ಕಡಿಮೆ ಶುಲ್ಕದಲ್ಲಿ ಕೈ ತುಂಬಾ ವೇತನ ಪಡೆಯುವ ಅವಕಾಶ ನೀಡುವ ಕೋರ್ಸ್ ಗಳು ಇವು !

High Paying Job in India:ಪಿಯುಸಿ ನಂತರ ಯಾವ ಕೋರ್ಸ್ ಮಾಡಬೇಕು ಎನ್ನುವ ಗೊಂದಲದಲ್ಲಿ ಅನೇಕರಿರುತ್ತಾರೆ. ಅಂಥಹ ವಿದ್ಯಾರ್ಥಿಗಳಿಗಾಗಿ ಕೆಲವು ಕೋರ್ಸ್ ಗಳ ಬಗೆಗಿನ ಮಾಹಿತಿ ಇಲ್ಲಿದೆ.

Written by - Ranjitha R K | Last Updated : Apr 14, 2023, 01:48 PM IST
  • ಕೆಲವೇ ದಿನಗಳಲ್ಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟ
  • ಕೋರ್ಸ್ ಹುಡುಕಾಟದಲ್ಲಿ ವಿದ್ಯಾರ್ಥಿಗಳು
  • ವಿದ್ಯಾರ್ಥಿಗಳಿಗಾಗಿ ಕೆಲವು ಕೋರ್ಸ್ ಗಳ ಬಗೆಗಿನ ಮಾಹಿತಿ
ಕಡಿಮೆ ಶುಲ್ಕದಲ್ಲಿ ಕೈ ತುಂಬಾ ವೇತನ ಪಡೆಯುವ ಅವಕಾಶ ನೀಡುವ ಕೋರ್ಸ್ ಗಳು ಇವು !    title=

ಬೆಂಗಳೂರು : ಇನ್ನೇನು ಕೆಲವೇ ದಿನಗಳಲಿ ದ್ವಿತೀಯ ಪಿಯುಸಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗಲಿದೆ. ಪಿಯುಸಿ ನಂತರ ,ಮುಂದೇನು ಎನ್ನುವ ಗೊಂದಲ ವಿದ್ಯಾರ್ಥಿಗಳನ್ನು ಕಾಡುತ್ತಿರುತ್ತದೆ. ಬಹುತೇಕ ವಿದ್ಯಾರ್ಥಿಗಳು  ಡಾಕ್ಟರ್, ಎಂಜಿನಿಯರ್ ಎಂದು ಹೇಳಿ ಬಿಡುತ್ತಾರೆ. ಇನ್ನು ಕೆಲವು ವಿದ್ಯಾರ್ಥಿಗಳು ಕೈ ತುಂಬಾ ವೇತನ ಸಿಗುವ ಉದ್ಯೋಗ ಯಾವ ಕೋರ್ಸ್ ಮಾಡಿದರೆ ಸಿಗುತ್ತದೆ ಎನ್ನುವ ಹುಡುಕಾಟದಲ್ಲಿ ಇರುತ್ತಾರೆ. ಅಂಥಹ ವಿದ್ಯಾರ್ಥಿಗಳಿಗಾಗಿ ಕೆಲವು ಕೋರ್ಸ್ ಗಳ ಬಗೆಗಿನ ಮಾಹಿತಿ ಇಲ್ಲಿದೆ. ಈ ಕೋರ್ಸ್ ಗಳನ್ನು ಪಡೆದರೆ ಕೈ ತುಂಬಾ ವೇತನ ಗಳಿಸುವ ನೌಕರಿ ಗಿಟ್ಟಿಸಿಕೊಳಬಹುದು.  

1- ಇನ್ವೆಸ್ಟ್ ಮೆಂಟ್ ಬ್ಯಾಂಕರ್ : 
ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಗಳು ಹೂಡಿಕೆಯ ಮೂಲಕ ಉತ್ತಮ ಲಾಭ ಪಡೆಯುವುದು ಹೇಗೆ ಎನ್ನುವ ಸಲಹೆ ನೀಡುತ್ತಾರೆ. ಅಲ್ಲದೆ ಅಂಥಹ ಹೂಡಿ ಕೆಗಳ ಬಗ್ಗೆ ತಿಳಿ ಹೇಳುತ್ತಾರೆ. ಹೂಡಿಕೆಯ ಬಗ್ಗೆ ನಿಮಗೂ ಆಸಕ್ತಿ ಇದ್ದರೆ,  ಈ ಕ್ಷೇತ್ರದಲ್ಲಿ ವೃತ್ತಿಜೀವನವನ್ನು ಮುಂದುವರಿಸಬಹುದು. ಇನ್ವೆಸ್ಟ್ ಮೆಂಟ್ ಬ್ಯಾಂಕರ್ ಗಳು ಲಕ್ಷಾಂತರ ರೂಪಾಯಿ ವೇತನ ಪಡೆಯುತ್ತಾರೆ. 

ಇದನ್ನೂ ಓದಿ : Arecanut today price: ರಾಜ್ಯದ ಮಾರುಕಟ್ಟೆಯಲ್ಲಿ ಅಡಿಕೆ ಧಾರಣೆ ಭರ್ಜರಿ ಏರಿಕೆ!

