ಡಿಎ ಏರಿಕೆ ಬಳಿಕ ಒಂದೂವರೆ ಪಟ್ಟು ಹೆಚ್ಚಳವಾಗುವುದು ಸರ್ಕಾರಿ ನೌಕರರ ವೇತನ ! ಹೀಗಿರುವುದು ಲೆಕ್ಕಾಚಾರ

7th Pay Commission Latest Update:ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳ ಮಾಡಲಾಗುತ್ತದೆ.  

Written by - Ranjitha R K | Last Updated : Oct 19, 2023, 01:46 PM IST
  • ನೌಕರರ ತುಟ್ಟಿ ಭತ್ಯೆಯಲ್ಲಿ ಶೇಕಡಾ 4 ರಷ್ಟು ಹೆಚ್ಚಳ
  • ಮುಂದಿನ ಹೆಚ್ಚಳವು ಜನವರಿ 1, 2024 ರಿಂದ ಅನ್ವಯ
  • ಎಷ್ಟಾಗುವುದು ನೌಕರರ ವೇತನ
ಡಿಎ ಏರಿಕೆ ಬಳಿಕ ಒಂದೂವರೆ ಪಟ್ಟು ಹೆಚ್ಚಳವಾಗುವುದು ಸರ್ಕಾರಿ ನೌಕರರ ವೇತನ !  ಹೀಗಿರುವುದು ಲೆಕ್ಕಾಚಾರ  title=

7th Pay Commission Latest Update : ಕೇಂದ್ರ ಸರ್ಕಾರವು ನೌಕರರ ತುಟ್ಟಿ ಭತ್ಯೆಯನ್ನು ಶೇಕಡಾ 4 ರಷ್ಟು ಹೆಚ್ಚಿಸಿದೆ. ಈ ಮೂಲಕ ನೌಕರರು ಪಡೆಯುವ ಒಟ್ಟು ಡಿಎ ಶೇ 46ಕ್ಕೆ ಏರಿಕೆಯಾಗಿದೆ. ತುಟ್ಟಿಭತ್ಯೆ ಹೆಚ್ಚಳದೊಂದಿಗೆ ಸರ್ಕಾರಿ ನೌಕರರ ವೇತನದಲ್ಲಿ ಭಾರೀ ಹೆಚ್ಚಳವಾಗಲಿದೆ. ಪ್ರತಿ ಆರು ತಿಂಗಳಿಗೊಮ್ಮೆ ಸರ್ಕಾರಿ ನೌಕರರ ತುಟ್ಟಿಭತ್ಯೆಯಲ್ಲಿ ಹೆಚ್ಚಳ ಮಾಡಲಾಗುತ್ತದೆ.  

ನಿಯಮಗಳ ಪ್ರಕಾರ, ಡಿಎಯಲ್ಲಿನ ಮುಂದಿನ ಹೆಚ್ಚಳವು ಜನವರಿ 1, 2024 ರಿಂದ ಅನ್ವಯವಾಗುತ್ತದೆ. ಇದು ಎಷ್ಟರ ಮಟ್ಟಿಗೆ ಆಗಲಿದೆ ಎನ್ನುವುದು ಮುಂದಿನ ದಿನಗಳಲ್ಲಿ ತಿಳಿಯುತ್ತದೆ. ಆದರೆ, ಕಳೆದ ಮೂರು ಬಾರಿಯಂತೆ ತುಟ್ಟಿಭತ್ಯೆ ಶೇ 4 ರಷ್ಟು ಏರಿಕೆಯಾದರೆ ಒಟ್ಟು ಡಿಎ  50 ಪ್ರತಿಶತಕ್ಕೆ  ತಲುಪುತ್ತದೆ. 

ಇದನ್ನೂ ಓದಿ : ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ! ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಲಾಭದಾಯಕ ಬದಲಾವಣೆಗಳು !

