ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ! ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಲಾಭದಾಯಕ ಬದಲಾವಣೆಗಳು !

ಪಿಂಚಣಿ ಯೋಜನೆ ವಿಚಾರ ಈಗ ರಾಜಕೀಯ ಮತ ಸಂಗ್ರಹಿಸುವ ತಂತ್ರವಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ.

Written by - Ranjitha R K | Last Updated : Oct 19, 2023, 01:07 PM IST
  • ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಪರಿಷ್ಕರಿಸುವ ಸಾಧ್ಯತೆ
  • ಹೆಚ್ಚಿನ ಆದಾಯವನ್ನು ಒದಗಿಸಲು "ಆಕ್ಚುರಿಯಲ್ ಲೆಕ್ಕಾಚಾರಗಳಲ್ಲಿ" ಬದಲಾವಣೆ
  • ರಾಜಕೀಯ ತಂತ್ರವಾಗಿ ಬದಲಾದ ಪಿಂಚಣಿ ಯೋಜನೆ
ಸರ್ಕಾರಿ ನೌಕರರಿಗೆ ಮತ್ತೊಂದು ಸಿಹಿ ಸುದ್ದಿ ! ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಲಾಭದಾಯಕ ಬದಲಾವಣೆಗಳು !  title=

ನವದೆಹಲಿ : ಉನ್ನತ ಮಟ್ಟದ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಕೇಂದ್ರವು ಈ ವರ್ಷದ ಅಂತ್ಯದ ವೇಳೆಗೆ ರಾಷ್ಟ್ರೀಯ ಪಿಂಚಣಿ ಯೋಜನೆಯನ್ನು (ಎನ್‌ಪಿಎಸ್) ಪರಿಷ್ಕರಿಸುವ ಸಾಧ್ಯತೆಯಿದೆ. ನೌಕರರು ತಮ್ಮ ಕೊನೆಯ ವೇತನದ ಕನಿಷ್ಠ 40-45% ವನ್ನು ಪಿಂಚಣಿಯಾಗಿ ಪಡೆಯುವುದನ್ನು ಖಚಿತಪಡಿಸಿಕೊಳ್ಳಲು ಈ ಬದಲಾವಣೆ ತರಬಹುದು ಎನ್ನಲಾಗಿದೆ. ಈ ಬಗ್ಗೆ  ಅಧ್ಯಯನ ನಡೆಸಲಾಗಿದೆ ಎಂದು ಮೂಲಗಳು ತಿಳಿಸಿವೆ. 

ರಾಜಕೀಯ ತಂತ್ರವಾಗಿ ಬದಲಾದ ಪಿಂಚಣಿ ಯೋಜನೆ : 
ಪಿಂಚಣಿ ಯೋಜನೆ ವಿಚಾರ ಈಗ ರಾಜಕೀಯ ಮತ ಸಂಗ್ರಹ ತಂತ್ರವಾಗಿ ಮಾರ್ಪಟ್ಟಿದೆ. ಕೇಂದ್ರ ಸರ್ಕಾರಿ ನೌಕರರು ಹಳೆ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸುವಂತೆ ಹಲವು ದಿನಗಳಿಂದ ಒತ್ತಾಯಿಸುತ್ತಿದ್ದಾರೆ. ಪ್ರತಿಪಕ್ಷದ ಆಡಳಿತವಿರುವ ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಗೆ (OPS) ಬದಲಾಗುತ್ತಿವೆ. ಹಳೆಯ ಪಿಂಚಣಿ ಯೋಜನೆಯಲ್ಲಿ, ನೌಕರರು ಗಳಿಸುವ ವೇತನದ 50%ವನ್ನು ನಿವೃತ್ತಿಯ ನಂತರ ಪಿಂಚಣಿಯಾಗಿ  ನೀಡಲಾಗುತ್ತದೆ. ಪ್ರಸ್ತುತ ಮಾರುಕಟ್ಟೆ ಸಂಬಂಧಿತ ಪಿಂಚಣಿ ಯೋಜನೆ, 2004 ರಲ್ಲಿ ಪ್ರಾರಂಭವಾಯಿತು. ಇದು OPSನಲ್ಲಿರುವಂತೆ ಯಾವುದೇ ಖಾತರಿಯ ಮೂಲ ಮೊತ್ತವನ್ನು ಒದಗಿಸುವುದಿಲ್ಲ. ವಿವಾದದ ಇನ್ನೊಂದು ಅಂಶವೆಂದರೆ ಎನ್‌ಪಿಎಸ್ 10% ಉದ್ಯೋಗಿ ಕೊಡುಗೆ ಮತ್ತು 14% ಸರ್ಕಾರಿ ಕೊಡುಗೆಯನ್ನು ಹೊಂದಿರುತ್ತದೆ. ಆದರೆ  ಹಳೆಯ ಪಿಂಚಣಿ ಯೋಜನೆಗೆ ಉದ್ಯೋಗಿಗಳು ಕೊಡುಗೆ ನೀಡಬೇಕಾಗಿಲ್ಲ. 

