ನವದೆಹಲಿ: 7th Pay Commission - ನಿವೃತ್ತ ಕೇಂದ್ರ ಸರ್ಕಾರಿ ನೌಕರರಿಗೊಂದು ಸಂತಸದ ಸುದ್ದಿ ಪ್ರಕಟವಾಗಿದೆ. ಪಿಂಚಣಿ ಮತ್ತು ಪಿಂಚಣಿದಾರರ ಕಲ್ಯಾಣ ಇಲಾಖೆ (Department Of Pension And Pensioners' Welfare) ಈ ಕುರಿತಾದ ದೊಡ್ಡ ಮಾಹಿತಿಯೊಂದನ್ನು ಹಂಚಿಕೊಂಡಿದೆ. ಇದರ ಪ್ರಕಾರ, ಜೀವಂತವಾಗಿರುವ CPFಫಲಾನುಭಾವಿಗಳ DR (DR Hike) ಅನ್ನು ಶೇ.312 ರಿಂದ ಶೇ.366 ಕ್ಕೆ ಹೆಚ್ಚಿಸಲಾಗಿದೆ. 18 ನವೆಂಬರ್ 1960 ರಿಂದ 31 ಡಿಸೆಂಬರ್ 1985 ನಡುವೆ ನಿವೃತ್ತರಾದ ನೌಕರರಿಗೆ ಈ ಪ್ರಯೋಜನ ಸಿಗಲಿದೆ.
ಇದರರ್ಥ ಹಬ್ಬದ ಸೀಜನ್ ಆರಂಭವಗುವುದಕ್ಕು ಮುನ್ನ ಪಿಂಚಣಿದಾರರಿಗೆ ಭಾರಿ ಲಾಭ ಸಿಗಲಿದ್ದೆ. ಅಷ್ಟೇ ಅಲ್ಲ ನಿವೃತ್ತ ಹೊಂದಿರುವ ನೌಕರರ DR ಜುಲೈ 1 ರಿಂದ ಅನ್ವಯಿಸಲಿದೆ ಎನ್ನಲಾಗಿದೆ. 1 ಜನವರಿ 2020, 1 ಜುಲೈ 2020 ಹಾಗೂ 1 ಜನವರಿ 2021 ರ ಸಿಪಿಎಫ್ ಲಾಭಾರ್ಥಿಗಳಿಗೆ ಒಟ್ಟು ಮೂರು ಹಂತಗಳಲ್ಲಿ ಸಿಗಲಿದೆ.
5ನೇ ಸಿಪಿಸಿ ಸರಣಿಯ ಅಡಿ ಈ ನಿರ್ಧಾರ ಕೈಗೊಳ್ಳಲಾಗಿದೆ
ಇಲಾಖೆ ನೀಡಿರುವ ಮಾಹಿತಿಯ ಪ್ರಕಾರ, ಸಿಪಿಎಫ್ ಫಲಾನುಭವಿಗಳಿಗೆ ಎಕ್ಸ್-ಗ್ರೇಷಿಯಾ ಮೊತ್ತವನ್ನು ಹೆಚ್ಚಿಸುವ ನಿರ್ಧಾರವನ್ನು 5 ನೇ ಸಿಪಿಸಿ ಸರಣಿಯ ಅಡಿಯಲ್ಲಿ ತೆಗೆದುಕೊಳ್ಳಲಾಗಿದೆ. ಈ ನಿಯಮ 1 ಜುಲೈ 2021 ರಿಂದ ಜಾರಿಗೆ ಬಂದಿದೆ. ಸಿಪಿಎಫ್ ಫಲಾನುಭವಿಗಳ ಗುಂಪು ಎ, ಬಿ, ಸಿ ಮತ್ತು ಡಿ ಅಡಿಯಲ್ಲಿ, ಎಕ್ಸ್ ಗ್ರೇಷಿಯಾ ಮೊತ್ತವನ್ನು ರೂ. 3000, 1000, 750 ಮತ್ತು 650 ಆಧಾರದ ಮೇಲೆ ನೀಡಲಾಗುತ್ತದೆ. ಈ ನಿಯಮವು 4 ನೇ ಜೂನ್ 2013 ರಿಂದ ಜಾರಿಯಲ್ಲಿದೆ.
ಇದೀಗ ಪಿಂಚಣಿದಾರರ ಡಿಆರ್ ಅಂದರೆ ಡಿಯರ್ನೆಸ್ ರಿಲಿಎಫ್ ಶೇ.312 ರಿಂದ ಶೇ.356ಕ್ಕೆ ಹೆಚ್ಚಿಸಲಾಗಿದೆ. ಇದಲ್ಲದೇ, ನಿವೃತ್ತ ನೌಕರರ ಇನ್ನೊಂದು ವರ್ಗದ ಡಿಆರ್ ಅನ್ನು ಶೇ.304 ರಿಂದ ಶೇ.348 ಕ್ಕೆ ಹೆಚ್ಚಿಸಲಾಗಿದೆ. ಅಂದರೆ, ದೀಪಾವಳಿಗೆ ಮುಂಚೆಯೇ, ಪಿಂಚಣಿದಾರರಿಗೆ ಹೊಸ ಹುಮ್ಮಸ್ಸು ಸಿಕ್ಕಂತಾಗಿದೆ.
ಯಾರಿಗೆ ಈ ಲಾಭ ಸಿಗಲಿದೆ?
