ಬರೋಬ್ಬರಿ 6 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ ಮಹಿಳೆ!

ಮಗುವಿನ ತೂಕ ಹೆಚ್ಚಾಗಿದ್ದ ಕಾರಣ ತಾಯಿ ಮತ್ತು ಮಗುವಿನ ಕ್ಷೇಮಕ್ಕಾಗಿ ಸಿ-ಸೆಕ್ಷನ್ ಮೂಲಕ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ.  

Last Updated : Oct 14, 2019, 02:01 PM IST
ಬರೋಬ್ಬರಿ 6 ಕೆ.ಜಿ ತೂಕದ ಮಗುವಿಗೆ ಜನ್ಮ ನೀಡಿದ ಮಹಿಳೆ! title=

ಸಾಮಾನ್ಯವಾಗಿ 4 ರಿಂದ 5 ಕೆ.ಜಿ ತೂಕದ ನವಜಾತ ಶಿಶುವನ್ನು ನಾವು ನೋಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲೋರ್ವ ಮಹಿಳೆ ಬರೋಬ್ಬರಿ 6 ಕೆ.ಜಿ.ತುಕಡ ಹೆಣ್ಣು ಮಗುವಿಗೆ ಜನ್ಮ ನೀಡಿದ್ದಾಳೆ. ಇದೀಗ ಈ ಮಗು 'ಮಿನಿ ಸುಮೋ' ಅಂತಾನೇ ಹೆಸರಾಗಿದೆ. 

ಆಸ್ಟ್ರೇಲಿಯಾದ ರೆಮಿ ಎಂಬ ಮಹಿಳೆಯೇ ಈ ಬೃಹತ್ ಗಾತ್ರದ ಮಗುವಿಗೆ ಜನ್ಮ ನೀಡಿದ್ದು, ಇದು ನೀಡಲು ಮಿನಿ ಕುಸ್ತಿಪಟುವಿನ ಹಾಗೆ ಕಾಣುತ್ತೆ. ಮಗುವಿನ ತೂಕ ಹೆಚ್ಚಾಗಿದ್ದ ಕಾರಣ ತಾಯಿ ಮತ್ತು ಮಗುವಿನ ಕ್ಷೇಮಕ್ಕಾಗಿ ಸಿ-ಸೆಕ್ಷನ್ ಮೂಲಕ ವೈದ್ಯರು ಮಗುವನ್ನು ಹೊರತೆಗೆದಿದ್ದಾರೆ.

ಸಿಡ್ನಿಯಿಂದ ಬಂದಿದ್ದ ಎಮ್ಮಾ ಮತ್ತು ಡೇನಿಯಲ್ ಮಿಲ್ಲರ್ ದಂಪತಿಗೆ ಇನ್ನೂ ಇಬ್ಬರು ಮಕ್ಕಳಿದ್ದು, ಅವರ ಜನನದ ಸಂದರ್ಭದಲ್ಲಿನ ತೂಕ 5.5 ಕೆ.ಜಿ ಮತ್ತು 3.8 ಕೆ.ಜಿ. ಇತ್ತು ಎನ್ನಲಾಗಿದೆ. ಆದರೆ ಈಗ ಜನಿಸಿರುವ ಮೂರನೇ ಮಗು ಬರೋಬ್ಬರಿ 5.88 ಕೆ.ಜಿ. ತೂಕವಿದ್ದು, ಭಾರಿ ಅಚ್ಚರಿ ಮೂಡಿಸಿದೆ. 

ಸದ್ಯ, ತಾಯಿ-ಮಗು ಇಬ್ಬರೂ ಆರೋಗ್ಯವಾಗಿದ್ದಾರೆ. ತಾಯಿ ಸಂಪೂರ್ಣ ಗುಣಮುಖರಾಗುವವರೆಗೆ 6 ಕೆಜಿ ಗಿಂತ ಹೆಚ್ಚಿನ ತೂಕ ಎತ್ತದಂತೆ ವೈದ್ಯರು ತಿಳಿಸಿದ್ದಾರೆ ಎನ್ನಲಾಗಿದೆ. 

Trending News