Viral Photo: ಇದು ಮನುಷ್ಯನ ಕಾಲಲ್ಲ; ಆಲೂ ಕಾಲು!!!

ಥೇಟ್ ಮನುಷ್ಯನ ಕಾಲಿನ ಆಕಾರನ್ನೇ ಹೊಂದುವ, 6 ಬೆರಳುಗಳ ಬೃಹತ್ ಗಾತ್ರದ ಆಲೂಗಡ್ಡೆ ಇದು.

Last Updated : Aug 12, 2018, 03:33 PM IST
Viral Photo: ಇದು ಮನುಷ್ಯನ ಕಾಲಲ್ಲ; ಆಲೂ ಕಾಲು!!! title=

ನವದೆಹಲಿ: ಇದೇನಪ್ಪಾ ಕಾಲು ಇಷ್ಟೊಂದು ದಪ್ಪ ಊದಿಕೊಂಡಿದೆ. ಇದೇನು ಆನೆ ಕಾಲು ರೋಗವೇ ಅಥವಾ ಮತ್ಯಾವ ರೋಗ ಎಂದು ಆಲೋಚಿಸುತ್ತಿದ್ದಿರಾ! ನೀವೇನಾದರೂ ಹಾಗೆ ಆಲೋಚಿಸುತ್ತಿದ್ದಾರೆ ಅದು ಖಂಡಿತಾ ತಪ್ಪು. ಯಾಕೆಂದ್ರೆ ಇಂದು ಮನುಷ್ಯನ ಕಾಲಲ್ಲ; ಆಲೂ ಕಾಲು!!

ಹೌದು, ಬ್ರೆಜಿಲ್'ನ ಸ್ಥಳೀಯ ರೈತರೊಬ್ಬರು ತಮ್ಮ ಜಮೀನಿನಲ್ಲಿ ಆಲೂಗದ್ದೆ ಬೆಳೆದಿದ್ದರು. ಅದನ್ನು ಹೊರತೆಗೆಯುವಾಗ ಅಚ್ಚರಿಯೊಂದು ಕಾದಿತ್ತು. ಏಕೆಂದರೆ ಥೇಟ್ ಮನುಷ್ಯನ ಕಾಲಿನ ಆಕಾರನ್ನೇ ಹೊಂದುವ, 6 ಬೆರಳುಗಳ ಬೃಹತ್ ಗಾತ್ರದ ಆಲೂಗಡ್ಡೆ ಅದಾಗಿತ್ತು. ಈ ಆಲೂಗಡ್ಡೆ ಮನುಷ್ಯನ ಮೊಣಕಾಲಿನಷ್ಟು ಎತ್ತರ ಇದೆ. ಆಲೂಗಡ್ಡೆ ಮೇಲಿನ ನಾರುಗಳು ಕೂದಲಿನಂತೆ ಕಾಣುತ್ತದೆ. ಅಷ್ಟಕ್ಕೂ ಈ ಆಲೂಗಡ್ಡೆ ತೂಕ ಎಷ್ಟು ಗೊತ್ತೇ? ಬರೋಬ್ಬರಿ 8 ಕೆ.ಜಿ.!  

ಬ್ರೆಜಿಲ್​​​'ನ ಸಾಂಟಾ ಕಾಂಟಾರಿನಾದ ಮೆಲೈರೋದಲ್ಲಿನ ರೈತ ಮಾರ್ಲಿ ಹಾಗೂ ಅವರ ಪತ್ನಿ ಪೌಲೋ ತಮ್ಮ ಮನೆಯ ಹಿಂದಿನ ತೋಟದಲ್ಲಿ ಕಳೆದ 6 ವರ್ಷಗಳಿಂದ ಆಲೂಗಡ್ಡೆ  ಬೆಳೆಯುತ್ತಿದ್ದಾರೆ. ಆದರೆ ಈ ಬಾರಿಯ ಆಲೂಗಡ್ಡೆ ವಿಶ್ವದ ಗಮನ ಸೆಳೆಯುತ್ತದೆ ಎಂದು ಅವರೆಂದೂ ಭಾವಿಸಿರಲಿಲ್ಲ. ಆರಂಭದಲ್ಲಿ ಬೃಹತ್ ಗಾತ್ರದ ಆಲೂಗಡ್ಡೆ ಕಂಡು ದಂಪತಿ ಹೆದರಿದ್ದರಂತೆ. ಆದರೀಗ ಇದನ್ನು ಸಾರ್ವಜನಿಕ ಪ್ರದರ್ಶನಕ್ಕೆ ಇಡುವ ಆಲೋಚನೆ ನಡೆಸಿದ್ದಾರೆ ಎಂದು 'ಯಾಹೂ ನ್ಯೂಸ್' ವರದಿ ಮಾಡಿದೆ. 

Trending News