Zoo Video - ಪ್ರಸ್ತುತ ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೋವೊಂದು ಭಾರಿ ವೈರಲ್ ಆಗುತ್ತಿದ್ದು. ಈ ವಿಡಿಯೋ ನೋಡಿ ನೀವೂ ಕೂಡ ಒಂದು ಕ್ಷಣ ದಂಗಾಗುವಿರಿ. ವೀಡಿಯೊದಲ್ಲಿ, ವ್ಯಕ್ತಿಯೊಬ್ಬನು ತನ್ನ ಹೆಗಲ ಮೇಲೆ ಬೃಹತ್ ಗಾತ್ರದ ಹಾವನ್ನು ಹೊತ್ತುಕೊಂಡು ಮೃಗಾಲಯಕ್ಕೆ ಪ್ರವೇಶಿಸುತ್ತಿರುವುದನ್ನು ನೀವು ಕಾಣಬಹುದು. ಹೆಬ್ಬಾವಿನ ಉದ್ದಲತೆಯ ಕಾರಣವೀಡಿಯೊ ರೆಕಾರ್ಡ್ ಮಾಡುವ ವ್ಯಕ್ತಿಯು ಸ್ವಲ್ಪ ದೂರದವರೆಗೆ ಹಿಂದೆ ನಡೆಯುತ್ತಲೇ ಇದ್ದಾನೆ. ಹೆಬ್ಬಾವು ತನ್ನನ್ನು ಕೊಂಡೊಯ್ಯುವುದಕ್ಕೆ ಸಂಪೂರ್ಣ ಸಿದ್ಧವಾಗಿದೆ ಎಂಬಂತೆ ತೋರುತ್ತಿದ್ದು, ವ್ಯಕ್ತಿಯ ಹೆಗಲ ಮೇಲೆ ಅದು ಸದ್ದಿಲ್ಲದೆ ಮಲಗಿದೆ ಎಂಬಂತೆ ಕಾಣುತ್ತಿದೆ. ಇದು ಅವರ ದೈನಂದಿನ ಕೆಲಸ ಮತ್ತು ಅವರು ಪರಸ್ಪರ ಚೆನ್ನಾಗಿ ಅರಿತಿದ್ದಾರೆ. ಕೋಣೆಗೆ ಪ್ರವೇಶಿಸುವ ಮೊದಲು, ಹೆಬ್ಬಾವು ದಾರಿಯಲ್ಲಿ ಬರುವ ಹೊಡೆತಗಳನ್ನು ತಪ್ಪಿಸಲು ತನ್ನ ತಲೆ ಅಲ್ಲಾಡಿಸುತ್ತಿರುವುದು ಕಂಡುಬರುತ್ತಿದೆ.
ಮನುಷ್ಯ ತನ್ನ ಭುಜದ ಮೇಲೆ ದೈತ್ಯ ಹಾವಿನೊಂದಿಗೆ ನಡೆಯುತ್ತಿದ್ದಾನೆ
ಕೆಲವರು ಭಾರಿ ಅಪಾಯಕಾರಿ ಮತ್ತು ವಿಶಾಲ ಕಾಯದ ಜಾನುವಾರುಗಳ ಜೊತೆಗೆ ಆಟಿಗೆಗಳಂತೆ ಆಟವಾಡುತ್ತಾರೆ. ಇದು ಅವರ ನೌಕರಿಯ ಭಾಗವಾಗಿದ್ದರೂ ಕೂಡ, ಅವರ ಮುಖದಲ್ಲಿ ನೀವು ಭಯದ ಬದಲು ಸ್ನೇಹ ಪರ ಭಾವನೆಯನ್ನು ಕಾಣಬಹುದು. ಸಾಮಾಜಿಕ ಮಾಧ್ಯಮದಲ್ಲಿ, ಮೃಗಾಲಯದ ಒಂದು ವಿಚಿತ್ರ ವಿಡಿಯೋ ಭಾರಿ ವೈರಲ್ ಆಗುತ್ತಿದೆ. ಈ ವಿಡಿಯೋದಲ್ಲಿ ಜೋ ಬ್ರುವರ್ ಹೆಸರಿನ ವ್ಯಕ್ತಿ ತನ್ನ ಹೆಗಲ ಮೇಲೆ ವಿಶಾಲ ಕಾಯದ ಹಾವನ್ನು ಹೊತ್ತುಕೊಂಡಿದ್ದಾನೆ.
