ಇಂದೇ 'Thank You' ಮೇಲ್ ಕಳುಹಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಭೂಮಿಯ ವಿನಾಶ ಖಚಿತ!

ನೀವೂ ಒಂದು ವೇಳೆ ನಿಮ್ಮ ಕಚೇರಿಯಲ್ಲಿ ಬರುವ ಎಲ್ಲ ಇ-ಮೇಲ್ ಗಳಿಗೆ 'Thank You' ಇ-ಮೇಲ್ ಕಳುಹಿಸುತ್ತಿದ್ದರೆ, ಇನ್ಮುಂದೆ ನೀವು ಅದನ್ನು ನಿಲ್ಲಿಸಬೇಕಾಗಲಿದೆ.

Written by - Nitin Tabib | Last Updated : Jan 13, 2020, 07:28 PM IST
ಇಂದೇ 'Thank You' ಮೇಲ್ ಕಳುಹಿಸುವುದನ್ನು ನಿಲ್ಲಿಸಿ, ಇಲ್ಲದಿದ್ದರೆ ಭೂಮಿಯ ವಿನಾಶ ಖಚಿತ! title=

ನವದೆಹಲಿ: ಒಂದು ವೇಳೆ ನೀವೂ ಕೂಡ ನಿಮ್ಮ ಕಚೇರಿಗೆ ಬರುವ ಎಲ್ಲ 'ಇ-ಮೇಲ್'ಗಳಿಗೆ 'Thank You' ಇ-ಮೇಲ್ ಕಳುಹಿಸುತ್ತಿದ್ದರೆ, ಇದನ್ನು ನೀವು ನಿಲ್ಲಿಸಬೇಕಾಗಲಿದೆ. ಏಕೆಂದರೆ ನೀವು ಕಳುಹಿಸುವ ಈ 'Thank You' ಇ-ಮೇಲ್ ಭೂಮಿಯ ಪಾಲಿಗೆ ವಿನಾಶಕಾರಿಯಾಗಿ ಪರಿಣಮಿಸಲಿದೆ. ನಿಮ್ಮ ಪ್ರತಿಯೊಂದು ಚಿಕ್ಕ ಇ-ಮೇಲ್ ಭೂಮಿಯನ್ನು ವಿನಾಶಕ್ಕೆ ಕೊಂಡೊಯ್ಯುವ ಹೆಜ್ಜೆಯಾಗಿದೆ.  ಹೌದು, ಪ್ರತಿನಿತ್ಯ ನಿಮ್ಮ ಇ-ಮೇಲ್ ನಲ್ಲಿ ಸಾವಿರಾರು ಮೇಲ್ ಗಳು ಬರುತ್ತವೆ. ಅವುಗಳನ್ನು ನೀವು ತೆರೆದೂ ಕೂಡ ನೋಡುವುದಿಲ್ಲ ಅಥವಾ ಕೇವಲ ನೋಟಿಫಿಕೇಶನ್ ಪ್ಯಾನೆಲ್ ನಲ್ಲಿ ಮಾತ್ರ ಅದು ನಿಮ್ಮ ಕೆಲಸಕ್ಕೆ ಸಂಬಂಧಿಸದ ಇ-ಮೇಲ್ ಆಗಿದೆಯಾ ಅಥವಾ ಇಲ್ಲ ಎಂಬುದನ್ನು ಪರಿಕ್ಷಿಸುತ್ತೀರಿ. ಶಿಷ್ಟಾಚಾರಕ್ಕಾಗಿ ನೀವು ಕೆಲ ಇ-ಮೇಲ್ ಗಳಿಗೆ 'Thank You' ಅಥವಾ 'Well Come' ಇ-ಮೇಲ್ ಕಳುಹಿಸುವುದು ಸಾಮಾನ್ಯ.

ಇಂತಹ ಇ-ಮೇಲ್ ಮಾಡುವ ಮೂಲಕ ನೀವು ಭೂಮಿಯನ್ನು ವಿನಾಶದತ್ತ ಕೊಂಡೊಯ್ಯುತ್ತಿರುವಿರಿ ಎಂಬುದನ್ನು ನೀವು ಊಹಿಸಲೂ ಕೂಡ ಸಾಧ್ಯವಿಲ್ಲ. ಇಂತಹ ಒಂದು ಇ-ಮೇಲ್ ನಿಂದ ನಿಮ್ಮ ಜೀವನದಲ್ಲಿ ಯಾವುದೇ ಬದಲಾವಣೆ ಆಗದೆ ಇರಬಹುದು. ಆದರೆ, ಭೂಮಿಯ ಮೇಲೆ ಇದು ಭಾರಿ ಪರಿಣಾಮ ಬೀರುತ್ತದೆ. ನಿಮ್ಮ ಪ್ರತಿಯೊಂದು ಇ-ಮೇಲ್ ನಿಂದ ಇಂಗಾಲ ವಿಸರ್ಜನೆಯಾಗುತ್ತಿದ್ದು, ಇದು ಭೂಮಿಯ ಮೇಲೆ ಗ್ಲೋಬಲ್ ವಾರ್ಮಿಂಗ್ ಹೆಚ್ಚಳಕ್ಕೆ ಕಾರಣವಾಗುತ್ತಿದೆ.  

