕೊರಿಯಾ(North Korea) ರಾಕೆಟ್ ಪರೀಕ್ಷಾ ಮೈದಾನವನ್ನು ಮುಚ್ಚುವುದಾಗಿ ಭರವಸೆ ನೀಡಿದೆ ಎಂದು ಯುಎಸ್ ಅಧಿಕಾರಿಗಳು ಒಮ್ಮೆ ತಿಳಿಸಿದ್ದರು.

ಉತ್ತರ ಕೊರಿಯಾವು ವರ್ಷಾಂತ್ಯದ ಗಡುವನ್ನು ಸಮೀಪಿಸುತ್ತಿರುವುದರಿಂದ ಈ ಪರೀಕ್ಷೆಯು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಸ್ಥಗಿತಗೊಂಡ ಅಣ್ವಸ್ತ್ರೀಕರಣದ ಮಾತುಕತೆಗಳ ನಡುವೆ "ಹೊಸ ಹಾದಿಯನ್ನು" ತೆಗೆದುಕೊಳ್ಳಬಹುದು ಎಂದು ಹೇಳಲಾಗುತ್ತಿದೆ. 

ಕೆಸಿಎನ್ಎ ವರದಿಯು ಇದನ್ನು "ಮಹತ್ವದ ಯಶಸ್ವಿ ಪರೀಕ್ಷೆ" ಎಂದು ಕರೆದಿದೆ, ಆದಾಗ್ಯೂ ಈ ಪರೀಕ್ಷೆಗೆ ಸಂಬಂಧಿಸಿದೆ ಮಹತ್ವದ ಮಾಹಿತಿಯನ್ನೇನು ಹಂಚಿಕೊಂಡಿಲ್ಲ. ಉತ್ತರ ಕೊರಿಯಾದಿಂದ ಕ್ಷಿಪಣಿ ಉಡಾವಣೆಯಾಗುವುದನ್ನು ಕಂಡರೆ ಸಾಮಾನ್ಯವಾಗಿ ಎಚ್ಚರಿಕೆಗಳನ್ನು ನೀಡುವ ದಕ್ಷಿಣ ಕೊರಿಯಾದ ಜಂಟಿ ಮುಖ್ಯಸ್ಥರು ಕೂಡ ಈ ಬಗ್ಗೆ ಪ್ರತಿಕ್ರಿಯಿಸಲು ನಿರಾಕರಿಸಿದ್ದಾರೆ.

ಖಂಡಾಂತರ ಕ್ಷಿಪಣಿಯನ್ನು ಉಡಾಯಿಸಲು ಈ ತಾಣವನ್ನು ಹಿಂದೆಂದೂ ಬಳಸಲಾಗಿಲ್ಲ ಎಂದು ವಿಶ್ಲೇಷಕರು ಹೇಳಿದ್ದಾರೆ. ಆದರೆ ಕ್ಷಿಪಣಿ ಎಂಜಿನ್‌ಗಳನ್ನು ಪರೀಕ್ಷಿಸಲು ಇದನ್ನು ಬಳಸಲಾಗಿದೆ. ಹಿಂದಿನ ಉಪಗ್ರಹ ಉಡಾವಣೆಗಳು ಯುನೈಟೆಡ್ ಸ್ಟೇಟ್ಸ್‌ನೊಂದಿಗೆ ಮಾತುಕತೆ ನಡೆಸಲು ಸಹಾಯ ಮಾಡಿವೆ. ಕ್ಷಿಪಣಿ ಉಡಾವಣೆಗೆ ಬದಲಾಗಿ ಉತ್ತರ ಕೊರಿಯನ್ನರು ರಾಕೆಟ್ ಎಂಜಿನ್‌ನ ಸ್ಥಾಯೀ ಪರೀಕ್ಷೆಯನ್ನು ನಡೆಸಿರುವ ಸಾಧ್ಯತೆ ಇದೆ ಎಂದು ಕ್ಷಿಪಣಿ ತಜ್ಞರು ಅಭಿಪ್ರಾಯ ಪಟ್ಟಿದ್ದಾರೆ. "ಇದು ಉಡಾವಣೆಯಲ್ಲ. ಸೊಹೆ ಟೆಸ್ಟ್ ಸ್ಟ್ಯಾಂಡ್‌ನಲ್ಲಿ ನೆಲ-ಆಧಾರಿತ ಎಂಜಿನ್ ಪರೀಕ್ಷೆಯಾಗಿದೆ " ಎಂದು ಫೆಡರೇಶನ್ ಆಫ್ ಅಮೇರಿಕನ್ ಸೈಂಟಿಸ್ಟ್ಸ್‌ನ ಹಿರಿಯ ಸಹವರ್ತಿ ಅಂಕಿತ್ ಪಾಂಡಾ ಟ್ವಿಟರ್‌ನಲ್ಲಿ ತಿಳಿಸಿದ್ದಾರೆ.

