World's Unusual Languages: 'Green' ಶಬ್ದಕ್ಕೆ ಈ ಭಾಷೆಯಲ್ಲಿ ಉಲ್ಲೇಖವೇ ಇಲ್ಲ, ಕಾರಣ ಕೇಳಿ ನೀವೂ ನಿಬ್ಬೇರಗಾಗುವಿರಿ

Unusual Languages - ನಾವು ದಿನನಿತ್ಯ ಬಳಕೆ ಮಾಡುವ ಶಬ್ದ ಯಾವುದೇ ಒಂದು ಭಾಷೆಯಲ್ಲಿ ಇಲ್ಲವೇ ಇಲ್ಲ ಎಂದರೆ ಏನಾಗುತ್ತದೆ? ಅಂದರೆ, ಕನ್ನಡದಲ್ಲಿ 'ಹಸಿರು' ಎಂದು ಬಳಸುವ ಶಬ್ದಕ್ಕೆ ಹಿಂದಿ ಭಾಷೆಯಲ್ಲಿ 'ಹರಾ' ಹಾಗೂ ಆಂಗ್ಲ ಭಾಷೆಯಲ್ಲಿ 'ಗ್ರೀನ್; ಎಂದು ಬಳಸಲಾಗಿದೆ. ಆದರೆ, ಕೆಲವು ಭಾಷೆಗಳಿದ್ದು, ಆ ಭಾಷೆಗಳಲ್ಲಿ 'ಹಸಿರು' ಬಣ್ಣದ ಉಲ್ಲೇಖವೇ ಇಲ್ಲ.

Written by - Nitin Tabib | Last Updated : Oct 19, 2021, 08:17 PM IST
  • ವಿಶ್ವದ ವಿಚಿತ್ರ ಆದರು ಅಸ್ತಿತ್ವದಲ್ಲಿರುವ ಕೆಲ ಭಾಷೆಗಳು
  • ಕೆಲ ಅತ್ಯಾವಶ್ಯಕ ಪದಗಳ ಉಲ್ಲೇಖವೇ ಇಲ್ಲ
  • ಇವುಗಳಲ್ಲಿ ಹಲವು ಭಾಷೆಗಳು ಅಳಿವಿನ ಅಂಚಿನಲ್ಲಿವೆ.
World's Unusual Languages: 'Green' ಶಬ್ದಕ್ಕೆ ಈ ಭಾಷೆಯಲ್ಲಿ ಉಲ್ಲೇಖವೇ ಇಲ್ಲ, ಕಾರಣ ಕೇಳಿ ನೀವೂ ನಿಬ್ಬೇರಗಾಗುವಿರಿ title=
World's Unusual Languages (File Photo)

ನವದೆಹಲಿ:  World's Unusual Languages - ಝೂರಾನ್ ನಿಕೋಲಿಕ್ (Zoran Nikolic) ಅವರ ಹೊಸ ಪುಸ್ತಕ 'ದಿ ಅಟ್ಲಾಸ್ ಆಫ್ ಅನ್ ಯುಸ್ವಲ್ ಲ್ಯಾಂಗ್ವೇಜಿಸ್' (The Atlas Of Unusual Languages) ನಲ್ಲಿ ಕೆಲವು ಕುತೂಹಲಕಾರಿ ಸಂಗತಿಗಳ ಉಲ್ಲೇಖ ಮಾಡಲಾಗಿದೆ. ಈ ಪುಸ್ತಕದಲ್ಲಿ, ಮೆಕ್ಸಿಕೋದಿಂದ ನ್ಯೂಜಿಲ್ಯಾಂಡ್ ವರೆಗಿನ ಕೆಲವು ಸ್ಥಳಗಳ ಬಗ್ಗೆ ಉಲ್ಲೇಖವಿದೆ, ಅಲ್ಲಿ ದೈನಂದಿನ ಸಂಭಾಷಣೆಯಲ್ಲಿ ನಮಗೆ ಅಗತ್ಯವಿರುವ ಕೆಲವು ಪದಗಳು ಇಲ್ಲವೇ ಇಲ್ಲ. ಹಾಗೆಯೇ ಕೆಲವು ಭಾಷೆಗಳು ಕೇವಲ ಐದು ಅಥವಾ ಆರು ಜನರು ಮಾತ್ರ ಮಾತನಾಡುತ್ತಾರೆ. 

