ನವದೆಹಲಿ : ಕೆಲಸ ಪಡೆಯಲು ನಾವೆಲ್ಲಾ ಎಷ್ಟು ಕಷ್ಟ ಪಡುತ್ತೇವೆ. ಆದರೆ ಬಿಸ್ಕಟ್ ರುಚಿ ನೋಡುವುದರ ಮೂಲಕ ವರ್ಷಕ್ಕೆ 40 ಲಕ್ಷ ರೂಪಾಯಿಗಳ ಪ್ಯಾಕೇಜ್‌ನಲ್ಲಿ ಕೆಲಸ ಸಿಕ್ಕರೆ ಹೇಗಿರುತ್ತೇ.... ಏನು ತಮಾಷೆ ಅಂತ ಅನ್ಕೊತಾ ಇದ್ದೀರಾ.... ಇದು ತಮಾಷೆಯಲ್ಲ, ಇದು ನೂರಕ್ಕೆ ನೂರರಷ್ಟು ನಿಜ. ಹೌದು, ಸ್ಕಾಟಿಷ್ ಬಿಸ್ಕಟ್ ಕಂಪನಿಯಾದ ಬಾರ್ಡರ್ ಬಿಸ್ಕಟ್ (Biscuit) ಮಾಸ್ಟರ್ ಬಿಸ್ಕಟ್ ಹುದ್ದೆಗೆ ಅರ್ಜಿ ಆಹ್ವಾನಿಸಿದೆ. ಇದರಲ್ಲಿ ಬಿಸ್ಕಟ್‌ಗಳನ್ನು ಸವಿಯುವ ಕೆಲಸ ನೀಡಲಾಗುವುದು. ಈ ಕೆಲಸಕ್ಕೆ (Job) ವಾರ್ಷಿಕ ಪ್ಯಾಕೇಜ್ ಆಗಿ 40 ಸಾವಿರ ಪೌಂಡ್ ಅಂದರೆ ಸುಮಾರು 40 ಲಕ್ಷ ರೂಪಾಯಿ ನೀಡಲಾಗುವುದು.
ಅಭ್ಯರ್ಥಿ ಆಯ್ಕೆ:
ಬಾರ್ಡರ್ ಬಿಸ್ಕಟ್ ಕಂಪೆನಿಯು ಫ್ಯಾಮಿಲಿ ಬಿಸ್ಕತ್ತು ತಯಾರಕರಾಗಿದ್ದು, ಅದರ ಇತ್ತೀಚಿನ ಬಿಸ್ಕಟ್‌ಗಳ ರುಚಿ ನೋಡುವ ಹುದ್ದೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡುತ್ತಿದೆ. ಬಿಸ್ಕಟ್ ಸವಿಯುವುದು ಸುಲಭದ ಕೆಲಸ, ಯಾರಾದರೂ ಅದನ್ನು ಸವಿಯಬಹುದು ಮತ್ತು ಕೆಲಸ ತೆಗೆದುಕೊಳ್ಳಬಹುದು ಎಂದು ನೀವು ಯೋಚಿಸುತ್ತಿರಬಹುದು. ಆದರೆ ಬಿಸ್ಕಟ್ ಬಗ್ಗೆ ಆಳವಾದ ಜ್ಞಾನ ಮತ್ತು ಅದರ ಉತ್ಪಾದನೆಯ ಬಗ್ಗೆ ಚೆನ್ನಾಗಿ ತಿಳಿದಿರುವ ಜೊತೆಗೆ ಉತ್ತಮ ಸಂವಹನ ಕೌಶಲ್ಯಗಳಿರುವ ಅಭ್ಯರ್ಥಿಗಷ್ಟೇ ಈ ಕೆಲಸ ದೊರೆಯಲಿದೆ ಎಂದು ಕಂಪನಿ ಸ್ಪಷ್ಟಪಡಿಸಿದೆ.
ಉದ್ಯೋಗದಲ್ಲಿ ಈ ಸೌಲಭ್ಯಗಳು ಲಭ್ಯವಿರುತ್ತವೆ:
ಬಾರ್ಡರ್ ಬಿಸ್ಕತ್ತು ಕಂಪೆನಿಯ ಸಂದರ್ಶನದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗೆ ಒಂದು ವರ್ಷದಲ್ಲಿ 35 ದಿನಗಳ ರಜೆ ಸಿಗುತ್ತದೆ. ಸ್ವತಂತ್ರ ವೆಬ್‌ಸೈಟ್‌ನ ಸುದ್ದಿಯ ಪ್ರಕಾರ, ಆಯ್ಕೆಯಾದ ಅಭ್ಯರ್ಥಿಯು ವರ್ಷಪೂರ್ತಿ ಉಚಿತವಾಗಿ ಬಿಸ್ಕತ್ತು ಪಡೆಯುತ್ತಾರೆ. ಈ ಕೆಲಸ ಪೂರ್ಣ ಸಮಯದ ಕೆಲಸವಾಗಿದೆ ಎಂದು ತಿಳಿದುಬಂದಿದೆ.
Which of our Chocolate Gingers will you be enjoying this weekend? pic.twitter.com/KZYBfjyHes
— Border Biscuits (@BorderBiscuits) October 16, 2020
ಕಂಪನಿ ಏನು ಹೇಳುತ್ತದೆ ?
ಬಾರ್ಡರ್ ಬಿಸ್ಕಟ್ಸ್‌ನ ಎಂಡಿ ಪಾಲ್ ಪಾರ್ಕಿನ್ಸ್ ಪ್ರಕಾರ, ಕಂಪನಿಯು ದೇಶಾದ್ಯಂತದ ಜನರನ್ನು ಅರ್ಜಿ ಸಲ್ಲಿಸಲು ಪ್ರೋತ್ಸಾಹಿಸುತ್ತಿದೆ. ಕೆಲವು ಉತ್ತಮ ಅಭ್ಯರ್ಥಿಗಳನ್ನು ಸಂದರ್ಶನಕ್ಕೆ ಕರೆಯಲಾಗುವುದು. ಅವರಲ್ಲಿ ಒಬ್ಬರನ್ನು ಈ ಹುದ್ದೆಗೆ ಆಯ್ಕೆ ಮಾಡಲಾಗುವುದು ಎಂದು ತಿಳಿಸಿದೆ.
ಅಂತೆಯೇ, ಗ್ರಾಹಕರಿಗೆ ಉತ್ತಮ ರುಚಿ ಮತ್ತು ಗುಣಮಟ್ಟದ ಬಿಸ್ಕತ್ತುಗಳನ್ನು ನೀಡಲು ಕಂಪನಿಯು ಬದ್ಧವಾಗಿದೆ ಎಂದು ಕಂಪನಿಯ ಬ್ರಾಂಡ್ ಮುಖ್ಯಸ್ಥ ಸುಜಿ ಕಾರ್ಲಾ ತಿಳಿಸಿದ್ದಾರೆ.