"ಇತ್ತೀಚಿನ ಪ್ರಮುಖ ಪರೀಕ್ಷೆಯ ಫಲಿತಾಂಶಗಳು ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಡಿಪಿಆರ್‌ಕೆ ಕಾರ್ಯತಂತ್ರದ ಸ್ಥಾನವನ್ನು ಬದಲಿಸುವಲ್ಲಿ ಪ್ರಮುಖ ಪರಿಣಾಮವನ್ನು ಬೀರುತ್ತವೆ" ಎಂದು ಉತ್ತರ ಕೊರಿಯಾದ ಅಧಿಕೃತ ಡೆಮಾಕ್ರಟಿಕ್ ಪೀಪಲ್ಸ್ ರಿಪಬ್ಲಿಕ್ ಕೊರಿಯಾ ಹೆಸರನ್ನು ಉಲ್ಲೇಖಿಸಿ ಕೆಸಿಎನ್‌ಎ ವರದಿ ಮಾಡಿದೆ.

ಉತ್ತರ ಕೊರಿಯಾ ನಿಗದಿಪಡಿಸಿದ ವರ್ಷಾಂತ್ಯದ ಗಡುವಿಗೆ ಮುಂಚಿತವಾಗಿ ಉದ್ವಿಗ್ನತೆ ಹೆಚ್ಚಾಗಿದೆ, ಇದು ಪಯೋಂಗ್ಯಾಂಗ್‌ನ ಏಕಪಕ್ಷೀಯ ಅಣ್ವಸ್ತ್ರೀಕರಣವನ್ನು ಒತ್ತಾಯಿಸುವ ನೀತಿಯನ್ನು ಬದಲಾಯಿಸುವಂತೆ ಯುನೈಟೆಡ್ ಸ್ಟೇಟ್ಸ್‌ಗೆ ಕರೆ ನೀಡಿದೆ ಮತ್ತು ನಿರ್ಬಂಧಗಳಿಂದ ಪರಿಹಾರವನ್ನು ಕೋರಿದೆ.

ಯುಎಸ್ ಅಧ್ಯಕ್ಷ ಡೊನಾಲ್ಡ್ ಟ್ರಂಪ್(Donald Trump) ಉತ್ತರ ಕೊರಿಯಾದ ನಾಯಕ ಕಿಮ್ ಜೊಂಗ್ ಉನ್(Kim Jong Un) ಅವರೊಂದಿಗಿನ ಮೊದಲ ಶೃಂಗಸಭೆಯ ನಂತರ 2018 ರ ಜೂನ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಉತ್ತರ ಕೊರಿಯಾ ತನ್ನ ಕ್ಷಿಪಣಿ ಸ್ಥಾಪನೆಗಳಲ್ಲಿ ಒಂದನ್ನು ಕೆಡವಲು ವಾಗ್ದಾನ ಮಾಡಿದ್ದು, ನಂತರ ಯುಎಸ್ ಅಧಿಕಾರಿಗಳು ಸೊಹೆ ಎಂದು ಗುರುತಿಸಿದ್ದಾರೆ ಎಂದಿದ್ದರು.

ಪ್ಲಾನೆಟ್ ಲ್ಯಾಬ್ಸ್ ಗುರುವಾರ ಸೆರೆಹಿಡಿದ ವಾಣಿಜ್ಯ ಉಪಗ್ರಹ ಚಿತ್ರಣವು ಸೊಹೆ ಉಪಗ್ರಹ ಉಡಾವಣಾ ಕೇಂದ್ರದಲ್ಲಿ ಹೊಸ ಚಟುವಟಿಕೆಯನ್ನು ತೋರಿಸಿದೆ ಮತ್ತು ದೊಡ್ಡ ಹಡಗು ಕಂಟೇನರ್ ಇರುವಿಕೆಯನ್ನು ತೋರಿಸಿದೆ ಎಂದು ಸಿಎನ್ಎನ್ ವರದಿ ಮಾಡಿದೆ.  

ಉತ್ತರ ಕೊರಿಯಾದ ಈ ಮಹತ್ವದ ಪರೀಕ್ಷೆ ಯಾವುದೇ ಇರಲಿ ಅಥವಾ ಕಾರಣ ಏನೇ ಇರಲಿ. ಈ ವರ್ಷ ಮೇ ತಿಂಗಳಿನಿಂದ ದೇಶವು ತನ್ನ ಪೂರ್ವ ಕರಾವಳಿಯಲ್ಲಿ 12 ಬಾರಿ ಸ್ಪೋಟಕಗಳನ್ನು ಹಾರಿಸಿದೆ. ಇದೀಗ ಈ ಗೌಪ್ಯ ಪರೀಕ್ಷೆ ವಿಶ್ವದ ಹುಬ್ಬೇರುವಂತೆ ಮಾಡಿದೆ ಎಂಬುದನ್ನು ತಳ್ಳಿಹಾಕುವಂತಿಲ್ಲ.