ಪಿಎಂ ಕಿಸಾನ್ ಕಂತಿಗೂ ಮುನ್ನ ರೈತರಿಗೆ ಸಿಗಲಿದೆ ಸಿಹಿ ಸುದ್ದಿ. ! ಇಂದೇ ಸರ್ಕಾರದ ನಿರ್ಧಾರ ಪ್ರಕಟ

ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತಿಗೂ  ಮುನ್ನ ರೈತರಿಗೆ ಮತ್ತೊಂದು ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆ ಇದೆ. 

Written by - Ranjitha R K | Last Updated : Oct 12, 2022, 12:42 PM IST
  • ಅಕ್ಟೋಬರ್ 17 ರಂದು ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ವರ್ಗ
  • ಇದಕ್ಕೂ ಮುನ್ನ ರೈತರಿಗೆ ಸಿಗಲಿದೆ ಮತ್ತೊಂದು ಸಂತಸದ ಸುದ್ದಿ
  • ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಶೀಘ್ರದಲ್ಲೇ ಅನುಮೋದನೆ
 ಪಿಎಂ ಕಿಸಾನ್ ಕಂತಿಗೂ ಮುನ್ನ ರೈತರಿಗೆ ಸಿಗಲಿದೆ ಸಿಹಿ ಸುದ್ದಿ. ! ಇಂದೇ  ಸರ್ಕಾರದ  ನಿರ್ಧಾರ ಪ್ರಕಟ  title=
Cabinet meeting

ನವದೆಹಲಿ : ಪಿಎಂ ಕಿಸಾನ್ ಸಮ್ಮಾನ್ ನಿಧಿಯ 12ನೇ ಕಂತು ಶೀಘ್ರದಲ್ಲೇ ರೈತರ ಖಾತೆಗೆ ವರ್ಗಾವಣೆಯಾಗಲಿದೆ. ವರದಿಯ ಪ್ರಕಾರ, ಅಕ್ಟೋಬರ್ 17 ರಂದು ಪುಸಾದಲ್ಲಿರುವ ಭಾರತೀಯ ಕೃಷಿ ಸಂಶೋಧನಾ ಸಂಸ್ಥೆಯಲ್ಲಿ ಹಮ್ಮಿಕೊಂಡಿರುವ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ ರೈತರ ಖಾತೆಗೆ ಯೋಜನೆಯ 12ನೇ ಕಂತು ಬಿಡುಗಡೆ ಮಾಡಲಿದ್ದಾರೆ. ಇದಕ್ಕೂ ಮುನ್ನ ರೈತರಿಗೆ ಮತ್ತೊಂದು ಸಂತಸದ ಸುದ್ದಿ ಸಿಗುವ ಸಾಧ್ಯತೆ ಇದೆ. ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆ ಹೆಚ್ಚಳದ ಬಗ್ಗೆ ಸರ್ಕಾರ ಶೀಘ್ರದಲ್ಲೇ ಅನುಮೋದನೆ ನೀಡುವ ಸಾಧ್ಯತೆ ಇದೆ. 

ಶೇಕಡಾ 9 ರಷ್ಟು ಹೆಚ್ಚಾಗಬಹುದು ಕನಿಷ್ಠ ಬೆಂಬಲ ಬೆಲೆ  :
ಬೇಳೆ ಕಾಳುಗಳ ಕನಿಷ್ಠ ಬೆಂಬಲ ಬೆಲೆಯ ಹೆಚ್ಚಳದ ಬಗೆಗಿನ ನಿರ್ಧಾರ ಬುಧವಾರ  ನಡೆಯಲಿರುವ ಕೇಂದ್ರ ಸಚಿವ ಸಂಪುಟ ಮತ್ತು CCEA ಸಭೆಯಲ್ಲಿ ಹೊರ ಬೀಳಲಿದೆ ಎಂದು ಹೇಳಲಾಗುತ್ತಿದೆ. ಸರ್ಕಾರವು ಬೇಳೆ ಕಾಳುಗಳ  ಕನಿಷ್ಠ ಬೆಂಬಲ ಬೆಲೆಯನ್ನು 9 ಪ್ರತಿಶತದವರೆಗೆ ಹೆಚ್ಚಿಸಬಹುದು ಎಂದು ಮೂಲಗಳು ತಿಳಿಸಿವೆ. ಈ ಮೂಲಕ ಬೇಳೆಕಾಳುಗಳ ಬೆಲೆಯಲ್ಲಿ ಕೂಡಾ ಬದಲಾವಣೆಯಾಗಲಿದೆ. ಈ ಸುದ್ದಿಯಿಂದ ರೈತರೂ ಸಂತಸಗೊಂಡಿದ್ದಾರೆ. ಆಗಸ್ಟ್‌ನಲ್ಲಿ, ಕೇಂದ್ರ ಸಚಿವ ಸಂಪುಟವು ಬೆಲೆ ಬೆಂಬಲ ಯೋಜನೆ ಅಡಿಯಲ್ಲಿ ತೊಗರಿ ಬೇಳೆ, ಉದ್ದಿನ ಬೇಳೆ, ಮಸೂರ್ ದಾಲ್ ಖರೀದಿ ಮಿತಿಯನ್ನು ಶೇಕಡಾ 40 ಕ್ಕೆ ಹೆಚ್ಚಿಸಿತ್ತು. ಮೊದಲು ಈ ಮಿತಿ ಶೇಕಡಾ 25 ಆಗಿತ್ತು.

