ಗೊಂಬೆಯಂತೆ ಕಾಣಲು ಲಕ್ಷಾಂತರ ಖರ್ಚು: ಈಗ ಹಳೆಯ ಮುಖ ಮತ್ತೆ ಬೇಕು ಅನ್ನುತ್ತಿದ್ದಾಳೆ ಈ ಸುಂದರಿ..!

ವಾಸ್ತವವಾಗಿ ಈ ಅಮೆರಿಕದ ಮಾಡೆಲ್ ಹೊಸ ನೋಟದಲ್ಲಿ ತನ್ನ ವಯಸ್ಸಿಗಿಂತ ಹೆಚ್ಚು ವಯಸ್ಸಾದವಳಂತೆ ಕಾಣುತ್ತಿದ್ದಾಳೆ.

Written by - Puttaraj K Alur | Last Updated : Dec 27, 2021, 09:16 PM IST
  • ಗೊಂಬೆಯಂತೆ ಕಾಣಲು ಹೋಗಿ ದೊಡ್ಡ ಯಡವಟ್ಟು ಮಾಡಿಕೊಂಡಿರುವ ಮಾಡೆಲ್
  • ಸೋಷಿಯಲ್ ಮೀಡಿಯಾದಲ್ಲಿ ತನ್ನ ಲುಕ್ ನಿಂದ ಸಾಕಷ್ಟು ಫೇಮಸ್ ಆಗಿರುವ ಕ್ಯಾಂಡಿಸ್ ಕ್ಲೋಸ್
  • Instagramನಲ್ಲಿ 63 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿರುವ ಅಮೆರಿಕ ಮಾಡೆಲ್
ಗೊಂಬೆಯಂತೆ ಕಾಣಲು ಲಕ್ಷಾಂತರ ಖರ್ಚು: ಈಗ ಹಳೆಯ ಮುಖ ಮತ್ತೆ ಬೇಕು ಅನ್ನುತ್ತಿದ್ದಾಳೆ ಈ ಸುಂದರಿ..!    title=
ಗೊಂಬೆಯಂತೆ ಕಾಣಲು ಹೋಗಿ ಮಾಡೆಲ್ ಯಡವಟ್ಟು

ವಾಷಿಂಗ್ಟನ್: ವಿಭಿನ್ನವಾಗಿ ಕಾಣಲು ಕೆಲವೊಮ್ಮೆ ಜನರು ಏನನ್ನಾದರೂ ಮಾಡುತ್ತಾರೆ. ನಂತರ ಅವರು ಪಶ್ಚಾತ್ತಾಪ ಪಡುತ್ತಾರೆ. ಇದೇ ರೀತಿ ಅಮೆರಿಕದ ನ್ಯೂಯಾರ್ಕ್‌ನಲ್ಲಿ ನೆಲೆಸಿರುವ ಮಾಡೆಲ್(US Model) ಒಬ್ಬಳು ತನ್ನನ್ನು ನಿಜ ಜೀವನದ ಗೊಂಬೆ(Doll)ಯಾಗಿ ಪರಿವರ್ತಿಸಲು 11 ಲಕ್ಷ ರೂ.ಗೂ ಹೆಚ್ಚು ಖರ್ಚು ಮಾಡಿದ್ದಳು. ಆದರೆ ಈಗ ಅವಳು ತನ್ನ ಹಳೆಯ ನೋಟವನ್ನು ಮರಳಿ ಪಡೆಯಲು ಇನ್ನಿಲ್ಲದ ಸರ್ಕಸ್ ಮಾಡುತ್ತಿದ್ದಾಳೆ. ವಾಸ್ತವವಾಗಿ ಮಾಡೆಲ್ ಹೊಸ ನೋಟದಲ್ಲಿ ತನ್ನ ವಯಸ್ಸಿಗಿಂತ ಹೆಚ್ಚು ವಯಸ್ಸಾದವಳಂತೆ ಕಾಣುತ್ತಿದ್ದಾಳೆ.

ಗೊಂಬೆಯಂತೆ ಕಾಣಲು ಹೋಗಿ ಯಡವಟ್ಟು..!

