ಏಳು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಇವರಿಗೇ ಡಿಸಿಎಂ ಸ್ಥಾನ ನೀಡಬೇಕು- ಮುಸ್ಲಿಂ ಸಂಘಟನೆ

ಕರ್ನಾಟಕದ ಹೊಸ ಸರ್ಕಾರದಲ್ಲಿ 7 ಬಾರಿ ಕಾಂಗ್ರೆಸ್ ಶಾಸಕರಾಗಿರುವ ರೋಶನ್ ಬೈಗ್ ಅವರಿಗೇ ಉಪಮುಖ್ಯಮಂತ್ರಿ ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಗುಂಪೊಂದು ಒತ್ತಾಯಿಸಿದೆ.  

Last Updated : May 22, 2018, 01:33 PM IST
ಏಳು ಬಾರಿ ಕಾಂಗ್ರೆಸ್ ಶಾಸಕರಾಗಿರುವ ಇವರಿಗೇ ಡಿಸಿಎಂ ಸ್ಥಾನ ನೀಡಬೇಕು- ಮುಸ್ಲಿಂ ಸಂಘಟನೆ title=
Pic: ANI

ಬೆಂಗಳೂರು: ಕರ್ನಾಟಕದ ಹೊಸ ಸರ್ಕಾರದಲ್ಲಿ 7 ಬಾರಿ ಕಾಂಗ್ರೆಸ್ ಶಾಸಕರಾಗಿರುವ ಆರ್. ರೋಶನ್ ಬೈಗ್ ಅವರಿಗೇ ಉಪಮುಖ್ಯಮಂತ್ರಿ(ಡಿಸಿಎಂ) ಸ್ಥಾನ ನೀಡಬೇಕು ಎಂದು ಮುಸ್ಲಿಂ ಸಂಘಟನೆಗಳ ಗುಂಪೊಂದು ಒತ್ತಾಯಿಸಿದೆ.  

ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿದ ಮಾತನಾಡಿದ ಮುಸ್ಲಿಂ ಸಂಘಟನೆ, 7 ಬಾರಿ ಕಾಂಗ್ರೆಸ್ ಪಕ್ಷದಿಂದ ಶಾಸಕರಾಗಿ ಆಯ್ಕೆಯಾಗಿರುವ ರೋಶನ್ ಬೈಗ್ ಅವರಿಗೆ ಡಿಸಿಎಂ ಹುದ್ದೆ ನೀಡಲಿ ಅಥವಾ ಮುಸ್ಲಿಂ ಸಮುದಾಯದ ಒಬ್ಬ ನಾಯಕನಿಗೆ ಡಿಸಿಎಂ ಸ್ಥಾನ ನೀಡಲಿ ಎಂದು ಒತ್ತಾಯಿಸಿದ್ದಾರೆ.

Trending News