ವಾಷಿಂಗ್ಟನ್: ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಅಮೆರಿಕ ಭೇಟಿಯ ವೇಳೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (US Vice President Kamala Harris) ಅವರನ್ನು ಭೇಟಿ ಮಾಡಿದರು. ಈ ಸಭೆಯಲ್ಲಿ ಹಲವು ವಿಷಯಗಳನ್ನು ಚರ್ಚಿಸಲಾಗಿದೆ. ಇದರ ನಂತರ ಜಂಟಿ ಹೇಳಿಕೆಯನ್ನು ಹೊರಡಿಸಲಾಗಿದೆ. ಶೀಘ್ರದಲ್ಲೇ ಲಸಿಕೆ ರಫ್ತುಗಳನ್ನು ಪುನರಾರಂಭಿಸುವುದಾಗಿ ಭಾರತದ ಘೋಷಣೆಯನ್ನು ನಾನು ಸ್ವಾಗತಿಸುತ್ತೇನೆ. ಭಾರತವು ಪ್ರಸ್ತುತ ದಿನಕ್ಕೆ 10 ಮಿಲಿಯನ್ ಜನರಿಗೆ ಲಸಿಕೆ ಹಾಕುತ್ತಿರುವುದು ವಿಶೇಷವಾಗಿ ಗಮನಿಸಬೇಕಾದ ಸಂಗತಿ ಎಂದು ಕಮಲಾ ಹ್ಯಾರಿಸ್ ಪ್ರಧಾನಮಂತ್ರಿ ನರೇಂದ್ರ ಮೋದಿಯವರಿಗೆ (PM Narendra Modi) ತಿಳಿಸಿದರು. ಅದೇ ಸಮಯದಲ್ಲಿ, ಪ್ರಧಾನಿ ಮೋದಿ ಈ ಸಂದರ್ಭದಲ್ಲಿ ಭಾರತ ಮತ್ತು ಅಮೆರಿಕವನ್ನು ಪರಸ್ಪರ ಸಹಜ ಪಾಲುದಾರರು ಎಂದು ಬಣ್ಣಿಸಿದರು.
Kamala Harris welcomes India's announcement on resumption of COVID-19 vaccine exports
Read @ANI Story | https://t.co/4pxzIlMf7O#PMModiUSVisit #PMModi #KamalaHarris #COVID19 pic.twitter.com/giXKtiMQGS
— ANI Digital (@ani_digital) September 23, 2021
#WATCH | "Early in the pandemic, India was vital source of vaccines for other countries. When India experienced surge of COVID in the country, the United States was proud to support India in its need & responsibility to vaccinate its people," says US Vice-President Kamala Harris pic.twitter.com/ekThkFlbTd
— ANI (@ANI) September 23, 2021
'ಸಂಬಂಧವು ಹೊಸ ಎತ್ತರವನ್ನು ತಲುಪುತ್ತದೆ' :
ಭಾರತ ಮತ್ತು ಅಮೆರಿಕ (India-America) ನೈಸರ್ಗಿಕ ಪಾಲುದಾರರು. ನಮ್ಮಲ್ಲಿ ಒಂದೇ ರೀತಿಯ ಮೌಲ್ಯಗಳು, ಭೌಗೋಳಿಕ ರಾಜಕೀಯ ಹಿತಾಸಕ್ತಿಗಳಿವೆ" ಎಂದು ಪಿಎಂ ಮೋದಿ ಹೇಳಿದರು. ಭಾರತ ಮತ್ತು ಯುಎಸ್ ಅತಿದೊಡ್ಡ ಮತ್ತು ಹಳೆಯ ಪ್ರಜಾಪ್ರಭುತ್ವ ರಾಷ್ಟ್ರಗಳೆಂದು ತಿಳಿಸಿದ ಪ್ರಧಾನಿ ಮೋದಿ, ಎರಡು ದೇಶಗಳು ಮೌಲ್ಯಗಳನ್ನು ಹಂಚಿಕೊಳ್ಳುತ್ತವೆ ಮತ್ತು ಅವುಗಳ ಸಹಕಾರವು ಕ್ರಮೇಣ ಹೆಚ್ಚುತ್ತಿದೆ ಎಂದು ತಿಳಿಸಿದರು.
