ಮುಂಬೈನಲ್ಲಿದ್ದಾರೆ ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಸಂಬಂಧಿಕರು!

ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ 2013 ರಲ್ಲಿ ದೂರದ ಸಂಬಂಧಿಗಳು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ತಿಳಿಸಿದ್ದರು.ಎರಡು ವರ್ಷಗಳ ನಂತರ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡೆನ್ ಇದನ್ನು ಪುನರುಚ್ಚರಿಸಿ ಮುಂಬೈನಲ್ಲಿ ಐದು ಬಿಡೆನ್‌ಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.

Last Updated : Nov 8, 2020, 08:44 PM IST
ಮುಂಬೈನಲ್ಲಿದ್ದಾರೆ ಅಮೆರಿಕಾದ ನೂತನ ಅಧ್ಯಕ್ಷ ಜೋ ಬಿಡೆನ್ ಸಂಬಂಧಿಕರು! title=
file photo

ನವದೆಹಲಿ: ಯುಎಸ್ ಅಧ್ಯಕ್ಷರಾಗಿ ಚುನಾಯಿತರಾದ ಜೋ ಬಿಡೆನ್ 2013 ರಲ್ಲಿ ದೂರದ ಸಂಬಂಧಿಗಳು ಮುಂಬೈನಲ್ಲಿ ವಾಸಿಸುತ್ತಿದ್ದಾರೆ ಎಂದು ಪ್ರೇಕ್ಷಕರಿಗೆ ತಿಳಿಸಿದ್ದರು.ಎರಡು ವರ್ಷಗಳ ನಂತರ ವಾಷಿಂಗ್ಟನ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಬಿಡೆನ್ ಇದನ್ನು ಪುನರುಚ್ಚರಿಸಿ ಮುಂಬೈನಲ್ಲಿ ಐದು ಬಿಡೆನ್‌ಗಳು ವಾಸಿಸುತ್ತಿದ್ದಾರೆ ಎಂದು ಹೇಳಿದ್ದರು.

77 ವರ್ಷದ ಬಿಡೆನ್ 46 ನೇ ಯುಎಸ್ ಅಧ್ಯಕ್ಷರಾಗಿ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ, ಮುಂಬೈನಲ್ಲಿ ಈಗ ಇದುವರೆಗೆ ತಾವು ಬಿಡನ್ ಅವರ ಸಂಬಂಧಿ ಎಂದು ಹೇಳಿಕೊಳ್ಳಲು ಮುಂದಾಗಿಲ್ಲ.ಮುಂಬೈನಿಂದ ಬಿಡೆನ್ ಎಂಬ ಕೊನೆಯ ಹೆಸರಿನಿಂದ ಯಾರೊಬ್ಬರಿಂದ ಪತ್ರವೊಂದನ್ನು ಸ್ವೀಕರಿಸಿದ ದಶಕಗಳ ನಂತರ, ಸೆನೆಟರ್ ಆದ ಕೂಡಲೇ, ಜೋ ಬಿಡೆನ್ ತನ್ನ ಮುತ್ತಜ್ಜ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು ಎನ್ನುವ ಸಂಗತಿಯನ್ನು ತಿಳಿದುಕೊಂಡಿದ್ದರು.

ಕಿರಿಯ ಸೆನೆಟರ್ ನಿಂದ ಅತಿ ಹಿರಿಯ ಅಧ್ಯಕ್ಷನವರೆಗೆ ಜೋ ಬಿಡೆನ್ ನಡೆದು ಬಂದ ಹಾದಿ

'ಭಾರತದ ಮುಂಬೈನಲ್ಲಿ ಐದು ಬಿಡೆನ್ ಗಳಿದ್ದಾರೆ ಎಂದು ಉಪಾಧ್ಯಕ್ಷರಾಗಿದ್ದ ಬಿಡೆನ್ ಅವರು ವಾಷಿಂಗ್ಟನ್ ಪ್ರೇಕ್ಷಕರಿಗೆ 2015 ರಲ್ಲಿ ಕಾನ್ಫೆಡರೇಶನ್ ಆಫ್ ಇಂಡಿಯನ್ ಇಂಡಸ್ಟ್ರಿ ಮತ್ತು ಕಾರ್ನೆಗೀ ಎಂಡೋಮೆಂಟ್ ಫಾರ್ ಇಂಟರ್ನ್ಯಾಷನಲ್ ಪೀಸ್ ಆಯೋಜಿಸಿದ್ದ ಭಾರತ-ಯುಎಸ್ ನಾಗರಿಕ ಪರಮಾಣು ಒಪ್ಪಂದ 10 ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹೇಳಿದರು. 