ವರದಿಗಳ ಪ್ರಕಾರ 21 ವರ್ಷದ ಕ್ಯಾಂಡಿಸ್ ಕ್ಲೋಸ್(Candice Kloss) ತನ್ನ ಕೆನ್ನೆ, ದವಡೆ ಮತ್ತು ತುಟಿಗಳಿಂದ ಫಿಲ್ಲರ್(Facial Filler)ಅನ್ನು ತೆಗೆದುಹಾಕಿದ್ದಾಳೆ. ಇದರಿಂದ ಅವಳು ತನ್ನ ಹಳೆಯ ನೋಟಕ್ಕೆ ಮರಳಬಹುದು. ಕ್ಯಾಂಡಿಸ್ ಅವರು 2011ರಲ್ಲಿ ತನ್ನ ಮುಖಕ್ಕೆ ಫಿಲ್ಲರ್‌(Facial Filler)ಗಳನ್ನು ಅನ್ವಯಿಸಿದ್ದಾರೆ ಎಂದು ಹೇಳಿದ್ದಾರೆ. ಇದರಿಂದ ತಾನು ಗೊಂಬೆಯಂತೆ ಕಾಣಿಸುತ್ತೇನೆ ಎಂದುಕೊಂಡಿದ್ದ ಅವರಿಗೆ ಸಮಸ್ಯೆ ಶುರುವಾಗಿದೆ. ಯಾವಾಗ ಅವರು ಫಿಲ್ಲರ್(Facial Filler)ಗಳನ್ನು ಹಾಕಿಸಿಕೊಂಡರೋ ತನ್ನ ವಯಸ್ಸಿಗಿಂತ ದೊಡ್ಡವಳಂತೆ ಕಾಣತೊಡಗಿದರು. ಇದರಿಂದ ಅವರಿಗೆ ದೊಡ್ಡ ತಲೆನೋವು ಶುರುವಾಗಿದೆ.    

ಇದನ್ನೂ ಓದಿ: NASA Hiring Prists: NASAದಲ್ಲಿ ಅರ್ಚಕರ ಭರ್ತಿ, Secret Plan ಹಂಚಿಕೊಂಡ ಬಾಹ್ಯಾಕಾಶ ಸಂಸ್ಥೆ

ನಿಜ ಮುಖದ ನೆನಪಿಲ್ಲ

ಕ್ಯಾಂಡಿಸ್ ಹೇಳಿರುವ ಪ್ರಕಾರ, ‘ನಾನು ಗೊಂಬೆಯಂತೆ ಕಾಣಬೇಕೆಂದು ಬಯಸಿದ್ದೆ. ಆದರೆ ಸಮಯ ಕಳೆದಂತೆ ನಾನು ನನ್ನ ವಯಸ್ಸಿಗಿಂತ ಹೆಚ್ಚು ವಯಸ್ಸಾದವಳಂತೆ ಕಾಣಲಾರಂಭಿಸಿದೆ. ಹೀಗಾಗಿ ನಾನು Facial Fillerಗಳನ್ನು ತೆಗೆದುಹಾಕಿದೆ. ಆದಾಗ್ಯೂ ಈಗ ನಾನು ನಿಜವಾಗಿ ಹೇಗಿದ್ದೇನೆ ಎಂದು ನಿಖರವಾಗಿ ನೆನಪಿಲ್ಲ’ ಅಂತಾ ಹೇಳಿದ್ದಾರೆ. ಕ್ಯಾಂಡಿಸ್‌ಗೆ ಯಾವುದರ ಬಗ್ಗೆಯೂ ಪಶ್ಚಾತ್ತಾಪವಿಲ್ಲ. ಏಕೆಂದರೆ ನಿಜ ಜೀವನದ ಗೊಂಬೆಯಂತೆ ಕಾಣುವುದು ವಿಭಿನ್ನ ಅನುಭವ ಎಂದು ಅವರು ಭಾವಿಸುತ್ತಾರೆ.

