7th Pay Commission: ಸರ್ಕಾರಿ ನೌಕರರ ಡಿಎಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್, ಯಾವಾಗ ವೇತನ ಹೆಚ್ಚಾಗಲಿದೆ?

7th Pay Commission Latest Update: ನೀವೂ ಕೂಡ ಕೇಂದ್ರ ಸರ್ಕಾರಿ ನೌಕರರಾಗಿದ್ದರೆ, ನಿಮ್ಮ ವೇತನ ಮತ್ತೆ ಹೆಚ್ಚಾಗಲಿದೆ. ಮಾರ್ಚ್ ತಿಂಗಳ ಎಐಸಿಪಿಐ ಅಂಕಿ-ಅಂಶಗಳು ಬಹಿರಂಗಗೊಂಡಿವೆ. ಈ ಅಂಕಿ ಅಂಶಗಳ ಪ್ರಕಾರ ಕೇಂದ್ರ ಸರ್ಕಾರಿ ನೌಕರರ ವೇತನ ಜುಲೈ ತಿಂಗಳಿನಲ್ಲಿ ಹೆಚ್ಚಾಗುವುದು ಬಹುತೇಕ ನಿಶ್ಚಿತವಾಗಿದೆ. ಹಾಗಾದರೆ, ಬನ್ನಿ ಈ ಕುರಿತಾದ ಲೇಟೆಸ್ಟ್ ಅಪ್ಡೇಟ್ ತಿಳಿದುಕೊಳ್ಳೋಣ ಬನ್ನಿ,  

Written by - Nitin Tabib | Last Updated : May 13, 2022, 06:31 PM IST
  • ಮಾರ್ಚ್ ತಿಂಗಳ ಎಐಸಿಪಿಐ ಅಂಕಿ-ಅಂಶಗಳು ಬಹಿರಂಗ
  • ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಮತ್ತೆ ಏರಿಕೆ
  • ಜುಲೈ ತಿಂಗಳಲ್ಲಿ ಡಿಎ ಮತ್ತೆ ಶೇ.4ರಷ್ಟು ಹೆಚ್ಚಾಗುವ ನಿರೀಕ್ಷೆ ಇದೆ
7th Pay Commission: ಸರ್ಕಾರಿ ನೌಕರರ ಡಿಎಗೆ ಸಂಬಂಧಿಸಿದಂತೆ ಬಿಗ್ ಅಪ್ಡೇಟ್, ಯಾವಾಗ ವೇತನ ಹೆಚ್ಚಾಗಲಿದೆ? title=
DA Hike

7th Pay Commission: ಕೇಂದ್ರ ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ಸಿಗಲಿದೆ. ವಾಸ್ತವದಲ್ಲಿ ಇತ್ತೀಚಿನ ಅಂದರೆ ಮಾರ್ಚ್ ತಿಂಗಳ ಎಐಸಿಪಿಐ ಅಂಕಿ-ಅಂಶಗಳು ಬಹಿರಂಗಗೊಂಡಿದ್ದು, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಮತ್ತೆ ಶೇ.4ರಷ್ಟು ಹೆಚ್ಚಾಗಲಿದೆ. ಆದರೆ, ಏಪ್ರಿಲ್ ಹಾಗೂ ಮೇ ತಿಂಗಳ ಎಐಸಿಪಿಐ ಅಂಕಿ-ಅಂಶಗಳು ಇನ್ನೂ ಬಹಿರಂಗಗೊಂಡಿಲ್ಲ. ಈ ಡಿಎ ಹೆಚ್ಚಳದ ನಂತರ ಮತ್ತೆ ನೌಕರರ ವೇತನ ಹೆಚ್ಚಾಗಲಿದೆ.

ತುಟ್ಟಿಭತ್ಯೆಯಲ್ಲಿ ಶೇ.4ರಷ್ಟು ಹೆಚ್ಚಳ
ಮಾರ್ಚ್ ತಿಂಗಳ ಆಲ್ ಇಂಡಿಯಾ ಕಂಜ್ಯೂಮರ್ ಪ್ರೈಸ್ ಇಂಡೆಕ್ಸ್ ಅಂಕಿ-ಅಂಶಗಳ ಪ್ರಕಾರ, ಸರ್ಕಾರಿ ನೌಕರರ ವೇತನದಲ್ಲಿ ಶೇ.4ರ ವೇತನ ಹೆಚ್ಚಾಗುವ ಸಾಧ್ಯತೆ ಇದೆ. ಇದಕ್ಕೂ ಮೊದಲು ಕಳೆದ ಡಿಸೆಂಬರ್ ನಿಂದ ಎಐಸಿಪಿಐ ಸೂಚ್ಯಂಕದಲ್ಲಿ ಸತತ ಇಳಿಕೆ ಗಮನಿಸಲಾಗಿತ್ತು. ಆದರೆ, ಮಾರ್ಚ್ ಅಂಕಿ-ಅಂಶಗಳು ಬಹಿರಂಗಗೊಂಡ ಬಳಿಕ ಡಿಎ ಹೆಚ್ಚಾಗುವುದು ಬಹುತೇಕ ನಿಶ್ಚಿತವಾಗಿದೆ.

