Viral Video: ಅನಾಯಾಸವಾಗಿ ಹೈವೇ ದಾಟಿದ ಅನಕೊಂಡ!

ಬೃಹತ್ ಗಾತ್ರದ ಅನಕೊಂಡವೊಂದು ಹೆದ್ದಾರಿ ದಾಟುತ್ತಿದ್ದುದನ್ನು ಕಂಡ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಅದು ಅನಾಯಾಸವಾಗಿ ರಸ್ತೆ ದಾಟಲು ಅನುವುಮಾಡಿಕೊಟ್ಟ ಘಟನೆ ಬ್ರೆಸಿಲ್ ನಲ್ಲಿ ನಡೆದಿದೆ.

Updated: May 1, 2019 , 02:26 PM IST
Viral Video: ಅನಾಯಾಸವಾಗಿ ಹೈವೇ ದಾಟಿದ ಅನಕೊಂಡ!

ಬ್ರೆಜಿಲ್: ಬೃಹತ್ ಗಾತ್ರದ ಅನಕೊಂಡವೊಂದು ಹೆದ್ದಾರಿ ದಾಟುತ್ತಿದ್ದುದನ್ನು ಕಂಡ ಜನರು ತಮ್ಮ ವಾಹನಗಳನ್ನು ನಿಲ್ಲಿಸಿ ಅದು ಅನಾಯಾಸವಾಗಿ ರಸ್ತೆ ದಾಟಲು ಅನುವುಮಾಡಿಕೊಟ್ಟ ಘಟನೆ ಬ್ರೆಸಿಲ್ ನಲ್ಲಿ ನಡೆದಿದೆ.

ಸದಾ ವಾಹನ ದಟ್ಟಣೆಯಿರುವ ಬ್ರೆಜಿಲ್​ ದೇಶದ ಪೊರ್ಟೊ ವೆಲೊ ನಗರದಲ್ಲಿನ ರಸ್ತೆಯಲ್ಲಿ 10 ಅಡಿ ಉದ್ದದ, 30 ಕೆಜಿ ತೂಕದ ಬೃಹತ್ ಅನಕೊಂಡವನ್ನು ಕಂಡ ಜನತೆ ವಾಹನಗಳನ್ನು ನಿಲ್ಲಿಸಿ, ರಸ್ತೆ ದಾಟುವವರೆಗೂ ಕಾದು ನಂತರ ವಾಹನಗಳನ್ನು ಚಾಲನೆ ಮಾಡಿದ್ದಾರೆ. ಈ ಸನ್ನಿವೇಶವನ್ನು ವೀಡಿಯೋ ಮಾಡಿರುವ ಕೆಲವರು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡಿದ್ದಾರೆ. ಸದ್ಯ ಈ ವೀಡಿಯೋ ಸಖತ್ ವೈರಲ್ ಆಗಿದೆ.