Post Officeನ ಈ ಯೋಜನೆಯಲ್ಲಿ ಪ್ರತಿ ತಿಂಗಳು ಆದಾಯ ಗಳಿಸಿ

                           

ಅಂಚೆ ಕಚೇರಿಯ ಮಾಸಿಕ ಆದಾಯ ಯೋಜನೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇಲ್ಲಿ ಇಬ್ಬರು ಅಥವಾ ಮೂರು ಜನರು ಒಟ್ಟಿಗೆ ಖಾತೆಯನ್ನು ತೆರೆಯಬಹುದು.

1 /5

ನವದೆಹಲಿ : Post Office Saving Schemes: ಕಳೆದೊಂದು ವರ್ಷದಿಂದ ಇಡೀ ಜಗತ್ತನ್ನೇ ಬೆಂಬಿಡದೆ ಕಾಡುತ್ತಿರುವ ಕರೋನಾವೈರಸ್ ಎಲ್ಲರಿಗೂ ಒಂದು ಉತ್ತಮ ಪಾಠವನ್ನು ಕಲಿಸಿದೆ. ಕರೋನಾ ದಾಳಿಯಿಂದ ಪ್ರತಿಯೊಬ್ಬರ ಜೀವನದಲ್ಲೂ ಒಂದಲ್ಲಾ ಒಂದು ರೀತಿಯ ಆರ್ಥಿಕ ಸಂಕಷ್ಟ ಉಂಟಾಗಿದೆ. ಇದೀಗ ಹೊಸ ವರ್ಷದಲ್ಲಿ ಜನರು ತಮ್ಮ ಆರ್ಥಿಕ ಸ್ಥಿತಿಯನ್ನು ಮತ್ತೆ ತಹಬದಿಗೆ ತರಲು ಯತ್ನಿಸುತ್ತಿದ್ದಾರೆ. ನೀವು ಈ ಬಗ್ಗೆ ಯೋಚಿಸುತ್ತಿದ್ದರೆ ಅಂಚೆ ಕಚೇರಿಯಲ್ಲಿ ಉತ್ತಮ ಹೂಡಿಕೆ ಯೋಜನೆಗಳಿವೆ. ಈ ಯೋಜನೆಗಳಲ್ಲಿ ಹೂಡಿಕೆ ಮಾಡುವ ಮೂಲಕ ನೀವು ಪ್ರತಿ ತಿಂಗಳು ಸ್ಥಿರ ಆದಾಯವನ್ನು ಹೊಂದಿರುತ್ತೀರಿ ಮತ್ತು ಅದೇ ಸಮಯದಲ್ಲಿ ನಿಮ್ಮ ಹಣವು ಸಂಪೂರ್ಣವಾಗಿ ಸುರಕ್ಷಿತವಾಗಿರುತ್ತದೆ. ಪೋಸ್ಟ್ ಆಫೀಸ್ ಯೋಜನೆಗಳ (Post Office Schemes) ಮಾಸಿಕ ಉಳಿತಾಯ ಯೋಜನೆಯ ಬಗ್ಗೆ ನಾವು ಇಲ್ಲಿ ನಿಮಗೆ ಹೇಳುತ್ತಿದ್ದೇವೆ. ಅಂಚೆ ಕಚೇರಿಯಲ್ಲಿ ಹಣವನ್ನು ಹೂಡಿಕೆ ಮಾಡಬಹುದಾದ ಅನೇಕ ಯೋಜನೆಗಳು ಇದ್ದರೂ, ಮಾಸಿಕ ಆದಾಯ ಯೋಜನೆಯಡಿ ನೀವು ಪ್ರತಿ ತಿಂಗಳು ಗಳಿಸಬಹುದು.

2 /5

ಪೋಸ್ಟ್ ಆಫೀಸ್ (Post office) ಮಾಸಿಕ ಆದಾಯ ಯೋಜನೆಯಲ್ಲಿ ತೆರೆಯಲಾದ ಖಾತೆಯನ್ನು ನೀವು ಏಕಾಂಗಿಯಾಗಿ ಅಥವಾ ನಿಮ್ಮ ಜೀವನ ಸಂಗಾತಿಯೊಂದಿಗೆ ಎರಡೂ ರೀತಿಯಲ್ಲಿ ತೆರೆಯಬಹುದು. ಈ ಯೋಜನೆಯಲ್ಲಿ ಇಬ್ಬರು ಅಥವಾ ಮೂರು ಜನರು ಜಂಟಿಯಾಗಿ ಖಾತೆಯನ್ನು ತೆರೆಯಬಹುದು. ನೀವು ವೈಯಕ್ತಿಕ ಖಾತೆಯಲ್ಲಿ ಕನಿಷ್ಠ 1,000 ರೂ. ಮತ್ತು ಗರಿಷ್ಠ 4.5 ಲಕ್ಷ ರೂ.ಗಳನ್ನು POMIS ಅಡಿಯಲ್ಲಿ ಹೂಡಿಕೆ ಮಾಡಬಹುದು. ಜಂಟಿ ಖಾತೆಯಲ್ಲಿ ಗರಿಷ್ಠ ಹಣದ ಮಿತಿ 9 ಲಕ್ಷ ರೂಪಾಯಿಗಳವರೆಗೆ ಇರುತ್ತದೆ. ಇದನ್ನೂ ಓದಿ - Post Office ಉಳಿತಾಯ ಖಾತೆಯ ನಿಯಮದಲ್ಲಿ ಬದಲಾವಣೆ