ಶೇ.38 ರಷ್ಟು ಡಿಎ ಹೆಚ್ಚಾದರೆ ವೇತನದಲ್ಲಿ ಎಷ್ಟು ವೃದ್ದಿ
ಒಂದು ವೇಳೆ ಎಲ್ಲವೂ ಅಂದುಕೊಂಡಂತೆ ನಡೆದರೆ ಮತ್ತು ಸರ್ಕಾರ ಶೇ.4 ರಷ್ಟು ತುಟ್ಟಿಭತ್ಯೆಯನ್ನು ಹೆಚ್ಚಿಸಿದರೆ, ಕೇಂದ್ರ ಸರ್ಕಾರಿ ನೌಕರರ ತುಟ್ಟಿಭತ್ಯೆ ಶೇ.34 ರಿಂದ ಶೇ.38ಕ್ಕೆ ಏರಿಕೆಯಾಗಲಿದೆ. ಹಾಗಾದರೆ ಬನ್ನಿ ಕನಿಷ್ಠ ಮತ್ತು ಗರಿಷ್ಠ ವೇತನ ಶ್ರೇಣಿಯ ಮೇಲೆ ಇದು ಯಾವ ರೀತಿಯ ಪ್ರಭಾವ ಬೀರಲಿದೆ ತಿಳಿದುಕೊಳ್ಳೋಣ ಬನ್ನಿ,

ಇದನ್ನೂ ಓದಿ-LIC IPO Share Allotment: ನೀವೂ ಕೂಡ ಎಲ್ಐಸಿಯಲ್ಲಿ ಐಪಿಓಗಾಗಿ ಅಪ್ಲೈ ಮಾಡಿದ್ದೀರಾ? ಈ ರೀತಿ ನಿಮ್ಮ ಸ್ಟೇಟಸ್ ಪರಿಶೀಲಿಸಿ

ಗರಿಷ್ಠ ಮೂಲ ವೇತನದ ಮೇಲೆ ಲೆಕ್ಕಾಚಾರ ಹೀಗಿರಲಿದೆ
1. ಉದ್ಯೋಗಿಯ ಮೂಲ ವೇತನ: 56,900 ರೂ
2. ಹೊಸ ತುಟ್ಟಿಭತ್ಯೆ (38%): ರೂ.21,622/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%): ರೂ.19,346/ತಿಂಗಳು
4. ತುಟ್ಟಿಭತ್ಯೆಯಲ್ಲಿ ಒಟ್ಟು ಹೆಚ್ಚಳ: 21,622-19,346 = ರೂ 2,276/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ: 2,276X12 = 27,312 ರೂ.

ಇದನ್ನೂ ಓದಿ-Bank Holidays : ಬ್ಯಾಂಕ್ ಗ್ರಾಹಕರ ಗಮನಕ್ಕೆ : ನಾಳೆಯಿಂದ 3 ದಿನ ಬ್ಯಾಂಕ್‌ಗಳು ಬಂದ್!

ಕನಿಷ್ಠ ಮೂಲ ವೇತನದ ಮೇಲೆ ಲೆಕ್ಕಾಚಾರ ಹೀಗಿರಲಿದೆ
1. ಉದ್ಯೋಗಿಯ ಮೂಲ ವೇತನ: ರೂ 18,000
2. ಹೊಸ ತುಟ್ಟಿಭತ್ಯೆ (38%): ರೂ.6840/ತಿಂಗಳು
3. ಇದುವರೆಗಿನ ತುಟ್ಟಿಭತ್ಯೆ (34%): ರೂ.6120/ತಿಂಗಳು
4. ತುಟ್ಟಿಭತ್ಯೆಯಲ್ಲಿ ಒಟ್ಟು ಹೆಚ್ಚಳ: 6840-6120 = ರೂ.720/ತಿಂಗಳು
5. ವಾರ್ಷಿಕ ವೇತನದಲ್ಲಿ ಹೆಚ್ಚಳ: 720 X12 = 8,640 ರೂ

ಇದನ್ನೂ ನೋಡಿ-

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News