ಜಲಾಲಾಬಾದ್: ಆಫ್ಘಾನಿಸ್ತಾನದ ಜಲಾಲಾಬಾದ್ ನಲ್ಲಿ ಸಿಖ್ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಆತ್ಮಾಹುತಿ ಬಾಂಬ್ ದಾಳಿ ನಡೆಸಲಾಗಿದೆ. ಅಫ್ಘಾನಿಸ್ತಾನದ ಜಲಾಲಾಬಾದ್ ನಗರದಲ್ಲಿ ಭಾನುವಾರ ಸಂಭವಿಸಿದ ಆತ್ಮಾಹುತಿ ಬಾಂಬ್ ದಾಳಿಗೆ ಕನಿಷ್ಠ 19 ಮಂದಿ ಬಲಿಯಾಗಿದ್ದಾರೆ. 19 ಮಂದಿಯ ಪೈಕಿ 17 ಮಂದಿ ಹಿಂದೂಗಳು ಮತ್ತು ಸಿಖ್ಖರಿದ್ದಾರೆ. ಇನ್ನೂ 20 ಮಂದಿ ಗಾಯಗೊಂಡಿದ್ದಾರೆ.
ಸಿಖ್ ಮತ್ತು ಹಿಂದೂಗಳನ್ನು ಗುರಿಯಾಗಿಸಿಕೊಂಡು ನಡೆಸಿರುವ ಈ ಆತ್ಮಾಹುತಿ ಬಾಂಬ್ ದಾಳಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿ ಖಂಡಿಸಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, 'ನಿನ್ನೆ ಅಫ್ಘಾನಿಸ್ತಾನದಲ್ಲಿ ನಡೆದಿರುವ ಭಯೋತ್ಪಾದಕರ ದಾಳಿಯನ್ನು ನಾವು ತೀವ್ರವಾಗಿ ವಿರೋಧಿಸುತ್ತೇವೆ. ಅಫ್ಘಾನಿಸ್ತಾನದ ಬಹುಸಂಸ್ಕೃತಿಯ ಮೇಲೆ ನಡೆಸಿರುವ ದಾಳಿ ಇದಾಗಿದೆ. ಭಾರತವು ಅಫ್ಘಾನಿಸ್ತಾನಕ್ಕೆ ಸಹಕಾರ ನೀಡಲು ಸಿದ್ಧವಿದೆ. ಗಾಯಗೊಂಡವರು ಶೀಘ್ರ ಗುಣಮುಖರಾಗಲಿ' ಎಂದು ತಿಳಿಸಿದ್ದಾರೆ.
We strongly condemn the terror attacks in Afghanistan yesterday. They are an attack on Afghanistan's multicultural fabric. My thoughts are with the bereaved families. I pray that the injured recover soon. India stands ready to assist the Afghanistan government in this sad hour.
— Narendra Modi (@narendramodi) July 2, 2018
ಅಧ್ಯಕ್ಷ ಅಶ್ರಫ್ ಘನಿ ಅವರನ್ನು ಭೇಟಿ ಮಾಡುವ ಸಲುವಾಗಿ ವಾಹನವೊಂದರಲ್ಲಿ ತೆರಳುತ್ತಿದ್ದ ಸಿಖ್ಖರ ತಂಡವನ್ನು ಗುರಿಯಾಗಿಸಿ ಈ ಬಾಂಬ್ ದಾಳಿ ನಡೆದಿದೆ.
11 bodies have been found. They were going to meet President when the barbaric act took place. We urge Govt of India to make security arrangements for Sikhs&Hindus there: Manjit Singh GK, Delhi Sikh Gurdwara Management Committee chief on suicide bombing in Afghanistan's Jalalabad pic.twitter.com/6HWu858YGA
— ANI (@ANI) July 1, 2018
ಈ ದಾಳಿಯನ್ನು ತಾನೇ ನಡೆಸಿರುವುದಾಗಿ ಇಸ್ಲಾಮಿಕ್ ಸ್ಟೇಟ್ ಹೇಳಿಕೆ ನೀಡಿದೆ. ಅಫ್ಘಾನಿಸ್ತಾನದ ಪೂರ್ವ ನಂಗರ್ಹಾರ್ ಪ್ರಾಂತ್ಯದ ಜಲಾಲಾಬಾದ್ನಲ್ಲಿ ನಡೆದ ಆತ್ಮಹತ್ಯಾ ಬಾಂಬ್ ಸ್ಫೋಟದಲ್ಲಿ ಮೃತಪಟ್ಟ 11 ಮಂದಿ ಸಿಖ್ಖರ ಹೆಸರನ್ನು ದೆಹಲಿ ಸಿಖ್ ಗುರುದ್ವಾರಾ ಮ್ಯಾನೇಜ್ಮೆಂಟ್ ಕಮಿಟಿಯಿಂದ ಬಿಡುಗಡೆಯಾಗಿದೆ.
The names of 11 Sikhs, who died in a suicide bombing in Jalalabad of eastern Nangarhar province in Afghanistan yesterday, has been released by Delhi Sikh Gurdwara Management Committee. pic.twitter.com/ClhA0lUOj7
— ANI (@ANI) July 2, 2018
ಮೃತ ಕುಟುಂಬದವರಿಗೆ ಸಂತಾಪ ಸೂಚಿಸಿ ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಟ್ವೀಟ್ ಮಾಡಿದ್ದಾರೆ.
My heartfelt condolences to the families of the victims of the terror attack in Jalalabad city of Afghanistan. We are with them in this hour of tragedy.
I am meeting their relatives today at 6 pm in JN Bhavan.— Sushma Swaraj (@SushmaSwaraj) July 2, 2018