1GB Mobile Cost: ಪಾಕಿಸ್ತಾನದಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು ಗೊತ್ತಾ?

ಅಮೆರಿಕನ್ನರು ಒಂದು ಜಿಬಿ ಇಂಟರ್ನೆಟ್ಗೆ 315 ರೂ.

Last Updated : Mar 1, 2021, 08:37 PM IST
  • ರಿಲಯನ್ಸ್ ಜಿಯೋ ಆರಂಭದಲ್ಲಿ ರಿಲಯನ್ಸ್ ಜಿಯೋ ಕರೆ, ಇಂಟರ್ನೆಟ್, ಮಾತ್ರವಲ್ಲದೆ, ಸಿಮ್ ಕೂಡ ಉಚಿತ
  • ಜಿಯೋ ಕಡಿಮೆ ಬೆಲೆಗೆ ಹೆಚ್ಚಿನ ಸ್ಪೀಡ್ನಲ್ಲಿ ಇಂಟರ್ ನೆಟ್ ಸೇವೆ ಒದಗಿಸುತ್ತಿರುವುದು.
  • ಅಮೆರಿಕನ್ನರು ಒಂದು ಜಿಬಿ ಇಂಟರ್ನೆಟ್ಗೆ 315 ರೂ.
1GB Mobile Cost: ಪಾಕಿಸ್ತಾನದಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು ಗೊತ್ತಾ?

ಕಳೆದ ಕೆಲವು ವರ್ಷಗಳಿಂದ ಟೆಲಿಕಾಂ ಕ್ಷೇತ್ರದಲ್ಲಿ ಭಾರೀ ಬದಲಾವಣೆಯಾಗುತ್ತಿದೆ. 4G ಬಂದ ಮೇಲಂತು ಟಿಲಿಕಾಂ ಕಂಪೆನಿಗಳು ತಮ್ಮ ಟಾರೀಫ್ ಬೆಲೆಯನ್ನು ಹೆಚ್ಚು ಮಾಡಿವೆ. ಇದು ಇಂಟರ್ನೆಟ್ ಬಳಕೆ ಮಾಡುವವರನ್ನು ಚಿಂತೆಗೆ ದೂಡುವಂತೆ ಮಾಡಿದೆ. ಆದರೆ, ಇತರೆ ದೇಶಗಳಿಗೆ ಹೋಲಿಸಿದರೆ ವಿಶ್ವದಲ್ಲೇ ಅತ್ಯಂತ ಕಡಿಮೆ ಬೆಲೆಗೆ ಇಂಟರ್ನೆಟ್ ಸೇವೆ ನೀಡುತ್ತಿರುವುದು ಭಾರತ ಎಂದರೆ ನಂಬಲೇಬೇಕು. ಹೌದು, ಇತರೆ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತದಲ್ಲಿ ಮೊಬೈಲ್ ಸೇವಾ ದರಗಳು ಅಗ್ಗದಲ್ಲಿ ಗ್ರಾಹಕರಿಗೆ ಲಭಿಸುತ್ತಿದೆ. ಹಾಗಾದ್ರೆ ಭಾರತ ಬಿಟ್ಟು ಬೇರೆ ದೇಶಗಳಲ್ಲಿ 1GB ಇಂಟರ್ನೆಟ್ ಬೆಲೆ ಎಷ್ಟು ಎಂಬ ಪ್ರಶ್ನೆ ನಿಮಗೆ ಮೂಡಿದರೆ ಇಲ್ಲಿದೆ ಉತ್ತರ.

ಭಾರತದ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಕಾಂತ್ರಿ ಹುಟ್ಟಿಸಿರುವ ಸಂಸ್ಥೆ ಎಂದರೆ ರಿಲಯನ್ಸ್ ಜಿಯೋ(Jio). ಆರಂಭದಲ್ಲಿ ರಿಲಯನ್ಸ್ ಜಿಯೋ ಕರೆ, ಇಂಟರ್ನೆಟ್, ಮಾತ್ರವಲ್ಲದೆ, ಸಿಮ್ ಕೂಡ ಉಚಿತವಾಗಿ ನೀಡುತ್ತಿತ್ತು. ಇದರಿಂದಾಗಿ ಸಾಕಷ್ಟು ಜನರು ಜಿಯೋ ಸಿಮ್ ಬಳಕೆಗೆ ಮುಂದಾದರು.

Flight Emergency Landing : ಕಳ್ಳ ಬೆಕ್ಕಿಗೆ ಹೆದರಿ ಎಮರ್ಜೆನ್ಸಿ ಲ್ಯಾಂಡ್ ಆದ ವಿಮಾನ.!

