Amazon-Flipkart ಮೇಲೆ Shopping ಮಾಡುವ ವೇಳೆ ಎಚ್ಚರ!

Amazon-Flipkart: ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವ ವೇಳೆ ಹ್ಯಾಕರ್ ಗಳು ನಮ್ಮನ್ನು ಗುರಿಯಾಗಿಸುವ ಸಾಧ್ಯತೆ ಹೆಚ್ಚಾಗಿರುತ್ತದೆ. ಹೀಗಾಗಿ ಆನ್ಲೈನ್ ನಲ್ಲಿ ಶಾಪಿಂಗ್ ಮಾಡುವಾಗ ಕೆಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮುಖ್ಯ.

Written by - Nitin Tabib | Last Updated : Jan 19, 2021, 04:22 PM IST
  • ಇತ್ತೀಚಿನ ದಿನಗಳಲ್ಲಿ ಆನ್ಲೈನ್ ನಲ್ಲಿ ಶಾಪಿಂಗ್ ತುಂಬಾ ವೇಗವಾಗಿ ಬೆಳೆಯುತ್ತಿದೆ.
  • ಆನ್ಲೈನ್ ಶಾಪಿಂಗ್ ಅವಧಿಯಲ್ಲಿ ಹ್ಯಾಕರ್ ಗಳು ತುಂಬಾ ಸಕ್ರೀಯರಾಗಿರುತ್ತಾರೆ.
  • ಹೀಗಾಗಿ ಶಾಪಿಂಗ್ ಮಾಡುವ ಮೇಲೆ ಈ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳಿ.
Amazon-Flipkart ಮೇಲೆ Shopping ಮಾಡುವ ವೇಳೆ ಎಚ್ಚರ! title=
Online Shopping Tips(File Photo)

Online Shopping Tips:ಕಳೆದ ಕೆಲ ವರ್ಷಗಳಲ್ಲಿ ಆನ್ಲೈನ್ ನಲ್ಲಿ ಶಾಪಿಂಗ್ ರೂಢಿಯಲ್ಲಿ ಭಾರಿ ಏರಿಕೆಯನ್ನು ಗಮನಿಸಲಾಗಿದೆ. ತರಕಾರಿ ಖರೀದಿಯಿಂದ ಹಿಡಿದು ಮದುವೆಯ ಡ್ರೆಸ್ ವರೆಗೆ ಆನ್ಲೈನ್ ಶಾಪಿಂಗ್ ನಮ್ಮ ಕೆಲಸವನ್ನು ತುಂಬಾ ಸುಲಭಗೊಳಿಸಿದೆ. ಲಾಕ್ ಡೌನ್ ಕಾಲಾವಧಿಯಲ್ಲಿ ಈ ಶಾಪಿಂಗ್ ತಾಣಗಳು ನಮಗೆ ಅತಿ ಹೆಚ್ಚು ಸಾಥ್ ನೀಡಿವೆ. ಈ ಅವಧಿಯಲ್ಲಿ ಜನರು ತಮ್ಮ ಮನೆಯಲ್ಲಿಯೇ ಬಂಧಿಯಾಗಿದ್ದರು ಹಾಗೂ ಈ ಸಂದರ್ಭದಲ್ಲಿ ನಮಗೆ ಬೇಕಾದ ಎಲ್ಲ ದಿನನಿತ್ಯದ ಎಲ್ಲ ವಸ್ತುಗಳನ್ನು ಮನೆ ಬಾಗಿಲಿಗೆ ತಲುಪಿಸುವಲ್ಲಿ ಈ ತಾಣಗಳು  ತುಂಬಾ ಸಹಕರಿಸಿವೆ ಹಾಗೂ ನಮ್ಮ ಜೀವನವನ್ನು ಸುಲಭಗೊಳಿಸಿವೆ.

