Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಳಿತ ಕಂಡ ಅಡಿಕೆ ಧಾರಣೆ

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. 

Written by - Puttaraj K Alur | Last Updated : Jan 19, 2022, 01:07 PM IST
  • ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಳಿತ ಕಂಡ ರಾಶಿ ಅಡಿಕೆ ಬೆಲೆ
  • ಇತ್ತೀಚಿನ ದಿನಗಳಲ್ಲಿ ಅಡಿಕೆಗೆ ಉತ್ತಮ ಬೆಲೆ ಇದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ
  • ಭದ್ರಾವತಿಯಲ್ಲಿ ಅಡಿಕೆ 46,099 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ
Arecanut Price: ರಾಜ್ಯದ ಮಾರುಕಟ್ಟೆಯಲ್ಲಿ ಮತ್ತೆ ಭರ್ಜರಿ ಏರಿಳಿತ ಕಂಡ ಅಡಿಕೆ ಧಾರಣೆ title=
ಇತ್ತೀಚಿನ ರಾಶಿ ಅಡಿಕೆ ಬೆಲೆ ಎಷ್ಟಿದೆ ತಿಳಿಯಿರಿ (Photo Courtesy: @India.com)

ಬೆಂಗಳೂರು: ರಾಜ್ಯದ ವಿವಿಧ ಮಾರುಕಟ್ಟೆಯಲ್ಲಿ ರಾಶಿ ಅಡಿಕೆಗೆ ಇತ್ತೀಚಿನ ದಿನಗಳಲ್ಲಿ ಬಂಪರ್ ಬೆಲೆ ಸಿಗುತ್ತಿದ್ದು, ಬೆಳೆಗಾರರು ಖುಷಿಯಲ್ಲಿದ್ದಾರೆ. ರಾಜ್ಯದ ಕೆಲವು ಮಾರುಕಟ್ಟೆಯಲ್ಲಿ ಮಂಗಳವಾರ ರಾಶಿ ಅಡಿಕೆ ಬೆಲೆ ಕುಸಿತ ಕಂಡಿದ್ದರೆ, ಇನ್ನು ಕೆಲವು ಜಿಲ್ಲೆಗಳಲ್ಲಿ ಭರ್ಜರಿ ಏರಿಕೆಯಾಗಿದೆ. ಕರ್ನಾಟಕ ರೈತರ ಪ್ರಮುಖ ಬೆಳೆಗಳಲ್ಲಿ ಒಂದಾಗಿರುವ ಅಡಿಕೆ(Arecanut) ಧಾರಣೆ ಇತ್ತೀಚಿನ ದಿನಗಳಲ್ಲಿ ಉತ್ತಮ ಸ್ಥಿತಿಯಲ್ಲಿದೆ.

ರಾಜ್ಯದ ಹಲವೆಡೆ ಇರುವ ಮಾರುಕಟ್ಟೆಗಳಲ್ಲಿ ಅಡಿಕೆ ಬೆಲೆಗಳು ವಿಭಿನ್ನವಾಗಿರುತ್ತದೆ. ಅಲ್ಲದೆ ಪ್ರತಿ ದಿನವೂ ಬೆಲೆಗಳಲ್ಲಿ ಏರಿಳಿತವಾಗುತ್ತಿರುತ್ತದೆ. ರಾಜ್ಯದ ವಿವಿಧ ಜಿಲ್ಲೆಗಳ ಮಾರುಕಟ್ಟೆಯಲ್ಲಿನ ಅಡಿಕೆ ಧಾರಣೆಯ ಬಗ್ಗೆ ಇಲ್ಲಿ ಮಾಹಿತಿ ನೀಡಲಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಅಡಿಕೆ ಧಾರಣೆ 50,329 ರೂ. ದರದಲ್ಲಿ ವಹಿವಾಟು ನಡೆಸುತ್ತಿದೆ. ರಾಜ್ಯದ ಪ್ರಮುಖ ಮಾರ್ಕೆಟ್‌(Market)ಗಳಲ್ಲಿ ಇತ್ತೀಚಿನ(18-01-2022)ಅಡಿಕೆ ಬೆಲೆ ಎಷ್ಟಿದೆ ಎಂಬುದರ ಬಗ್ಗೆ ತಿಳಿದುಕೊಳ್ಳಿ.

