Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : ಆದಷ್ಟು ಬೇಗ ಕೆಲಸ ಮುಗಿಸಿಕೊಳ್ಳಿ, 4 ದಿನ ಬ್ಯಾಂಕ್ ರಜೆ!

ಬ್ಯಾಂಕ್(Bank) ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕುಗಳು ರಜೆ ಇರುತ್ತವೆ.

Written by - Channabasava A Kashinakunti | Last Updated : Aug 12, 2021, 03:40 PM IST
  • ಆರ್‌ಬಿಐ ಬಿಡುಗಡೆ ಮಾಡಿದ ಮಾರ್ಗಸೂಚಿಗಳಲ್ಲಿ
  • ಆಗಸ್ಟ್ 14 ದಿಂದ ಈ ತಿಂಗಳ ನಾಲ್ಕು ದಿನ ದೇಶದ ಬ್ಯಾಂಕುಗಳು ರಜೆ
  • ಬ್ಯಾಂಕ್ ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ
Bank Holidays : ಬ್ಯಾಂಕ್ ಗ್ರಾಹಕರೆ ಗಮನಿಸಿ : ಆದಷ್ಟು ಬೇಗ ಕೆಲಸ ಮುಗಿಸಿಕೊಳ್ಳಿ, 4 ದಿನ ಬ್ಯಾಂಕ್ ರಜೆ! title=

ನವದೆಹಲಿ : ಆಗಸ್ಟ್ 14 (ಶನಿವಾರ) ದಿಂದ ಈ ತಿಂಗಳ ನಾಲ್ಕು ದಿನಗಳ ಕಾಲ ದೇಶದ ಬ್ಯಾಂಕುಗಳು ರಜೆ ಇವೆ.

ಆಗಸ್ಟ್ 13: ದೇಶಭಕ್ತರ ದಿನ (ಇಂಫಾಲ್ ಮಾತ್ರ)

ಆಗಸ್ಟ್ 14: ಎರಡನೇ ಶನಿವಾರ(Second Saturday)

ಆಗಸ್ಟ್ 15: ಸ್ವಾತಂತ್ರ್ಯ ದಿನ/ಭಾನುವಾರ

ಆಗಸ್ಟ್ 16: ಪಾರ್ಸಿ ಹೊಸ ವರ್ಷ - ಬೇಲಾಪುರ, ಮುಂಬೈ ಮತ್ತು ನಾಗ್ಪುರದಲ್ಲಿ ಬ್ಯಾಂಕ್‌ ರಜೆ(Bank Holidays) ಇರುತ್ತದೆ.

ಇದನ್ನೂ ಓದಿ : Train Ticket Booking: ಈಗ ಟ್ರೈನ್ ಟಿಕೆಟ್ ಬುಕಿಂಗ್ ವೇಳೆ ಈ ಮಾಹಿತಿ ನೀಡುವುದು ಕಡ್ಡಾಯ

ಆರ್‌ಬಿಐ(RBI) ಬಿಡುಗಡೆ ಮಾಡಿದ ಮಾರ್ಗಸೂಚಿಗಳಲ್ಲಿ ಸಾರ್ವಜನಿಕ ವಲಯ, ಖಾಸಗಿ ವಲಯ, ವಿದೇಶಿ ಬ್ಯಾಂಕುಗಳು, ಸಹಕಾರಿ ಬ್ಯಾಂಕುಗಳು ಮತ್ತು ದೇಶಾದ್ಯಂತದ ಪ್ರಾದೇಶಿಕ ಬ್ಯಾಂಕುಗಳು ಸೂಚಿಸಿದ ದಿನಾಂಕಗಳಲ್ಲಿ ರಜೆ ಇರುತ್ತವೆ ಎಂದು ಉಲ್ಲೇಖಿಸಲಾಗಿದೆ. ಈ ವರ್ಗಗಳ ಅಡಿಯಲ್ಲಿ ಸಾಲದಾತರಿಗೆ ಆರ್‌ಬಿಐ ರಜೆಗಳನ್ನು ಸೂಚಿಸಿದೆ -ನೆಗೋಶಿಯಬಲ್ ಇನ್ಸ್ಟ್ರುಮೆಂಟ್ಸ್ ಆಕ್ಟ್, ಹಾಲಿಡೇ, ರಿಯಲ್ ಟೈಮ್ ಗ್ರಾಸ್ ಸೆಟಲ್‌ಮೆಂಟ್ ಹಾಲಿಡೇ ಮತ್ತು ಬ್ಯಾಂಕ್‌ಗಳ ಖಾತೆಗಳನ್ನು ಮುಚ್ಚುವುದು.

ಬ್ಯಾಂಕ್(Bank) ರಜಾದಿನಗಳು ರಾಜ್ಯದಿಂದ ರಾಜ್ಯಕ್ಕೆ ಭಿನ್ನವಾಗಿರುತ್ತವೆ ಆದರೆ ಮುಂದಿನ ದಿನಗಳಲ್ಲಿ ಎಲ್ಲಾ ಬ್ಯಾಂಕುಗಳು ರಜೆ ಇರುತ್ತವೆ.

ಗಣರಾಜ್ಯೋತ್ಸವ (ಜನವರಿ 26), ಸ್ವಾತಂತ್ರ್ಯ ದಿನ(Independence Day) (ಆಗಸ್ಟ್ 15), ಮತ್ತು ಗಾಂಧಿ ಜಯಂತಿ (ಅಕ್ಟೋಬರ್ 2), ಕ್ರಿಸ್ಮಸ್ ಡೇ (ಡಿಸೆಂಬರ್ 25). ದೀಪಾವಳಿ, ಕ್ರಿಸ್ಮಸ್, ಈದ್, ಗುರುನಾನಕ್ ಜಯಂತಿ, ಶುಭ ಶುಕ್ರವಾರ ಸೇರಿದಂತೆ ಹಬ್ಬಗಳಲ್ಲಿ ಬ್ಯಾಂಕ್‌ಗಳು ರಜೆ ಇರುತ್ತವೆ.

ಇದನ್ನೂ ಓದಿ : OLA e-Scooter: ಬಣ್ಣಗಳು, ಬೆಲೆ, ಮೈಲೇಜ್, ವೈಶಿಷ್ಟ್ಯ, ವಿಶೇಷತೆಗಳೆಲ್ಲವನ್ನೂ ಒಂದೇ ಕ್ಲಿಕ್‌ನಲ್ಲಿ ತಿಳಿಯಿರಿ

ಗಮನಿಸಬೇಕಾದ ಇನ್ನೊಂದು ಪ್ರಮುಖ ವಿಷಯವೆಂದರೆ, ಪ್ರತಿ ತಿಂಗಳ ಎರಡನೇ ಮತ್ತು ನಾಲ್ಕನೇ ಶನಿವಾರ ಮತ್ತು ಭಾನುವಾರ ಬ್ಯಾಂಕುಗಳು ರಜೆ ಇರುತ್ತವೆ. ಇವುಗಳನ್ನ ಆರ್‌ಬಿಐ(RBI) ಕಡ್ಡಾಯಗೊಳಿಸಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ
  

Trending News