Chhattisgarh Assembly Election Result 2023: ಛತ್ತೀಸ್ಗಢ ವಿಧಾನಸಭಾ ಚುನಾವಣೆಯ ಫಲಿತಾಂಶಕ್ಕಾಗಿ ಇಡೀ ದೇಶವೇ ಕಾಯುತ್ತಿದೆ. ಭಾನುವಾರ ಬೆಳಗ್ಗೆ 8 ಗಂಟೆಯಿಂದಲೇ ಮತ ಎಣಿಕೆ ಪ್ರಾರಂಭವಾಗಿದೆ. ಪ್ರತಿಯೊಂದು ಪಕ್ಷವೂ ತನ್ನದೇ ಆದ ಗೆಲುವಿನ ಹಕ್ಕು ಚಲಾಯಿಸುತ್ತಿದೆ. ಬಿಜೆಪಿ ಭರ್ಜರಿ ಗೆಲುವಿನೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತೇವೆಂದು ಹೇಳಿಕೊಂಡಿದ್ದರೆ, ಕಾಂಗ್ರೆಸ್ ಕೂಡ ಮತ್ತೊಮ್ಮೆ ನಾವೇ ಸರ್ಕಾರ ರಚಿಸುತ್ತೇವೆ ಎಂದು ಹೇಳುತ್ತಿದೆ. ಮತ ಎಣಿಕೆಗಾಗಿ 33 ಜಿಲ್ಲೆಗಳಲ್ಲಿ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಇಂದು ಒಟ್ಟು 1,181 ಅಭ್ಯರ್ಥಿಗಳ ಭವಿಷ್ಯ ನಿರ್ಧಾರವಾಗಲಿದೆ. ಛತ್ತೀಸ್ಗಢದಲ್ಲಿ 2 ಹಂತಗಳಲ್ಲಿ ಮತದಾನವಾಗಿದೆ. ಮೊದಲ ಹಂತದಲ್ಲಿ ನ.7ರಂದು 20 ಸ್ಥಾನಗಳಿಗೆ ಮತದಾನ ನಡೆದಿತ್ತು ಮತ್ತು 2ನೇ ಹಂತದಲ್ಲಿ ನ.17ರಂದು 70 ಸ್ಥಾನಗಳಿಗೆ ಮತದಾನ ನಡೆದಿತ್ತು.
ಛತ್ತೀಸ್ಗಢದಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ನೇರ ಸ್ಪರ್ಧೆ ಏರ್ಪಟ್ಟಿದೆ. ಆದಾಗ್ಯೂ, ಕೆಲವು ಸ್ಥಾನಗಳಲ್ಲಿ ಕುತೂಹಲಕಾರಿ ಸ್ಪರ್ಧೆಗಳನ್ನು ಕಾಣಬಹುದು. ಈ ಸ್ಥಾನಗಳಲ್ಲಿ ತೀವ್ರ ಪೈಪೋಟಿ ಏರ್ಪಡಬಹುದು. ಪಟಾನ್, ರಾಜನಂದಗಾಂವ್, ಕೊಂಟಾ, ಅಂಬಿಕಾಪುರ್, ಖಾರ್ಸಿಯಾ, ರಾಯ್ಪುರ ಸಿಟಿ ಸೌತ್, ಕೊಂಡಗಾಂವ್, ಶಕ್ತಿ, ಲೋರ್ಮಿ ಮತ್ತು ಭರತ್ಪುರ್-ಸೋನ್ಹತ್ ಸ್ಥಾನಗಳನ್ನು ಒಳಗೊಂಡಿದೆ. ಎಕ್ಸಿಟ್ ಪೋಲ್ಗಳನ್ನು ನೋಡಿದರೆ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ ಪುನರಾಗಮನವಾಗಬಹುದು. CNXನ ಎಕ್ಸಿಟ್ ಪೋಲ್ ಪ್ರಕಾರ, ಛತ್ತೀಸ್ಗಢದಲ್ಲಿ ಕಾಂಗ್ರೆಸ್ 46-56 ಸ್ಥಾನಗಳನ್ನು, ಬಿಜೆಪಿ 30-40 ಮತ್ತು ಇತರರು 3 ರಿಂದ 5 ಸ್ಥಾನಗಳನ್ನು ಪಡೆಯುವ ನಿರೀಕ್ಷೆಯಿದೆ.