ಇದನ್ನೂ ಓದಿ:  ಅತಿ ಕಡಿಮೆ ಬೆಲೆಯಲ್ಲಿ ಮನೆ ಮತ್ತು ಮಳಿಗೆ ಖರೀದಿಸುವ ಅವಕಾಶ ನೀಡುತ್ತಿದೆ ಈ ಬ್ಯಾಂಕ್, ಶೀಘ್ರವೇ ಹೀಗೆ ನೊಂದಾಯಿಸಿಕೊಳ್ಳಿ

ತಾಲೂಕು     

ಅಡಿಕೆ  

ಗರಿಷ್ಠ ಬೆಲೆ (ಜನವರಿ 18, 2022)

ಕೊಪ್ಪ (ಚಿಕ್ಕಮಗಳೂರು ಜಿಲ್ಲೆ)                  

ರಾಶಿ ಅಡಿಕೆ  

41,319  ರೂ.   

ಚನ್ನಗಿರಿ   (ದಾವಣಗೆರೆ ಜಿಲ್ಲೆ)     

ರಾಶಿ ಅಡಿಕೆ 

46,500 ರೂ.   

ದಾವಣಗೆರೆ (ದಾವಣಗೆರೆ ಜಿಲ್ಲೆ)    

ರಾಶಿ ಅಡಿಕೆ 

44,783 ರೂ.   

ಹೊನ್ನಾಳಿ (ದಾವಣಗೆರೆ ಜಿಲ್ಲೆ)  

ರಾಶಿ ಅಡಿಕೆ 

44,900 ರೂ.   

ಸಿದ್ದಾಪುರ (ಉತ್ತರ ಕನ್ನಡ ಜಿಲ್ಲೆ)                          

ರಾಶಿ ಅಡಿಕೆ 

46,969 ರೂ.   

ಶಿರಸಿ  (ಉತ್ತರ ಕನ್ನಡ ಜಿಲ್ಲೆ)

ರಾಶಿ ಅಡಿಕೆ 

47,681 ರೂ.   

ಯಲ್ಲಾಪುರ (ಉತ್ತರ ಕನ್ನಡ ಜಿಲ್ಲೆ)                                          

ರಾಶಿ ಅಡಿಕೆ 

50,329 ರೂ.   

ಭದ್ರಾವತಿ (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

46,099 ರೂ.   

ಹೊಸನಗರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,699 ರೂ.   

ಸಾಗರ     (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,939 ರೂ.   

ಶಿಕಾರಿಪುರ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

45,900 ರೂ.   

ಶಿವಮೊಗ್ಗ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

46,419 ರೂ.   

ತೀರ್ಥಹಳ್ಳಿ  (ಶಿವಮೊಗ್ಗ ಜಿಲ್ಲೆ)

ರಾಶಿ ಅಡಿಕೆ 

47,099 ರೂ.   

ತುಮಕೂರು (ತುಮಕೂರು ಜಿಲ್ಲೆ) ರಾಶಿ ಅಡಿಕೆ 46,200 ರೂ.  

ಇದನ್ನೂ ಓದಿ: Bumper Savings: ಹಣ ಉಳಿತಾಯ ಇದೀಗ ತುಂಬಾ ಸಿಂಪಲ್, '3 Day Rule' ಬಳಕೆಯಿಂದ ಬಂಪರ್ ಉಳಿತಾಯ

ನಿಮ್ಮ Zee Hindustan Kannada ವೆಬ್‌ಸೈಟ್‌ನಲ್ಲಿ ಪ್ರತಿದಿನವೂ ಕರ್ನಾಟಕದ ವಿವಿಧ ಮಾರುಕಟ್ಟೆಗಳಲ್ಲಿರುವ ಅಡಕೆ ಬೆಲೆಯನ್ನು ಪ್ರಕಟಿಸಲಾಗುವುದು. ಪ್ರತಿದಿನದ ಅಪ್ಡೇಟ್ ಗಳಿಗಾಗಿ Zee Hindustan Kannada App ಅನ್ನು ಈಗಲೇ ಡೌನ್‌ಲೋಡ್ ಮಾಡಿಕೊಳ್ಳಿ…

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News