ಇದನ್ನೂ ಓದಿ : Top-5 Best Selling Cars: ಅತಿಹೆಚ್ಚು ಮಾರಾಟವಾಗುತ್ತಿರುವ ಟಾಪ್ 5 ಕಾರುಗಳು

ಪರಿಷ್ಕೃತ ಹೊಸ ಪಿಂಚಣಿ ಯೋಜನೆಯು ಹೆಚ್ಚಿನ ಆದಾಯವನ್ನು ಒದಗಿಸಲು "ಆಕ್ಚುರಿಯಲ್ ಲೆಕ್ಕಾಚಾರಗಳಲ್ಲಿ" ಕೆಲವು ಬದಲಾವಣೆಗಳನ್ನು ಹೊಂದಿರುತ್ತದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಉದ್ಯೋಗಿ ಮತ್ತು ಉದ್ಯೋಗದಾತರ (ಇಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು) ಕೊಡುಗೆಗಳಲ್ಲಿ ಬದಲಾವಣೆಯಾಗುವ ಸಾಧ್ಯತೆಯಿದೆ. 

ರಾಷ್ಟ್ರೀಯ ಪಿಂಚಣಿ ಯೋಜನೆಯ ಪಿಂಚಣಿದಾರರು ನಿವೃತ್ತಿಯ ನಂತರ 60% ಕಾರ್ಪಸ್ ಅನ್ನು ಹಿಂಪಡೆಯಬಹುದು. ಉಳಿದ 40% ಗೆ ವರ್ಷಾಶನ ಯೋಜನೆಯನ್ನು ಖರೀದಿಸಬಹುದು. 

ರಾಜಸ್ಥಾನ, ಛತ್ತೀಸ್‌ಗಢ, ಜಾರ್ಖಂಡ್, ಹಿಮಾಚಲ ಪ್ರದೇಶ ಮತ್ತು ಪಂಜಾಬ್ ಸೇರಿದಂತೆ ಪ್ರತಿಪಕ್ಷಗಳ ಆಡಳಿತವಿರುವ ರಾಜ್ಯಗಳು ಹಳೆಯ ಪಿಂಚಣಿ ವ್ಯವಸ್ಥೆಗೆ ಮರಳಿವೆ. ಇದು ರಾಜ್ಯ ಸರ್ಕಾರಗಳನ್ನು ದಿವಾಳಿಯಾಗಿಸಬಹುದು ಎಂದು ಕೆಲವು ಅರ್ಥಶಾಸ್ತ್ರಜ್ಞರು ಎಚ್ಚರಿಸಿದ್ದಾರೆ. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಇಂದಿನ ಅಡಿಕೆ ರೇಟ್ ಹೇಗಿದೆ..?

