ಅಮೆರಿಕವನ್ನು ಕರೋನಾದಿಂದ ರಕ್ಷಿಸಿದ ಔಷಧಿ ಇಂದು ಚಿಕಿತ್ಸೆಗೆ ತಿರಸ್ಕೃತ

ಕೋವಿಡ್ -19 ತುರ್ತು ಚಿಕಿತ್ಸೆಗಾಗಿ ಮಲೇರಿಯಾ ವಿರೋಧಿ ಔಷಧಿಗಳಾದ ಕ್ಲೋರೊಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಬಳಸಲು ಎಫ್ಡಿಎ ಸೋಮವಾರ ಅನುಮೋದನೆಯನ್ನು ಹಿಂತೆಗೆದುಕೊಂಡಿತು. ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಈ ಔಷಧಿಗಳು ಬಹುಶಃ ಪರಿಣಾಮಕಾರಿಯಲ್ಲ ಎಂದು ಅದು ಹೇಳಿದೆ.

Last Updated : Jun 16, 2020, 10:10 AM IST
ಅಮೆರಿಕವನ್ನು ಕರೋನಾದಿಂದ ರಕ್ಷಿಸಿದ ಔಷಧಿ ಇಂದು ಚಿಕಿತ್ಸೆಗೆ ತಿರಸ್ಕೃತ title=

ವಾಷಿಂಗ್ಟನ್: ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಔಷಧಿಯಿಂದ ಕೋವಿಡ್ -19 (Covid-19) ‌ನೊಂದಿಗೆ ತನ್ನನ್ನು ರಕ್ಷಿಸಿಕೊಳ್ಳುವುದಾಗಿ ಹೇಳಿದರು. ಕರೋನಾವೈರಸ್‌ನಿಂದ ರಕ್ಷಿಸಲು ಈ ಔಷಧಿಯನ್ನು ಎಷ್ಟು ಪರಿಣಾಮಕಾರಿ ಎಂದು ಪರಿಗಣಿಸಲಾಗಿದೆಯೆಂದರೆ, ಅದನ್ನು ಪೂರೈಸಲು ಅಮೆರಿಕ ಅಧ್ಯಕ್ಷರು ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಮೇಲೆ ಒತ್ತಡ ಹೇರಿದ್ದರು. ಆದರೆ ಈಗ ಡ್ರಗ್ ರೆಗ್ಯುಲೇಟರಿ ಅಥಾರಿಟಿ ಆಫ್ ಅಮೇರಿಕಾ (Food and Drugs Administration) ಈ ಔಷಧದೊಂದಿಗೆ ಕರೋನಾವೈರಸ್ ಚಿಕಿತ್ಸೆಯನ್ನು ನಿಲ್ಲಿಸಿದೆ.

FDA ಇಂದ ಹೈಡ್ರಾಕ್ಸಿಕ್ಲೋರೋಕ್ವಿನ್ ಅನುಮೋದನೆ ವಾಪಸ್:
ಯುಎಸ್ ಫುಡ್ ಅಂಡ್ ಡ್ರಗ್ ಅಡ್ಮಿನಿಸ್ಟ್ರೇಷನ್ (FDA) ಸೋಮವಾರ  ಕೊರೊನಾವೈರಸ್ (Coronavirus) ತುರ್ತು ಚಿಕಿತ್ಸೆಗಾಗಿ ಕ್ಲೋರೊಕ್ವಿನ್ ಮತ್ತು ಹೈಡ್ರಾಕ್ಸಿಕ್ಲೋರೋಕ್ವಿನ್ ಎಂಬ ಮಲೇರಿಯಾ ವಿರೋಧಿ ಔಷಧಿಗಳನ್ನು ಬಳಸುವ ಅನುಮೋದನೆಯನ್ನು ಹಿಂತೆಗೆದುಕೊಂಡಿತು. ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಈ ಔಷಧಿಗಳು ಬಹುಶಃ ಪರಿಣಾಮಕಾರಿಯಲ್ಲ ಎಂದು ಅದು ಹೇಳಿದೆ. ಎಫ್ಡಿಎ ಕ್ಲಿನಿಕಲ್ ಟ್ರಯಲ್ ಡೇಟಾದ ಫಲಿತಾಂಶಗಳು ಸೇರಿದಂತೆ ಇತ್ತೀಚಿನ ಮಾಹಿತಿಯನ್ನು ಆಧರಿಸಿ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದೆ. ಪ್ರಸ್ತುತ ಅಮೆರಿಕದ ಚಿಕಿತ್ಸೆಯ ಮಾರ್ಗಸೂಚಿಗಳು ಕೋವಿಡ್ -19 ಪ್ರಕರಣಗಳಲ್ಲಿ ಈ ಔಷಧಿಗಳ ಬಳಕೆಯನ್ನು ಶಿಫಾರಸು ಮಾಡುವುದಿಲ್ಲ ಎಂದು ಅದು ಹೇಳಿದೆ.