ಇದನ್ನೂ ಓದಿ : Gold Price Today : ಇಳಿಕೆಯಾಗುತ್ತಲೇ ಇದೆ ಬಂಗಾರದ ಬೆಲೆ.! ಬೆಳ್ಳಿ ಬೆಲೆ ಎಷ್ಟು ತಿಳಿಯಿರಿ

ಛತ್ತೀಸ್‌ಗಢದಲ್ಲಿ, ಜುಲೈನಲ್ಲಿಯೇ ಕನಿಷ್ಠ ಬೆಂಬಲ ಬೆಲೆ ಹೆಚ್ಚಳ :  
ಕೃಷಿ ಉತ್ಪನ್ನಗಳ ಬೆಲೆ ಕನಿಷ್ಠ ಬೆಂಬಲ ಬೆಲೆಗಿಂತ ಕಡಿಮೆಯಾದಾಗ ಕೃಷಿ ಸಚಿವಾಲಯದ ಬೆಲೆ ಬೆಂಬಲ ಯೋಜನೆ ಜಾರಿಗೆ ಬರುತ್ತದೆ. ಜುಲೈನಲ್ಲಿ, ಛತ್ತೀಸ್‌ಗಢವು ವಿವಿಧ ಬೆಳೆಗಳನ್ನು ಉತ್ತೇಜಿಸಲು ಬೇಳೆಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು ಬದಲಾಯಿಸಿತ್ತು. ಬೇಳೆಕಾಳು ಬೆಳೆಗಳನ್ನು ಬೆಳೆಯಲು ರೈತರನ್ನು ಉತ್ತೇಜಿಸುವ ಸಲುವಾಗಿ ಬೇಳೆಕಾಳುಗಳ ಕನಿಷ್ಠ ಬೆಂಬಲ ಬೆಲೆಯನ್ನು ಹೆಚ್ಚಿಸಲಾಗಿತ್ತು. 

ಮತ್ತೊಂದೆಡೆ, ಪಿಎಂ ಕಿಸಾನ್‌ನ 12 ನೇ ಕಂತು ಅಕ್ಟೋಬರ್ 17 ಮತ್ತು 18 ರಂದು ದೇಶದ ಸುಮಾರು 10 ಕೋಟಿ ರೈತರ ಖಾತೆಗೆ ಬರಲಿದೆ. ಕೃಷಿ ಮತ್ತು ರೈತರ ಕಲ್ಯಾಣ ಸಚಿವಾಲಯದ ಪ್ರಕಾರ, ಪ್ರಧಾನಿ ಮೋದಿ ಅವರು ಅಗ್ರಿ-ಸ್ಟಾರ್ಟ್ಅಪ್ ಕಾನ್ಕ್ಲೇವ್ ಮತ್ತು ಕಿಸಾನ್ ಸಮ್ಮೇಳನ 2022 ರ ಸಂದರ್ಭದಲ್ಲಿ ಕೆಲವು ರೈತರನ್ನು ಭೇಟಿ ಮಾಡಲಿದ್ದಾರೆ.

ಇದನ್ನೂ ಓದಿ : GDP Growth: ಆರ್ಥಿಕ ಹಿಂಜರಿತದ ಕರಿ ನೆರಳಿನಲ್ಲಿ ಭಾರತಕ್ಕೆ ಬಿಗ್ ಶಾಕ್ ನೀಡಿದ ಐಎಂಎಫ್... ಹೇಳಿದ್ದೇನು? 

 

ಕನ್ನಡ ಭಾಷೆಯಲ್ಲ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News