ಇದನ್ನೂ ಓದಿ-Watch:ಚಲಿಸುತ್ತಿದ್ದ ಪೊಲೀಸ್ ವ್ಯಾನ್ ನಿಂದಲೇ ಕೈದಿ ಪರಾರಿ, ನಿಬ್ಬೆರಗಾಗಿಸುವ ವಿಡಿಯೋ
ವ್ಯಕ್ತಿ ಹಾವುಗಳೊಂದಿಗೆ ಆಳವಾದ ಸ್ನೇಹವನ್ನು ಹೊಂದಿದ್ದಾನೆ
ಜೇ ಬ್ರೂವರ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಅವರು ಪ್ರಾಣಿಗಳೊಂದಿಗೆ ಸ್ನೇಹಿತರಂತೆ ವರ್ತಿಸುತ್ತಾರೆ ಮತ್ತು ಅವುಗಳ ಜೊತೆಗೆ ಆಟ ಆಡುತ್ತಾರೆ. ಸಾಮಾನ್ಯವಾಗಿ ಚಿಕ್ಕ ಹಾವನ್ನು ಕಂಡರೂ ಜನ ಹೆದರುತ್ತಾರೆ. ಆದರೆ ಜೇ ಬ್ರೂವರ್ ಹಾವುಗಳೊಂದಿಗೆ ಬಹಳ ನಿಕಟ ಸ್ನೇಹವನ್ನು ಹೊಂದಿದ್ದಾರೆ. ಈ ವೈರಲ್ ವೀಡಿಯೊದಲ್ಲಿ (Zoo Video), ಅವರು ತನ್ನ ಭುಜದ ಮೇಲೆ ದೈತ್ಯ ಹಳದಿ ಬಣ್ಣದ ಹಾವನ್ನು ನೇತುಹಾಕಿಕೊಂಡು ತಿರುಗಾಡುತ್ತಿದ್ದಾರೆ.
ಇದನ್ನೂ ಓದಿ-Viral Video : ನೀರಿನ ತೊಟ್ಟಿಯಲ್ಲಿ ಸಿಕ್ತು 1 ಕೋಟಿ ರೂ.! ನೋಟುಗಳನ್ನು ಒಣಗಿಸುತ್ತಿರುವ ಅಧಿಕಾರಿಗಳು
ಇದರ ಉದ್ದ ತಿಳಿದರೆ ನಿಮಗೂ ಆಶ್ಚರ್ಯವಾಗಬಹುದು
ಈ ಹಾವಿನ ವಿಡಿಯೋದಲ್ಲಿ ಕಂಡುಬರುವ ಹಳದಿ ಬಣ್ಣದ ಹಾವು 22 ಅಡಿಗೂ ಹೆಚ್ಚು ಉದ್ದವಿದೆ. ಇದನ್ನು ನೋಡಿದರೆ ಯಾರಿಗಾದರೂ ಬೆವರಿಳಿಯುತ್ತದೆ, ಆದರೆ ಜೆ ಬ್ರೂಯರ್ ಮಾತ್ರ ಮೋಜು ಮಾಡುತ್ತಿದ್ದಾರೆ.ಈ ವಿಡಿಯೋದ ಶೀರ್ಷಿಕೆಯಲ್ಲಿ ಬರೆದುಕೊಂಡ ಅವರು, 'ಅಂತಹ ಭಾರವಾದ ಮತ್ತು ಉದ್ದವಾದ ಹಾವನ್ನು ಎತ್ತಲು ಸಹಾಯ ಮಾಡಲು ಯಾರೂ ಇಲ್ಲದಿದ್ದಾಗ, ನೀವು ಹಳೆಯ ಮಾರ್ಗವನ್ನು ಪ್ರಯತ್ನಿಸಬೇಕು' ಎಂದು ಬರೆದುಕೊಂಡಿದ್ದಾರೆ. ಈ ವೀಡಿಯೊವನ್ನು 'Heapgul5' ಬಳಕೆದಾರರು Instagram ನಲ್ಲಿ ಪೋಸ್ಟ್ ಮಾಡಿದ್ದು, ಇದುವರೆಗೆ 8,400 ಕ್ಕೂ ಹೆಚ್ಚು ಲೈಕ್‌ಗಳನ್ನು ಈ ವಿಡಿಯೋ ಕಂಡಿದೆ.
ಇದನ್ನೂ ಓದಿ-Viral video:ಬೆಂಗಳೂರಿನಲ್ಲಿ ಅಂಗವಿಕಲನಂತೆ ವೇಷ ಧರಿಸಿ ಭಿಕ್ಷಾಟನೆ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.