ಇಂದಿನ ವಿಶ್ವಾಸ ಮತಯಾಚನೆಯಲ್ಲಿ ಯಡಿಯೂರಪ್ಪ ಗೆಲ್ಲುತ್ತಾರಾ?

   

Last Updated : May 19, 2018, 11:20 AM IST
ಇಂದಿನ ವಿಶ್ವಾಸ ಮತಯಾಚನೆಯಲ್ಲಿ ಯಡಿಯೂರಪ್ಪ ಗೆಲ್ಲುತ್ತಾರಾ? title=

ಬೆಂಗಳೂರು: ಇಡೀ ದೇಶದ ಗಮನ ಸೆಳೆದಿರುವ ಕರ್ನಾಟಕದ ರಾಜಕೀಯ ವಿದ್ಯಮಾನ ಇಂದು ಅಂತಿಮ ಕುತೂಹಲ ಘಟ್ಟಕ್ಕೆ ತಲುಪಿದೆ.

ಸುಪ್ರೀಂ ಕೋರ್ಟ್ ನ ಆದೇಶದ ಹಿನ್ನಲೆಯಲ್ಲಿ ಶನಿವಾರ ನಾಲ್ಕು ಗಂಟೆಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಹುಮತ ಸಾಬೀತು ಪಡಿಸಬೇಕೆಂದು ಆದೇಶ ನೀಡಿದೆ ಈ ಹಿನ್ನೆಲೆಯಲ್ಲಿ ಇಂದು ವಿಶ್ವಾಸಮತಯಾಚನೆ ನಡೆಯಲಿದೆ. ಈ ಹಿನ್ನೆಲೆಯಲ್ಲಿ  ಹೈದರಾಬಾದ್ ನಲ್ಲಿ ಉಳಿದು ಕೊಂಡಿದ್ದ ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ಸದಸ್ಯರು ಸಹಿತ ಈಗ ಬೆಂಗಳೂರಿಗೆ ಆಗಮಿಸಿದ್ದಾರೆ. 

ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿಗೆ 104 ಸ್ಥಾನದಲ್ಲಿ ಗೆಲುವು ಸಾಧಿಸಿತ್ತು ಇನ್ನೊಂದೆಡೆ ಕಾಂಗ್ರೆಸ್ 78 ಜೆಡಿಎಸ್ 38 ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟವು ತಾವು ಬಹುಮತ ಸಂಖ್ಯೆಯ ಮ್ಯಾಜಿಕ್ ನಂಬರ್ ಹೊಂದಿದೆ.ಆದ್ದರಿಂದ ತಮಗೆ ಸರ್ಕಾರ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಕೇಳಿಕೊಂಡಿದ್ದರು. 

ಆದರೆ ರಾಜ್ಯಪಾಲರು ಅಂತಿಮವಾಗಿ ಬಿಜೆಪಿಗೆ ಆಧ್ಯತೆ ನೀಡಿದ್ದರು, ಈ ಹಿನ್ನಲೆಯಲ್ಲಿ ಬಿ ಎಸ್ ಯಡಿಯೂರಪ್ಪನವರು ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮಾಣವಚನ ಸ್ವೀಕರಿಸಿದ್ದರು. ಈಗ ಅವರು ಸದನದಲ್ಲಿ ಮ್ಯಾಜಿಕ್ ಸಂಖ್ಯೆಯನ್ನು ಸಾಭೀತು ಪಡಿಸಿಸಬೇಕಾಗಿದೆ.ಇದರಲ್ಲಿ ಯಡಿಯೂರಪ್ಪನವರು ಯಶ್ವಸ್ವಿಯಾಗುತ್ತಾರೆಯೇ ಎನ್ನುವುದಕ್ಕೆ ಕಾದುನೋಡಬೇಕಾಗಿದೆ.

Trending News