ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣಾ ಹಿನ್ನಲೆಯಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬಂದರೆ ಯಾವ ಯಾವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಿದೆ ಎನ್ನುವ ಎಲ್ಲ ಅಂಶಗಳನ್ನು ಒಳಗೊಂಡ ಪ್ರಣಾಳಿಕೆ ಬಿಡುಗಡೆಯಾಗಿದೆ. ಈ ಪ್ರಣಾಳಿಕೆಯನ್ನು ಬಿಡುಗಡೆ ಮಾಡಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಇದು ಕರ್ನಾಟಕ ರಾಜ್ಯದ ಜನರ ನಾಡಿ ಮಿಡಿತವನ್ನು ಹೊಂದಿದ ದಾಖಲೆ ಎಂದು ಬಣ್ಣಿಸಿದ್ದಾರೆ.
We released the Congress Manifesto for Karnataka earlier today. It captures the “Mann Ki Baat” of the people of Karnataka and makes very specific commitments that we intend to deliver on, including creating 1 Cr. new jobs over the next 5 yrs. #NavaKarnatakaManifesto pic.twitter.com/hktUWrpeiI
— Rahul Gandhi (@RahulGandhi) April 27, 2018
Congress President @RahulGandhi launches the #NavaKarnatakaManifesto in Mangaluru. #JanaAashirwadaYatre pic.twitter.com/wNyer0OxKZ
— Congress (@INCIndia) April 27, 2018
ಕಾಂಗ್ರೆಸ್ ಪ್ರಣಾಳಿಕೆಯಲ್ಲಿನ ಪ್ರಮುಖ ಅಂಶಗಳು:
- 5 ವರ್ಷಗಳಲ್ಲಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಮ್ಮ ಸರ್ಕಾರವು ನೀರಾವರಿಗಾಗಿ ಸುಮಾರು 50 ಸಾವಿರ ಕೋಟಿ ರೂ.ಗಳನ್ನು ಒದಗಿಸಿದೆ ಮತ್ತು 6.5 ಲಕ್ಷ ಎಕರೆ ನೀರಾವರಿ ಭೂಮಿ ಸೃಷ್ಟಿಸಿದೆ.ಬರ-ಮುಕ್ತ ಕರ್ನಾಟಕವನ್ನು ಖಚಿತಪಡಿಸಿಕೊಳ್ಳಲು ನಾವು 1.25 ಲಕ್ಷ ಕೋಟಿ ರೂ. ನೀರಾವರಿಗಾಗಿ ಖರ್ಚು ಮಾಡಲಿದ್ದೇವೆ.
- ಐಟಿ ಬಿಟಿ ಸಾಗುತ್ತಿರುವ ನಾವು ರಾಜ್ಯದ ಜಿಎಸ್ಡಿಪಿಯ 25% ಗಿಂತಲೂ ಹೆಚ್ಚಿನ ಕೊಡುಗೆ ನೀಡುತ್ತೇವೆ ಮತ್ತು ಉದ್ಯಮಗಳಿಗೆ ಹೆಚ್ಚಿನ ಪ್ರಚೋದನೆಯನ್ನು ನೀಡುತ್ತೇವೆ.
- 3 ಮಿಲಿಯನ್ ಗಿಂತಲೂ ಹೆಚ್ಚು ಮಾಹಿತಿ ತಂತ್ರಜ್ಞಾನದ ಉದ್ಯೋಗಗಳನ್ನು ಪೂರೈಸಲು, ಕೌಶಲ್ಯ ವೃದ್ಧಿಸುವ ಮತ್ತು ಮಾಹಿತಿ ತಂತ್ರಜ್ಞಾನವನ್ನು ಒಳಗೊಂಡಿರುವ ಪಠ್ಯಕ್ರಮಗಳ ಮೂಲಕ ಉನ್ನತ ಮಟ್ಟದ ಐಟಿ ಪ್ರತಿಭಾ ಪೂಲ್ (ಟ್ಯಾಲೆಂಟ್ ಪೂಲ್)ನ್ನು ನಿರ್ಮಿಸುತ್ತೇವೆ.