3 /5

ಹತ್ತಿರದ ಅಂಚೆ ಕಚೇರಿಗೆ ಹೋಗಿ ನಿಮ್ಮ ಉಳಿತಾಯ ಖಾತೆಯನ್ನು (Savings Account) ತೆರೆಯಬಹುದು. ಮಾಸಿಕ ಆದಾಯ ಯೋಜನೆಗಾಗಿ ಪ್ರತ್ಯೇಕ ಫಾರ್ಮ್ ಅನ್ನು ಭರ್ತಿ ಮಾಡಬೇಕು. POMIS ನ ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮಗೆ ಗುರುತಿನ ಚೀಟಿ, ವಸತಿ ಪುರಾವೆ, 2 ಪಾಸ್‌ಪೋರ್ಟ್ ಗಾತ್ರದ ಛಾಯಾಚಿತ್ರಗಳು ಬೇಕಾಗುತ್ತವೆ. ಫಾರ್ಮ್ ಅನ್ನು ಭರ್ತಿ ಮಾಡುವಾಗ ನಿಮಗೆ ಸಾಕ್ಷಿಯೂ ಬೇಕಾಗುತ್ತದೆ. ಖಾತೆಯನ್ನು ತೆರೆಯುವಾಗ ನೀವು ನಾಮಿನಿಯ ಹೆಸರನ್ನು ಭರ್ತಿ ಮಾಡಬೇಕು ಎಂಬುದನ್ನು ನೆನಪಿನಲ್ಲಿಡಿ. ನಾಮಿನಿಯ ಹೆಸರನ್ನು ಭರ್ತಿ ಮಾಡಿದ ನಂತರ ಅವರ ಸಹಿಯೂ ಅಗತ್ಯವಾಗಿರುತ್ತದೆ.

4 /5

ಅಂಚೆ ಕಚೇರಿಯ (Post Office) ಮಾಸಿಕ ಆದಾಯ ಯೋಜನೆಯು ಅನೇಕ ಪ್ರಯೋಜನಗಳನ್ನು ಹೊಂದಿದೆ. ಇಲ್ಲಿ ಇಬ್ಬರು ಅಥವಾ ಮೂರು ಜನರು ಒಟ್ಟಿಗೆ ಖಾತೆಯನ್ನು ತೆರೆಯಬಹುದು. ಈ ಖಾತೆಯಿಂದ ಬರುವ ಆದಾಯವನ್ನು ಎಲ್ಲಾ ಪಾಲುದಾರರ ನಡುವೆ ವಿಂಗಡಿಸಲಾಗಿದೆ. ನೀವು ಒಂದೇ ಖಾತೆಯನ್ನು ಜಂಟಿ ಖಾತೆಗೆ ಬದಲಾಯಿಸಬಹುದು ಮತ್ತು ನೀವು ಯಾವುದೇ ಸಮಯದಲ್ಲಿ ಜಂಟಿ ಖಾತೆಯನ್ನು ಒಂದೇ ಖಾತೆಗೆ ಬದಲಾಯಿಸಬಹುದು. ಇದನ್ನೂ ಓದಿ - Post Office: ಯಾವ ಯೋಜನೆಯಲ್ಲಿ ಹೂಡಿಕೆ ಮಾಡುವುದರಿಂದ ನಿಮ್ಮ ಹಣ ಡಬಲ್ ಆಗುತ್ತೆ ಗೊತ್ತಾ!

5 /5

ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯಲ್ಲಿ (POMIS) ವಾರ್ಷಿಕವಾಗಿ ಶೇಕಡಾ 7.5 ರಷ್ಟು ಬಡ್ಡಿಯನ್ನು ನೀಡಲಾಗುತ್ತದೆ. ಇದು ಸಾಲ ಸಾಧನಗಳಿಗಿಂತ ಉತ್ತಮ ಆದಾಯವನ್ನು ನೀಡುತ್ತದೆ. ಯೋಜನೆಯ ಅವಧಿ : ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆಯ (POMIS) ಮುಕ್ತಾಯ ಅವಧಿ 5 ವರ್ಷಗಳು. ಸಮಯಕ್ಕೆ ಮುಂಚಿತವಾಗಿ ನೀವು ಹಣವನ್ನು ಹಿಂತೆಗೆದುಕೊಂಡರೆ ನೀವು ಸ್ವಲ್ಪ ನಷ್ಟವನ್ನು ಭರಿಸಬೇಕಾಗಬಹುದು. ಒಂದು ವರ್ಷದೊಳಗೆ ಠೇವಣಿ ಇಟ್ಟ ಹಣವನ್ನು ನೀವು ಹಿಂತೆಗೆದುಕೊಂಡರೆ, ಅದರ ಮೇಲೆ ನಿಮಗೆ ಯಾವುದೇ ಲಾಭ ದೊರೆಯುವುದಿಲ್ಲ. ನೀವು 3 ವರ್ಷಗಳ ಮೊದಲು ಹಣವನ್ನು ಹಿಂತೆಗೆದುಕೊಂಡರೆ, ನೀವು ಶೇಕಡಾ 2 ರಷ್ಟು ದಂಡವನ್ನು ಪಾವತಿಸಬೇಕಾಗುತ್ತದೆ. 3 ವರ್ಷಗಳ ನಂತರ, ಖಾತೆಯಲ್ಲಿ ಠೇವಣಿ ಇರಿಸಿದ ಮೊತ್ತವನ್ನು ಹಿಂತೆಗೆದುಕೊಂಡರೆ ಶೇಕಡಾ 1 ರಷ್ಟು ಕಡಿತ ಮಾಡಲಾಗುವುದು. ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ... Android Link - https://bit.ly/3hDyh4G Apple Link - https://apple.co/3loQYe  ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.