ಬ್ರಿಟನ್ ಮೂಲದ ಎನರ್ಜಿ ಕಂಪನಿಯೊಂದು ಈ ಕುರಿತು ಸಂಶೋಧನೆ ನಡೆಸಿದ್ದು, ನಿತ್ಯ ಇಂತಹ ಸುಮಾರು 6 ಕೋಟಿ, 40ಲಕ್ಷ ಇ-ಮೇಲ್ ಗಳನ್ನು ಮಾಡಲಾಗುತ್ತಿದ್ದು, ಅವುಗಳ ಅಗತ್ಯತೆ ಇಲ್ಲ ಎಂದಿದೆ. ಇವುಗಳಲ್ಲಿ ಬಹುತೇಕ ಇ-ಮೇಲ್ ಗಳು ಕೇವಲ 'Thank You'  ಇ-ಮೇಲ್ ಗಳಾಗಿರುತ್ತವೆ ಎಂದು ಕಂಪನಿ ಹೇಳಿದೆ. ಈ ಇ-ಮೇಲ್ ಗಳ ಕಾರಣ ಪ್ರತಿ ವರ್ಷ 16,433 ಟನ್ ಇಂಗಾಲ ಉತ್ಪತ್ತಿಯಾಗುತ್ತಿದೆ ಎಂದು ಸಂಶೋಧನೆ ಹೇಳಿದೆ. ಒಂದು ವರ್ಷದಲ್ಲಿ ಮುಂಬೈನಿಂದ ದೆಹಲಿಗೆ ಪ್ರಯಾಣ ಬೆಳೆಸುವ ಸುಮಾರು 81,152 ವಿಮಾನಗಳು ಹೊರಸೂಸುವ ಕಾರ್ಬನ್, 3,334 ಡಿಸೇಲ್ ಗಾಡಿಗಳು ಹೊರಸೂಸುವ ಕಾರ್ಬನ್, ಬ್ರಿಟನ್ ನಲ್ಲಿ ವರ್ಷದಲ್ಲಿ ಕಳುಹಿಸಲಾಗುವ ಇ-ಮೇಲ್ ಗಳಿಂದ ಉತ್ಪತ್ತಿಯಾಗುವ ಕಾರ್ಬನ್ ಗೆ ಸಮವಾಗಿದೆ ಎಂದು ಸಂಶೋಧನೆ ಹೇಳಿದೆ.

ಬ್ರಿಟನ್ ನಲ್ಲಿ ಸಾಮಾನ್ಯವಾಗಿ ಕಳುಹಿಸಲಾಗುವ ಇ-ಮೇಲ್ ಸಂದೇಶಗಳು ಕೆಳಗಿನಂತಿವೆ

- Thank you
- Thanks
- Have a good weekend
- Received
- Appreciated
- Have a good evening
- Did you get/see this?
- Cheers
- You too
- Lol

ನೀವೂ ಕೂಡ ನಿತ್ಯ ಇಂತಹ ಇ-ಮೇಲ್ ಗಳನ್ನು ಕಳುಹಿಸುತ್ತಿರಬಹುದು ಅಥವಾ ನಿಮಗೂ ಸಹ ನಿತ್ಯ ಇಂತಹ ಇ-ಮೇಲ್ ಗಳು ಬರುತ್ತಿರಬಹುದು. ನಿಜವಾಗಿಯೂ ಇಂತಹ ಇ-ಮೇಲ್ ಗಳ ಅವಶ್ಯಕತೆ ಇದೆಯಾ ಅಥವಾ ಇಲ್ಲ? ಅಥವಾ ನಿಮಗೆ ಯಾರಾದರೂ ಇಂತಹ ಇ-ಮೇಲ್ ಕಳುಹಿಸದೆ ಹೋದಲ್ಲಿ ನಿಮ್ಮ ಕೆಲಸದ ಮೇಲೆ ಇದು ಯಾವುದೇ ಪರಿಣಾಮ ಬೀರುತ್ತದೆಯೇ? ಅಥವಾ ನಿಮಗೆ ಬೇಸರವಾಗುತ್ತದೆಯೇ? ಹೆಚ್ಚುವರಿ ಜನರು ಹೇಳುವ ಪ್ರಕಾರ ಈ ರೀತಿಯ ಚಿಕ್ಕ ಪುಟ್ಟ ಇ-ಮೇಲ್ ಕಳುಹಿಸಿದರೆ ಬಾಸ್ ಆಗಲಿ ಅಥವಾ ಅವರ ಗ್ರಾಹಕರಾಗಲಿ ಸಂತೋಷಗೋಳ್ಳುತ್ತಾರೆ ಎಂಬುದು ಅವರ ಅನಿಸಿಕೆ.