- ನಮ್ಮ ಸರಕಾರದ ಪ್ರಮುಖ 'ಅನ್ನ ಭಾಗ್ಯ' ಕರ್ನಾಟಕದಲ್ಲಿ ಸುಮಾರು 4 ಕೋಟಿ ಜನರಿಗೆ ಉಚಿತ ರೇಷನ್ ಒದಗಿಸುತ್ತದೆ.ಹಸಿವು ಮುಕ್ತ ರಾಜ್ಯವನ್ನು ನಿರ್ಮಿಸಲು ನಾವು ಬದ್ದರಾಗಿದ್ದು ಆದ್ದರಿಂದ , 'ಅನ್ನ ಭಾಗ್ಯ'ವನ್ನು ವಲಸಿಗ ಕಾರ್ಮಿಕರಿಗೆ ವಿಸ್ತರಿಸಲಾಗುವುದು.
- ನಮ್ಮ ಸರ್ಕಾರ ಉತ್ತಮ ಉತ್ಪಾದನೆ ಮತ್ತು ಆದಾಯ ಭದ್ರತೆಯೊಂದಿಗೆ ರೈತರನ್ನು ಸಶಕ್ತಗೊಳಿಸಿದೆ. ಈಗ ಕೃಷಿ ಮತ್ತು ಇತರ ಕ್ಷೇತ್ರಗಳಲ್ಲಿ ಹೆಚ್ಚಿನ ಬೆಳವಣಿಗೆಯನ್ನು ಸಾಧಿಸಲು 10 ಕೃಷಿ-ಹವಾಮಾನ ವಲಯಗಳನ್ನು ಸಂಪರ್ಕಿಸುವ ಕಾರಿಡಾರ್ ನ್ನು ನಾವು ರಚಿಸುತ್ತೇವೆ.
- ಕರ್ನಾಟಕ ಕಳೆದ ಐದು ವರ್ಷಗಳಲ್ಲಿ ಸುಮಾರು 50 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿದೆ. 2018-23ರ ಹೊತ್ತಿಗೆ ನಾವು 50% ನಷ್ಟು ಉದ್ಯೋಗವನ್ನು ಹೆಚ್ಚಿಸುತ್ತೇವೆ ಮತ್ತು ಪ್ರತಿವರ್ಷ 15-20 ಲಕ್ಷ ಉದ್ಯೋಗಗಳನ್ನು ಸೃಷ್ಟಿಸುತ್ತೇವೆ.
- ಸಿದ್ದರಾಮಯ್ಯ ನೇತೃತ್ವದಲ್ಲಿ , ನಮ್ಮ ಸರ್ಕಾರವು ಸಮಂಜಸವಾದ, ಅಂತರ್ಗತ ಮತ್ತು ಗುಣಮಟ್ಟದ ಶಿಕ್ಷಣವನ್ನು ಸಕ್ರಿಯಗೊಳಿಸಿದೆ. ಆದ್ದರಿಂದ ಇದನ್ನು ಉತ್ತಮಪದಿಸುತ್ತಾ ನಾವು ಪ್ರತಿ ಮಗುವಿಗೆ 12 ವರ್ಷಗಳ ಶಾಲಾಶಿಕ್ಷಣವನ್ನು ಕಡ್ದಾಯಗೊಳಿಸುತ್ತೇವೆ ಮತ್ತು ಎಲ್ಲಾ ವಿದ್ಯಾರ್ಥಿಗಳಿಗೆ 'ವಿದ್ಯಾಸರಿ' ಯೋಜನೆಯನ್ನು ವಿಸ್ತರಿಸುತ್ತೇವೆ.
- ನಾವು ಇಡೀ ದೇಶದಲ್ಲಿ ಕರ್ನಾಟಕದಲ್ಲಿ ಸಾರ್ವತ್ರಿಕ ಆರೋಗ್ಯ ಯೋಜನೆಯನ್ನು ಪ್ರಾರಂಭಿಸಿದ ಮೊದಲ ರಾಜ್ಯವಾಗಿತ್ತು. ಆರೋಗ್ಯ ಸೂಚ್ಯಂಕವನ್ನು ಸುಧಾರಿಸಲು ಮತ್ತು ಅಪೌಷ್ಟಿಕತೆ ಮುಕ್ತ ಕರ್ನಾಟಕದ ನಿರ್ಮಾಣ ಮಾಡಲು ನಾವು UHC & Mathrupoorna ನಂತಹ ಪ್ರಮುಖ ಕಾರ್ಯಕ್ರಮಗಳನ್ನು ವಿಸ್ತರಿಸುತ್ತೇವೆ.