Plane Crash Video: ಎಂದೂ ಕಂಡಿರದಂತ ವಿಮಾನಗಳ ಭೀಕರ ಡಿಕ್ಕಿ: ಪೈಲಟ್ ಗಳ ದಾರುಣ ಅಂತ್ಯದ ವಿಡಿಯೋ ನೋಡಿದ್ರೆ ಭಯವಾಗುತ್ತೆ!

ಈ ಘಟನೆ ಜರ್ಮನಿಯ ಲೆಮ್ನಿಜ್ ಏರ್‌ಫೀಲ್ಡ್‌ನಲ್ಲಿ ನಡೆದಿದೆ. 'ದಿ ಸನ್' ವರದಿಯ ಪ್ರಕಾರ, ಎರಡೂ ವಿಮಾನಗಳ ಪೈಲಟ್‌ಗಳು ನಿರ್ದಿಷ್ಟ ಮಾದರಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಇಬ್ಬರೂ ಪೈಲಟ್‌ಗಳು ಮಿರರ್ ಫ್ಲೈಟ್‌ಗಾಗಿ ತರಬೇತಿ ಪಡೆಯುತ್ತಿದ್ದರು.

Written by - Bhavishya Shetty | Last Updated : Sep 26, 2022, 05:25 PM IST
    • ಜರ್ಮನಿಯ ಎರಡು ಸಣ್ಣ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದಿವೆ
    • ಪರಿಣಾಮ ತರಬೇತಿ ನಿರತರಾಗಿದ್ದ ಇಬ್ಬರು ಪೈಲಟ್ ಗಳ ಸಾವು
    • ಈ ಘಟನೆ ಜರ್ಮನಿಯ ಲೆಮ್ನಿಜ್ ಏರ್‌ಫೀಲ್ಡ್‌ನಲ್ಲಿ ನಡೆದಿದೆ
Plane Crash Video: ಎಂದೂ ಕಂಡಿರದಂತ ವಿಮಾನಗಳ ಭೀಕರ ಡಿಕ್ಕಿ: ಪೈಲಟ್ ಗಳ ದಾರುಣ ಅಂತ್ಯದ ವಿಡಿಯೋ ನೋಡಿದ್ರೆ ಭಯವಾಗುತ್ತೆ!  title=
plane crash

ವಿಮಾನ ಅಪಘಾತ ಪ್ರಕರಣಗಳ ಬಗ್ಗೆ ನಿರಂತರ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುತ್ತವೆ. ಇತ್ತೀಚೆಗಷ್ಟೇ ಅಮೆರಿಕದ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡ ಸುದ್ದಿ ಬಂದಿತ್ತು. ಅದರ ಬೆನ್ನಲ್ಲೇ ಫ್ರಾನ್ಸ್ ವಿಮಾನವೊಂದು ರನ್ ವೇಯಿಂದ ಜಾರಿ ಸರೋವರಕ್ಕೆ ಬಿದ್ದಿತ್ತು. ಇದೀಗ ಜರ್ಮನಿಯ ಎರಡು ಸಣ್ಣ ವಿಮಾನಗಳು ಪರಸ್ಪರ ಡಿಕ್ಕಿ ಹೊಡೆದು ಪೈಲಟ್‌ಗಳಿಬ್ಬರೂ ಸಾವನ್ನಪ್ಪಿದ ಪ್ರಕರಣ ವರದಿಯಾಗಿದೆ.

ಇದನ್ನೂ ಓದಿ:  BJP ಯಲ್ಲಿ ಹೊಸ ಅಧ್ಯಕ್ಷರಿಗಾಗಿ ಚುನಾವಣೆ ಇಲ್ಲ, ಜೆ.ಪಿ ನಡ್ದಾ ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಕೆ!