ಆದರೆ, ಆನ್ಲೈನ್ ಶಾಪಿಂಗ್ ನಲ್ಲಿ ಲಾಭದ ಜೊತೆಗೆ ಹಾನಿ ಕೂಡ ಇದೆ. ಆನ್ಲೈನ್ ಶಾಪಿಂಗ್ ನಿಂದಾಗುವ ಹಾನಿಗಳಾವುವು ಎಂದೂ ನೀವೂ ಯೋಚಿಸಿತ್ತಿರಬಹುದು.  ನಿಜ ಹೇಳುವುದಾದರೆ ಆನ್ಲೈನ್ ಶಾಪಿಂಗ್ ಮಾಡುವಾಗ ಹ್ಯಾಕರ್ಗಳು ಭಾರಿ ಸಕ್ರೀಯರಾಗಿರುತ್ತಾರೆ ಹಾಗೂ ಇತ್ತೀಚಿನ ದಿನಗಳಲ್ಲಿ ಸೈಬರ್ ಕ್ರೈಂ ಪ್ರಕರಣಗಳಲ್ಲಿಯೂ ಕೂಡ ಭಾರಿ  ಏರಿಕೆಯಾಗಿದೆ. ಸರಕಾರಗಳು ಕೂಡ ಕಾಲ ಕಾಲಕ್ಕೆ ಈ ಕುರಿತು ಎಚ್ಚರಿಕೆ ನೀಡುತ್ತಲೇ ಇರುತ್ತದೆ. ಆದರೂ ಕೂಡ ನಮಗೆ ತಿಳಿದು ಅಥವಾ ತಿಳಿಯದೆ ನಾವು ಕೆಲ ತಪ್ಪುಗಳನ್ನು ಮಾಡುತ್ತೇವೆ. ಈ ಲೇಖನದಲ್ಲಿ ನಾವು ಅಂತಹುದೇ ಕೆಲ ತಪ್ಪುಗಳ ಕುರಿತು ನಿಮ್ಮ ಗಮನಸೆಳೆಯುತ್ತಿದ್ದೇವೆ.

ಇತ್ತೀಚೆಗಷ್ಟೇ ಇ-ಕಾಮರ್ ಜಾಲತಾಣದ ದಿಗ್ಗಜ ಕಂಪನಿಗಳಾಗಿರುವ Flipkart ಹಾಗೂ Amazon ಗಳು ಈ ವರ್ಷದ ಮೊದಲ ಸೆಲ್ ಘೋಷಿಸಿವೆ. ಈ ಎರಡೂ ವೆಬ್ ಸೈಟ್ ಗಳಲ್ಲಿ ಜನವರಿ 20 ರಿಂದ ಸೆಲ್ ಆರಂಭವಾಗುತ್ತಿವೆ. ಈ ಸೆಲ್ ಅವಧಿಯಲ್ಲಿ ಹಲವು ರೀತಿಯ ಡೀಲ್ ಹಾಗೂ ಡಿಸ್ಕೌಂಟ್ ಗಳನ್ನು ಕೂಡ ನೀಡಲಾಗುವುದು ಹಾಗೂ ಜನರು ಭಾರಿ ಪ್ರಮಾಣದಲ್ಲಿ ಖರೀದಿ ಕೂಡ ನಡೆಸುವರು. ಈ ಅವಧಿಯಲ್ಲಿ ಒಂದು ವೇಳೆ ನೀವೂ ಕೂಡ ಖರೀದಿ ಮಾಡಲು ಬಯಸುತ್ತಿದ್ದರೆ, ನೀವು ಕೆಲ ಸಂಗತಿಗಳನ್ನು ಗಮನದಲ್ಲಿಟ್ಟುಕೊಳ್ಳುವುದು ತುಂಬಾ ಮಹತ್ವದ್ದಾಗಿದೆ. ಹಾಗಾದರೆ ಬನ್ನಿ ಆನ್ಲೈನ್ ಶಾಪಿಂಗ್ ನ ಈ ಟಿಪ್ಸ್ ಗಳನ್ನು ತಿಳಿದುಕೊಳ್ಳೋಣ.