ಕುಸುಂಡಾ, ನೇಪಾಳ (Kusunda)
ಮಧ್ಯ ನೇಪಾಲದ ಹಚ್ಚ ಹಸರಿನಿಂದ ಕೂಡಿದ ಮಳೆಕಾಡಿನ ಪ್ರಾಂತ್ಯದಲ್ಲಿ ಕುಸುಂಡಾ ಬುಡಕಟ್ಟು ಜನಾಂಗದ ಜನರು ವಾಸಿಸುತ್ತಾರೆ. ಈ ಬುಡಕಟ್ಟಿನ ಭಾಷೆಯಲ್ಲಿ 'ಹಸಿರು' ಎಂಬ ಪದವಿಲ್ಲ.  ಕುಸುಂಡಾ ಬುಡಕಟ್ಟು ಪ್ರದೇಶದ ಸುತ್ತಲಿನ  ಪ್ರದೇಶ ಹಸಿರಾಗಿರುವುದರಿಂದ ಇದು ಆಗಿರಬಹುದು ಎಂದು ಜೋರಾನ್ ಪುಸ್ತಕದಲ್ಲಿ ಹೇಳುತ್ತಾರೆ. ಆದ್ದರಿಂದ ಈ ಬಣ್ಣವನ್ನು ಸ್ಪಷ್ಟವಾಗಿ ವಿವರಿಸುವ ಅಗತ್ಯವಿಲ್ಲ ಎಂದು ಅವರು ಕಂಡುಕೊಂಡಿದ್ದಾರೆ. ಕುಸುಂಡಾ ಜನರ ಭಾಷೆ ಅಳಿವಿನ ಅಂಚಿನಲ್ಲಿದ್ದರೂ, ಈಗ ಕೆಲವೇ ಜನರು ಅದನ್ನು ಮಾತನಾಡುತ್ತಾರೆ.

ಪುಕಾಪುಕಾ, ಕುಕ್ ಐಲ್ಯಾಂಡ್ಸ್  (Pukapuka)
ಜೋರಾನ್ ಪುಸ್ತಕದ ಪ್ರಕಾರ, ಪುಕಾಪುಕಾದ ದೂರದ ಪೆಸಿಫಿಕ್ ಅಟಾಲ್‌ನಲ್ಲಿ ವಾಸಿಸುವ 500 ಅಥವಾ ಅದಕ್ಕಿಂತ ಸ್ವಲ್ಪ ಹೆಚ್ಚು ಜನರು ತಮ್ಮದೇ ಭಾಷೆಯನ್ನು ಮಾತನಾಡುತ್ತಾರೆ. 'ಪುಕಾಪುಕನ್' ಭಾಷೆ ಎಂದು ಕರೆಯಲ್ಪಡುವ ಈ ಭಾಷೆಯನ್ನು 1980 ರಿಂದ ಇಲ್ಲಿಯ ಶಾಲೆಯಲ್ಲಿ ಕಲಿಸಲಾಗುತ್ತಿದೆ. ಈ ಭಾಷೆಯಲ್ಲಿ ಬಿಳಿ, ಕಪ್ಪು, ಕೆಂಪು ಮತ್ತು ಹಳದಿ, ನೀಲಿ ಮತ್ತು ಹಸಿರು ಮಾತ್ರ ಪದಗಳಿವೆ. ಇದನ್ನು ಹೊರತುಪಡಿಸಿ, ಇಲ್ಲಿ ಯಾವುದೇ ಬಣ್ಣಕ್ಕೆ ಪದವಿಲ್ಲ. ಈ ಬಣ್ಣಗಳ ಹೆಸರುಗಳು ವಾಸ್ತವವಾಗಿ ಟ್ಯಾರೋ (ಅಥವಾ ಟಾಲೊ) ಸಸ್ಯದ ಬೇರುಗಳ ಪದರಗಳಿಂದ ಬರುತ್ತವೆ. ಈ ಎಲ್ಲಾ ಬಣ್ಣಗಳು ಇಲ್ಲಿ ಆಹಾರದಲ್ಲಿ ಇರುವುದರಿಂದ ಮಾತ್ರ ಈ ಬಣ್ಣಗಳ ಹೆಸರುಗಳು ಕೂಡ ಇವೆ. ಈ ದ್ವೀಪದಲ್ಲಿ ಹೆಚ್ಚಿನ ಜನರು ಇಂಗ್ಲಿಷ್ ಮಾತ್ರ ಮಾತನಾಡುತ್ತಾರೆ.

