ಭಾರತಕ್ಕೆ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ

ನರೇಂದ್ರ ಮೋದಿ ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿರುವುದನ್ನು ಅಂತರರಾಷ್ಟ್ರೀಕರಿಸುವಲ್ಲಿ ವಿಫಲವಾದ ನಂತರ ಪಾಕಿಸ್ತಾನವು ಉದ್ವಿಗ್ನತೆಯನ್ನು ಹೆಚ್ಚಿಸಲು ಭಾರತದೊಂದಿಗೆ ಯುದ್ಧಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದೆ. ಭಾರತ ಕಾಶ್ಮೀರದಲ್ಲಿ ದೌರ್ಜನ್ಯ ಎಸಗುತ್ತಿದೆ ಮತ್ತು ಕಣಿವೆಯಲ್ಲಿ ಹಿಂದುತ್ವವನ್ನು ವಿಧಿಸಲು ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಶುಕ್ರವಾರ ಹೇಳಿದ್ದಾರೆ.

Last Updated : Sep 6, 2019, 12:15 PM IST
ಭಾರತಕ್ಕೆ ಮತ್ತೊಮ್ಮೆ ಯುದ್ಧದ ಬೆದರಿಕೆ ಹಾಕಿದ ಪಾಕಿಸ್ತಾನದ ಸೇನಾ ಮುಖ್ಯಸ್ಥ title=

ನವದೆಹಲಿ/ಇಸ್ಲಾಮಾಬಾದ್: ನರೇಂದ್ರ ಮೋದಿ ಸರ್ಕಾರ 370 ನೇ ವಿಧಿಯನ್ನು ರದ್ದುಪಡಿಸಿ ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕೊನೆಗೊಳಿಸಿರುವುದನ್ನು ಅಂತರರಾಷ್ಟ್ರೀಕರಿಸುವಲ್ಲಿ ವಿಫಲವಾದ ನಂತರ ಪಾಕಿಸ್ತಾನವು ಉದ್ವಿಗ್ನತೆಯನ್ನು ಹೆಚ್ಚಿಸಲು ಭಾರತದೊಂದಿಗೆ ಯುದ್ಧಕ್ಕೆ ಇಳಿಯುವ ಇಂಗಿತ ವ್ಯಕ್ತಪಡಿಸಿದೆ. ಭಾರತ ಕಾಶ್ಮೀರದಲ್ಲಿ ದೌರ್ಜನ್ಯ ಎಸಗುತ್ತಿದೆ ಮತ್ತು ಕಣಿವೆಯಲ್ಲಿ ಹಿಂದುತ್ವವನ್ನು ವಿಧಿಸಲು ಪ್ರಯತ್ನಿಸುತ್ತಿದೆ ಎಂದು ಪಾಕಿಸ್ತಾನ ಸೇನೆಯ ಮುಖ್ಯಸ್ಥ ಜನರಲ್ ಕಮರ್ ಜಾವೇದ್ ಬಜ್ವಾ ಶುಕ್ರವಾರ ಹೇಳಿದ್ದಾರೆ.

ಇಂದು ಕಾಶ್ಮೀರ ಹಿಂದುತ್ವಕ್ಕೆ ಬಲಿಯಾಗಿದೆ ಮತ್ತು ಅಲ್ಲಿ ದೌರ್ಜನ್ಯಗಳು ನಡೆಯುತ್ತಿವೆ ಎಂದು ಆರೋಪಿಸಿರುವ ಪಾಕಿಸ್ತಾನದ ಸೇನಾ ಮುಖ್ಯಸ್ಥರು,  ಕಾಶ್ಮೀರ ಪಾಕಿಸ್ತಾನದ ಅಜೆಂಡಾ ಎಂದು ಪುನರುಚ್ಚರಿಸಿದ್ದಾರೆ. ಪ್ರಸ್ತುತ ಭಾರತ ಸರ್ಕಾರದ ಈ ಕ್ರಮ ನಮಗೆ ಒಂದು ಸವಾಲಾಗಿದೆ. ಪಾಕಿಸ್ತಾನ ಎಂದಿಗೂ ಕಾಶ್ಮೀರಿಗಳನ್ನು ಮಾತ್ರ ಬಿಡುವುದಿಲ್ಲ. ಕೊನೆಯ ಗುಂಡು ಮತ್ತು ಕೊನೆಯ ಉಸಿರಿರುವವರೆಗೂ, ಕೊನೆಯ ಸೈನಿಕರವರೆಗೆ ನಾವು ನಮ್ಮ ಕರ್ತವ್ಯಕ್ಕೆ ಬದ್ಧರಾಗಿದ್ದೇವೆ. ಪಾಕಿಸ್ತಾನ ಸೇನೆಯು ಯಾವುದೇ ಮಟ್ಟಕ್ಕೆ ಹೋಗಲು ಸಿದ್ಧವಾಗಿದೆ. ಯುದ್ಧದ ಮೋಡಗಳು ಮತ್ತು ಆತಂಕಗಳು ಗೋಚರಿಸುತ್ತವೆ ಎಂದು ಪರೋಕ್ಷವಾಗಿ ಯುದ್ಧದ ಬೆದರಿಕೆ ಹಾಕಿರುವ ಪಾಕ್ ಸೇನಾ ಮುಖ್ಯಸ್ಥರು, ಆದರೂ ನಾವು ಶಾಂತಿಗಾಗಿ ಆಶಿಸುತ್ತೇವೆ ಎಂದಿದ್ದಾರೆ. ಇಂದು ಕಾಶ್ಮೀರ ಉರಿಯುತ್ತಿದೆ ಮತ್ತು ಅಪಾಯದಲ್ಲಿದೆ. ಕಾಶ್ಮೀರದ ಜನರೊಂದಿಗೆ ನಾವಿದ್ದೇವೆ ಮತ್ತು ಕಾಶ್ಮೀರಕ್ಕಾಗಿ ಯಾವುದೇ ತ್ಯಾಗಕ್ಕೆ ನಾವು ಸಿದ್ಧರಿದ್ದೇವೆ ಎಂದು ಪಾಕಿಸ್ತಾನ ಸೇನಾ ಮುಖ್ಯಸ್ಥರು ಹೇಳಿದ್ದಾರೆ.

ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಸೇರಿದಂತೆ ಪಾಕಿಸ್ತಾನದ ಹಲವು ನಾಯಕರು ಪರಮಾಣು ಶಸ್ತ್ರಾಸ್ತ್ರಗಳ ಬಗ್ಗೆ ನಮಗೆ ಹೆಮ್ಮೆ ಇದೆ ಮತ್ತು ಭಾರತದೊಂದಿಗಿನ ಯುದ್ಧವು ಹೇಗೆ ಸನ್ನಿಹಿತವಾಗಿದೆ ಎಂಬುದನ್ನು ಹೇಳುತ್ತಿವೆ. ಆದಾಗ್ಯೂ, ನಂತರ ಅವರು ಪರಮಾಣು ಬೆದರಿಕೆಯಿಂದ ಹಿಂದೆ ಸರಿದಿದ್ದಾರೆ. ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ತೊಂದರೆ ಉಂಟುಮಾಡುವ ಪ್ರಯತ್ನವನ್ನು ಪಾಕಿಸ್ತಾನ ಮುಂದುವರೆಸಿದೆ. ಜಮ್ಮು ಕಾಶ್ಮೀರದ ಒಂದು ಭಾಗವನ್ನು ಪಾಕಿಸ್ತಾನವು ಅಕ್ರಮವಾಗಿ ಆಕ್ರಮಿಸಿಕೊಂಡಿದೆ.

ಜಮ್ಮು ಮತ್ತು ಕಾಶ್ಮೀರದ ವಿಶೇಷ ಸ್ಥಾನಮಾನವನ್ನು ಕಲ್ಪಿಸುತ್ತಿದ್ದ ಸುಮಾರು 70 ವರ್ಷಗಳ ಹಳೆಯ ಆರ್ಟಿಕಲ್ 370ನ್ನು ಕೊನೆಗೊಳಿಸಲು ಆಗಸ್ಟ್ 5, 2019 ರಿಂದ ಮೋದಿ ಸರಕಾರ ಕ್ರಮ ಕೈಗೊಂಡಾಗಿನಿಂದ ಪಾಕಿಸ್ತಾನವು ಭಾರತದ ಆಂತರಿಕ ವಿಷಯವಾಗಿರುವ ಸಮಸ್ಯೆಯ ಬಗ್ಗೆ ಅಂತರಾಷ್ಟ್ರೀಯ ಮಟ್ಟದಲ್ಲಿ ದನಿ ಎತ್ತುತ್ತಲೇ ಇದೆ. ಆದರೆ ವಿಶ್ವದ ಬಹುತೇಕ ರಾಷ್ಟ್ರಗಳು ಈ ವಿಚಾರದಲ್ಲಿ ಭಾರತಕ್ಕೆ ತಮ್ಮ ಬೆಂಬಲವನ್ನು ಸೂಚಿಸಿವೆ.

ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಎಲ್ಲಾ ಲಾಂಚ್‌ಪ್ಯಾಡ್‌ಗಳನ್ನು ಸಕ್ರಿಯಗೊಳಿಸುವ ಮೂಲಕ ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಭಯೋತ್ಪಾದಕರನ್ನು ತಳ್ಳಲು ಪಾಕಿಸ್ತಾನ ತೀವ್ರವಾಗಿ ಪ್ರಯತ್ನಿಸುತ್ತಿದೆ ಮತ್ತು ನಿಯಂತ್ರಣ ರೇಖೆಯ (ಎಲ್‌ಒಸಿ) ಉದ್ದಕ್ಕೂ 2,000 ಕ್ಕೂ ಹೆಚ್ಚು ಸೈನಿಕರ ಸೇನಾ ಬ್ರಿಗೇಡ್ ಅನ್ನು ಸ್ಥಾಪಿಸಿದೆ. ಗಡಿ ನಿಯಂತ್ರಣ ರೇಖೆ ಬಳಿ ಭಾರತದ ಒಳನುಸುಳಲು ಹೊಂಚು ಹಾಕುತ್ತಿರುವ ಭಯೋತ್ಪಾದಕರಿಗೆ ಬಜ್ವಾ ಅವರ ಪಡೆ ನಿಯಂತ್ರಣ ಮತ್ತು ಶಸ್ತ್ರಾಸ್ತ್ರಗಳನ್ನು ಸಂಗ್ರಹಿಸುತ್ತಿದೆ ಎಂದು ಮೂಲಗಳು ಮಾಹಿತಿ ಒದಗಿಸಿವೆ.

Trending News