2-ಸೈಬರ್ ಸೆಕ್ಯುರಿಟಿ ವಿಶ್ಲೇಷಕ
ಹ್ಯಾಕರ್‌ಗಳು ಕಂಪನಿಗಳ ಡೇಟಾವನ್ನು ಹ್ಯಾಕ್ ಮಾಡಿ, ಜನರನ್ನು ಬ್ಲ್ಯಾಕ್‌ಮೇಲ್ ಮಾಡುವ ಪ್ರಕರಣವನ್ನು ದಿನ ಬೆಳಗಾದರೆ ನಾವು ಕೇಳುತ್ತಿರುತ್ತೇವೆ. ಈ ಹಿನ್ನೆಲೆಯಲ್ಲಿ ಡೇಟಾವನ್ನು ಸುರಕ್ಷಿತವಾಗಿರಿಸಲು ಬಹುತೇಕ ಎಲ್ಲಾ ಕಂಪನಿಗಳು ಸೈಬರ್ ಸೆಕ್ಯುರಿಟಿ ವಿಶ್ಲೇಷಕರನ್ನು ನೇಮಿಸಿಕೊಳ್ಳುತ್ತವೆ. ಈ ಕೋರ್ಸ್ ಮಾಡುವುದರಿಂದ ಕೋಟಿಗಟ್ಟಲೆ ಆದಾಯ ಪಡೆಯಬಹುದು. 

3- ಮೆಷಿನ್ ಲರ್ನಿಂಗ್  ಎಕ್ಸ್ಪರ್ಟ್ : 
ದಿನ ಕಳೆಯುತ್ತಿದ್ದಂತೆ ಮೆಷಿನ್ ಗಳ ಮೇಲೆ ನಾವು ಹೆಚ್ಚು ಹೆಚ್ಚು ಅವಲಂಬಿತರಾಗುತ್ತಿದ್ದೇವೆ. ಕಂಪ್ಯೂಟರ್ ಮತ್ತು ಸ್ಮಾರ್ಟ್‌ಫೋನ್‌ಗಳಲ್ಲಿ  ಇನ್ಸ್ಟಾಲ್ ಮಾಡಲು ಅಗತ್ಯವಿರುವ ಸಾಫ್ಟ್‌ವೇರ್ ಅನ್ನು ಡೆವೆಲೊಪ್ ಮಾಡುವುದು ಮೆಷಿನ್ ಲರ್ನಿಂಗ್  ಎಕ್ಸ್ಪರ್ಟ್ ಕೆಲಸ. ದೇಶದ ಅನೇಕ ಸಂಸ್ಥೆಗಳು ಇಂತಹ ಕೋರ್ಸ್‌ಗಳನ್ನು ನಡೆಸುತ್ತವೆ. ಈ ಕೋರ್ಸ್ ಮಾಡುವುದರಿಂದ, ಯುವಕರು 50,000 ರಿಂದ 1,00,000 ರೂಗಳ ಆರಂಭಿಕ  ವೇತನ ಪಡೆಯುತ್ತಾರೆ. 

ಇದನ್ನೂ ಓದಿ : ಇವರಿಗಿನ್ನು ನಿಶ್ಚಿಂತೆಯ ಪ್ರಯಾಣ ! ರೈಲ್ವೆಯಿಂದ ವಿಶೇಷ ಮಾಹಿತಿ ಪ್ರಕಟ

4- ಸಾಫ್ಟ್‌ವೇರ್ ಇಂಜಿನಿಯರ್
ಪಿಯುಸಿಯಲ್ಲಿ ವಿಜ್ಞಾನ ವಿಷಯ ಆಯ್ಕೆ ಮಾಡಿಕೊಂಡಿದ್ದರೆ ಕೋಡಿಂಗ್  ಕೋರ್ಸ್ ಗೆ ಸೇರಿಕೊಳ್ಳಬಹುದು. ಸಾಫ್ಟ್‌ವೇರ್ ಅನ್ನು ಕೋಡಿಂಗ್ ಮೂಲಕ ರಚಿಸಲಾಗುತ್ತದೆ. ಎನ್‌ಐಟಿ, ಐಐಟಿ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳು ಈ ಕೋರ್ಸ್ ನಡೆಸುತ್ತವೆ. ಈ ಕೋರ್ಸ್ ಮಾಡಿದ ನಂತರ, ತಿಂಗಳಿಗೆ 1 ರಿಂದ 10 ಲಕ್ಷ ರೂ.ಗಳ ಆರಂಭಿಕ ಗಳಿಕೆ ಸಾಧ್ಯವಾಗುತ್ತದೆ. 

5- ಡಾಟಾ ಅನಾಲಿಸ್ಟ್
ಪಿಯುಸಿ ನಂತರ  ಡಾಟಾ ಅನಾಲಿಸ್ಟ್  ಕೋರ್ಸ್ ಮಾಡುವ ಬಗ್ಗೆಯೂ ಯೋಚನೆ ಮಾಡಬಹುದು. ಡಾಟಾ ಅನಾಲಿಸ್ಟ್ ಕೋರ್ಸ್ ಮಾಡುವ ಮೂಲಕ ಭಾರತದಲ್ಲಿ ಆರಂಭದಲ್ಲಿ ತಿಂಗಳಿಗೆ 1 ಲಕ್ಷದಿಂದ 5 ಲಕ್ಷ ರೂಪಾಯಿಗಳನ್ನು ಗಳಿಸಬಹುದು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News