VIDEO: ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಬಂತು 'ಶಾರ್ಕ್'!

ಈ ರೀತಿಯ ಆಘಾತಕಾರಿ ವಿಡಿಯೋ ಅಮೆರಿಕಾದ ಮ್ಯಾಸಚೂಸೆಟ್ಸ್ ನಲ್ಲಿ ಹರಡಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾಗಿದ್ದಾರೆ.  

Updated: Aug 8, 2018 , 01:55 PM IST
VIDEO: ಸಮುದ್ರದಲ್ಲಿ ಮೀನು ಹಿಡಿಯುತ್ತಿದ್ದ ವ್ಯಕ್ತಿಯ ಮೇಲೆ ದಾಳಿ ಮಾಡಲು ಬಂತು 'ಶಾರ್ಕ್'!

ಸಮುದ್ರದಲ್ಲಿ ಪ್ರಯಾಣಿಸುವಾಗ ನಿಮ್ಮ ಮುಂದೆ ಶಾರ್ಕ್ ಬಂದರೆ, ಏನಾಗಬಹುದು? ನೆನೆಸಿಕೊಂಡರೆ ಒಂದು ಕ್ಷಣ ಎದೆ ಜಲ್ ಅನ್ನುತ್ತೆ. 'ಶಾರ್ಕ್' ಸಮುದ್ರದ ಅತ್ಯಂತ ಅಪಾಯಕಾರಿ ಜೀವಿ ಎಂದು ಪರಿಗಣಿಸಲ್ಪಟ್ಟಿದೆ. ಒಂದು ವೇಳೆ ಅದು ಆಕ್ರಮಣ ಮಾಡಿದರೆ, ಐದು ಅಡಿ ಎತ್ತರದ ವ್ಯಕ್ತಿಯನ್ನು ಒಮ್ಮೆಗೆ ನುಂಗಿಬಿಡುತ್ತದೆ. ಇಂತಹ ಅಪಾಯಕಾರಿ ಶಾರ್ಕ್ ದಾಳಿ ಮಾಡುವುದನ್ನು ನೀವು ನೋಡಿದ್ದೀರಾ... ಇಂತಹ ಆಘಾತಕಾರಿ ವಿಡಿಯೋ ಅಮೆರಿಕಾದ ಮ್ಯಾಸಚೂಸೆಟ್ಸ್ ನಲ್ಲಿ ಹರಡಿದೆ. ಇದನ್ನು ನೋಡಿದ ಪ್ರತಿಯೊಬ್ಬರೂ ಆಶ್ಚರ್ಯಚಕಿತರಾಗಿದ್ದಾರೆ.

ವಾಸ್ತವವಾಗಿ, ಮ್ಯಾಸಚೂಸೆಟ್ಸ್ನ ಒಬ್ಬ ಮನುಷ್ಯ ಸಮುದ್ರದಲ್ಲಿ ಮೀನುಗಾರಿಕೆಗೆ ಹೋದಾಗ, ಒಂದು ಶಾರ್ಕ್ ದಾಳಿ ಮಾಡಲು ಪ್ರಯತ್ನಿಸಿದ ದೃಶ್ಯ ಸೆರೆಯಾಗಿದೆ. ವೀಡಿಯೊದಲ್ಲಿ ಒಬ್ಬ ವ್ಯಕ್ತಿಯು ಮೀನು ಹಿಡಿಯಲು ಪ್ರಯತ್ನಿಸುತ್ತಿರುವುದನ್ನು, ಆ ಸಮಯದಲ್ಲಿ 'ಶಾರ್ಕ್' ಆ ವ್ಯಕ್ತಿಯ ಮೇಲೆ ದಾಳಿ ಮಾಡಲು ಪ್ರಯತ್ನಿಸುವುದನ್ನು ದೃಶ್ಯದಲ್ಲಿ ನೀವು ನೋಡಬಹುದು. ಸಾಮಾಜಿಕ ಜಾಲತಾಣದಲ್ಲಿ ಈ ವೀಡಿಯೊ ಈಗ ತುಂಬಾ ವೈರಲ್ ಆಗುತ್ತಿದೆ.