ಇದನ್ನು ಓದಿ-Amazon Republic Day Sale ಇಂದಿನಿಂದ ಆರಂಭ : ಸಿಗಲಿದೆ ಶೇ 70ರಷ್ಟು ರಿಯಾಯಿತಿ

ಆನ್ಲೈನ್ ಶಾಪಿಂಗ್ ವೇಳೆ ಈ ಸಂಗತಿಗಳನ್ನು ನೆನಪಿನಲ್ಲಿಟ್ಟುಕೊಳ್ಳಿ 
- ವಿಶ್ವಾಸಾರ್ಹ ವೆಬ್ ಸೈಟ್ ಗಳ ಮೂಲಕವೇ ಶಾಪಿಂಗ್ ಮಾಡಿ ಹಾಗೂ ಹಣ ಪಾವತಿಸಿ.
- ಇ-ಮೇಲ್ ಗಳ ಮೂಲಕ ಬಂದ ಯಾವುದೇ ಲಿಂಕ್ ಅನ್ನು ಕ್ಲಿಕ್ಕಿಸಬೇಡಿ.
- ವೆಬ್ ಸೈಟ್ ಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವ ಮೊದಲು URL ಪರಿಶೀಲಿಸಿ.
- ಆನ್ಲೈನ್ ಶಾಪಿಂಗ್ ವೇಳೆ  Verify by Visa, Visa ಹಾಗೂ  Master Card Secure Program Code ಗಾಗಿ ಸೈನ್ ಅಪ್ ಆಗಿ.

ಇದನ್ನು ಓದಿ-ಆ ಸ್ಥಾನ ನನ್ನದು, ಬಾ ಕೆಳಗಿಳಿ, ಮತ್ತೆ ವಿಶ್ವದ ನಂ.1 ಧಣಿ ಪಟ್ಟ ಅಲಂಕರಿಸಿದ Jeff Bezos
- ನಿರಂತರವಾಗಿ ನಿಮ್ಮ ಖಾತೆಯನ್ನು ಪರಿಶೀಲಿಸಿ. ಒಂದು ವೇಳೆ ವಂಚನೆ ನಡೆದಿದ್ದರೆ ಅದನ್ನು ಸಂಬಂಧಪಟ್ಟವರಿಗೆ ವರದಿ ಮಾಡಿ.
- ಪೇಮೆಂಟ್ ಮಾಡುವ ಮುನ್ನ ವೆಬ್ ಪೇಜ್ ಮೇಲೆ ಪ್ಯಾಡ್ ಲಾಕ್ ಸೈನ್ ನತ್ತ ಗಮನವಿರಲಿ.
- ಆನ್ಲೈನ್ ಶಾಪಿಂಗ್ ಸೈಟ್ ಗೆ ಭೇಟಿ ನೀಡಲು ಇ-ಮೇಲ್ ಅಥವಾ ರೆಫರಲ್ ಲಿಂಕ್ ಗಳ ಮೇಲೆ ಕ್ಲಿಕ್ಕಿಸಬೇಡಿ. ಅಡ್ರೆಸ್ ಬಾರ್ ನಲ್ಲಿ ಯುಆರ್ಎಲ್ ಟೈಪ್ ಮಾಡಿ.

ಇದನ್ನು ಓದಿ-Flipkart Big Saving Days: ಕಡಿಮೆ ದರದಲ್ಲಿ iPhone ಖರೀದಿಸಿ, ಸಿಗಲಿದೆ 26 ಸಾವಿರ ಡಿಸ್ಕೌಂಟ್
- ಕ್ರೆಡಿಟ್ ಕಾರ್ಡ್ ನಂಬರ್, ಎಕ್ಸ್ ಪೈರಿ ದಿನಾಂಕ, ಸಿವಿಸಿ ನಂಬರ್ ಅನ್ನು ಯಾವುದೇ ಪಾಪ್ ಅಪ್ ವಿಂಡೋ ಮೇಲೆ ನಮೂದಿಸಬೇಡಿ.
- ಯಾವುದೇ ವ್ಯವಹಾರಕ್ಕೆ OTP ಒಂದು ಉತ್ತಮ ಹಾಗೂ ಸುರಕ್ಷಿತ ಆಯ್ಕೆಯಾಗಿದೆ. ಹೀಗಾಗಿ ಹಣ ಪಾವತಿಗಾಗಿ ಕೇವಲ OTP ಬಳಕೆ ಮಾಡಿ. 

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News