ಮಹಿಳೆಯರ ಈ ಅಧಿಕಾರವನ್ನು ಕೂಡಾ ಕಿತ್ತುಕೊಂಡ ತಾಲೀಬಾನ್

ಅಫ್ಘಾನಿಸ್ತಾನದ ಅರಿಯಾನಾ ಅಫ್ಘಾನ್ ಏರ್‌ಲೈನ್ಸ್ ಮತ್ತು ಕಾಮಾ ಏರ್‌ನ ಇಬ್ಬರು ಅಧಿಕಾರಿಗಳು, ಈ ಆದೇಶದ ಬಗ್ಗೆ ತಿಳಿಸಿದ್ದಾರೆ.  ಪುರುಷ ಸಂಬಂಧಿ ಇಲ್ಲದೆ ಮಹಿಳೆಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡದಂತೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ. 

Written by - Ranjitha R K | Last Updated : Mar 28, 2022, 05:38 PM IST
  • ತಾಲಿಬಾನಿಗಳ ಮತ್ತೊಂದು ತುಘಲಕ್ ಆದೇಶ
  • ಮಹಿಳೆಯರು ಒಂಟಿಯಾಗಿ ಪ್ರಯಾಣಿಸಲು ಸಾಧ್ಯವಾಗುವುದಿಲ್ಲ
  • ಮಹಿಳೆಯರ ಈ ಅಧಿಕಾರವನ್ನು ಕೂಡಾ ಕಸಿದುಕೊಂಡ ತಾಲಿಬಾನಿಗಳು
ಮಹಿಳೆಯರ ಈ ಅಧಿಕಾರವನ್ನು ಕೂಡಾ ಕಿತ್ತುಕೊಂಡ ತಾಲೀಬಾನ್  title=
ತಾಲಿಬಾನಿಗಳ ಮತ್ತೊಂದು ತುಘಲಕ್ ಆದೇಶ (file photo)

ಕಾಬೂಲ್: ಅಫ್ಘಾನಿಸ್ತಾನವನ್ನು ತನ್ನ ವಶಕ್ಕೆ ಪಡೆದುಕೊಂಡ ನಂತರ ಇದೀಗ ತಾಲೀಬಾನ್ (Taliban) ಮಹಿಳೆಯರ ವಿಚಾರದಲ್ಲಿ ಮತ್ತೊಂದು ತುಘಲಕ್ ಆದೇಶವನ್ನು ಜಾರಿಗೆ ತಂದಿದೆ. ಈಗ ವಿಮಾನದಲ್ಲಿ ಪ್ರಯಾಣಿಸುವ ಮಹಿಳೆಯರ ಸ್ವಾತಂತ್ರ್ಯವನ್ನೂ ಕೂಡಾ ತಾಲಿಬಾನ್‌ಗಳು ಕಸಿದುಕೊಂಡಿದ್ದಾರೆ (Women is not allowed to travel) . ಪುರುಷ ಸಂಬಂಧಿ ಜೊತೆಯಲ್ಲಿ ಇದ್ದರೆ ಮಾತ್ರ ಮಹಿಳೆಯರಿಗೆ ವಿಮಾನ ಹತ್ತಲು ಅವಕಾಶ ನೀಡುವಂತೆ ಅಫ್ಘಾನಿಸ್ತಾನದ ವಿಮಾನಯಾನ ಸಂಸ್ಥೆಗಳಿಗೆ  ಆದೇಶಿಸಲಾಗಿದೆ.

ಪುರುಷರು ಇಲ್ಲದೆ ಮಹಿಳೆಯರು ವಿಮಾನದಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ :
ಅಫ್ಘಾನಿಸ್ತಾನದ (Afghanistan) ಅರಿಯಾನಾ ಅಫ್ಘಾನ್ ಏರ್‌ಲೈನ್ಸ್ ಮತ್ತು ಕಾಮಾ ಏರ್‌ನ ಇಬ್ಬರು ಅಧಿಕಾರಿಗಳು, ಈ ಆದೇಶದ ಬಗ್ಗೆ ತಿಳಿಸಿದ್ದಾರೆ.  ಪುರುಷ ಸಂಬಂಧಿ ಇಲ್ಲದೆ ಮಹಿಳೆಯರಿಗೆ ವಿಮಾನದಲ್ಲಿ ಪ್ರಯಾಣಿಸಲು ಅವಕಾಶ ನೀಡದಂತೆ ಆದೇಶಿಸಲಾಗಿದೆ ಎಂದು ಅವರು ಹೇಳಿದ್ದಾರೆ.  ತಾಲಿಬಾನ್ (Taliban)ಪ್ರತಿನಿಧಿಗಳು, ಎರಡು ವಿಮಾನಯಾನ ಸಂಸ್ಥೆಗಳು ಮತ್ತು ವಿಮಾನ ನಿಲ್ದಾಣದ ಅಧಿಕಾರಿಗಳ ನಡುವೆ ಗುರುವಾರ ನಡೆದ ಸಭೆಯ ನಂತರ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ಇದನ್ನೂ ಓದಿ : Affair With Five Woman: ಐದು ಹೆಂಗಸರ ಜೊತೆಗೆ ಅಫೈರ್, ಗೊತ್ತಾದ್ಮೇಲೆ ಆಗಿದ್ದೇನು ತಿಳಿಯಲು ಸುದ್ದಿ ಓದಿ

