ನವದೆಹಲಿ: ಒಂದು ವೇಳೆ ನಿಮಗೂ ಕೂಡ ವರ್ಲ್ಡ್ ಬ್ಯಾಂಕ್ (World Bank)ನ ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್ ಗಾಗಿ ಕರೆ ಬಂದರೆ ಕೂಡಲೇ ಎಚ್ಚೆತ್ತುಕೊಳ್ಳಿ. ವಂಚನೆ ಎಸಗುವವರು ರಿಸರ್ವ್ ಬ್ಯಾಂಕ್ ಬಳಿಕ ಇದೀಗ ವರ್ಲ್ಡ್ ಬ್ಯಾಂಕ್ ಹೆಸರಿನಲ್ಲಿ ವಂಚನೆ ಆರಂಭಿಸಿದ್ದಾರೆ. ಈ ಕಾರ್ಡ್ ಗಳ ಮೇಲೆ ವಿಶ್ವ ಬ್ಯಾಂಕ್ ನ ಲೋಗೋ ಹಾಗೂ ಹೆಸರನ್ನು ಸಹ ಬಳಸಲಾಗುತ್ತಿದ್ದು, ಜನರನ್ನು ವಂಚಿಸಲು ಈ ಕಾರ್ಡ್ ಗಳು ಅಸಲಿ ಎಂಬ ಮನವರಿಕೆ ಮಾಡಿಕೊಡಲಾಗುತ್ತಿದೆ. ಇಂತಹ ವಂಚನೆಗಳ ಕುರಿತು ಖುದ್ದು ವಿಶ್ವ ಬ್ಯಾಂಕ್ ಎಚ್ಚರಿಕೆಯ ಸಂದೇಶವನ್ನು ರವಾನಿಸಿದೆ.
ಇದನ್ನು ಓದಿ-Corona ಮಹಾಮಾರಿ ವಿಶ್ವಾದ್ಯಂತ ಎಷ್ಟು ಜನರನ್ನು ಬಡತನಕ್ಕೆ ತಳ್ಳಲಿದೆ, World Bank ಹೇಳಿದ್ದೇನು?
ವಿಶ್ವ ಬ್ಯಾಂಕ್ ನೀಡಿದೆ ಈ ಎಚ್ಚರಿಕೆ
ಭಾರತದಲ್ಲಿ ತನ್ನ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ಗಳು ಮತ್ತು ಡೆಬಿಟ್ ಕಾರ್ಡ್ಗಳನ್ನು ಮಾರಾಟ ಮಾಡಲಾಗುತ್ತಿದೆ ಎಂದು ವಿಶ್ವ ಬ್ಯಾಂಕ್ ತಿಳಿದಾಗ, ಜನರಿಗೆ ಎಚ್ಚರಿಕೆ ನೀಡಲು ಅಡ್ವೈಸರಿ ಜಾರಿಗೊಳಿಸಿದೆ. ಇದರಲ್ಲಿ "ವಿಶ್ವ ಬ್ಯಾಂಕ್ ಯಾವುದೇ ರೀತಿಯ ಡೆಬಿಟ್ ಹಾಗೂ ಕ್ರೆಡಿಟ್ ಕಾರ್ಡ್ ಗಳನ್ನು ಜಾರಿಗೊಳಿಸುವುದಿಲ್ಲ" ಎಂಬುದನ್ನು ಬ್ಯಾಂಕ್ ಸ್ಪಷ್ಟಪಡಿಸಿದೆ.
