ಮೋದಿ ಕರ್ನಾಟಕದ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ,ಇಲ್ಲಿ ಪ್ರಜ್ಞಾವಂತರಿದ್ದಾರೆ- ಸಿದ್ದರಾಮಯ್ಯ

    

Last Updated : May 5, 2018, 08:02 PM IST
ಮೋದಿ ಕರ್ನಾಟಕದ ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ,ಇಲ್ಲಿ ಪ್ರಜ್ಞಾವಂತರಿದ್ದಾರೆ- ಸಿದ್ದರಾಮಯ್ಯ  title=

ಬೆಂಗಳೂರು: ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂಡಿಯಾ ಟುಡೇಗೆ ನೀಡಿದ ಸಂದರ್ಶನದಲ್ಲಿ ಮಾತನಾಡುತ್ತಾ ಕರ್ನಾಟಕದಲ್ಲಿ ಪ್ರಜ್ಞಾವಂತ ಜನರಿದ್ದಾರೆ ಆದ್ದರಿಂದ ಮೋದಿಯವರು ಕರ್ನಾಟಕದ ಜನರ ದಾರಿ ತಪ್ಪಿಸಲು ಸಾಧ್ಯವಿಲ್ಲ ಎಂದರು.

ಪ್ರಧಾನಿ ಮೋದಿ ಎತ್ತಿರುವ ಎಲ್ಲ ಸಂಗತಿಗಳು ರಾಜ್ಯದಲ್ಲಿ ಪ್ರಭಾವ ಬೀರುವುದಿಲ್ಲ ಇಲ್ಲಿ ಬಿಜೆಪಿ ಸೋಲುತ್ತದೆ ಎಂದು ತಿಳಿಸಿದರು, ಇನ್ನು ಮುಂದುವರೆದು "ರಾಷ್ಟ್ರ ಚುನಾವಣೆಗಳನ್ನು ರಾಜ್ಯದ ಚುನಾವಣೆಗೆ ಹೋಲಿಸಲಾಗದು, ಇಲ್ಲಿ ಸಮಸ್ಯೆಗಳು ಸಂಪೂರ್ಣ ಭಿನ್ನ ,ನನ್ನ ಪ್ರಕಾರ ಮೋದಿ ಚರಿಷ್ಮಾ ಈಗ ಇಲ್ಲ ಅದು 2014 ರಿಂದ ಗಣನೀಯವಾಗಿ ಕಡಿಮೆಯಾಗಿದೆ. ಅಷ್ಟಕ್ಕೂ ಅವರು ಎತ್ತಿರುವ ವಿಷಯಗಳು ಕರ್ನಾಟಕದ ಜನರ ಮೇಲೆ ಪರಿಣಾಮ ಬೀರುವುದಿಲ್ಲ" ಎಂದು ಸಿದ್ದರಾಮಯ್ಯ ತಿಳಿಸಿದರು.

ಮೋದಿ ಅವರು ಯಾವುದೇ ಆಧಾರವಿಲ್ಲದ ಆರೋಪ ಮಾಡುತ್ತಿದ್ದಾರೆ.ಅವರು ನಮ್ಮ ಸರ್ಕಾರ 10 ಪರ್ಸೆಂಟ್ ಸರ್ಕಾರ್ ಎಂದರು ಅದರರ್ಥವೇನು? ಯಾವ ದಾಖಲೆ ಅವರ ಬಳಿ ಇದೆ? ನಾನು ಮೋದಿ ಅತಿ ಭ್ರಷ್ಟ ವ್ಯಕ್ತಿ ಎಂದು ನಾನು ಹೇಳುತ್ತೇನೆ ಎಂದು ಅವರು ಮೋದಿ ಆರೋಪಕ್ಕೆ ಪ್ರತಿಕ್ರಿಯಿಸಿದರು. 

Trending News