ಬರಾಕ್ ಒಬಾಮಾ, ಹಿಲರಿ ಕ್ಲಿಂಟನ್‌ ಮನೆಗೆ ಶಂಕಿತ ಸ್ಪೋಟಕ ಪಾರ್ಸಲ್

ನ್ಯೂಯಾರ್ಕ್ನಲ್ಲಿ ಸಿಎನ್‌ಎನ್‌ ಸುದ್ದಿವಾಹಿನಿ ಕಚೇರಿಯಲ್ಲೂ ಅನುಮಾನಾಸ್ಪದ ವಸ್ತುಗಳನ್ನು ಒಳಗೊಂಡ ಪಾರ್ಸೆಲ್‌ ಪತ್ತೆಯಾದ ಕಾರಣ, ಇಡೀ ಕಚೇರಿಯನ್ನು ತೆರವುಗೊಳಿಸಿ, ಪರಿಶೀಲನೆ ನಡೆಸಲಾಗುತ್ತಿದೆ.  

Last Updated : Oct 25, 2018, 09:34 AM IST
ಬರಾಕ್ ಒಬಾಮಾ, ಹಿಲರಿ ಕ್ಲಿಂಟನ್‌ ಮನೆಗೆ ಶಂಕಿತ ಸ್ಪೋಟಕ ಪಾರ್ಸಲ್ title=
Pic: Reuters

ವಾಷಿಂಗ್ಟನ್‌: ಯುಎಸ್ ಗುಪ್ತಚರ ಸೇವೆ ಸೀಕ್ರೆಟ್ ಸರ್ವೀಸ್ ಹಿಂದಿನ ಅಧ್ಯಕ್ಷ ಬರಾಕ್ ಒಬಾಮಾ ಮತ್ತು ಮಾಜಿ ರಾಜ್ಯ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ವಿಳಾಸಗಳಿಗೆ ಕಳುಹಿಸಲಾದ 'ಶಂಕಿತ ಸ್ಫೋಟಕಗಳಿದ್ದ ಪ್ಯಾಕೆಟ್ಗಳನ್ನು' ವಶಕ್ಕೆ ಪಡೆಯಲಾಗಿದೆ ಎಂದು ಯುಎಸ್ ಸೀಕ್ರೆಟ್ ಸರ್ವಿಸ್  (ಅಮೆರಿಕಾ ಗುಪ್ತ ದಳ) ಬುಧವಾರ ತಿಳಿಸಿತು. 

ನ್ಯೂಯಾರ್ಕ್ನಲ್ಲಿ ಸಿಎನ್‌ಎನ್‌ ಸುದ್ದಿವಾಹಿನಿ ಕಚೇರಿಯಲ್ಲೂ ಅನುಮಾನಾಸ್ಪದ ವಸ್ತುಗಳನ್ನು ಒಳಗೊಂಡ ಪಾರ್ಸೆಲ್‌ ಪತ್ತೆಯಾದ ಕಾರಣ, ಇಡೀ ಕಚೇರಿಯನ್ನು ತೆರವುಗೊಳಿಸಿ, ಪರಿಶೀಲನೆ ನಡೆಸಲಾಗುತ್ತಿದೆ.

