Akshaya Tritiya 2021: ಅಕ್ಷಯ ತೃತೀಯದಲ್ಲಿ ಲಕ್ಷ್ಮಿ ದೇವಿಯನ್ನು ಪೂಜಿಸಲಾಗುತ್ತದೆ. ಈ ದಿನ ಪ್ರಾರಂಭಿಸುವ ಕೆಲಸದಲ್ಲಿ ಯಶಸ್ಸು ಸಿಗಲಿದೆ ಎಂದು ಹೇಳಲಾಗುತ್ತದೆ. ಅಕ್ಷಯ ತೃತೀಯದಂದು ಚಿನ್ನ, ಬೆಳ್ಳಿ ಖರೀದಿಸುವುದರಿಂದ ಮನೆಯ ಸಂಪತ್ತು ಹೆಚ್ಚುತ್ತದೆ ಎಂಬ ನಂಬಿಕೆ ಇದೆ. ಆದರೆ ಅಕ್ಷಯ ತೃತೀಯದಂದು ಕೆಲವು ಕೆಲಸಗಳನ್ನು ಮಾಡುವುದರಿಂದ ಇಡೀ ವರ್ಷ ಲಕ್ಷ್ಮೀ ಕೃಪೆ ನಿಮ್ಮ ಮೇಲೆ ಇರಲಿದೆ ಎಂದು ನಿಮಗೆ ತಿಳಿದಿದೆಯೇ?
ವೈಶಾಖ ಮಾಸದ ಶುಕ್ಲ ಪಕ್ಷದ ತೃತೀಯ ತಿಥಿಯಾ (Akshaya Tritiya 2021) ಅಂದರೆ ಅಕ್ಷಯ ತೃತೀಯ ಈ ವರ್ಷ ಮೇ 14 ಶುಕ್ರವಾರ. ಶುಕ್ರವಾರವನ್ನು ಲಕ್ಷ್ಮಿ ದೇವಿಯ ದಿನವೆಂದು ಪರಿಗಣಿಸಲಾಗಿದೆ. ಈ ದಿನದಂದು ಅಕ್ಷಯ ತೃತೀಯ ಕಾರಣ ಈ ದಿನ ಹೆಚ್ಚು ವಿಶೇಷವಾಗುತ್ತದೆ.
ಇದನ್ನೂ ಓದಿ - ಅಕ್ಷಯ ತೃತೀಯ ದಿನ ಈ ಏಳು ವಸ್ತುಗಳನ್ನು ಮನೆಗೆ ತನ್ನಿ, ಮಹಾಲಕ್ಷ್ಮಿಯೇ ಒಲಿಯುತ್ತಾಳೆ
ಅಕ್ಷಯ ತೃತೀಯದಂದು ಏನು ಮಾಡಬೇಕು?
>> ಲಕ್ಷ್ಮೀ ದೇವಿಯು ಸ್ವಚ್ಛತೆಯನ್ನು ಪ್ರೀತಿಸುತ್ತಾರೆ. ಆದ್ದರಿಂದ, ಈ ದಿನ ಮನೆಯನ್ನು ಶುಚಿಗೊಳಿಸಿ. ಶುಭ್ರವಾದ ಬಟ್ಟೆ ಧರಿಸಿ ಪೂಜೆ ಮಾಡಿ. ಲಕ್ಷ್ಮಿಯನ್ನು ಆಹ್ವಾನಿಸಿ.
>> ವಾಸ್ತು (Vaastu) ಶಾಸ್ತ್ರದ ಪ್ರಕಾರ, ನಿಮ್ಮ ವೃತ್ತಿ ಅಥವಾ ವ್ಯವಹಾರಕ್ಕೆ ಸಂಬಂಧಿಸಿದ ಚಿತ್ರವನ್ನು ಮನೆಯಲ್ಲಿ ಸೂಕ್ತ ಸ್ಥಳದಲ್ಲಿ ಇರಿಸಿ.
>> ಈ ದಿನ ದೇವಿಗೆ ನೇವೇದ್ಯಕ್ಕೆ ಇರಿಸಿದ ಸಾತ್ವಿಕ ಆಹಾರವನ್ನು ಸೇವಿಸಿ. ಮನೆಯಲ್ಲಿ ಜಗಳವಾಡುವುದನ್ನು ತಪ್ಪಿಸಿ.
>> ಅಗತ್ಯವಿರುವವರಿಗೆ ಸಹಾಯ ಮಾಡಿ. ನಿಮಗೆ ಸಾಧ್ಯವಾದಷ್ಟು ದಾನ ಮಾಡಿ.
>> ಈ ದಿನ ಲಕ್ಷ್ಮಿ ದೇವಿಯನ್ನು ಕೇಸರಿ ಮತ್ತು ಅರಿಶಿನದಿಂದ ಪೂಜಿಸಬೇಕು. ಹೀಗೆ ಮಾಡುವುದರಿಂದ ನಿಮ್ಮ ಆರ್ಥಿಕ ಸಂಕಷ್ಟಗಳು ದೂರವಾಗುತ್ತವೆ.
>> ಈ ದಿನದಂದು ಮಾಡಿದ ಕಾರ್ಯಗಳು ನವೀಕರಿಸಬಹುದಾದವು ಎಂಬ ನಂಬಿಕೆ ಇದೆ. ಆದ್ದರಿಂದ, ಈ ದಿನ ಶುಭ ಕಾರ್ಯಗಳನ್ನು ಮಾಡಬೇಕು.
>> ಚಿನ್ನ ಅಥವಾ ಬೆಳ್ಳಿಯ ಲಕ್ಷ್ಮಿಯ ಪಾದುಕೆಯನ್ನು ಮನೆಗೆ ತಂದು ನಿಯಮಿತವಾಗಿ ಪೂಜೆ ಮಾಡಿ.
ಇದನ್ನೂ ಓದಿ - Mahamrityunjaya Mantra: ಮಹಾಮೃತುಂಜಯ ಮಂತ್ರವನ್ನು ಜಪಿಸುವ ಮೊದಲು ಈ ನಿಯಮಗಳನ್ನು ತಿಳಿದುಕೊಳ್ಳಿ
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.