ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ 80 ದೇವಾಲಯ ಕೆಡವಿದ್ದರು: ಕಾಂಗ್ರೆಸ್ ಆರೋಪ

ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಶಿಯಲ್ಲಿ ದೇವಸ್ಥಾನಗಳನ್ನು ಕೆಡವಿ, ಶಿವನ ಪ್ರತಿಮೆ ಎಸೆದಿದ್ದರು ಎಂದು ಕಾಂಗ್ರೆಸ್ ಟೀಕಿಸಿದೆ.

Written by - Zee Kannada News Desk | Last Updated : Sep 22, 2021, 11:57 AM IST
  • ಬಿಜೆಪಿ ಆಡಳಿತವೆಂದರೆ ಮನುಷ್ಯರಷ್ಟೇ ಅಲ್ಲ ದೇವರುಗಳೂ ಭಯಪಡುತ್ತವೆ
  • ಬಿಜೆಪಿಗೆ ದೇವಾಲಯಗಳನ್ನು ಕೆಡವಿದ ಇತಿಹಾಸವೇ ಇದೆ ಎಂದು ಟೀಕಿಸಿದ ಕಾಂಗ್ರೆಸ್
  • ದೊಡ್ಡಮಟ್ಟದ ಡ್ರಗ್ಸ್ ದೇಶದೊಳಗೆ ಬರುವುದು ಗುಜರಾತ್ ಮೂಲಕವೇ ಏಕೆ ಎಂದು ಕಾಂಗ್ರೆಸ್ ಪ್ರಶ್ನಿಸಿದೆ
ಪ್ರಧಾನಿ ಮೋದಿ ಗುಜರಾತ್ ಸಿಎಂ ಆಗಿದ್ದಾಗ 80 ದೇವಾಲಯ ಕೆಡವಿದ್ದರು: ಕಾಂಗ್ರೆಸ್ ಆರೋಪ   title=
ಬಿಜೆಪಿಗೆ ದೇವಾಲಯ ಕೆಡವಿದ ಇತಿಹಾಸವೇ ಇದೆ ಎಂದು ಕಾಂಗ್ರೆಸ್ ಟೀಕಿಸಿದೆ (Photo Courtesy: @Zee News)

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ(Narendra Modi) ಗುಜರಾತ್ ಮುಖ್ಯಮಂತ್ರಿ ಆಗಿದ್ದಾಗ 80 ದೇವಾಲಯ ಕೆಡವಿದ್ದರು ಎಂದು ಕರ್ನಾಟಕ ಕಾಂಗ್ರೆಸ್ ಆರೋಪಿಸಿದೆ. ಈ ಬಗ್ಗೆ ಟ್ವೀಟ್ ಮಾಡಿದ್ದು, ರಾಜ್ಯದಲ್ಲಿ ದೇಗುಲ ತೆರವು ವಿವಾದ ವಿಚಾರವಾಗಿ ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ.  

‘ಬಿಜೆಪಿ ಆಡಳಿತ(BJP Govt.)ವೆಂದರೆ ಮನುಷ್ಯರಷ್ಟೇ ಅಲ್ಲ ದೇವರುಗಳೂ ಭಯಪಡುತ್ತವೆ! ಬಿಜೆಪಿಗೆ ದೇವಾಲಯಗಳನ್ನು ಕೆಡವಿದ ಇತಿಹಾಸವೇ ಇದೆ. ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಕಾಶಿಯಲ್ಲಿ ದೇವಸ್ಥಾನಗಳನ್ನು ಕೆಡವಿ, ಶಿವನ ಪ್ರತಿಮೆ ಎಸೆದಿದ್ದರು. ಈಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ದೇವಸ್ಥಾನಗಳನ್ನು ಕೆಡವಲು ಶುರುಮಾಡಿದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ವಿಧಾನಸೌಧ 2ನೇ ಮಹಡಿಯಲ್ಲಿ ಬಿಯರ್ ಬಾಟಲ್ ಪತ್ತೆ: ಸರ್ಕಾರದ ವಿರುದ್ಧ ಕಾಂಗ್ರೆಸ್ ಕಿಡಿಕಿಡಿ..!