ಬರಾಕ್ ಒಬಾಮಾ ಅಥವಾ ಹಿಲರಿ ಕ್ಲಿಂಟನ್‌ಗೆ ಪಾರ್ಸೆಲ್ ತಲುಪಿಸಿಲ್ಲ:
ವೆಸ್ಟ್ ಚೆಸ್ಟರ್ ನಲ್ಲಿರುವ ಹಿಲರಿ ಕ್ಲಿಂಟನ್ ಮನೆ ವಿಳಾಸಕ್ಕೆ ಬಂದಿದ್ದ ಒಂದು ಪಾರ್ಸಲ್ ಹಾಗೂ ಬರಾಕ್ ಒಬಾಮಾ ಮನೆ ವಿಳಾಸಕ್ಕೆ ಸಹ ಒಂದು ಶಂಕಿತ ಪಾರ್ಸಲ್ ಬಂದಿರುವುದು ಪತ್ತೆಯಾಗಿದೆ. ಪಾರ್ಸಲ್ ಗಳಲ್ಲಿ ಸ್ಪೋಟಕಗಳಿರುವ ಶಂಕೆಯಿಂದಾಗಿ ಪಾರ್ಸಲ್ ಗಳನ್ನು ಅವರ ಮನೆಗಳಿಗೆ ತಲುಪಿಸಿಲ್ಲ, ಹಾಗಾಗಿ ಅಪಾಯದ ಸಂಭಾವ್ಯತೆ ಇಲ್ಲ. ಪಾರ್ಸಲ್ ಗಳ ಮೂಲ ಪತ್ತೆಹಚ್ಚಲು, ಇದನ್ನು ಕಳಿಸಿದವರ ಬಗೆಗೆ ಮಾಹಿತಿ ತಿಳಿಯಯುವ ನಿಟ್ಟಿನಲ್ಲಿ ತನಿಖೆ ನಡೆದಿದೆ ಎಂದು ಅಮೆರಿಕಾ ಗುಪ್ತದಳ ತನ್ನ ಹೇಳಿಕೆಯಲ್ಲಿ ತಿಳಿಸಿದೆ.

ತಪಾಸಣೆ ವೇಳೆ ಈ ಪಾರ್ಸೆಲ್‌ಗಳಲ್ಲಿ ಕೆಲವೊಂದು ರಾಸಾಯನಿಕ ಪೌಡರ್‌ ಮತ್ತು ಬಾಂಬ್‌ ತಯಾರಿಕೆಯಲ್ಲಿ ಬಳಸುವ ಉಪಕರಣಗಳು ಪತ್ತೆಯಾಗಿವೆ. ಕೂಡಲೇ ಸ್ಥಳಕ್ಕೆ ಸ್ಫೋಟಕ ನಿಷ್ಕ್ರಿಯ ತಜ್ಞರನ್ನು ಕರೆಸಿ, ಅದನ್ನು ಸೂಕ್ತರೀತಿಯಲ್ಲಿ ನಿರ್ವಹಿಸಲಾಯಿತು ಎಂದು ಭದ್ರತಾ ಸಂಸ್ಥೆ ಹೇಳಿದೆ. 

ಒಬಾಮಾಗೆ ಕಳುಹಿಸಲಾದ ಪ್ಯಾಕೆಟ್ ವಾಷಿಂಗ್ಟನ್ ಡಿ.ಸಿ ಯಲ್ಲಿ ಸೆರೆ:
ಒಬಾಮಾಗೆ ಕಳುಹಿಸಲಾದ ಪ್ಯಾಕೆಟ್ ಅನ್ನು ಬುಧವಾರ ವಾಷಿಂಗ್ಟನ್ ಡಿ.ಸಿ ಯಲ್ಲಿ ಸೆರೆ ಹಿಡಿಯಲಾಯಿತು. ಇನ್ನು ಮಂಗಳವಾರ ಹಿಲರ ಕ್ಲಿಂಟನ್ ಅವರ ನ್ಯೂಯಾರ್ಕ್ನ ವೆಸ್ಟ್ಚೆಸ್ಟರ್ ಕೌಂಟಿ ವಿಳಾಸಕ್ಕೆ ಬಂದಿದ್ದ ಒಂದು ಪಾರ್ಸಲ್ ನಲ್ಲಿ ಸ್ಪೋಟಕ ಶಂಕೆ ವ್ಯಕ್ತವಾದ ಕಾರಣ ಸೀಕ್ರೆಟ್ ಸರ್ವಿಸ್ ತೀವ್ರ ತನಿಖೆಯನ್ನು ಪ್ರಾರಂಭಿಸಿತು. ಹಿರಿಯ ವೈಟ್ ಹೌಸ್ ಅಧಿಕಾರಿಯೊಬ್ಬರು ಅಧ್ಯಕ್ಷ ಡೊನಾಲ್ಡ್ ಟ್ರಂಪ್ಗೆ ಪರಿಸ್ಥಿತಿ ಬಗ್ಗೆ ಮಾಹಿತಿ ನೀಡಲಾಗಿದೆ ಎಂದಿದ್ದಾರೆ.
 

Trending News