ಈ ನಿರ್ಧಾರದಿಂದ ಪೋಷಕರಿಗೆ ಸಂತಸ

ಮಹಿಳೆಯರು ಹೆಚ್ಚಾಗಿ ತಮ್ಮ ಯೌವನದಲ್ಲಿ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಮಾಡೆಲ್ ಕ್ಯಾಂಡಿಸ್ ಹೇಳಿದ್ದಾರೆ. ನನ್ನ ಈ ಗೊಂಬೆಯ ಲುಕ್‌ನೊಂದಿಗೆ ನಾನು ಕೂಡ ಹಲವು ವರ್ಷಗಳನ್ನು ಕಳೆದಿದ್ದೇನೆ,. ಆದರೆ ಈಗ ನಾನು ನನ್ನ ನೈಸರ್ಗಿಕ ನೋಟ(Natural Look)ವನ್ನು ಮರಳಿ ಪಡೆಯಲು ಬಯಸುತ್ತೇನೆ. ನಾನು ಬಾಲ್ಯದಿಂದಲೂ ಬಾರ್ಬಿ ಗೊಂಬೆಯಂತೆ ಕಾಣಬೇಕೆಂದು ಬಯಸಿದ್ದೆ. ನಾನು ಈ ಬಗ್ಗೆ ನನ್ನ ಪೋಷಕರಿಗೆ ಹೇಳಿದಾಗ ಅವರು ಮೊದಲು ಆಘಾತಕ್ಕೊಳಗಾದರು. ಆದರೆ ಅವರು ನನ್ನ ಮುಖವನ್ನು ಬದಲಾಯಿಸಲು ಅವಕಾಶ ಮಾಡಿಕೊಟ್ಟರು. ಈಗ ನಾನು ನನ್ನ ಹಳೆಯ ನೋಟವನ್ನು ಮರಳಿ ಪಡೆಯಲು ಬಯಸುತ್ತೇನೆ. ಈ ನಿರ್ಧಾರದಿಂದ ಪೋಷಕರು ತುಂಬಾ ಸಂತೋಷಪಟ್ಟಿದ್ದಾರೆ ಅಂತಾ ಹೇಳಿದ್ದಾರೆ.

ಇದನ್ನೂ ಓದಿ: ಓಮಿಕ್ರಾನ್ ಪ್ರಕರಣ : ಸಿನಿಮಾ ಮಂದಿರ ಮುಚ್ಚಿರುವ ನಿರ್ಧಾರ ಖಂಡಿಸಿ ಬೀದಿಗಿಳಿದು ಪ್ರತಿಭಟಿಸಿದ ನಾಗರೀಕರು

ಮೇಕಪ್ 45 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ

ಕ್ಯಾಂಡಿಸ್ ಅವರು ತಮ್ಮ ಮುಖದ ಮೇಕಪ್ ಮಾಡಲು ಪ್ರತಿದಿನ 45 ನಿಮಿಷಗಳನ್ನು ತೆಗೆದುಕೊಳ್ಳುತ್ತಾರೆ ಎಂದು ಹೇಳಿದ್ದಾರೆ. ಅಲ್ಲದೆ ಕೂದಲು ಬ್ಲೀಚಿಂಗ್ ಮತ್ತು Extensionಗೆ ಸುಮಾರು 1 ಲಕ್ಷ 50 ಸಾವಿರ ರೂ. ಖರ್ಚು ಮಾಡುತ್ತಾರಂತೆ. ಗೊಂಬೆಯಂತೆ ಕಾಣಲು ಅವರು ಬಿಳಿ ಅಥವಾ ಗುಲಾಬಿ ಬಣ್ಣದ ಬಟ್ಟೆಗಳನ್ನು ಧರಿಸುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಕ್ಯಾಂಡಿಸ್ ತನ್ನ ಲುಕ್ ಬಗ್ಗೆ ಸಾಕಷ್ಟು ಫೇಮಸ್ ಆಗಿದ್ದಾಳೆ. ಅವರು Instagram ನಲ್ಲಿ 63 ಸಾವಿರಕ್ಕೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News