2013 ರಲ್ಲಿ, ಬಿಡೆನ್ ತಮ್ಮ ಮೊದಲ ಉಪಾಧ್ಯಕ್ಷರಾಗಿ ಪ್ರವಾಸದಲ್ಲಿ ಮುಂಬೈಗೆ ಪ್ರಯಾಣಿಸಿದಾಗ, ಅವರು ಹಲವಾರು ದಶಕಗಳ ಹಿಂದೆ ಮೊದಲ ಬಾರಿಗೆ ಸೆನೆಟರ್ ಆಗಿದ್ದಾಗ ಅವರು ಸ್ವೀಕರಿಸಿದ ಈ ಪತ್ರದ ಬಗ್ಗೆ ಮಾತನಾಡಿದರು.ಜುಲೈ 24, 2013 ರಂದು ಬಾಂಬೆ ಸ್ಟಾಕ್ ಎಕ್ಸ್ಚೇಂಜ್ಗೆ ನೀಡಿದ ಭಾಷಣದಲ್ಲಿ, ಜೋ ಬಿಡೆನ್ ಅವರು ಬಿಡೆನ್ ಫ್ರಮ್ ಮುಂಬೈ ಕಥೆಯನ್ನು ವಿವರಿಸಿದ್ದರು.

US Election Result 2020: ಜೋ ಬೈಡನ್ ಹಾಗೂ ಕಮಲಾ ಹ್ಯಾರಿಸ್ ಗೆ ಅಭಿನಂದನೆ ಸಲ್ಲಿಸಿದ PM Modi ಹೇಳಿದ್ದೇನು?

'ಭಾರತಕ್ಕೆ ಮರಳಿರುವುದು ಮತ್ತು ಮುಂಬೈಗೆ ಬಂದಿರುವುದು ಒಂದು ಗೌರವ. ನಾನು 1972 ರಲ್ಲಿ 29 ವರ್ಷದ ಯುವಕನಾಗಿದ್ದಾಗ ಯುನೈಟೆಡ್ ಸ್ಟೇಟ್ಸ್ ಸೆನೆಟ್ ಗೆ ಆಯ್ಕೆಯಾಗಿದ್ದೇ ಆಗ ನಾನು ಸ್ವೀಕರಿಸಿದ ಮೊದಲ ಪತ್ರವನ್ನು ಫಾಲೋ ಅಪ್ ಮಾಡದಿರುವುದಕ್ಕೆ ವಿಷಾಧ ವ್ಯಕ್ತಪಡಿಸುತ್ತೇನೆ.

'ಬಹುಶಃ, ಪ್ರೇಕ್ಷಕರಲ್ಲಿ ಕೆಲವು ವಂಶಾವಳಿ ತಜ್ಞರು ನನ್ನನ್ನು ಅನುಸರಿಸಬಹುದು, ಆದರೆ ಮುಂಬೈನಿಂದ ಬಿಡೆನ್ ಎನ್ನುವ ವ್ಯಕ್ತಿಯಿಂದ ನನಗೆ ಬಂದಿತ್ತು ಎಂದು ಹೇಳಿ ಮುಂಬೈ ಜೊತೆಗಿನ ಸಂಬಂಧದ ಬಗ್ಗೆ ವಿವರಿಸುವ ಪ್ರಯತ್ನ ಮಾಡಿದ್ದರು. ಇದಾದ ನಂತರ ವಾಷಿಂಗ್ಟನ್‌ನಲ್ಲಿ ನಡೆದ 2015 ರ ಭಾಷಣದಲ್ಲಿ ಜೋ ಬಿಡೆನ್ ಅವರು ತಮ್ಮ ಮುತ್ತಜ್ಜ ಜಾರ್ಜ್ ಬಿಡೆನ್ ಈಸ್ಟ್ ಇಂಡಿಯಾ ಟ್ರೇಡಿಂಗ್ ಕಂಪನಿಯಲ್ಲಿ ಕ್ಯಾಪ್ಟನ್ ಆಗಿದ್ದರು ಮತ್ತು ನಿವೃತ್ತಿಯ ನಂತರ ಭಾರತದಲ್ಲಿ ನೆಲೆಸಲು ನಿರ್ಧರಿಸಿದ ಭಾರತೀಯ ಮಹಿಳೆಯನ್ನು ವಿವಾಹವಾಗಿದ್ದರು' ಎನ್ನುವ ಕುತೂಹಲಕಾರಿ ಸುದ್ದಿಯನ್ನು ತಿಳಿಸಿದ್ದರು.

ಮುಂಬೈನ ಬಿಡೆನ್ಸ್ ದೂರವಾಣಿ ಸಂಖ್ಯೆಗಳು ಸೇರಿದಂತೆ ವಿವರಗಳನ್ನು ಒದಗಿಸಿದ್ದಾರೆ ಎಂದು ಬಿಡೆನ್ ಹೇಳಿದ್ದರು.ಆದರೆ ಅವರಿಗೆ ಇನ್ನೂ ಕಾಲ್ ಮಾಡಿಲ್ಲ, ಶೀಘ್ರದಲ್ಲೇ ಮಾಡುವುದಾಗಿ ಸಭಿಕರಿಗೆ ತಿಳಿಸಿದ್ದರು.
 

Trending News