ಇದನ್ನು ಓದಿ- ಭಾರತಕ್ಕೆ ಮತ್ತೆ ಸಿಕ್ಕ World Bank ಸಾಥ್, ನೀಡಿದ ಸಹಾಯ ಎಷ್ಟು ಗೊತ್ತೇ
ಈ ನಕಲಿ ಕಾರ್ಡ್ಗಳನ್ನು ನೀಡುವ ಯಾವುದೇ ವ್ಯಕ್ತಿ ಅಥವಾ ಗುಂಪಿನೊಂದಿಗೆ ವಿಶ್ವಬ್ಯಾಂಕ್ಗೆ ಯಾವುದೇ ಸಂಬಂಧ ಹೊಂದಿಲ್ಲ. ಹೀಗಾಗಿ , ಜನರು ಇಂತಹ ವಂಚನೆಯ ಬಗ್ಗೆ ಎಚ್ಚರದಿಂದಿರಬೇಕು ಎಂದು ಎಚ್ಚರಿಸಲಾಗಿದೆ. ಇದಕ್ಕಾಗಿ ಜನಸಾಮಾನ್ಯರು ಬೇಕಾದರೆ ನಮ್ಮ ನೀತಿ ಹಾಗೂ ಕಾರ್ಯಕ್ರಮಗಳ ಕುರಿತು ಮಾಹಿತಿ ಪಡೆಯಲು ನಮ್ಮ ಅಧಿಕೃತ ವೆಬ್ ಸೈಟ್ ಆಗಿರುವ www.Worldbank.Org ಗೆ ಭೇಟಿ ನೀಡಿ ಮಾಹಿತಿ ಪಡೆದುಕೊಳ್ಳಬಹುದು ಎಂದು ಜಾಗತಿಕ ಬ್ಯಾಂಕ್ ಹೇಳಿದೆ.
ದೇಶದಲ್ಲಿ ಇಂಟರ್ನೆಟ್ ಪೇನೆಟ್ರೆಶನ್ ಹೆಚ್ಚಾದಂತೆ, ಆನ್ಲೈನ್ ವಂಚನೆಗಳೂ ಎರಡು ಪಟ್ಟು ವೇಗವಾಗಿ ಹೆಚ್ಚಾಗಿವೆ. ಇಲ್ಲಿ ನಾವು ಕೆಲವು ಸುಲಭ ಮಾರ್ಗಗಳನ್ನು ತೋರಿಸುತ್ತಿದ್ದೇವೆ, ಜೀವನದಲ್ಲಿ ಈ ವಿಧಾನಗಳನ್ನು ನೀವು ಅನುಸರಿಸಿದರೆ ಯಾವುದೇ ರೀತಿಯ ಬ್ಯಾಂಕಿಂಗ್ ವಂಚನೆಯಿಂದ ನೀವು ಪಾರಾಗಬಹುದು.
ಇದನ್ನು ಓದಿ- ಭಾರತೀಯ ಆರ್ಥಿಕತೆಗೆ ದೊಡ್ಡ ಪೆಟ್ಟು, 2020-21 ರಲ್ಲಿ ಆರ್ಥಿಕ ವೃದ್ಧಿ ದರ ಕೇವಲ ಶೇ.2.8 ಎಂದ ವಿಶ್ವಬ್ಯಾಂಕ್
ಬ್ಯಾಂಕಿಂಗ್ ಫ್ರಾಡ್ ನಿಂದ ಬಚಾವಾಗಲು ಏನು ಮಾಡಬೇಕು?
1. ನಿಮ್ಮ ಬ್ಯಾಂಕ್ ಖಾತೆಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಉದಾ- ಬ್ಯಾಂಕ್ ಖಾತೆ, ಎಟಿಎಂ ಪಿನ್, ಸಿವಿವಿ, ಇಂಟರ್ನೆಟ್ ಬ್ಯಾಂಕಿಂಗ್ ಪಾಸ್ವರ್ಡ್ ಮುಂತಾದ ಯಾರೊಂದಿಗೂ ಹಂಚಿಕೊಳ್ಳಬೇಡಿ.
2. ಪ್ರತಿ ಎರಡು ತಿಂಗಳಿಗೊಮ್ಮೆ ನಿಮ್ಮ ಎಟಿಎಂ ಪಿನ್ ಬದಲಾಯಿಸುತ್ತಲೇ ಇರಿ. ನಿಮ್ಮ ಪಿನ್ ಅನ್ನು ಯಾರಾದರೂ ಕಂಡುಕೊಂಡಿದ್ದಾರೆ ಎಂದು ನೀವು ಅನುಮಾನಿಸಿದರೆ, ಅದನ್ನು ತಕ್ಷಣ ಬದಲಾಯಿಸಿ.
3. ಇಂಟರ್ನೆಟ್ ಬ್ಯಾಂಕಿಂಗ್ ಬಳಸುವಾಗ, ಯಾವಾಗಲೂ ಬ್ಯಾಂಕಿನ ನೈಜ ಸೈಟ್ಗೆ ಹೋಗಿ, URL ಅನ್ನು ಪರಿಶೀಲಿಸಿ ನಂತರ ಬ್ಯಾಂಕಿಂಗ್ ಪ್ರಾರಂಭಿಸಿ.