ಇದನ್ನೂ ಓದಿ: Rajasthan Election Result 2023: ಯಾರಾಗ್ತಾರೆ ರಾಜಸ್ಥಾನದ ‘ರಾಜ’?, ಪ್ರಮುಖರ ಸಂಪೂರ್ಣ ಮಾಹಿತಿ
#WATCH | Chhattisgarh BJP President Arun Sao says, "The people of Chhattisgarh are going to give their blessings to the BJP. After going all around the state, we formed a belief, and on that basis, I can say that the BJP is going to form its government with a complete majority." pic.twitter.com/1EoVEjpWlu
— ANI (@ANI) December 3, 2023
ಛತ್ತೀಸ್ಗಢದಲ್ಲಿ ನೆಕ್ ಟು ನೆಕ್ ಫೈಟ್!
ಛತ್ತೀಸ್ಗಢದ 90 ವಿಧಾನಸಭಾ ಕ್ಷೇತ್ರಗಳ ಪೈಕಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ತೀವ್ರ ಪೈಪೋಟಿ ನಡೆಯುತ್ತಿದೆ. ಟ್ರೆಂಡ್ಗಳಲ್ಲಿ ಕೆಲವೊಮ್ಮೆ ಬಿಜೆಪಿ ಮುಂದಿದ್ದರೆ ಇನ್ನು ಕೆಲವೊಮ್ಮೆ ಕಾಂಗ್ರೆಸ್ ಮುಂದಿದೆ. ಬೆಳಗ್ಗೆ 10.30ರವರೆಗಿನ ಮತ ಎಣಿಕೆ ಪ್ರಕಾರ ಬಿಜೆಪಿ 34 ಸ್ಥಾನಗಳಲ್ಲಿ, ಕಾಂಗ್ರೆಸ್ 28, HMR 1 ಮತ್ತು CPI ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿವೆ.
ಛತ್ತೀಸ್ಗಢದಲ್ಲಿ ಕಮಲ ಅರಳಲಿದೆ: ರಮಣ್ ಸಿಂಗ್
अंधेरा छँट गया है, सूरज निकल चुका है, कमल खिलने जा रहा है।
सभी कार्यकर्ता साथी इस काउंटिंग की प्रक्रिया से जुड़े रहें क्योंकि बहुत जल्द #भाजपा_आवत_हे
— Dr Raman Singh (@drramansingh) December 3, 2023
ಮತ ಎಣಿಕೆಯ ನಡುವೆ ಛತ್ತೀಸ್ಗಢದ ಮಾಜಿ ಸಿಎಂ ರಮಣ್ ಸಿಂಗ್ ಟ್ವೀಟ್ ಮಾಡಿದ್ದು, ‘ಕತ್ತಲು ಕೊನೆಗೊಂಡಿದೆ, ಸೂರ್ಯ ಉದಯಿಸಿದೆ, ಕಮಲ ಅರಳಲಿದೆ. ಎಲ್ಲಾ ಕಾರ್ಯಕರ್ತರ ಸ್ನೇಹಿತರು ಈ ಎಣಿಕೆಯ ಪ್ರಕ್ರಿಯೆಯೊಂದಿಗೆ ಸಂಪರ್ಕದಲ್ಲಿರಬೇಕು, ಏಕೆಂದರೆ ಶೀಘ್ರದಲ್ಲೇ ರಾಜ್ಯದಲ್ಲಿ ಬಿಜೆಪಿ ಅಧಿಕಾರಕ್ಕೆ ಬರಲಿದೆ’ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: Election Results 2023: 2024ರ ಲೋಕಸಭಾ ಫೈಟ್ನ ‘ಸೆಮಿಫೈನಲ್’ನಲ್ಲಿ ಯಾರಿಗೆ ಗೆಲುವು?
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.