ಡಿಎ ಶೇ.50ಕ್ಕೆ ಏರಿಕೆ : 
ತುಟ್ಟಿಭತ್ಯೆಯನ್ನು AICPI-IW ಸೂಚ್ಯಂಕದ ಆಧಾರದ ಮೇಲೆ ಸರ್ಕಾರವು ಲೆಕ್ಕಹಾಕುತ್ತದೆ.  ಆಗಸ್ಟ್‌ನಲ್ಲಿ, AICPI-IW ಸೂಚ್ಯಂಕವು 139.2 ಅಂಕಗಳನ್ನು ತಲುಪಿದೆ. ಇದರೊಂದಿಗೆ ತುಟ್ಟಿ ಭತ್ಯೆ ಶೇಕಡಾ 47.97 ತಲುಪಿದೆ. ಸೆಪ್ಟೆಂಬರ್‌ನಿಂದ ಡಿಸೆಂಬರ್‌ವರೆಗಿನ AICPI-IW ಸೂಚ್ಯಂಕದ ಸಂಖ್ಯೆಗಳು ಇನ್ನೂ ಬರಬೇಕಿದೆ. ಇಂತಹ ಪರಿಸ್ಥಿತಿಯಲ್ಲಿ ಮುಂದಿನ ವರ್ಷ ಡಿಎ ಶೇ.50ಕ್ಕೆ ಏರಿಕೆಯಾಗುವ ಭರವಸೆ ಇನ್ನಷ್ಟು ಹೆಚ್ಚಿದೆ.

ಶೂನ್ಯವಾಗುವುದು ತುಟ್ಟಿಭತ್ಯೆ : 
ತುಟ್ಟಿಭತ್ಯೆ ಶೇಕಡಾ 50 ತಲುಪಿದ ಅದನ್ನು ಕೇಂದ್ರ ನೌಕರರ ಮೂಲ ವೇತನಕ್ಕೆ ಸೇರಿಸಲಾಗುತ್ತದೆ. ಅಲ್ಲದೆ, ತುಟ್ಟಿಭತ್ಯೆಯನ್ನು  ಶೂನ್ಯ ಮಾಡಲಾಗುತ್ತದೆ. ಅಂದರೆ ಡಿಎ ಲೆಕ್ಕಾಚಾರ ಮತ್ತೆ ಸೊನ್ನೆಯಿಂದ ಆರಂಭವಾಗಲಿದೆ. 2016 ರಲ್ಲಿ, ಏಳನೇ ವೇತನ ಆಯೋಗವನ್ನು ಜಾರಿಗೊಳಿಸುವಾಗ, ತುಟ್ಟಿಭತ್ಯೆ ಲೆಕ್ಕಾಚಾರದ ಸೂತ್ರವನ್ನು ಸರ್ಕಾರವು ಬದಲಾಯಿಸಿತು. ತುಟ್ಟಿಭತ್ಯೆ 50 ಪ್ರತಿಶತ ತಲುಪಿದಾಗಲೆಲ್ಲಾ ಅದನ್ನು ಪರಿಷ್ಕರಿಸಲಾಗುವುದು. ಅಂದರೆ, 18000 ರೂ ಮೂಲ ವೇತನ ಹೊಂದಿರುವ ಉದ್ಯೋಗಿಗೆ, 9000 ರೂ ಡಿಎ ಸೇರಿಸಿದ ನಂತರ, ಅವರ ಮೂಲ ವೇತನ  27000 ರೂಪಾಯಿ ಆಗುವುದು. 

ಇದನ್ನೂ ಓದಿ : Top-5 Best Selling Cars: ಅತಿಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಕಾರುಗಳು

ಮೂಲ ವೇತನದ ಮೇಲೆ ಹೇಗೆ ಪರಿಣಾಮ ಬೀರಲಿದೆ ಎನ್ನುವ ಅಂತಿಮ ನಿರ್ಧಾರವನ್ನು ಸರ್ಕಾರವೇ ತೆಗೆದುಕೊಳ್ಳಲಿದೆ. ಸದ್ಯಕ್ಕೆ ಈ ಬಗ್ಗೆ ಸರ್ಕಾರದಿಂದ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಮುಂದಿನ ಡಿಎ ಹೆಚ್ಚಳ ಜನವರಿಯಿಂದ ಜಾರಿಗೆ ಬರುತ್ತದೆಯಾದರೂ, ಸರ್ಕಾರ ಅದನ್ನು ಸಾಮಾನ್ಯವಾಗಿ ಮಾರ್ಚ್ ವೇಳೆಗೆ ಘೋಷಣೆ ಮಾಡುವ ಸಾಧ್ಯತೆ ಹೆಚ್ಚು. 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

 

Trending News