ಗಾಂಧಿ ಆಶ್ರಮಕ್ಕೆ ಟ್ರಂಪ್ ಭೇಟಿ ನೀಡುವ ಕಾರ್ಯಕ್ರಮ ರದ್ದು

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಸಜ್ಜಾಗುತ್ತಿದ್ದಂತೆ, ಅಹಮದಾಬಾದ್‌ನಲ್ಲಿ ಅವರ ರೋಡ್ ಶೋ ಅನ್ನು 22 ಕಿ.ಮೀ ನಿಂದ 9 ಕಿ.ಮೀ.ಗೆ ಇಳಿಸಲಾಗಿದೆ.

Last Updated : Feb 21, 2020, 06:58 PM IST
ಗಾಂಧಿ ಆಶ್ರಮಕ್ಕೆ ಟ್ರಂಪ್ ಭೇಟಿ ನೀಡುವ ಕಾರ್ಯಕ್ರಮ ರದ್ದು title=
file photo

ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರನ್ನು ಸ್ವಾಗತಿಸಲು ಭಾರತ ಸಜ್ಜಾಗುತ್ತಿದ್ದಂತೆ, ಅಹಮದಾಬಾದ್‌ನಲ್ಲಿ ಅವರ ರೋಡ್ ಶೋ ಅನ್ನು 22 ಕಿ.ಮೀ ನಿಂದ 9 ಕಿ.ಮೀ.ಗೆ ಇಳಿಸಲಾಗಿದೆ.

ಟ್ರಂಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ರೋಡ್ ಶೋ ನಡೆಸಲಿದ್ದು, ಇದು ಅಹಮದಾಬಾದ್ ವಿಮಾನ ನಿಲ್ದಾಣದಿಂದ ಪ್ರಾರಂಭವಾಗಲಿದ್ದು, ಗಾಂಧಿನಗರದ ಕೋಟೇಶ್ವರ ಮೂಲಕ ಮೊಟೆರಾ ಕಡೆಗೆ ಹೋಗಲಿದೆ. ಗಾಂಧಿ ಆಶ್ರಮಕ್ಕೆ ಟ್ರಂಪ್ ಭೇಟಿ ರದ್ದುಪಡಿಸಿದ ನಂತರ ಈ ಕಡಿತ ಮಾಡಲಾಗಿದೆ.

9 ಕಿಲೋಮೀಟರ್ ಉದ್ದದ ರೋಡ್ ಶೋನಲ್ಲಿ 4 ಕಿಲೋಮೀಟರ್ ಗಾಂಧಿನಗರದಲ್ಲಿ ಇರಲಿದೆ.ಗಾಂಧಿನಗರದಲ್ಲಿ ನಾಲ್ಕು ಕಿ.ಮೀ ರೋಡ್ ಶೋ ಸಂದರ್ಭದಲ್ಲಿ ಭದ್ರತಾ ವ್ಯವಸ್ಥೆಯನ್ನು ನೋಡಿಕೊಳ್ಳುವ ಜವಾಬ್ದಾರಿಯನ್ನು ಎಸ್‌ಆರ್‌ಪಿ ಮತ್ತು ಇತರ ಭದ್ರತಾ ಸಂಸ್ಥೆಗಳು ಮತ್ತು ಏಳು ಎಸ್‌ಪಿ ವರ್ಗ ಅಧಿಕಾರಿಗಳು ಮತ್ತು 2000 ಕ್ಕೂ ಹೆಚ್ಚು ಪೊಲೀಸ್ ಸಿಬ್ಬಂದಿಗೆ ಗಾಂಧಿನಗರದ ಐಜಿ ವಹಿಸಿದ್ದಾರೆ.

ಅಹಮದಾಬಾದ್‌ನಲ್ಲಿ ವಿಶ್ವದ ಅತಿದೊಡ್ಡ ಮೊಟೆರಾ ಕ್ರೀಡಾಂಗಣವನ್ನು ಅಮೇರಿಕಾದ ಅಧ್ಯಕ್ಷ ಟ್ರಂಪ್ ಉದ್ಘಾಟಿಸಲಿದ್ದು, ಗುಜರಾತ್‌ನಲ್ಲಿ ನಡೆಯಲಿರುವ 'ನಮಸ್ತೆ ಟ್ರಂಪ್' ಭವ್ಯ ಕಾರ್ಯಕ್ರಮದಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸಲಿದ್ದಾರೆ. ಜನರನ್ನು ಕ್ರೀಡಾಂಗಣಕ್ಕೆ ಕರೆತರಲು ಸುಮಾರು 2000 ಬಸ್‌ಗಳನ್ನು ನಿಯೋಜಿಸಲಾಗುವುದು. ಮೊಟೆರಾ 1,10,000 ಕ್ಕೂ ಹೆಚ್ಚು ಜನರ ಆಸನ ಸಾಮರ್ಥ್ಯವನ್ನು ಹೊಂದಿದೆ.

ಅಮೆರಿಕಾದ ಅಧ್ಯಕ್ಷ ಡೊನಾಲ್ಡ್  ಟ್ರಂಪ್ ಮತ್ತು ಪ್ರಥಮ ಮಹಿಳೆ ಮೆಲಾನಿಯಾ ಫೆಬ್ರವರಿ 24 ಮತ್ತು 25 ರಂದು ಅಹಮದಾಬಾದ್, ಆಗ್ರಾ ಮತ್ತು ನವದೆಹಲಿಗೆ ಪ್ರಯಾಣಿಸಲಿದ್ದಾರೆ. ಭೇಟಿಯ ವೇಳೆ ಪ್ರಮುಖ ವ್ಯಾಪಾರ ಒಪ್ಪಂದವನ್ನು ಮಾಡಿಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ.

Trending News