ಅಸ್ತಿತ್ವದಲ್ಲಿರುವ ರಾಷ್ಟ್ರೀಯ ಪಿಂಚಣಿ ಯೋಜನೆಯಡಿಯಲ್ಲಿ, ಸುಮಾರು 8.7 ಮಿಲಿಯನ್ ಕೇಂದ್ರ ಮತ್ತು ರಾಜ್ಯ-ಸರ್ಕಾರಿ ಉದ್ಯೋಗಿಗಳು ತಮ್ಮ ಮೂಲ ವೇತನದ 10% ರಷ್ಟು ಕೊಡುಗೆ ನೀಡುತ್ತಾರೆ. ಈ ಮಧ್ಯೆ, ಸರ್ಕಾರವು 14%ದಷ್ಟನ್ನು ಪಾವತಿಸುತ್ತದೆ. ಅಂತಿಮ ಪಾವತಿಯು ನಿಧಿಯಿಂದ ಗಳಿಸಿದ ಆದಾಯವನ್ನು ಅವಲಂಬಿಸಿರುತ್ತದೆ.

ಹಳೆಯ ಪಿಂಚಣಿ ವ್ಯವಸ್ಥೆಯು ಕೇಂದ್ರ ಸರ್ಕಾರಿ ನೌಕರರ ಕೊನೆಯ ವೇತನದ 50% ಶಾಶ್ವತ ಪಿಂಚಣಿಯನ್ನು ಖಾತರಿಪಡಿಸುತ್ತದೆ. ಆದ್ದರಿಂದ, ಇದು ಉತ್ತಮ ನಿವೃತ್ತಿ ಯೋಜನೆ ಎಂದು ಪರಿಗಣಿಸಲಾಗಿದೆ.

"ಸರ್ಕಾರವು ಹಳೆಯ ಯೋಜನೆಯನ್ನು ಮತ್ತೆ ಜಾರಿ ಮಾಡುವುದಿಲ್ಲ. ಆದರೆ ರಾಷ್ಟ್ರೀಯ ಪಿಂಚಣಿ ಯೋಜನೆಯಲ್ಲಿ ಕೆಲವು ಬದಲಾವಣೆಗಳನ್ನು ತರಲಿದೆ ಎಂದು ಹೇಳಲಾಗುತ್ತಿದೆ. ಈ ಮೂಲಕ, ನಿಗದಿತ ಮೂಲ ಮೊತ್ತವನ್ನು ಒದಗಿಸುತ್ತದೆ" ಎಂದು ಸರ್ಕಾರದ ಮೂಲಗಳು ತಿಳಿಸಿವೆ.

ಇದನ್ನೂ ಓದಿ : ಸರ್ಕಾರಿ ನೌಕರರ ವೇತನದಲ್ಲಿ 27 ಸಾವಿರ ರೂ. ಹೆಚ್ಚಳ ! ಈ ತಿಂಗಳಿನಿಂದಲೇ ಜಾರಿ !

ಮುಂದಿನ ವರ್ಷ ಸಾರ್ವತ್ರಿಕ ಚುನಾವಣೆಗಳು ನಡೆಯಲಿವೆ. ಆಡಳಿತಾರೂಢ ಭಾರತೀಯ ಜನತಾ ಪಕ್ಷದ ನೇತೃತ್ವದ ಕೇಂದ್ರ ಸರ್ಕಾರವು ಈ ವರ್ಷದ ಏಪ್ರಿಲ್‌ನಲ್ಲಿ ಪ್ರಸ್ತುತ ಪಿಂಚಣಿ ವ್ಯವಸ್ಥೆಯನ್ನು ಪರಿಶೀಲಿಸಲು ಟಿವಿ ಸೋಮನಾಥನ್ ನೇತೃತ್ವದ ಸಮಿತಿಯನ್ನು ರಚಿಸಿತ್ತು.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

Trending News