ಈ ಘಟನೆ ಜರ್ಮನಿಯ ಲೆಮ್ನಿಜ್ ಏರ್‌ಫೀಲ್ಡ್‌ನಲ್ಲಿ ನಡೆದಿದೆ. 'ದಿ ಸನ್' ವರದಿಯ ಪ್ರಕಾರ, ಎರಡೂ ವಿಮಾನಗಳ ಪೈಲಟ್‌ಗಳು ನಿರ್ದಿಷ್ಟ ಮಾದರಿಯಲ್ಲಿ ತರಬೇತಿ ಪಡೆಯುತ್ತಿದ್ದಾಗ ಘಟನೆ ಸಂಭವಿಸಿದೆ. ಇಬ್ಬರೂ ಪೈಲಟ್‌ಗಳು ಮಿರರ್ ಫ್ಲೈಟ್‌ಗಾಗಿ ತರಬೇತಿ ಪಡೆಯುತ್ತಿದ್ದರು. ಈ ವೇಳೆ ಎರಡೂ ವಿಮಾನಗಳು ಪರಸ್ಪರ ಸಮಾನಾಂತರವಾಗಿ ಹಾರಾಡುತ್ತಿದ್ದವು. ಅಷ್ಟರಲ್ಲಿ ಇದ್ದಕ್ಕಿದ್ದಂತೆ ವಿಮಾನಗಳು ಡಿಕ್ಕಿ ಹೊಡೆದಿದ್ದು, ಬಳಿಕ ನೆಲಕ್ಕೆ ಅಪ್ಪಳಿಸಿದೆ.

 

 

ಎರಡು ವಿಮಾನಗಳು ಡಿಕ್ಕಿ ಹೊಡೆದ ತಕ್ಷಣ ಬೆಂಕಿ ಕಾಣಿಸಿಕೊಂಡು ನೆಲಕ್ಕೆ ಬಿದ್ದಿವೆ ಎಂದು ಹೇಳಲಾಗುತ್ತಿದೆ. ಬಿದ್ದ ತಕ್ಷಣ ಅಲ್ಲೋಲ ಕಲ್ಲೋಲವಾಗಿದ್ದು, ತಕ್ಷಣ ಪರಿಹಾರ ಹಾಗೂ ರಕ್ಷಣಾ ಕಾರ್ಯ ಆರಂಭಿಸಲಾಗಿತ್ತು. ಆದರೆ ಈ ಮಧ್ಯೆ ಅಗ್ನಿಶಾಮಕ ದಳದ ವಕ್ತಾರರು ಇಬ್ಬರು ಪೈಲಟ್‌ಗಳ ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.

ವರದಿಯ ಪ್ರಕಾರ, ಇಬ್ಬರೂ ಪೈಲಟ್‌ಗಳು ತಮ್ಮ ವಿಮಾನದಲ್ಲಿ ಏರೋಬ್ಯಾಟಿಕ್ಸ್‌ನಲ್ಲಿ ಒಂದೇ ರೀತಿಯ ತರಬೇತಿಯನ್ನು ನೀಡುತ್ತಿದ್ದರು. ಈ ಘಟನೆ ಶನಿವಾರ ಸಂಜೆ ನಡೆದಿದೆ. ಈ ಕುರಿತ ವಿಡಿಯೋ ಕೂಡ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

ಇದನ್ನೂ ಓದಿ: ಮಹಿಳೆಯರು ತವರಿಗೆ ಹೋಗೋ ಮುನ್ನ ಈ ಸಣ್ಣ ಕಾರ್ಯ ಮಾಡಿದ್ರೆ ಹಣದ ಹೊಳೆ ಹರಿದುಬರುತ್ತೆ!

ಎರಡೂ ವಿಮಾನಗಳು ಆಕಾಶದಲ್ಲಿ ಚಮತ್ಕಾರಿಕ ಪ್ರದರ್ಶಿಸುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ಆದರೆ ಒಂದಕ್ಕೊಂದು ಡಿಕ್ಕಿ ಹೊಡೆದ ಪರಿಣಾಮ ನೆಲಕ್ಕುರುಳುತ್ತಿರುವ ಭೀಕರ ದೃಶ್ಯವೂ ಇಲ್ಲಿ ಕಾಣಿಸುತ್ತಿದೆ.

 

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News