Hydroxychloroquine: ಮಿರಾಕಲ್ ಔಷಧಿಯೇ ಅಥವಾ ಸಾವಿನ ಮಾತ್ರೆಯೇ?

ಭಾರತೀಯ ವಿಜ್ಞಾನಿಗಳು ಹೈಡ್ರಾಕ್ಸಿಕ್ಲೋರೋಕ್ವಿನ್ ಅನ್ನು ಪರಿಣಾಮಕಾರಿ ಎಂದು ಪರಿಗಣಿಸಿದ್ದಾರೆ.
ಕರೋನಾ ವೈರಸ್ ಸೋಂಕನ್ನು ತಡೆಗಟ್ಟುವಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಬಹಳ ಪರಿಣಾಮಕಾರಿ ಎಂದು ಇತ್ತೀಚೆಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ವಿಜ್ಞಾನಿಗಳು ಹೇಳಿದ್ದಾರೆ. ಆರೋಗ್ಯ ಕಾರ್ಯಕರ್ತರನ್ನು ಕರೋನಾ ವೈರಸ್‌ನಿಂದ ರಕ್ಷಿಸಲು ಹೈಡ್ರಾಕ್ಸಿಕ್ಲೋರೋಕ್ವಿನ್ ಪರಿಣಾಮಕಾರಿ ಎಂದು ಭಾರತೀಯ ವಿಜ್ಞಾನಿಗಳು ತಮ್ಮ ಸಂಶೋಧನೆಯಲ್ಲಿ ಕಂಡುಕೊಂಡಿದ್ದಾರೆ. ಭಾರತದಲ್ಲಿ ಇದನ್ನು ವೈದ್ಯರ ಮೇಲ್ವಿಚಾರಣೆಯಲ್ಲಿ ಚಿಕಿತ್ಸೆಗೆ ಬಳಸಲು ಅನುಮೋದಿಸಲಾಗಿದೆ.

ಸಾಂಕ್ರಾಮಿಕ ಸಮಯದಲ್ಲಿ ಆಂಟಿಬಯೋಟಿಕ್‍ಗಳ ಬಳಕೆ ಮಾರಕವಾಗಬಹುದು- WHO ಎಚ್ಚರಿಕೆ

ಕೆಲವು ಸಮಯದ ಹಿಂದೆ, ಬ್ರಿಟನ್‌ನ ಪ್ರತಿಷ್ಠಿತ ವೈದ್ಯಕೀಯ ಜರ್ನಲ್ ಲ್ಯಾನ್ಸೆಟ್ ತನ್ನ ಸಂಶೋಧನೆಯಲ್ಲಿ ಹೈಡ್ರಾಕ್ಸಿಕ್ಲೋರೋಕ್ವಿನ್ ಕರೋನಾ ವೈರಸ್ ವಿರುದ್ಧದ ರಕ್ಷಣೆಗೆ ಪ್ರಯೋಜನಕಾರಿಯಲ್ಲ ಎಂದು ಹೇಳಿದೆ. ಇದರ ನಂತರ ಕರೋನಾ ವೈರಸ್‌ನ ಚಿಕಿತ್ಸೆಯ ಎಲ್ಲಾ ಸಂಶೋಧನೆ ಮತ್ತು ಪ್ರಯೋಗಗಳನ್ನು ಹೈಡ್ರಾಕ್ಸಿಕ್ಲೋರೋಕ್ವಿನ್‌ನೊಂದಿಗೆ ಚಿಕಿತ್ಸೆ ನಿಲ್ಲಿಸುವಂತೆ ವಿಶ್ವ ಆರೋಗ್ಯ ಸಂಸ್ಥೆ (WHO) ಎಲ್ಲಾ ದೇಶಗಳಿಗೆ ನಿರ್ದೇಶನ ನೀಡಿತು. ಆದರೆ ಡಬ್ಲ್ಯುಎಚ್‌ಒನ ಈ ಶಿಫಾರಸುಗಳನ್ನು ಭಾರತ ತಿರಸ್ಕರಿಸಿತ್ತು.

Covid-19 ಚಿಕಿತ್ಸೆಗೆ ಸಂಬಂಧಿಸಿದಂತೆ ಭಾರತದ ದಿಟ್ಟ ಹೆಜ್ಜೆ, WHOಗೆ ಮತ್ತೊಂದು ಹೊಡೆತ

Trending News