4. ನಿಮಗೆ ಕರೆ ಬಂದರೆ ಮತ್ತು ಅವರು ನಿಮ್ಮ ಕಾರ್ಡ್ ವಿವರಗಳನ್ನು ಕೇಳಲು ಬ್ಯಾಂಕನ್ನು ಕೇಳುತ್ತಿದ್ದಾರೆಂದು ಹೇಳಿದರೆ, ತಕ್ಷಣ ಜಾಗರೂಕರಾಗಿರಿ.
5. ನಿಮ್ಮ ಬ್ಯಾಂಕ್ ಮಾಹಿತಿಯನ್ನು ಕುಟುಂಬ ಸದಸ್ಯರಾಗಿದ್ದರೂ ಕೂಡ ಅವರೊಂದಿಗೆ ಫೋನ್, ಎಸ್ಎಂಎಸ್, ಇ-ಮೇಲ್ ಅಥವಾ ಬೇರೆ ಯಾವುದೇ ವಿಧಾನಗಳ ಮೂಲಕ ಹಂಚಿಕೊಳ್ಳಬೇಡಿ.
6. ನಿಮ್ಮ ಖಾತೆಯಿಂದ ಯಾವುದೇ ಅನುಮಾನಾಸ್ಪದ ವಹಿವಾಟು ಇದ್ದರೆ, ತಕ್ಷಣ ಬ್ಯಾಂಕಿಗೆ ತಿಳಿಸಿ ಮತ್ತು ನಿಮ್ಮ ಡೆಬಿಟ್ ಕಾರ್ಡ್ ಹಾಗೂ ಬ್ಯಾಂಕ್ ಖಾತೆಯನ್ನು ತಕ್ಷಣ ನಿರ್ಬಂಧಿಸಿ.
7. ಡಿಜಿಟಲ್ ಬ್ಯಾಂಕಿಂಗ್ಗಾಗಿ ಯಾವಾಗಲೂ ನಿಮ್ಮ ವೈಯಕ್ತಿಕ ಕಂಪ್ಯೂಟರ್ ಅನ್ನು ಬಳಸಿ, ಸಾರ್ವಜನಿಕ ಅಥವಾ ಇನ್ನೊಬ್ಬ ವ್ಯಕ್ತಿಯ ಕಂಪ್ಯೂಟರ್ ಅನ್ನು ಬಳಸುವುದನ್ನು ತಪ್ಪಿಸಿ.
8. ಯಾವುದೇ ಅನುಮಾನಾಸ್ಪದ ಇ-ಮೇಲ್ಗಳ ಮೇಲೆ ಕ್ಲಿಕ್ ಮಾಡಬೇಡಿ, ಇದರಲ್ಲಿ ಕೋಟಿ ಲಾಟರಿ ಅಥವಾ ಯಾವುದೇ ರೀತಿಯ ದುರಾಸೆಗೆ ಒಳಗಾಗದಿರಿ.
9. ನಿಮ್ಮ ಕಾರ್ಡ್ ಬ್ಲಾಕ್ ಆಗಿದೆ ಎಂದು ನಿಮಗೆ ಕರೆ ಬಂದು, ಅನ್ ಬ್ಲಾಕ್ ಮಾಡಲು ಕಾರ್ಡ್ ವಿವರಗಳನ್ನು ನೀಡಿ ಎಂದರೆ ತಕ್ಷಣ ಎಚ್ಚೆತ್ತುಕೊಳ್ಳಿ ಇದು ವಂಚನೆಯ ಕರೆ.
10. ನೀವು ಬ್ಯಾಂಕ್ ಆ್ಯಪ್ ಮೂಲಕ ಪಾವತಿ ಮಾಡಿದರೆ, ಅದು ಬ್ಯಾಂಕಿನ ನಿಜವಾದ ಅಪ್ಲಿಕೇಶನ್ ಆಗಿರಬೇಕು ಎಂಬುದನ್ನು ನೆನಪಿನಲ್ಲಿಡಿ, ಈ ಕುರಿತು ನೀವು ಬ್ಯಾಂಕಿನಿಂದ ಮಾಹಿತಿಯನ್ನು ನೀವೇ ಪಡೆಯಬಹುದು.