India, US natural partners with similar values, geopolitical interests: PM Modi
Read @ANI Story | https://t.co/LXShJwxkUs#PMModiUSVisit #PMModi pic.twitter.com/FZTKomDzxJ
— ANI Digital (@ani_digital) September 23, 2021
ಇದನ್ನೂ ಓದಿ- PM Modi In America: ಅಮೆರಿಕ ತಲುಪಿದ ಪ್ರಧಾನಿ ಮೋದಿ, ಟ್ವೀಟ್ ಮೂಲಕ ಹೇಳಿದ್ದೇನು?
ಇದೇ ಸಂದರ್ಭದಲ್ಲಿ ಯುಎಸ್ಎ ಉಪಾಧ್ಯಕ್ಷರಾಗಿ ನಿಮ್ಮ ಆಯ್ಕೆಯು ಒಂದು ಪ್ರಮುಖ ಮತ್ತು ಐತಿಹಾಸಿಕ ಘಟನೆಯಾಗಿದೆ. ನೀವು ಪ್ರಪಂಚದಾದ್ಯಂತ ಅನೇಕರಿಗೆ ಸ್ಫೂರ್ತಿಯ ಮೂಲವಾಗಿದ್ದೀರಿ. ಅಮೆರಿಕ ಅಧ್ಯಕ್ಷ ಜೋ ಬಿಡೆನ್ (Joe Biden) ಮತ್ತು ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ (Kamala Harris) ನೇತೃತ್ವದಲ್ಲಿ ಭಾರತ-ಅಮೆರಿಕ ಸಂಬಂಧಗಳು ಹೊಸ ಎತ್ತರವನ್ನು ತಲುಪುತ್ತವೆ ಎಂದು ಪ್ರಧಾನಿ ನರೇಂದ್ರ ಮೋದಿ ವಿಶ್ವಾಸ ವ್ಯಕ್ತಪಡಿಸಿದರು.
PM Modi praises Kamala Harris as 'source of inspiration', invites her to India
Read @ANI Story | https://t.co/xQbiTr8PcO#PMModiUSVisit #PMModi #KamalaHarris pic.twitter.com/LxkFCI4Xxv
— ANI Digital (@ani_digital) September 23, 2021
#WATCH Your (Kamala Harris) election as Vice President of USA has been an important & historic event. You're a source of inspiration for many across the world. I'm confident that under Pres Biden & your leadership our bilateral relations will touch new heights: PM Narendra Modi pic.twitter.com/zEVruaiAWc
— ANI (@ANI) September 23, 2021
ಕಮಲಾ ಹ್ಯಾರಿಸ್ ಅವರನ್ನು ಶ್ಲಾಘಿಸಿದ ಪಿಎಂ ಮೋದಿ, 'ನೀವು ಜಗತ್ತಿನ ಅನೇಕ ಜನರಿಗೆ ಸ್ಫೂರ್ತಿಯಾಗಿದ್ದೀರಿ. ಭಾರತದ ಜನರು ಕೂಡ ಭಾರತದ ಈ ಐತಿಹಾಸಿಕ ವಿಜಯದ ಪ್ರಯಾಣಕ್ಕೆ ನಿಮ್ಮನ್ನು ಗೌರವಿಸಲು ಮತ್ತು ಸ್ವಾಗತಿಸಲು ಬಯಸುತ್ತಾರೆ, ಹಾಗಾಗಿ ನಾನು ನಿಮ್ಮನ್ನು ಭಾರತಕ್ಕೆ ಬರಲು ವಿಶೇಷವಾಗಿ ಆಹ್ವಾನಿಸುತ್ತೇನೆ' ಎಂದರು.