PM Modi

#ದಲಿತವಿರೋಧಿಬಿಜೆಪಿ ಹ್ಯಾಶ್ ಟ್ಯಾಗ್ ಬಳಸಿ ಮತ್ತೊಂದು ಟ್ವೀಟ್ ನಲ್ಲಿ, ‘ದಲಿತ ಹೆಣ್ಣುಮಗಳು ಚಾಂದಿನಿ ನಾಯ್ಕ್ ಅವರ ಮೇಲೆ ಹಲ್ಲೆ ಎಸಗಿದ ಶಾಸಕ ಸಿದ್ದು ಸವದಿಯನ್ನು ಬಂಧಿಸದೆ, ಆ ಹೆಣ್ಣುಮಗಳಿಗೆ ಕನಿಷ್ಠ ಸಾಂತ್ವನವನ್ನೂ ಹೇಳದೆ, ತನ್ನ ಆಂತರ್ಯದಲ್ಲಿದ್ದ ದಲಿತ ವಿರೋಧಿ ಧೋರಣೆಯನ್ನು ಬಹಿರಂಗವಾಗಿ ವ್ಯಕ್ತಪಡಿಸಿದ ಬಿಜೆಪಿ ಸರ್ಕಾರ(BJP Govt.)ದಿಂದ ದಲಿತರಿಗೆ ರಕ್ಷಣೆ ಅಸಾಧ್ಯ’ವೆಂದು ಕಾಂಗ್ರೆಸ್(Congress) ಕುಟುಕಿದೆ.

‘ಬಿಜೆಪಿ ಅಡಳಿತದ ರಾಜ್ಯಗಳಲ್ಲಿ ದಲಿತರ ಮೇಲಿನ ದೌರ್ಜನ್ಯ ಮಿತಿ ಮೀರಿದೆ, ಉತ್ತರ ಪ್ರದೇಶ(Uttar Pradesh)ಕ್ಕೆ ಮೊದಲ ಸ್ಥಾನ, ಗುಜರಾತ್‌ಗೆ 2ನೇ ಸ್ಥಾನ. RSS ಮೆಚ್ಚಿಸಲು ತೀವ್ರ ಸ್ಪರ್ಧೆಗೆ ಬಿದ್ದ ಬಿಜೆಪಿ ಕರ್ನಾಟಕವನ್ನು ನಂ.1 ಮಾಡಲು ಪ್ರಯತ್ನಿಸುತ್ತಿದೆ. ದಲಿತರನ್ನು ಹಿಂಸಿಸುವುದರಲ್ಲಿ ಬಿಜೆಪಿ ವಿಕೃತ ಆನಂದ ಪಡೆಯುತ್ತದೆ’ ಎಂದು ಕಾಂಗ್ರೆಸ್ ಟೀಕಿಸಿದೆ.

ಇದನ್ನೂ ಓದಿ: ಸಿದ್ದರಾಮಯ್ಯ ಮತ್ತು ಎಚ್‌ಡಿಕೆ ಹುಸಿ ಜ್ಯಾತ್ಯತೀತ ನಾಯಕರು: ನಟ ಚೇತನ್ ಅಹಿಂಸಾ

ಗುಜರಾತಿನದ್ದು ಡ್ರಗ್ಸ್ ಮಾಡೆಲ್ ಎಂದು ಆರೋಪ

‘ದೇಶದೊಳಗೆ ನುಸುಳಲು ಮಾದಕವಸ್ತುಗಳ ಕಳ್ಳಸಾಗಾಣಿಕೆದಾರರಿಗೆ, ಭಯೋತ್ಪಾದಕರಿಗೆ ಗುಜರಾತ್(Gujarat) ಬಹುಪ್ರಿಯ ಸ್ಥಳ. ದೊಡ್ಡಮಟ್ಟದ ಡ್ರಗ್ಸ್ ದೇಶದೊಳಗೆ ಬರುವುದು ಗುಜರಾತ್ ಮೂಲಕವೇ ಏಕೆ? ನರೇಂದ್ರ ಮೋದಿಯರು ಕಳ್ಳರಿಗೆ ಅನುಕೂಲಕರ ವಾತಾವರಣ ನಿರ್ಮಿಸಿದ್ದಾರೆಯೇ? ಗುಜರಾತಿನದ್ದು ಡ್ರಗ್ಸ್ ಮಾಡೆಲ್ ಎಂಬುದು ಈಗ ದೇಶದ ಜನತೆಗೆ ಈಗ ಅರಿವಾಗಿದೆ!’ ಎಂದು ಕಾಂಗ್ರೆಸ್ ಆರೋಪಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

 

Trending News