ಯಾವ ಲಾಭಾರ್ಥಿಗಳ ವಿಧವೆ ಹಾಗೂ ಮಕ್ಕಳಿಗೆ ಪ್ರತಿ ತಿಂಗಳು ಪ್ರತ್ಯೇಕ ರೂ.645 ಎಕ್ಸ್ ಗ್ರೆಸಿಯಾ ನೀಡಲಾಗುತ್ತದೆ. ಈ ನಿಯಮ 1 ಜನವರಿ 1986 ಕ್ಕಿಂತ ಮೊದಲು ನಿವೃತ್ತಿ ಹೊಂದಿದವರ ಮೇಲೆ ವಿಧವಾ ಹಾಗೂ ಮಕ್ಕಳಿಗೆ ಪ್ರತ್ಯೇಕ ಪ್ರತಿತಿಂಗಳು ರೂ. 645 ಎಕ್ಸ್ ಗ್ರೆಸಿಯಾ ಸಿಗುತ್ತದೆಯೋ ಅವರಿಗೂ ಕೂಡ ಈ ನಿಯಮ ಅನ್ವಯಿಸಲಿದೆ. ಇದಲ್ಲದೆ ಇದಲ್ಲದೇ, ಸಿಪಿಎಫ್ ಪ್ರಯೋಜನಗಳೊಂದಿಗೆ 18 ನವೆಂಬರ್ 1960 ಕ್ಕಿಂತ ಮೊದಲು ನಿವೃತ್ತಿ ಹೊಂದಿದ ಮತ್ತು ರೂ. 654, 659, 703 ಮತ್ತು ರೂ .965 ಎಕ್ಸ್-ಗ್ರೇಷಿಯಾ ವರ್ಗದಲ್ಲಿರುವ ಸರ್ಕಾರಿ ನೌಕರರು ಶೇ 348 ರಷ್ಟು ಪಡೆಯಲಿದ್ದಾರೆ.
ಇದನ್ನೂ ಓದಿ-ಬೆಳ್ಳುಳ್ಳಿ ಕೃಷಿ ನೀಡಲಿದೆ ದೊಡ್ಡ ಲಾಭ: 6 ತಿಂಗಳಲ್ಲಿ ಲಕ್ಷಾಂತರ ರೂ. ಸಂಪಾದಿಸಿ
ಇತೀಚೆಗಷ್ಟೇ DA-DR ಹೆಚ್ಚಿಸಲಾಗಿದೆ
ಇತ್ತೀಚೆಗಷ್ಟೇ ದೀರ್ಘಾವಧಿಯ ನಿರೀಕ್ಷೆಯ ನಂತರ ಕೇಂದ್ರ ಸರ್ಕಾರ ತುಟ್ಟಿ ಭತ್ಯೆ ಹಾಗೂ ಪರಿಹಾರ ಭತ್ಯೆಯನ್ನು ಹೆಚ್ಚಿಸಿದೆ. ಇದು ಜುಲೈ 2021 ರಿಂದ ಜಾರಿಗೆ ಬಂದಿದೆ. ಈ ಹೆಚ್ಚಳವನ್ನು ಬೇಸಿಕ್ ಪೆನ್ಷನ್ ನಲ್ಲಿ ಮಾಡಲಾಗಿದೆ. ಇದಕ್ಕೂ ಮೊದಲು DA ಶೇ.17ರಷ್ಟು ಇತ್ತು. ಇದೀಗ ಅದು ಹೆಚ್ಚಾಗಿ ಶೇ.28ಕ್ಕೆ ತಲುಪಿದೆ. ಇದರ ಜೊತೆಗೆ DR ನಲ್ಲಿಯೂ ಕೂಡ ಹೆಚ್ಚಳ ಮಾಡಲಾಗಿದೆ. DR ಅನ್ನು ಕೂಡ ಶೇ.17 ರಿಂದ ಶೇ.28ಕ್ಕೆ ಏರಿಕೆ ಮಾಡಲಾಗಿದೆ.
ಇದನ್ನೂ ಓದಿ-ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ 80 ದೇವಾಲಯ ಕೆಡವಿದ್ದರು: ಕಾಂಗ್ರೆಸ್ ಆರೋಪ
ಇಲ್ಲಿದೆ ತುಟ್ಟಿ ಭತ್ಯೆ ದರ ಪಟ್ಟಿ (DA Hike)
>> 1 ನೇ ಜನವರಿ 2020 ರಿಂದ 30 ಜೂನ್ 2020 ರವರೆಗೆ - ಮೂಲ ವೇತನದ ಶೇ.21 ರಷ್ಟು ಏರಿಕೆ.
>> 1 ಜನವರಿ 2020 ರಿಂದ 31 ಡಿಸೆಂಬರ್ 2020 - ಮೂಲ ವೇತನದ ಶೇ.24 ರಷ್ಟು ಏರಿಕೆ.
>> 1 ಜನವರಿ 2021 ರಿಂದ 30 ಮೇ 2021 - ಮೂಲ ವೇತನದ ಶೇ.28 ರಷ್ಟು ಏರಿಕೆ.
ಇದನ್ನೂ ಓದಿ-Post Office Scheme: 10 ಸಾವಿರ ಹೂಡಿಕೆ ಮಾಡಿ 16 ಲಕ್ಷ ರೂ. ಗಳಿಸಿ; ಇಲ್ಲಿದೆ ವಿವರ
ಸಿಸಿಎಸ್ ಪಿಂಚಣಿ ನಿಯಮಗಳು, 1972 ರಲ್ಲಿ ನೀಡಲಾಗಿರುವ ಎಲ್ಲಾ ಇತರ ಷರತ್ತುಗಳು ಮತ್ತು ಪಿಂಚಣಿ ಮತ್ತು ಪಿಡಬ್ಲ್ಯೂ ಇಲಾಖೆಯ ಆದೇಶಗಳು ಅನ್ವಯವಾಗುತ್ತವೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.