ಸದ್ಯ ದೇಶದಲ್ಲಿಉಳಿದೆಲ್ಲಾ ಟೆಲಿಕಾಂ ಕಂಪೆನಿಗಳನ್ನು ಹೋಲಿಸಿದರೆ ಜಿಯೋ ಸಿಮ್(SIM) ಬಳಕೆದಾರರ ಸಂಖ್ಯೆ ಹೆಚ್ಚು ಇದೆ. ಮಾತ್ರವಲ್ಲದೆ, ಟೆಲಿಕಾಂ ಕ್ಷೇತ್ರದಲ್ಲೂ ಜಿಯೋ ಮೊದಲ ಸ್ಥಾನದಲ್ಲಿ ಗುರುತಿಸಿಕೊಂಡಿದೆ. ಇದಕ್ಕೆ ಪ್ರಮುಖ ಕಾರಣ ಕಡಿಮೆ ಬೆಲೆಗೆ ಹೆಚ್ಚಿನ ಸ್ಪೀಡ್ನಲ್ಲಿ ಇಂಟರ್ ನೆಟ್ ಸೇವೆ ಒದಗಿಸುತ್ತಿರುವುದು.

ಚೀನಾ ಲಸಿಕೆಗೆ ಬೈ ಬೈ ಹೇಳಿ ಭಾರತದ ಲಸಿಕೆಗೆ ಜೈ ಎಂದ ಶ್ರೀಲಂಕಾ

ಆದರೆ ವಿದೇಶದಲ್ಲಿ ಇಂಟರ್ನೆಟ್ಗಾಗಿ ಅಧಿಕ ಹಣ ವ್ಯಯಮಾಡುತ್ತಿದ್ದಾರೆ. ವಿಶ್ವದಲ್ಲಿ ಅತಿ ಕಡಿಮೆ ಬೆಲೆಗೆ ಇಂಟರ್ನೆಟ್ ಸಿಗುವ ದೇಶವೆಂದರೆ ಅದು ಭಾರತ. ಭಾರತದಲ್ಲಿ ಒಂದು ಜಿಬಿ ಇಂಟರ್ನೆಟ್ಗೆ(Internet) 7 ರಿಂದ 8 ರೂ ಖರ್ಚ್ ಮಾಡುತ್ತಾರೆ. ಬಾಂಗ್ಲಾದೇಶ ಮತ್ತು ಶ್ರೀಲಂಕಾ20 ರೂ.ನಿಂದ22 ರೂ. ವರೆಗೆ ಖರ್ಚು ಮಾಡುತ್ತಾರೆ.

BrahMos-2 : ಭಾರತದ ಆ ‘ಬ್ರಹ್ಮಾಸ್ತ್ರವನ್ನು ನೋಡಿ ನಿದ್ದೆಯಲ್ಲೂ ನಡುಗಿದ ಪಾಕ್.!

ಅಮೆರಿಕನ್ನರು ಒಂದು ಜಿಬಿ ಇಂಟರ್ನೆಟ್ಗೆ 315 ರೂ. ಖರ್ಚು ಮಾಡುತ್ತಾರೆ. ಮೆಕ್ಸಿಕೋದಲ್ಲಿ 7.5 ಡಾಲರ್(Dollar). ಇನ್ನೂ ಜಗತ್ತಿನಲ್ಲಿ ಇಂಟರ್ನೆಟ್ಗೆ ಅತಿ ಹೆಚ್ಚು ಖರ್ಚು ಮಾಡುತ್ತಿರುವ ದೇಶವೆಂದರೆ ಅದು ಜಿಂಬಾಬ್ವೆ. ಒಂದು ಗಿಗಾ ಬೈಟ್ ಡೇಟಾ 5.5 ಡಾಲರ್ ಖರ್ಚು ಮಾಡುತ್ತಾರೆ. ಇತ್ತ ಪಾಕಿಸ್ತಾನದಲ್ಲಿ ಇಂದು ಜಿಬಿ ಇಂಟರ್ನೆಟ್ ಬೇಕಾದರೆ 258 ರೂ. ಪಾವತಿಸಬೇಕಾಗುತ್ತದೆ.

ಇಮ್ರಾನ್ ಖಾನ್ ದೊಡ್ಡ ಆಘಾತ, ಜೂನ್ 2021 ರವರೆಗೆ FATF ಬೂದು ಪಟ್ಟಿಯಲ್ಲಿಯೇ ಮುಂದುವರೆಯಲಿದೆ ಪಾಕ್

ಇದರ ಜೊತೆಗೆ ಈಶಾನ್ಯ ಆಫ್ರಿಕಾದ ಮಾಲವಿಯಲ್ಲಿ 1 ಜಿಬಿ ಇಂಟರ್ನೆಟ್ನ ಬೆಲೆ ಬರೋಬ್ಬರಿ 2,053 ರೂ. ಪಶ್ಚಿಮ ಆಫ್ರಿಕಾ(Africa) ದೇಶದ ಬೆನಿನ್ನಲ್ಲೂ 1 ಜಿಬಿ ಬೆಲೆ 2,039 ರೂ ಇದೆ. ಸೆಂಟ್ರಲ್ ಆಫ್ರಿಕಾ ದೇಶದ ಚಾಡ್ನಲ್ಲಿ 1 ಜಿಬಿ ಇಂಟರ್ನೆಟ್ ಬೆಲೆ 1,748 ರೂ. ಇದೆ.

PNB Scam: ನಿರವ್ ಮೋದಿಯನ್ನು ಭಾರತಕ್ಕೆ ಹಸ್ತಾಂತರಿಸಲು ಅನುಮತಿ ನೀಡಿದ UK ನ್ಯಾಯಾಲಯ, ಆದರೆ...?

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

More Stories

Trending News