ಮಹಿಳಾ ಸ್ವಾತಂತ್ರ್ಯದ ಮೇಲೆ ಚಾಟಿ  : 
ತಾಲಿಬಾನ್ ಅಧಿಕಾರಕ್ಕೆ ಮರಳಿದ ನಂತರ ಮಹಿಳಾ ಸ್ವಾತಂತ್ರ್ಯದ ಮೇಲೆ ಅನೇಕ ನಿರ್ಬಂಧಗಳನ್ನು ಹೇರಲಾಗಿದೆ. ಈ ನಿರ್ಧಾರದ ಬಗ್ಗೆ ಅಫ್ಘಾನಿಸ್ತಾನದ ಸಂಬಂಧಿತ ಸಚಿವಾಲಯವನ್ನು ಕೇಳಿದಾಗ, ಮಹಿಳೆಯರ ವಿಮಾನಯಾನದ ಬಗ್ಗೆ ಯಾವುದೇ   ನಿರ್ದೇಶನವನ್ನು ನೀಡಲಾಗಿಲ್ಲ ಎಂದು ತಿಳಿಸಿದ್ದಾರೆ. ಮತ್ತೊಂದೆಡೆ,  ತಾಲಿಬಾನ್‌ನೊಂದಿಗಿನ ಸಭೆಯ ನಂತರ, ಅರಿಯಾನಾ ಅಫ್ಘಾನ್  ಹಿರಿಯ ಅಧಿಕಾರಿಯೊಬ್ಬರು (Ariana Ahghan Officers) ಈ ಆದೇಶದ ಬಗ್ಗೆ ಏರ್‌ಲೈನ್‌ನ (Airline)ಉದ್ಯೋಗಿಗಳಿಗೆ ಪತ್ರವನ್ನು ಜಾರಿ ಮಾಡಿದ್ದಾರೆ. 

ಈ ಮೂಲಕ ತಾಲಿಬಾನ್ ಆದೇಶ ದೃಢಪಟ್ಟಿದೆ :
ಪುರುಷ ಸಂಬಂಧಿ ಇಲ್ಲದೆ ಯಾವುದೇ ಮಹಿಳೆಗೆ ಯಾವುದೇ ದೇಶೀಯ ಅಥವಾ ಅಂತರಾಷ್ಟ್ರೀಯ ವಿಮಾನಗಳಲ್ಲಿ (International flight) ಪ್ರಯಾಣಿಸಲು ಅವಕಾಶವಿಲ್ಲ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಎಎಫ್‌ಪಿ ಪ್ರಕಾರ, ಇಬ್ಬರು ಟ್ರಾವೆಲ್ ಏಜೆಂಟ್‌ಗಳು ಒಂಟಿ ಮಹಿಳಾ ಪ್ರಯಾಣಿಕರಿಗೆ ಟಿಕೆಟ್ ನೀಡುವುದನ್ನು ನಿಲ್ಲಿಸಿದ್ದಾರೆ ಎಂದು ಖಚಿತಪಡಿಸಿದ್ದಾರೆ.

ಇದನ್ನೂ ಓದಿ : Financial Crisis: ಈ ದೇಶದಲ್ಲಿ ಲೀಟರ್ ಪೆಟ್ರೋಲ್‌ಗೆ 303 ರೂ.!

ಮಹಿಳೆಯರಿಗೆ ವಿಮಾನ ಹತ್ತಲು ಅವಕಾಶವಿಲ್ಲ : 
ಪುರುಷ ಸಂಬಂಧಿ ಇಲ್ಲದೆ ಪ್ರಯಾಣಿಸುತ್ತಿದ್ದ ಕೆಲವು ಮಹಿಳೆಯರಿಗೆ ಶುಕ್ರವಾರ ಕಾಬೂಲ್-ಇಸ್ಲಾಮಾಬಾದ್ ಕಾಮಾ ಏರ್ ವಿಮಾನವನ್ನು ಹತ್ತಲು ಅನುಮತಿ ನೀಡಿಲ್ಲ ಎಂದು ವಿಮಾನದಲ್ಲಿದ್ದ ಪ್ರಯಾಣಿಕರೊಬ್ಬರು ತಿಳಿಸಿದ್ದಾರೆ. ಅಮೆರಿಕದ ಪಾಸ್‌ಪೋರ್ಟ್ ಹೊಂದಿರುವ ಅಫ್ಘಾನಿಸ್ತಾನ ಮಹಿಳೆಯೊಬ್ಬರಿಗೆ ಶುಕ್ರವಾರ ದುಬೈಗೆ ತೆರಳಲು ಅನುಮತಿ ನಿರಾಕರಿಸಲಾಗಿದೆ ಎಂದು ಮತ್ತೊಂದು ಮೂಲಗಳು ತಿಳಿಸಿವೆ. ತಾಲಿಬಾನ್‌ನಲ್ಲಿರುವ ಮಹಿಳೆಯರನ್ನು ಸರ್ಕಾರಿ ಉದ್ಯೋಗಗಳು (Government Employees) ಮತ್ತು ಮಾಧ್ಯಮಿಕ ಶಾಲಾ ಶಿಕ್ಷಣದಿಂದ ಈಗಾಗಲೇ ಹೊರಹಾಕಲಾಗಿದೆ.  ಇದರೊಂದಿಗೆ ಕುರಾನ್‌ನ ಕಟ್ಟುನಿಟ್ಟಿನ ವ್ಯಾಖ್ಯಾನದ ಪ್ರಕಾರ ಬಟ್ಟೆಗಳನ್ನು ಧರಿಸಲು ಸಹ ಆದೇಶಿಸಲಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News