#WATCH "The people of India are waiting to welcome you. I extend to you an invitation to visit India," PM Modi to US Vice President Kamala Harris, in Washington DC pic.twitter.com/Gtw13sYnZW
— ANI (@ANI) September 23, 2021
ಇದನ್ನೂ ಓದಿ- ಅಮೆರಿಕಾದ ಟಾಪ್ CEO ಗಳ ಜೊತೆ ಪ್ರಧಾನಿ ಮೋದಿ ಮಹತ್ವದ ಮಾತುಕತೆ
ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್- ಪ್ರಧಾನಿ ನರೇಂದ್ರ ಮೋದಿಯವರ ಮೊದಲ ಭೇಟಿ;
ವಾಸ್ತವವಾಗಿ, ಕಮಲಾ ಹ್ಯಾರಿಸ್ ಅಮೆರಿಕ ಉಪಾಧ್ಯಕ್ಷೆ ಆಗಿ ಆಯ್ಕೆಯಾದ ಬಳಿಕ ಇದು ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿ (PM Narendra Modi) ಅವರೊಂದಿಗೆ ಮೊದಲ ಭೇಟಿಯಾಗಿದೆ. ಈ ಭೇಟಿ ಸಮಯದಲ್ಲಿ ಇಬ್ಬರೂ ನಾಯಕರು ಭಾರತ ಮತ್ತು ಅಮೆರಿಕ ನಡುವಿನ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಬಲಪಡಿಸುವ ಬಗ್ಗೆ ಒತ್ತಿ ಹೇಳಿದರು. ಈ ಸಮಯದಲ್ಲಿ, ಪರಸ್ಪರ ಮತ್ತು ಜಾಗತಿಕ ಹಿತಾಸಕ್ತಿಯ ವಿಷಯಗಳ ಬಗ್ಗೆಯೂ ಚರ್ಚಿಸಲಾಯಿತು. ಭಾರತದಲ್ಲಿ ಕೋವಿಡ್ -19 ಬಿಕ್ಕಟ್ಟಿನ ಸಂದರ್ಭದಲ್ಲಿ ಜೂನ್ ನಲ್ಲಿ ಹ್ಯಾರಿಸ್ ಈ ಹಿಂದೆ ಮೋದಿಯವರೊಂದಿಗೆ ದೂರವಾಣಿಯಲ್ಲಿ ಮಾತನಾಡಿದ್ದರು.
ಜಂಟಿ ಹೇಳಿಕೆಯಲ್ಲಿ ಈ ಬಗ್ಗೆ ಪ್ರಸ್ತಾಪಿಸಿದ ಪ್ರಧಾನಿ ನರೇಂದ್ರ ಮೋದಿ, 'ಕೆಲವು ತಿಂಗಳ ಹಿಂದೆ, ನಿಮ್ಮೊಂದಿಗೆ ದೂರವಾಣಿಯಲ್ಲಿ ವಿವರವಾಗಿ ಮಾತನಾಡಲು ನನಗೆ ಅವಕಾಶವಿತ್ತು. ಇದು ಭಾರತವು ಎರಡನೇ ಕರೋನಾದ ಅಲೆಯ (Corona Second Wave) ಹಿಡಿತದಲ್ಲಿದ್ದ ಸಮಯ. ಆ ಸಮಯದಲ್ಲಿ ನೀವು ಭಾರತದ ಬಗ್ಗೆ ಕಾಳಜಿ ಹೊಂದಿದ್ದ ರೀತಿ. ಭಾರತಕ್ಕೆ ಸಹಾಯ ಮಾಡಲು ಕ್ರಮಗಳನ್ನು ತೆಗೆದುಕೊಂಡಿದ್ದಕ್ಕಾಗಿ ನಾನು ನಿಮಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಭಾರತವು ಕೋವಿಡ್ 19 ರ ಎರಡನೇ ಅಲೆಯಿಂದ ತತ್ತರಿಸಿದಾಗ ಭಾರತಕ್ಕೆ ಸಹಾಯ ಹಸ್ತ ಚಾಚಿದ್ದಕ್ಕಾಗಿ ನಾನು ಅಮೆರಿಕಕ್ಕೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ ಎಂದು ಹೇಳಿದರು.
PM Modi expresses gratitude to US for extending help to India during Covid-19
Read @ANI Story | https://t.co/jVM3KCGQw9#PMModiUSVisit #PMModi #KamalaHarris #COVID19 pic.twitter.com/Y8BBChE3Qq
— ANI Digital (@ani_digital) September 23, 2021
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.