ಆದರೆ, ಇಂತಹ ಇ-ಮೇಲ್ ಗಳು ಪರಿಸರ ಕಾಳಜಿಗಿಂತ ಹೆಚ್ಚಾಗಿವೆಯೇ? ಇಂತಹ ಪ್ರಶ್ನೆಗಳ ಮೇಲೂ ಕೂಡ ಈ ಸಂಶೋಧನಾ ವರದಿ ಬೆಳಕು ಚೆಲ್ಲಿದೆ. ಶೇ.71ರಷ್ಟು ಜನರು ತಮಗೆ 'Thank You' ಮೇಲ್ ಬರದೆ ಹೋದರೆ ತಮಗೆ ಯಾವುದೇ ತೊಂದರೆ ಇಲ್ಲ ಎಂದಿದ್ದಾರೆ. ಇದೇ ವೇಳೆ ಶೇ.87ರಷ್ಟು ಜನ ಇಂತಹ ಇ-ಮೇಲ್ ಗಳನ್ನು ನಿಲ್ಲಿಸಿ ಪರಿಸರದ ರಕ್ಷಣೆಯಾಗುತ್ತಿದ್ದರೆ ತಮಗೆ ಖುಷಿಯಾಗಲಿದೆ ಎಂದಿದ್ದಾರೆ.

ಆದರೆ, ಈ ಸಂಶೋಧನೆ ಕೇವಲ ಬ್ರಿಟನ್ ಗೆ ಮಾತ್ರ ಸೀಮಿತವಾಗಿದ್ದು, ಬ್ರಿಟನ್ ಜನಸಂಖ್ಯೆ 6-7 ಕೋಟಿಗಳಷ್ಟಿದೆ. ಇವರಲ್ಲಿ ಸುಮಾರು 4.51 ಕೋಟಿ ಜನರು ಇಂಟರ್ನೆಟ್ ಬಳಕೆದಾರರಾಗಿದ್ದಾರೆ. ಕೇವಲ ಬ್ರಿಟನ್ ನ ಈ ಅನಾವಶ್ಯಕ ಇ-ಮೇಲ್ ಗಳ ಮೂಲಕ 16,433 ಟನ್ ಕಾರ್ಬನ್ ವಿಸರ್ಜನೆಯಾಗುತ್ತಿದ್ದರೆ, ವಿಶ್ವಾದ್ಯಂತ ಇರುವ 340 ಕೋಟಿ ಇಂಟರ್ನೆಟ್ ಬಳಕೆದಾರದಿಂದ ವಿಸರ್ಜನೆಯಾಗುತ್ತಿರುವ ಕಾರ್ಬನ್ ಎಷ್ಟಿರಬಹುದು ಎಂಬುದರ ಬಗ್ಗೆ ಒಮ್ಮೆ ಯೋಚಿಸಿ. 

ವಿಶ್ವಾದ್ಯಂತ ಇಂತಹ ಇ-ಮೇಲ್ ಗಳು ಎಷ್ಟೊಂದು ಕಾರ್ಬನ್ ಹೊರಸೂಸುತ್ತಿವೆ ಎಂಬ ಕುರಿತು ಇನ್ನೂ ಯಾವುದೇ ಅಂಕಿ-ಅಂಶಗಳು ಹೊರಬಂದಿಲ್ಲ. ಆದರೆ, ಬ್ರಿಟನ್ ನಿಂದ ಹೊರಬಂದಿರುವ ಈ ಅಂಕಿ-ಅಂಶಗಳು ನಮಗೆ ನಿಶ್ಚಿತ ಸಂಕೇತಗಳನ್ನು ನೀಡುತ್ತಿರುವುದು ಮಾತ್ರ ನಿಜ. ನಾವು ಮಾಡುವ ಈ ಚಿಕ್ಕ-ಚಿಕ್ಕ ಇ-ಮೇಲ್ ಗಳು ಭೂಮಿಯ ಪಾಲಿಗೆ ಭಾರಿ ಹೊರೆಯಾಗಿ ಪರಿಣಮಿಸುತ್ತಿವೆ. ಆದರಿಂದ ಇನ್ಮುಂದೆ 'THINK BEFORE YOU THANK'.

Trending News