ಇದನ್ನೂ ಓದಿ-Viral Video: ರಿಯಾಲಿಟಿ ಶೋ ವೇದಿಕೆಯಲ್ಲಿಯೇ ಸ್ಪರ್ಧಿಯ ಕೆನ್ನೆ ಕಚ್ಚಿದ ಕನ್ನಡ ನಟಿ..!

ಎಲ್ಫಾಡಾಲಿಯನ್ - ಸ್ವೀಡನ್ 
ಜೋರಾನ್ ಪ್ರಕಾರ, ಸ್ವೀಡನ್‌ನ ಅತ್ಯಂತ ಅಸಾಮಾನ್ಯ (Unusual Fact) ಉಪಭಾಷೆಗಳಲ್ಲಿ ಎಲ್ಫ್ಡಾಲಿಯನ್ ಭಾಷೆ ಕೂಡ ಒಂದು. ಇದು ಎಲ್ಲಾ ಸ್ಕ್ಯಾಂಡಿನೇವಿಯನ್ ಭಾಷೆಗಳಲ್ಲಿ ಅತ್ಯಂತ ಹಳೆಯದು, 8 ನೇ ಶತಮಾನದಲ್ಲಿ ಹಳೆಯ ನಾರ್ಸ್‌ನಿಂದ ವಿಭಜನೆಯಾಯಿತು. ಈ ಭಾಷೆಯನ್ನು ಮಧ್ಯ ಸ್ವೀಡನ್‌ನ ಅಲ್ವಡಲೆನ್‌ನ ದೂರದ ಪಟ್ಟಣದ 7,000 ನಿವಾಸಿಗಳು ಮಾತ್ರ ಮಾತನಾಡುತ್ತಾರೆ.

ಇದನ್ನೂ ಓದಿ-Viral Video: ಇಡೀ ಜಿಂಕೆಯನ್ನೇ ನುಂಗುತ್ತಿರುವ ದೈತ್ಯ ಹೆಬ್ಬಾವು, ಇಲ್ಲಿದೆ ಹೃದಯ ಮಿಡಿಯುವ ವಿಡಿಯೋ

ನೈಚೆಸ್ - USA
 'ನ್ಯಾಚೆಸ್' ಅಮೆರಿಕಾದ ಭಾಷೆಗಳಲ್ಲಿ ಒಂದು. ಈ ಭಾಷೆ ಅಳಿವಿನ ಅಂಚಿನಲ್ಲಿದೆ. ಕೊನೆಯದಾಗಿ ನಿರರ್ಗಳವಾಗಿ ಮಾತನಾಡುವ ನ್ಯಾನ್ಸಿ ರಾವೆನ್ ನಿಧನರಾಗಿದ್ದಾರೆ. ಈ ಭಾಷೆಗೆ ಮಿಸ್ಸಿಸ್ಸಿಪ್ಪಿ ರಾಜ್ಯದ ಮೊದಲ ರಾಜಧಾನಿಯಾಗಿದ್ದ ನ್ಯಾಚೆಜ್ ನಗರದ ಹೆಸರನ್ನು ಇಡಲಾಗಿದೆ. ಈಗ ಕೇವಲ 5-6 ಜನರು ಮಾತ್ರ ಈ ಭಾಷೆಯನ್ನು ಮಾತನಾಡುತ್ತಾರೆ.

ಇದನ್ನೂ ಓದಿ-Viral Video: ಬೆಕ್ಕಿನೊಂದಿಗೆ ಈ ಪುಟ್ಟ ಬಾಲಕ ಏನು ಮಾಡಿದ್ದಾನೆ ನೋಡಿ...

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News